ಕಂಬಳ ಅಭಿಮಾನಿ ಸಮಿತಿ ಕೊಂಡಾಣ ಮತ್ತು ನಮ್ಮ ಜವನೆರ್ ಕೊಂಡಾಣ ವತಿಯಿಂದ ಪ್ರಗತಿಪರ ಕೃಷಿಕ, ಕಂಬಳ ಪ್ರೇಮಿ, ಕಂಬಳ ಯಜಮಾನ ನಾರಾಯಣ ರೈ ಕೊಂಡಾಣ ಅವರಿಗೆ 90ರ ಹುಟ್ಟುಹಬ್ಬದ ಸಂಭ್ರಮದ ಅಭಿಮಾನದ ಅಭಿನಂದನಾ ಕಾರ್ಯಕ್ರಮ ಕೋಟೆಕಾರು ಬೀರಿಯ ಕೆ.ವಿ.ಎಸ್.ಎಸ್ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಿತು. ನಾರಾಯಣ ರೈ ಸೇರಿದಂತೆ ಅತಿಥಿ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ರವೀಂದ್ರ ರೈ ಕಲ್ಲಿಮಾರು ಅಭಿನಂದನಾ ಭಾಷಣ ಮಾಡಿದರು. ಕಾರ್ಯಕ್ರಮದ ರೂವಾರಿ ಸಂಘಟಕ ಶ್ರೀ ಕ್ಷೇತ್ರ ಕೊಂಡಾಣದ ಒಂದನೇ ಮನೆತನದ ಕೆಳಗಿನ ಕೋಟೆಕಾರು ಗುತ್ತು ಮುತ್ತಣ್ಣ ಶೆಟ್ಟಿ, ನಾರಾಯಣ ರೈಗಳ ಸಾಧನೆಯನ್ನು ತಿಳಿಸಿದರು.



ಕೊಂಡಾಣ ಶ್ರೀ ಪಿಲಿಚಾಮುಂಡಿ, ಮುಂಡತ್ತಾಯ, ಬಂಟ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರ್ಷರಾಜ್ ಮುದ್ಯ ಅಧ್ಯಕ್ಷತೆ ವಹಿಸಿದ್ದರು. ಹರೇಕಳ ಸೂರ್ಯಚಂದ್ರ ಕಂಬಳ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಕಂಬಳ ಸಮಿತಿ ಉಪಾಧ್ಯಕ್ಷ ಗಿರೀಶ್ ಆಳ್ವ ಮೋರ್ಲ, ಗಡಿ ಪ್ರಧಾನರಾದ ಶಿವರಾಮ ಶೆಟ್ಟಿ ಸಾಂತ್ಯಗುತ್ತು, ರಘುನಾಥ ಶೆಟ್ಟಿ ಸಾಂತ್ಯಗುತ್ತು ಹಾಗೂ ದೇವು ಶೆಟ್ಟಿ ಯಾನೆ ಮೋಹನ್ ದಾಸ್ ಭಂಡಾರಿ, ನಾಗೇಶ್ ಶೆಟ್ಟಿ ಮರಿಯನಪಾಲು, ಹರೀಶ್ ಆಳ್ವ ಸೋವೂರು ಉಪಸ್ಥಿತರಿದ್ದರು. ಸಂತೋಷ್ ಶೆಟ್ಟಿ ಮಾಡೂರು ಸ್ವಾಗತಿಸಿದರು. ಉದಯ ಕುಮಾರ್ ಶೆಟ್ಟಿ ಕೊಂಡಾಣಗುತ್ತು ವಿಜ್ಞಾಪನಾ ಪತ್ರ ವಾಚಿಸಿದರು. ಪತ್ರಕರ್ತ ವಿದ್ಯಾಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಹಾಸ್ ಶೆಟ್ಟಿ ವಂದಿಸಿದರು.




















































































































