ದರೆಗುಡ್ಡೆ ಗ್ರಾಮದ ಗುರುಬೆಟ್ಟು ನಿವಾಸದ ಆದಿತ್ಯ ಎನ್ನುವವರು ಕಾರ್ಕಳದಲ್ಲಿ ನಡೆದ ಅಪಘಾತದಲ್ಲಿ ಸಿಲುಕಿ ಹಾಸಿಗೆಯಲ್ಲಿಯೇ ಶುಶ್ರೂಷೆ ಪಡೆದುಕೊಳ್ಳುವ ಅನಾರೋಗ್ಯ ಸ್ಥಿತಿಯಲ್ಲಿದ್ದಾರೆ. ತೀರಾ ಬಡ ಕುಟುಂಬದವರಾಗಿರುವ ಅವರಿಗೆ ಕರಾವಳಿ ಕೇಸರಿ ಸೇವಾ ಟ್ರಸ್ಟ್ ಕೊಡುಗೈ ದಾನಿಯೊಬ್ಬರಿಂದ ಸಹಾಯಧನ ಕೊಡಿಸುವ ಕೆಲಸ ಮಾಡಿದ್ದರು. ರುದ್ರಾಂಶ ನಿರ್ಮಾಣ ಸಂಸ್ಥೆಯ ಆಡಳಿತ ನಿರ್ದೇಶಕ ಅಜಯ್ ದೀಕ್ಷಿತ್ ಶೆಟ್ಟಿ ಅವರು ಸಹಾಯಧನವನ್ನು ನೀಡಲು ಮುಂದಾಗಿ, ಆದಿತ್ಯ ಅವರ ಮನೆಯಲ್ಲಿಯೇ ವಿತರಣೆ ಮಾಡಿ ಕುಟುಂಬಕ್ಕೆ ಸಾಂತ್ವನ ಹೇಳಿ, ಆರೋಗ್ಯವನ್ನು ಹರಸಿದರು. ಯುವಕನ ತಾಯಿ ಸುಜಾತ ಅವರು ಆ ಸಹಾಯಧನವನ್ನು ಸ್ವೀಕರಿಸಿದರು. ಅಜಯ್ ದೀಕ್ಷಿತ್ ಶೆಟ್ಟಿ ಮೂಡಬಿದ್ರೆಯ ಹಲವಾರು ಅನಾರೋಗ್ಯದಲ್ಲಿರುವ ಕುಟುಂಬದವರಿಗೆ ಸಹಾಯವನ್ನು ನೀಡುತ್ತಿದ್ದು, ಅವರ ಸೇವಾ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಅಶೋಕ್ ಶೆಟ್ಟಿ ಮತ್ತು ಕರಾವಳಿ ಕೇಸರಿ ಟ್ರಸ್ಟ್ ನ ಸಮಿತ್ ರಾಜ್ ದರೆಗುಡ್ಡೆ ಉಪಸ್ಥಿತರಿದ್ದರು.






















































































































