ಸೆಪ್ಟೆಂಬರ್ 14 ರಂದು ಸೋಮವಾರ ಬೆಳಗ್ಗೆ 9.00 ಕ್ಕೆ ಉಡುಪಿ ಜಿಲ್ಲೆಯ ಉಳ್ಳೂರು ಕೆಮುಂಡೆಲ್ ಆಧ್ಯಾ ಫಾರ್ಮ್ ಹೌಸ್ ನಲ್ಲಿ ಆಧ್ಯಾ ಗಣಪತಿ ಪ್ರತಿಷ್ಠಾಪನೆ ಹಾಗೂ ಗಣಹೋಮ ನಡೆಯಲಿದ್ದು, ನಂತರ ಗಣಪತಿ ದೇವರಿಗೆ ವಿವಿಧ ಆರತಿ ಸ್ತುತಿ ಪಠಣ ಜರಗಲಿದೆ. ತದನಂತರ ಅಪರಾಹ್ನ ಘಂಟೆ 1.00ರಿಂದ 2.00 ರವರೆಗೆ ಗಣಪತಿಗೆ ಆರತಿ ಕಾರ್ಯಕ್ರಮ ನಡೆಯಲಿದೆ. ಸಂಜೆ 5.00 ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಜರುಗಲಿದ್ದು ಈ ಕಾರ್ಯಕ್ರಮದಲ್ಲಿ ಶ್ರೀ ದುರ್ಗಾಂಬಾ ಭಕ್ತ ವೃಂದ ಉಳ್ಳೂರು, ಪಾಂಡುರಂಗ ಭಜನಾ ಮಂಡಳಿ ಉಳ್ಳೂರು ಇವರು ಭಾಗವಹಿಸಲಿದ್ದು ಬಳಿಕ ಗಣಪತಿ ದೇವರಿಗೆ ವಿಶೇಷ ಆರತಿ ಬೆಳಗುತ್ತದೆ. ರಾತ್ರಿ 8.30 ರಿಂದ 10.00 ರ ತನಕ ಶ್ರೀ ವಿಶ್ವಕರ್ಮ ಭಜನಾ ಮಂಡಳಿ ಅವರಿಂದ ಹಾಗೂ 10.00 ರಿಂದ 11.00 ರ ವರೆಗೆ ಶ್ರೀ ನಿತ್ಯಾನಂದ ಭಜನಾ ಮಂಡಳಿ ಸದಸ್ಯರಿಂದ ಭಜನೆ ಮುಗಿದ ಬಳಿಕ ಮತ್ತೆ ಮಹಾ ಗಣಪತಿ ದೇವರಿಗೆ ಆರತಿ ಬೆಳಗುತ್ತಾರೆ.




ರಾತ್ರಿ 12.00 ಘಂಟೆಗೆ ಗಣಪತಿ ದೇವರಿಗೆ ವಿಶೇಷ ಮಂಗಳಾರತಿ ಪೂಜೆ ಪುನಸ್ಕಾರ ಧಾರ್ಮಿಕ ವಿಧಿಗಳೊಂದಿಗೆ ಅಂದಿನ ಧಾರ್ಮಿಕ ಕಾರ್ಯಕ್ರಮ ಮುಕ್ತಾಯ ಗೊಳ್ಳಲಿದ್ದು, ಮರುದಿನ ಮಂಗಳವಾರ ಬೆಳಗ್ಗೆ ಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರ ಭಕ್ತಿ ಗೀತೆ ಇರುತ್ತದೆ. ತದನಂತರ 11.15 ರಿಂದ 11.45 ರವರೆಗೆ ಎರ್ಮಾಳು ಬೈದ ಶ್ರೀ ಮಹಿಳಾ ಕುಣಿತ ಭಜನಾ ಮಂಡಳಿ ಸದಸ್ಯರಿಂದ ಕುಣಿತ ಭಜನೆ ಪ್ರಸ್ತುತಗೊಳ್ಳುತ್ತದೆ. ಮಧ್ಯಾಹ್ನ 12.45 ರಿಂದ ಮಹಾ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ಜರಗಲಿದೆ. ಅನ್ನ ಸಂತರ್ಪಣೆ ಮುಗಿದ ಬಳಿಕ 1.45 ರಿಂದ ಕಂಚಿನಡ್ಕ ಶಾರ್ವರಿ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ಇರುತ್ತದೆ. ಮಧ್ಯಾಹ್ನ 2.00 ಘಂಟೆಯಿಂದ ಮಹಾಪೂಜೆ ಬಳಿಕ ವಿನಾಯಕ ಶೋಭಾಯಾತ್ರೆ ನಡೆದು ಗಣಪತಿ ವಿಸರ್ಜನೆ ಜರಗಲಿದೆ. ಈ ಎಲ್ಲಾ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಸ್ತಿಕ ಮಹಾಶಯರು, ಗಣಪತಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಧ್ಯಾ ಫೌಂಡೇಶನ್ ಅಧ್ಯಕ್ಷರಾದ ರಾಕೇಶ್ ಅಜಿಲ ಕೆ.ಆರ್ ಅವರು ಹಾಗೂ ಆಧ್ಯಾ ಫೌಂಡೇಶನ್ ಸರ್ವ ಸದಸ್ಯರು, ಉತ್ಸವ ಸಮಿತಿ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.















































































































