ಸಮಾಜ ಸೇವಕ ಎನ್ ಸಿ ಪಿ ಮುಖಂಡ ಕಳತ್ತೂರು ವಿಶ್ವನಾಥ ಶೆಟ್ಟಿ ಅವರನ್ನು ವಿಮಾನ ನಿಲ್ದಾಣಗಳ ವಾಯುಯಾನ ನೌಕರರ (ಎಎಇಯು) ಸಂಘದ ಕರ್ನಾಟಕ ರಾಜ್ಯ ಸಂಚಾಲಕರಾಗಿ ನೇಮಕ ಮಾಡಲಾಗಿದೆ. ಎಎಇಯು ಸಂಘದ ಅಖಿಲ ಭಾರತ ಅಧ್ಯಕ್ಷ ಡಾ. ನಿತಿನ್ ಜಾಧವ್ ಅವರು ಈ ನೇಮಕಾತಿ ಮಾಡಿದ್ದು, ಈ ಕುರಿತ ನೇಮಕಾತಿ ಪತ್ರವನ್ನು ಅಕ್ಟೋಬರ್ 15ರಂದು ವಿಶ್ವನಾಥ್ ಶೆಟ್ಟಿ ಅವರಿಗೆ ನೀಡಿದ್ದಾರೆ.
ಎಎಇಯು ಸಂಘದ ಕರ್ನಾಟಕದ ಸಂಚಾಲಕರಾಗಿ ನೇಮಕವಾದ ವಿಶ್ವನಾಥ್ ಶೆಟ್ಟಿ ಅವರು ಕರ್ನಾಟಕದ ವಿಮಾನ ನಿಲ್ದಾಣಗಳಲ್ಲಿ ಎಎಇಯು ಘಟಕಗಳ ರಚನೆ ಮಾಡುವುದಕ್ಕೆ ಸಂಘವು ಸೂಚಿಸಿದೆ ಎಂದು ಎಎಇಯು ಪ್ರಕಟಣೆ ತಿಳಿಸಿದೆ.