ಕಣಂಜಾರು ಪಟೇಲ್ ಶೇಖರ ಹೆಗ್ಡೆ ಜನ್ಮಶತಾಬ್ದಿ ಪ್ರಯುಕ್ತ ಸ್ಮರಣಾಂಜಲಿ ಕಾರ್ಯಕ್ರಮವು ಕಣಂಜಾರು ಮಡಿಬೆಟ್ಟು ಶಾಲೆಯಲ್ಲಿ ಆಗಸ್ಟ್ 15ರಂದು ನಡೆಯಿತು. ಮಡಿಬೆಟ್ಟು ಶಾಲೆಯ ಸಂಸ್ಥಾಪಕರಾದ ಶೇಖರ ಹೆಗ್ಡೆಯವರ 100ನೇ ಜನ್ಮದಿನವನ್ನು ಸಂಸ್ಥಾಪಕರ ದಿನವಾಗಿ ಆಚರಿಸಲಾಯಿತು. ಉದ್ಯಮಿ ಗೋವಿಂದೂರು ವೆಂಕಪ್ಪ ಹೆಗ್ಡೆಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜನಾನುರಾಗಿಯಾಗಿದ್ದ ಪಟೇಲರು ಈ ಪರಿಸರಕ್ಕೆ ಆದರ್ಶ ನಾಯಕರಾಗಿದ್ದರು ಎಂದರು. ಶೇಖರ್ ಹೆಗ್ಡೆಯವರು ಸಮಾಜಕ್ಕೆ ನೀಡಿದ ಕೊಡುಗೆಗಳು ಮತ್ತು ವ್ಯಕ್ತಿತ್ವದ ಬಗ್ಗೆ ವಿದ್ಯಾ ಎಸ್ ಶೆಟ್ಟಿ ದೇವಸ್ಯ, ಸುಧಾಕರ್ ಎಸ್. ಶೆಟ್ಟಿ ಉದ್ಯಮಿ ಪುಣೆ, ಲಯನ್ಸ್ ಕ್ಲಬ್ ಮೂಡುಬಿದಿರೆ ಅಧ್ಯಕ್ಷ ಕೆ. ಶಿವಪ್ರಸಾದ್ ಹೆಗ್ಡೆ, ಉಡುಪಿಯ ನ್ಯಾಯವಾದಿ ಸತೀಶ್ ಪೂಜಾರಿ ಪೆಲತ್ತೂರು ಮಾತನಾಡಿದರು.




ಬ್ರಹ್ಮಲಿಂಗೇಶ್ವರ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಚ್. ಶಿವಪ್ರಸಾದ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿ ವಿಕ್ರಮ್ ಹೆಗ್ಡೆ ಪ್ರಸ್ತಾವಿಸಿದರು. ಶೇಖರ ಹೆಗ್ಡೆಯವರ ಆಪ್ತ ಗೋಪ ದೇವಾಡಿಗರವರನ್ನು ಈ ಸಂಧರ್ಭ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಮೇಲ್ಪಂಟ್ಟ ಫ್ರೆಂಡ್ಸ್ ಅಧ್ಯಕ್ಷ ಮಹೇಶ್ ಹೆಗ್ಡೆ, ಫ್ರೆಂಡ್ಸ್ ಪೆಲತ್ತೂರು ಫ್ರೆಂಡ್ಸ್ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ, ಕರಾವಳಿ ಯೂತ್ ಕ್ಲಬ್ ಉಡುಪಿ ಅಧ್ಯಕ್ಷ ಸಂದೇಶ್ ಕುಮಾರ್ ಶೆಟ್ಟಿ, ಟ್ರಸ್ಟಿನ ಉಪಾಧ್ಯಕ್ಷ ಮಂಜುನಾಥ ನಾಯಕ್, ಟ್ರಸ್ಟಿ ರವೀಂದ್ರ ಎಸ್. ಹೆಗ್ಡೆ, ಶಾಲಾ ಸಂಚಾಲಕ ಸಿಎ ಚಂದನ್ ಕುಮಾರ್ ಹೆಗ್ಡೆ, ಶಾಲಾ ಮುಖ್ಯೋಪಾಧ್ಯಾಯ ಅಶ್ವತ್ಥ್ ಭಾರದ್ವಾಜ್ ಕೆ. ಉಪಸ್ಥಿತರಿದ್ದರು.















































































































