ಮುಂಬಯಿಯ ಪ್ರತಿಭಾವಂತ ಬಾಲಕ, ಐಲೇಸಾದ ಸ್ಪೀಕರ್ ಬಾಯ್ ಎಂದೇ ಪ್ರಸಿದ್ಧಿ ಪಡೆದ ಪೋರ, ಕಲಿಕೆಯ ಜೊತೆ ಇತರ ಹವ್ಯಾಸವನ್ನು ಮೈಗೂಡಿಸಿಕೊಂಡು ಸದಾ ಹೊಸತನದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾ ಜಾಹೀರಾತು ಕ್ಷೇತ್ರದಲ್ಲಿ 11 ಭಾಷೆಗಳಲ್ಲಿ ಡಬ್ಬಿಂಗ್ ಮಾಡಿದ ಹೆಗ್ಗಳಿಕೆಯ ಜೊತೆಗೆ ಹಾಡು, ಕೋಡಿಂಗ್ ಬಗ್ಗೆ ಹೆಚ್ಚಿನ ಆಸಕ್ತಿಯ ಸುವಿಧ್ ಇವರು ಇತ್ತೀಚಿಗೆ ವಾಯ್ಸ್ ಕ್ಷೇತ್ರದಲ್ಲಿ ಇಂಡಿಯಾ ವಾಯ್ಸ್ ಫೆಸ್ಟ್ ಅವಾರ್ಡ್ ಪಡೆದುಕೊಂಡಿದ್ದಾರೆ. ಜೊತೆಗೆ ಇವರು ಹಾಡಿದ ಹಾಡುಗಳು ಯೂಟ್ಯೂಬ್ ನಲ್ಲಿವೆ. ಕನ್ನಡ, ತುಳು ನಾಟಕದಲ್ಲೂ ಕೈಯಾಡಿಸಿದ್ದಾರೆ. ಡಾ| ಭರತ್ ಕುಮಾರ್ ಪೊಲಿಪು ಅವರ ಶಾಕುಂತಲಾ, ಅಹಲ್ಯಾ,ಬಲ್ಲಾಳರ ಮಾಯಾವಿ ಸರೋವರ, ಬಂಟರ ಸಂಘದ ಸಿಟಿ ರೀಜನಲ್ ನಡೆಸಿಕೊಡುವ ನಾಟಕದಲ್ಲೂ ನಟಿಸುವುದರ ಜೊತೆಗೆ 10ನೇ ತರಗತಿಯಲ್ಲಿ 94.4 ಶೇಕಡಾ ಅಂಕದೊಂದಿಗೆ ತೇರ್ಗಡೆಯಾಗಿದ್ದಾರೆ.ಇವರ ಕಿರುಪ್ರಾಯದ ಸಾಧನೆಯನ್ನು ಗುರುತಿಸಿ ನಮನೋತ್ಸವ 2025 ಸಂಭ್ರಮದಲ್ಲಿ ‘ನಮನ ಸಿರಿ ಯುವ ಪುರಸ್ಕಾರ’ ಪ್ರಶಸ್ತಿಯೊಂದಿಗೆ ಸನ್ಮಾನಿಸಿ ಗೌರವಿಸಲ್ಪಡಲಿದ್ದಾರೆ. ಸುವಿಧ್ ರಂಗಕರ್ಮಿ ಸುರೇಂದ್ರ ಕುಮಾರ್ ಶೆಟ್ಟಿ ಮಾರ್ನಾಡ್ ಮತ್ತು ಭಾಂಡೂಪ್ ನ್ಯಾಷನಲ್ ಕಾಲೇಜಿನ ಉಪನ್ಯಾಸಕಿ ಡಾ. ವಿದ್ಯಾ ಸೂರಿ ಮಾರ್ನಾಡ್ ದಂಪತಿಯ ಪುತ್ರ.