ಸಾಂತಿಂಜ ಜನಾರ್ಧನ್ ಭಟ್ ಅವರ ಆಶೀರ್ವಾದ, ವಿದ್ವಾನ್ ರಾಧಾಕೃಷ್ಣ ಭಟ್ ಅವರ ಮಾರ್ಗದರ್ಶನದೊಂದಿಗೆ ಮತ್ತು ವೀರಕೇಸರಿ ಸಂಸ್ಥೆಯ ಅಧ್ಯಕ್ಷರಾದ ಹರೀಶ್ ರೈ ಕುಂಬ್ಳೆ ನೇತೃತ್ವದಲ್ಲಿ ಮೀರಾ ಭಾಯಂದರ್ ನಲ್ಲಿ ಸನಾತನ ಧರ್ಮವನ್ನು ಬಿಂಬಿಸುವ ವೀರಕೇಸರಿ ಸಂಸ್ಥೆಯು ನವೆಂಬರ್ 29 ರವಿವಾರದಂದು ತನ್ನ ತೃತೀಯ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಸಂಜೆ 3:30ಕ್ಕೆ ಭಾಯಂದರ್ ಪೂರ್ವದ ಇಂದ್ರಲೋಕ್ ಜಿ -9 ಸ್ಪೋರ್ಟ್ಸ್ ಟರ್ಫ್ ಮೈದಾನ, ಕಲಾವತಿ ಮಂದಿರದ ಬಳಿ ನಡೆಯಲಿರುವ ಈ ಕಾರ್ಯಕ್ರಮಗಳಲ್ಲಿ ಮನೋರಂಜನಾ ವೈಭವ, ಉದ್ಘಾಟನಾ ಸಮಾರಂಭ, ನೃತ್ಯ ಸ್ಪರ್ಧೆ, ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ ನಡೆಯಲಿದೆ. ಈ ಸಂದರ್ಭದಲ್ಲಿ 2 ವಿಭಾಗಗಳಾಗಿ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಭಾಗ 1ರಲ್ಲಿ 21 ವರ್ಷದೊಳಗಿನವರಾಗಿ ಪ್ರಥಮ ಬಹುಮಾನ ರೂ. 15,555/-, ದ್ವಿತೀಯ ಬಹುಮಾನ ರೂ. 11,111/-, ತೃತೀಯ ಬಹುಮಾನ ರೂ. 7,777/- ಹಾಗೂ ವಿಭಾಗ 2ರಲ್ಲಿ 21 ವರ್ಷ ಹಾಗೂ ಮೇಲ್ಪಟ್ಟವರಿಗಾಗಿ ಪ್ರಥಮ ಬಹುಮಾನ ರೂ.15,555/-, ದ್ವಿತೀಯ ಬಹುಮಾನ ರೂ. 11,111/-, ತೃತೀಯ ಬಹುಮಾನ ರೂ 7,777/-ರಂತೆ ನೀಡಲಾಗುವುದು ಹಾಗೂ ಮುಂದೆ ನಡೆಯಲಿರುವ ಭಗವದ್ಗೀತೆ ಪರೀಕ್ಷೆಯ ಅರ್ಜಿಗಳಿಗಾಗಿ ಅಹ್ವಾನವನ್ನು ನೀಡಲಾಗುವುದು.




ಮೀರಾಗಾoವ್ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಸಾಂತಿoಜ ಜನಾರ್ಧನ ಭಟ್ ಅವರಿಂದ ದೀಪ ಬೆಳಗಿಸುವುದರೊಂದಿಗೆ ಉದ್ಘಾಟನಾ ಸಮಾರಂಭ ಆರಂಭಗೊಳ್ಳಲಿದ್ದು, ಅತಿಥಿಗಳಾಗಿ ಪ್ರಸಾದ್ ಶೆಟ್ಟಿ ನೀರೆ ಬೈಲೂರು (ಪಾರ್ಲೆ ಗ್ರೋ ಮಾರಾಟ ವ್ಯವಸ್ಥಾಪಕ), ಹರೀಶ್ ಸುವರ್ಣ (ಅಧ್ಯಕ್ಷ: ತುಳು-ಕನ್ನಡ ವೆಲ್ಫೇರ್ ಅಸೋಸಿಯೇಶನ್), ಜಯಪ್ರಕಾಶ್ ಭಂಡಾರಿ (ಮಾಜಿ ಅಧ್ಯಕ್ಷ: ಬಂಟ್ಸ್ ಫೋರಂ ಮೀರಾರೋಡ್), ಸುಭಾಷ್ ಕರ್ಕೇರಾ (ಅಧ್ಯಕ್ಷ: ಬಿಲ್ಲವರ ಎಸೋಸಿಯೇಶನ್ ಮುಂಬಯಿ ಮೀರಾರೋಡ್ ಸ್ಥಳೀಯ ಕಛೇರಿ), ಚಂದ್ರಶೇಖರ್ ವಿ ಶೆಟ್ಟಿ (ಮಾಜಿ ಅಧ್ಯಕ್ಷ: ಕರ್ನಾಟಕ ಮಹಾಮಂಡಲ), ಜಯಶೀಲ ಬಿ. ತಿಂಗಳಾಯ (ಗುರುಸ್ವಾಮಿ: ಅಯ್ಯಪ್ಪ ಭಕ್ತ ಮಂಡಲ ಮೀರಾ ರೋಡ್), ಸುರೇಶ್ ಶೆಟ್ಟಿ ಗಂಧರ್ವ (ಉದ್ಯಮಿ), ಮಹೇಶ್ ಪೂಜಾರಿ (ಹೋಟೆಲ್ ಅಪೂರ್ವ), ಎ.ಕೆ. ಹರೀಶ್ (ಗೌರವಾಧ್ಯಕ್ಷ: ತುಳು- ಕನ್ನಡ ವೆಲ್ಫೇರ್ ಎಸೋಸಿಯೇಶನ್), ಗಿರೀಶ್ ಶೆಟ್ಟಿ ಸೂಡಾ (ಉದ್ಯಮಿ), ವಸಂತಿ ಎಸ್ ಶೆಟ್ಟಿ (ಮಹಿಳಾ ಕಾರ್ಯಾಧ್ಯಕ್ಷೆ: ಬಂಟರ ಸಂಘ ಮುಂಬಯಿ ಮೀರಾ ಭಾಯಂದರ್ ವಲಯ), ಡಾ. ರವಿರಾಜ್ ಸುವರ್ಣ (ಅಧ್ಯಕ್ಷ: ತುಳುನಾಡ ಸೇವಾ ಸಮಾಜ), ಸುರೇಶ್ ಶೆಟ್ಟಿ ಕುತ್ತಾರ್ (ಸಮಾಜ ಸೇವಕ), ಸುಧಾಕರ್ ಶೆಟ್ಟಿ ಮಂದಾರ್ತಿ (ಸಮಾಜ ಸೇವಕ) ಮೊದಲಾದವರು ಉಪಸ್ಥಿತರಿರುವರು. ತದನಂತರ ನೃತ್ಯ ಸ್ಪರ್ಧೆಯು ನಡೆಯಲಿದ್ದು, ಸ್ಪರ್ಧಾ ವಿಜೇತರುಗಳಿಗೆ ಬಹುಮಾನ ವಿತರಣೆಯ ಸಭಾ ಕಾರ್ಯಕ್ರಮದಲ್ಲಿ ವಿದ್ವಾನ್ ರಾಮಕೃಷ್ಣ ಭಟ್ ಆಶೀರ್ವಚನ ನೀಡಲಿದ್ದಾರೆ.
ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಖಂಡ ಮಹೇಶ್ ಶೆಟ್ಟಿ ತೆಳ್ಳಾರು, ಗೌರವ ಅಥಿತಿಯಾಗಿ ಉಳ್ತೂರು ಮೋಹನ್ ದಾಸ್ ಶೆಟ್ಟಿ (ಕಾರ್ಯಾಧ್ಯಕ್ಷ: ಮಾತೃಭೂಮಿ ಕೊ-ಆಪ್ ಕ್ರೆಡಿಟ್ ಸೊಸೈಟಿ ಬಂಟರ ಸಂಘ ಮುಂಬಯಿ), ಶಶಿಧರ್ ಕೆ ಶೆಟ್ಟಿ ಇನ್ನಂಜೆ (ಜೊತೆ ಕೋಶಾಧಿಕಾರಿ: ಬಂಟರ ಸಂಘ ಮುಂಬಯಿ), ಡಾ|ಅರುಣೋದಯ ಎಸ್ ರೈ (ಆಡಳಿತ ನಿರ್ದೇಶಕ: ರೈ ಸುಮತಿ ಎಜ್ಯುಕೇಶನ್ ಟ್ರಸ್ಟ್), ಗುತ್ತಿನಾರ್ ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು (ಕಾರ್ಯಾಧ್ಯಕ್ಷ: ಬಂಟರ ಸಂಘ ಮುಂಬಯಿ ಮೀರಾ ಭಾಯಂದರ್ ವಲಯ), ರತ್ನಾಕರ್ ಶೆಟ್ಟಿ (ಹೋಟೆಲ್ ಡ್ರೀಮ್ ಲ್ಯಾಂಡ್ ವಸಾಯಿ), ಹರೀಶ್ ಶೆಟ್ಟಿ ಪಡುಕುಡೂರು (ಉದ್ಯಮಿ), ದೀಪಕ್ ಸಾವಂತ್ (ಬಿಜೆಪಿ ಕಾರ್ಪೊರೇಟರ್ ವಾರ್ಡ್ ನಂ.10 ಮೀರಾ ಭಾಯಂದರ್), ಯೋಗೇಂದ್ರ ಗಾಣಿಗ (ಅಧ್ಯಕ್ಷ: ನವ ತರುಣ ಮಿತ್ರ ಮಂಡಲ), ಪ್ರಜ್ವಲ್ ಸಾಲ್ಯಾನ್ (ಯಶೋಧನ್ ಫೌಂಡೇಶನ್), ಸತೀಶ್ ಪೂಜಾರಿ (ಹೋಟೆಲ್ ಸದಾನಂದ್), ಸತೀಶ್ ಪೂಂಜಾ (ಹೋಟೆಲ್ ಹಿಲ್ ಆಂಡ್ ಸೀ), ಆಕಾಂಕ್ಷ ವೀರ್ಕರ್ ಶೆಟ್ಟಿ (ಬಿಜೆಪಿ ಕಾರ್ಪೊರೇಟರ್ ವಾರ್ಡ್ ನಂ.10 ಮೀರಾ ಭಾಯಂದರ್), ಸಂಪತ್ ಬಿ ಶೆಟ್ಟಿ ಪಂಜದ ಗುತ್ತು (ಕಾರ್ಯಾಧ್ಯಕ್ಷ: ಶಿಕ್ಷಣ ಮತ್ತು ಸಮಾಜ ಕಲ್ಯಾಣ ವಿಭಾಗ ಬಂಟರ ಸಂಘ ಮುಂಬಯಿ ಮೀರ ಭಾಯಂದರ್ ವಲಯ), ಮಧುಕರ್ ಶೆಟ್ಟಿ (ಭೂಮಿ ಕಿಚನ್ ಫ್ರೈ ಲಿ), ರಾಜೇಶ್ ಶೆಟ್ಟಿ (ತಿರುಪತಿ ಕ್ಯಾಟರರ್ಸ್), ಗೋಪಾಲ್ ಕೃಷ್ಣ ಜಿ. ಗಾಣಿಗ, ಮುಖೇಶ್ ಶೆಟ್ಟಿ (ಕ್ರೀಡಾ ಕಾರ್ಯಾಧ್ಯಕ್ಷ ಮೀರಾ -ದಹಾಣು ಬಂಟ್ಸ್), ಸೀತಾರಾಮ್ ಶೆಟ್ಟಿ ಅಮಾವಾಸ್ಯೆಬೈಲು (ಗೌ.ಪ್ರ ಕಾರ್ಯದರ್ಶಿ: ನಿತ್ಯಾನಂದ ಸೇವಾ ಸಮಿತಿ), ನಾರಾಯಣ ರಾಮ ಪೂಜಾರಿ (ನಿರ್ದೇಶಕ: ಸುಮಂಗಳಾ ಯಂತ್ರೋಪಕರಣ) ಮೊದಲಾದವರು ಉಪಸ್ಥಿತಲಿರುವರು. ಕಾರ್ಯಕ್ರಮದ ಕೊನೆಗೆ ಪ್ರೀತಿ ಭೋಜನದ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿದೆ.
ತುಳು ಕನ್ನಡ ಬಂಧು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಬೇಕೆಂದು ವೀರ ಕೇಸರಿ ಮೀರಾ ಭಾಯಂದರ್ ಸಂಸ್ಥೆಯ ಅಧ್ಯಕ್ಷ ಹರೀಶ್ ರೈ ಕುಂಬ್ಳೆ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.


















































































































