ಜೆಸಿಐ ಸುರತ್ಕಲ್ ವತಿಯಿಂದ ಜೆಸಿ ಸಪ್ತಾಹದ ಸಮಾರೋಪ ಸಮಾರಂಭ ಸುರತ್ಕಲ್ ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಮಂಗಳೂರು ಎಸ್ ಎಲ್ ಶೇಟ್ ಅಭರಣ ಮಳಿಗೆಯ ಪಾಲುದಾರರಾದ ಶರತ್ ಶೇಟ್, ಜೆಸಿ ನ್ಯಾಷನಲ್ ಕೋ ಅರ್ಡಿನೇಟರ್ ಲೋಕೇಶ್ ರೈ, ಜೆಸಿ ನಿಕಟಪೂರ್ವಧ್ಯಕ್ಷೆ ರಾಜೇಶ್ವರಿ ಡಿ ಶೆಟ್ಟಿ, ಪೂರ್ವಾಧ್ಯಕ್ಷರಾದ ಗುಣವತಿ ರಮೇಶ್, ಪುಷ್ಪರಾಜ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಜಯರಾಮ ಶೆಟ್ಟಿ, ವಿನೀತ್ ಶೆಟ್ಟಿ, ಸುಜೀರ್ ಶೆಟ್ಟಿ, ನಿರಂಜನ್ ಬಾಳ, ಜೆಸಿ ಸಪ್ತಾಹದ ಅಧ್ಯಕ್ಷೆ ಜ್ಯೋತಿ ಪಿ ಶೆಟ್ಟಿ ಉಪಾಧ್ಯಕ್ಷೆ ಜ್ಯೋತಿ ಜೆ ಶೆಟ್ಟಿ, ಜೆಜೆಸಿ ಜೀತಿನ್, ಕಾರ್ಯಕ್ರಮ ನಿರ್ದೇಶಕ ರಾಹುಲ್ ಸುವರ್ಣ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಜೆಸಿ ಸುರತ್ಕಲ್ ಅಧ್ಯಕ್ಷ ಜಯರಾಜ್ ಅಚಾರ್ಯ ವಹಿಸಿದ್ದರು. ಕಾರ್ಯ ದರ್ಶಿ ಸಂತೋಷ್ ಕುಮಾರ್ ಧನ್ಯವಾದ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಸಮಾಜ ಸೇವೆಗಾಗಿ ರತ್ನಾಕರ ಶೆಟ್ಟಿ ಸುರತ್ಕಲ್ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.