ಬಂಟರ ಸಂಘ ಮುಂಬಯಿಯ ವಸಾಯಿ ದಹಾಣು ಪ್ರಾದೇಶಿಕ ಸಮಿತಿಯ ವತಿಯಿಂದ 17 ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಭಾವೈಕ್ಯ ಸಂಭ್ರಮವು ಶ್ರೀಮತಿ ಚಂದ್ರಿಕಾ ಐಕಳ ಹರೀಶ್ ಶೆಟ್ಟಿ ಸ್ವಾಗತ ದ್ವಾರದೊಂದಿಗೆ ಕಾಶಿ ಬಾಬು ಶೆಟ್ಟಿಯರವರ ಸಭಾಂಗಣದಲ್ಲಿ ಸ್ವರ್ಗೀಯ ಉಮಾ ಸತೀಶ್ ಶೆಟ್ಟಿ ವೇದಿಕೆಯಲ್ಲಿ ಅಕ್ಟೋಬರ್ 3, ಶನಿವಾರದಂದು ವಸಾಯಿ ಪಶ್ಚಿಮದ ಎಚ್.ಡಿ ಬೀಚ್ ರೆಸಾರ್ಟ್ ಇಲ್ಲಿ ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ್ ಶೆಟ್ಟಿ ಕೊಡ್ಲಾಡಿ ಮತ್ತು ಬಂಟರ ಸಂಘದ ಜೊತೆ ಕೋಶಾಧಿಕಾರಿ ಶಶಿಧರ್ ಶೆಟ್ಟಿ ಇನ್ನಂಜೆ ಇವರ ನೇತೃತ್ವದಲ್ಲಿ ಸಂಭ್ರಮದೊಂದಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಸಮಾಜ ಬಾಂಧವರನ್ನು, ಅತಿಥಿ ಗಣ್ಯರನ್ನು ಸ್ವಾಗತಿಸಿ ಮಾತನಾಡಿದ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ಈ ಕಾರ್ಯಕ್ರಮ ಹೊಸ ಪರಿಕಲ್ಪನೆಯೊಂದಿಗೆ ಮಾಡಿದ್ದೇವೆ. ಇದಕ್ಕೆ ಸಮಾಜ ಬಾಂಧವರು ಎಲ್ಲರೂ ಸ್ಪಂದನೆ ಮಾಡಿದ್ದಾರೆ. ದಾನಿಗಳ ಸಹಕಾರವನ್ನು ಸದಾ ಸ್ಮರಿಸುತ್ತೇವೆ. ಪ್ರಾದೇಶಿಕ ಸಮಿತಿಯ ಯಾವುದೇ ಕಾರ್ಯಕ್ರಮ ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕಿದ್ದರೆ ಶಶಿಧರ್ ಶೆಟ್ಟಿ ಇನ್ನಂಜೆಯವರ ನಿರಂತರ ಸಹಕಾರದಿಂದ ಸಾಧ್ಯವಾಗಿದೆ. ಈ ಕಾರ್ಯಕ್ರಮಕ್ಕೆ ಬಂಟರ ಸಂಘದ ಎಲ್ಲಾ ಪದಾಧಿಕಾರಿಗಳು ಬೇರೆ ಬೇರೆ ಪ್ರಾದೇಶಿಕ ಸಮಿತಿಗಳಿಂದ ತಮ್ಮ ಅಮೂಲ್ಯ ಸಮಯವನ್ನು ನೀಡಿದ್ದಾರೆ. ಇಂದು ಸನ್ಮಾನ ಸ್ವೀಕರಿಸಿರುವ ಹಾಗೂ ಗೌರವವನ್ನು ಸ್ವೀಕರಿಸಿದ ಎಲ್ಲರಿಗೂ ಅಭಿನಂದನೆಗಳು. ಅತಿಥಿಗಳಾಗಿ ಆಗಮಿಸಿದ ಸಮಾಜದ ಎಲ್ಲಾ ಬಂಧುಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಪ್ರಾದೇಶಿಕ ಸಮಿತಿ ಇನ್ನಷ್ಟು ಬಲಿಷ್ಠಗೊಳ್ಳಲು ಎಲ್ಲರೂ ಸಹಕಾರ ನೀಡಬೇಕು ಎಂದರು.




ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಖ್ಯ ಅತಿಥಿ ಆರ್ಗಾನಿಕ್ ಕೆಮಿಕಲ್ಸ್ ಲಿಮಿಟೆಡ್ ತೋನ್ಸೆ ಆನಂದ ಎಂ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಮಲ್ವಾನ್ ತಡ್ಕ ಗ್ರೂಪ್ ಆಫ್ ಹೊಟೇಲ್ಸ್ ನ ಸಿಎಂಡಿ ಆದರ್ಶ್ ಶೆಟ್ಟಿ ಹಾಲಾಡಿ, ಮೆರಿಟ್ ಹಾಸ್ಪಿಟಾಲಿಟಿ ಪ್ರೈವೆಟ್ ಲಿಮಿಟೆಟ್ ನ ಸಿಎಂಡಿ ಅಶೋಕ್ ಶೆಟ್ಟಿ ಬೆಳ್ಳಾಡಿ, ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷ ಮಹೇಶ್ ಶೆಟ್ಟಿ (ಬಾಬ ಗ್ರೂಪ್), ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್ ಕೆ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ರಮೇಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ಜೊತೆ ಕೋಶಾಧಿಕಾರಿ ಶಶಿಧರ ಶೆಟ್ಟಿ ಇನ್ನಂಜೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್ ಶೆಟ್ಟಿ, ಯುವ ವಿಭಾಗದ ಉಪ ಕಾರ್ಯಾಧ್ಯಕ್ಷ ತಾರಾನಾಥ್ ಶೆಟ್ಟಿ ಹಾಗೂ ವಸಾಯಿ ದಹಾಣು ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಕಣಂಜಾರ್, ಕಾರ್ಯದರ್ಶಿ ಜಗನಾಥ್ ಡಿ ಶೆಟ್ಟಿ ಪಳ್ಳಿ, ಕೋಶಾಧಿಕಾರಿ ವಿಜಯ್ ಎಮ್ ಶೆಟ್ಟಿ, ಜೊತೆ ಕಾರ್ಯದರ್ಶಿ ನಾರಾಯಣ ಶೆಟ್ಟಿ, ಜೊತೆ ಕೋಶಾಧಿಕಾರಿ ರತೀಶ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷ ವಿಜಯ್ ಶೆಟ್ಟಿ ಕುತ್ತೆತೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅರುಣಾ ಶೆಟ್ಟಿ ನೀರೆ, ಯುವ ವಿಭಾಗದ ಕಾರ್ಯಾಧ್ಯಕ್ಷೆ ವರ್ಷಾ ಶೆಟ್ಟಿ, ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.









ಈ ಸಂದರ್ಭದಲ್ಲಿ ಉದ್ಯಮಿ ಬರೋಡ ಶಶಿಧರ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆ ಮಾಡಿದ ಹರೀಶ್ ಶೆಟ್ಟಿ ಗುರ್ಮೆ (ಎಮ್ ಎಮ್ ಗ್ರೂಪ್ ಆಫ್ ಹೋಟೆಲ್ಸ್), ಪಾಂಡು ಎಲ್ ಶೆಟ್ಟಿ (ಫಾರ್ಮ್ ಹೌಸ್ ಗ್ರೂಪ್ ಆಫ್ ಹೋಟೆಲ್ಸ್), ರತ್ನಾಕರ್ ಶೆಟ್ಟಿ (ಡ್ರೀಮ್ ಲ್ಯಾಂಡ್ ಹೋಟೆಲ್ ವಸಾಯಿ), ಸುರೇಶ್ ಶೆಟ್ಟಿ ಕೊಪ್ಪ (ಹೋಟೆಲ್ ವಿವಾಂತ ವಿರಾರ್ ) ಕರ್ನೂರು ಶಂಕರ ಆಳ್ವ (ಅಧ್ಯಕ್ಷರು ವಸಾಯಿ ಕರ್ನಾಟಕ ಸಂಘ), ರಘುರಾಮ್ ರೈ (ಹೋಟೆಲ್ ಸರೋವರ ಬೊಯಿಸರ್), ರಮೇಶ್ ಶೆಟ್ಟಿ ಕಾಪು (ಹೋಟೆಲ್ ಆಮಂತ್ರಣ ನಾಲಾಸೋಪಾರ), ಸುರೇಂದ್ರ ಶೆಟ್ಟಿ (ಹೋಟೆಲ್ ಸಾಯಿಪ್ರಸ್ಥ ನಾಲಾಸೋಪಾರ), ಮಧುಕರ ಶೆಟ್ಟಿ (ಹೋಟೆಲ್ ಮೀಟ್ ಪಾಯಿಂಟ್ ನಾಲಾಸೋಪಾರ), ಬಿಗ್ ಬಾಸ್ ಖ್ಯಾತಿ ರಕ್ಷಿತಾ ಶೆಟ್ಟಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಕಣಂಜಾರ್, ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷ ವಿಜಯ್ ಶೆಟ್ಟಿ ಕುತ್ತೆತೂರು ನಿರೂಪಿಸಿದರು. ಜಗನ್ನಾಥ್ ಶೆಟ್ಟಿ ಪಳ್ಳಿ
ವಂದಿಸಿದರು.
ಚಿತ್ರ, ವರದಿ : ದಿನೇಶ್ ಕುಲಾಲ್


















































































































