ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿಯ ಮಹಿಳಾ ವಿಭಾಗದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜುಲೈ 4ರಂದು ಸಂಘದ ಸಭಾಂಗಣದಲ್ಲಿ ನಡೆಯಿತು. ಈ ವೇಳೆ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ವಸುಧಾ ಪ್ರಶಾಂತ್ ಶೆಟ್ಟಿ ಮೂಡಾಯೂರು, ಉಪಾಧ್ಯಕ್ಷೆಯಾಗಿ ರಂಜಿತಾ ಶೆಟ್ಟಿ ಓಡಿಲ್ನಾಳ, ಪ್ರಧಾನ ಕಾರ್ಯದರ್ಶಿಯಾಗಿ ಸಂಸ್ಕೃತಿ ರೈ ಲಾಯಿಲ, ಕೋಶಾಧಿಕಾರಿಯಾಗಿ ವಿಂದ್ಯಾ ಶೆಟ್ಟಿ ಅರಸಿನಮಕ್ಕಿ ಹಾಗೂ ಜೊತೆ ಕಾರ್ಯದರ್ಶಿಯಾಗಿ ಪವಿತ್ರಾ ಶೆಟ್ಟಿ ಕನ್ಯಾಡಿ ಅವರು ಅವಿರೋಧವಾಗಿ ಆಯ್ಕೆಯಾದರು.



ಸಂಚಾಲಕಿಯಾಗಿ ಜಯಲಕ್ಷ್ಮಿ ಸಾಮಾನಿ ಕರಂಬಾರು ಬೀಡು, ಸಾಂಸ್ಕೃತಿಕ ವಿಭಾಗದ ಸಂಚಾಲಕಿಯಾಗಿ ಸ್ವಾತಿ ಶೆಟ್ಟಿ ಸುಲ್ಕೇರಿ ಹಾಗೂ ಮಹಿಳಾ ಕ್ರೀಡಾ ವಿಭಾಗದ ಸಂಚಾಲಕಿಯಾಗಿ ಉಷಾ ಶೆಟ್ಟಿ ಉಜಿರೆ ಆಯ್ಕೆಯಾದರು. ನಿರ್ದೇಶಕರಾಗಿ ಸೌಮ್ಯ ಶೆಟ್ಟಿ, ಸಂಗೀತಾ ಶೆಟ್ಟಿ, ಅಶ್ವಿನಿ ಶೆಟ್ಟಿ, ಪ್ರಿಯಾ ಶೆಟ್ಟಿ, ಶುಭ ಶೆಟ್ಟಿ, ಶುಭಶ್ರೀ ಶೆಟ್ಟಿ, ರಕ್ಷಿತಾ ಶೆಟ್ಟಿ ಹಾಗೂ ಶ್ರೇಯಾ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.




















































































































