ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಇರುವ ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಭಾಭವನದಲ್ಲಿ ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಂಸ್ಮರಣ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ವಹಿಸಿ ಮಾತನಾಡಿ, ತಾಯಿ ದುರ್ಗಾಪರಮೇಶ್ವರಿ ಪ್ರತಿಯೊಂದು ಅರಿತಿದ್ದಾರೆ. ನಮ್ಮ ದುಃಖ ದುಮ್ಮಾನಗಳನ್ನು ಆಕೆಯ ಪಾದಗಳಿಗೆ ಸಮರ್ಪಿಸಿ ಅಳುವುದಿದ್ದರೆ ಆಕೆಯ ಮುಂಭಾಗದಲ್ಲಿ ಅತ್ತು ನಮ್ಮ ನೋವುಗಳನ್ನು ತೋಡಿಕೊಂಡು ಪ್ರಾರ್ಥಿಸುತ್ತೇವೆ. ಈ ಕ್ಷೇತ್ರದಲ್ಲಿ ಯಾರೇ ಅಪಚಾರ ಮಾಡಿದರೂ ಅವರಿಗೆ ಆ ತಾಯಿ ಒಳ್ಳೆಯದನ್ನು ಮಾಡುವುದಿಲ್ಲ. ಈ ಕ್ಷೇತ್ರದಲ್ಲಿ ಒಳ್ಳೆಯ ರೀತಿಯಲ್ಲಿ ಪ್ರಾರ್ಥಿಸಿದವರಿಗೆ ಒಳ್ಳೆಯದನ್ನೇ ಮಾಡಿದ್ದಾರೆ ಎನ್ನುವುದಕ್ಕೆ ಅನೇಕ ಸಾಕ್ಷಿಗಳಿವೆ. ಇಂದು ಹಿರಿಯರಾದ ಗೋಪಾಲಕೃಷ್ಣ ಅಸ್ರಣ್ಣರ ಸಂಸ್ಮರಣೆ ಮಾಡಿದ್ದು ಅತ್ಯಂತ ಶ್ರೇಷ್ಠ ಕಾರ್ಯ ಎಂದು ನುಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಎಂ ಮೋಹನ ಆಳ್ವ ನೆರವೇರಿಸಿದರೆ, ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರವರು ಆಶೀರ್ವಚನ ನೀಡಿದರು.




ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಸರಕಾರದ ಆರೋಗ್ಯ ಸಚಿವರಾದ ಸನ್ಮಾನ್ಯ ಯು.ಟಿ ಖಾದರ್ ಅವರು ಶ್ರೀ ದೇವರ ದರ್ಶನ ಮಾಡಿ, ಅತ್ಯಂತ ಪುರಾತನ ಮತ್ತು ಶಕ್ತಿ ಕೇಂದ್ರವಾದ ಕಟೀಲು ಈ ನಾಡಿನ ಸಂಸ್ಕೃತಿ ಉಳಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸಿದೆ. ಹಿರಿಯರ ಸ್ಮರಣೆಯನ್ನು ಮಾಡಿರುವ ಈ ಕಾರ್ಯಕ್ರಮ ಅತ್ಯoತ ಶ್ರೇಷ್ಠವಾದದ್ದು ಎಂದರು. ಪದ್ಮನಾಭ ಕಟೀಲು ಅವರು ಕಳೆದ 26 ವರ್ಷಗಳಲ್ಲಿ ಕಾರ್ಯಕ್ರಮವನ್ನು ಸಂಯೋಜಿಸಿದ್ದು, ಸಂಸ್ಮರಣದ 25 ವರ್ಷದ ಕಾರ್ಯಕ್ರಮದಲ್ಲಿ ನಿರಂತರ ಸಮಾರಂಭದ ಅಧ್ಯಕ್ಷತೆಯನ್ನು ಐಕಳ ಅವರು ವಹಿಸಿ ಯಶಸ್ವಿಗೊಳಿಸಿದ್ದಾರೆ ಎನ್ನುವ ವಿಶೇಷಕ್ಕಾಗಿ ಐಕಳ ಹರೀಶ್ ಶೆಟ್ಟಿ ದಂಪತಿಗಳಿಗೆ ಗೌರವ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕರಾದ ಡಾ| ಅರುಣೋದಯ ರೈ ಬೆಳಿಯೂರು ಗುತ್ತು, ಬಾಬು ಶೆಟ್ಟಿ ಪೆರಾರ, ಶ್ರೀಮತಿ ಚಂದ್ರಿಕಾ ಹರೀಶ್ ಶೆಟ್ಟಿ, ಹರೀಶ್ ಶೇರಿಗಾರ್, ರಾಮ್ ಪ್ರಸಾದ್ ಬೆಂಗಳೂರು, ಚಂದ್ರಹಾಸ ಶೆಟ್ಟಿ ಬೊಳ್ನಾಡು ಗುತ್ತು, ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ದಿನೇಶ್ ಕುಲಾಲ್ ಕರ್ನಾಟಕ ಮಲ್ಲ, ಕೊಲ್ಲಾಡಿ ಬಾಲಕೃಷ್ಣ ರೈ, ಸುರೇಶ್ ಶೆಟ್ಟಿ, ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಅನೇಕ ಸಾಧಕರನ್ನು ವಿವಿಧ ಪ್ರಶಸ್ತಿಗಳೊಂದಿಗೆ ಗೌರವಿಸಲಾಯಿತು.






















































































































