

ಕರಾವಳಿ ಭಾಗದಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೊಂದು ಗುಡ್ನ್ಯೂಸ್ ಇಲ್ಲಿದೆ. ನೆಲಮಂಗಲದಿಂದ ಹಾಸನಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಚೆನ್ನರಾಯಪಟ್ಟಣದಲ್ಲಿ ರವಿತೇಜ್ ಶೆಟ್ಟಿ ಮಾರಣಕಟ್ಟೆ ಯವರ ಮಾಲೀಕತ್ವದ ‘ಅನ್ನ ಪ್ರಸಾದಂ’ ಮಲ್ಟಿ ಕ್ಯುಸಿನ್ ಫ್ಯಾಮಿಲಿ ವೆಜ್ ರೆಸ್ಟೋರೆಂಟ್ ಶುಭಾರಂಭಗೊಂಡಿದ್ದು, ರುಚಿಯಿಂದಲೇ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಚನ್ನರಾಯಪಟ್ಟಣದ ಬರ್ಗೂರು ಹ್ಯಾಂಡ್ ಪೋಸ್ಟ್ ಬಳಿಯಲ್ಲಿರುವ ಅನ್ನ ಪ್ರಸಾದಂ ಹೋಟೆಲ್ ಕೇವಲ ಹಸಿವು ನೀಗಿಸುವ ಜಾಗವಷ್ಟೇ ಅಲ್ಲ, ಅದೊಂದು ಶುದ್ಧ ಸಸ್ಯಾಹಾರಿ ರುಚಿಯ ಸ್ವರ್ಗವಾಗಿತ್ತು. ಹೋಟೆಲ್ ಪ್ರವೇಶಿಸುತ್ತಿದ್ದಂತೆ ‘ನಂದಿನಿ ತುಪ್ಪದ ಸ್ವಾದ, ಗುಣಮಟ್ಟದ ಆಹಾರ’ ಎಂಬ ಬೋರ್ಡ್ ಗ್ರಾಹಕರನ್ನು ಕೈಬೀಸಿ ಕರೆಯುತ್ತದೆ. ‘ಅಮ್ಮನ ಕೈ ರುಚಿಗೆ ಹೊಸ ವಿಳಾಸ’ ಎಂಬ ಮಾತಿಗೆ ತಕ್ಕಂತೆ, ಅಲ್ಲಿನ ಪ್ರತಿಯೊಂದು ತಿನಿಸುಗಳೂ ಮನೆಯೂಟದ ನೆನಪು ತರಿಸುವಂತಿವೆ.


2026ರ ಜೂನ್ 5 ರಂದು ಹೋಟೆಲ್ನ ಭವ್ಯ ಉದ್ಘಾಟನಾ ಸಮಾರಂಭ ನೆರವೇರಿತ್ತು. ಆರ್ಸಿಬಿ (RCB) ಗೆಲುವಿನ ಸಂಭ್ರಮದ ಅಂಗವಾಗಿ ಜೂನ್ 8 ಮತ್ತು 9 ರಂದು ಎರಡು ದಿನ ಗ್ರಾಹಕರಿಗೆ ಬರೋಬ್ಬರಿ 50% ರಿಯಾಯಿತಿ ಇದೆ. ಆರಂಭದಿಂದಲೂ ಕಿಕ್ಕಿರಿದ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸುತ್ತಿದ್ದು, ಅನ್ನಪ್ರಸಾದ ಹೋಟೆಲ್ನ ಬಿಸಿಬಿಸಿ ದೋಸೆ, ಇಡ್ಲಿಗಳ ಪರಿಮಳ ಇಡೀ ಹೆದ್ದಾರಿಯುದ್ದಕ್ಕೂ ಹರಡಿದೆ. ಚನ್ನರಾಯಪಟ್ಟಣದ ಸ್ಥಳೀಯ ಗ್ರಾಹಕರಿಗೆ ನಿರಂತರವಾಗಿ 10% ದಿನನಿತ್ಯದ ರಿಯಾಯಿತಿ ನೀಡುವ ಮೂಲಕ ಹೋಟೆಲ್ ಆಡಳಿತ ಮಂಡಳಿ ಗ್ರಾಹಕರನ್ನು ಸೆಳೆಯುತ್ತಿದೆ. ಇನ್ನು ಗ್ರಾಹಕರಿಗೆ ಉಚಿತ ಹೋಮ್ ಡೆಲಿವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸುಮಾರು 8 ಕಿಲೋ ಮೀಟರ್ ದೂರದ ವರೆಗೆ ಈ ಸೌಲಭ್ಯ ದೊರೆಯುತ್ತಿದೆ. ಉಚಿತ ಡೋರ್ ಡೆಲಿವರಿ ಸೌಲಭ್ಯ ಪಡೆಯಬೇಕಾದ್ರೆ ಕನಿಷ್ಠ 650 ರೂಪಾಯಿಯ ಆರ್ಡರ್ ಮಾಡಬೇಕಾಗಿದೆ. ಗ್ರಾಹಕರ ಮನೆಗಳಿಗೆ ಉಚಿತ ಹೋಮ್ ಡೆಲಿವರಿ ಸೌಲಭ್ಯವನ್ನು ಒದಗಿಸುತ್ತಿರುವುದು ಮಾತ್ರವಲ್ಲ, ಶುಭ ಸಮಾರಂಭಗಳಿಗೆ ಔಟ್ಡೋರ್ ಕ್ಯಾಟರಿಂಗ್ ಸೇವೆಗಳನ್ನೂ ನೀಡಲಾಗುತ್ತಿದೆ. ಪ್ರತಿನಿತ್ಯ ಬೆಳಿಗ್ಗೆ 6.30 ರಿಂದ ರಾತ್ರಿ 11.00 ರವರೆಗೆ ಸದಾ ಗ್ರಾಹಕರ ಸೇವೆಯಲ್ಲಿ ಕಾರ್ಯನಿರತವಾಗಿರುವ ಈ ಹೋಟೆಲ್ ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರಿಗೆ ಮತ್ತು ಚನ್ನರಾಯಪಟ್ಟಣದ ಜನತೆಗೆ ನೆಚ್ಚಿನ ತಾಣವಾಗಿದೆ. ಹೆಚ್ಚಿನ ಮಾಹಿತಿಗಾಗಿ 99860 99077 ಸಂಖ್ಯೆಯನ್ನು ಸಂಪರ್ಕಿಸಿ.





























































































































