ಸುದ್ದಿ Archives - www.buntsnow.com | web-based media For Bunts Community

ಹದಿಹರೆಯದವರ ಸ್ಥೂಲಕಾಯ ನಿರ್ವಹಣೆ ಕುರಿತು ಸಂಶೋಧನೆ : ದೀಕ್ಷಾ ಎಂ ಶೆಟ್ಟಿಗೆ ಪಿಎಚ್‌ಡಿ
ಹದಿಹರೆಯದವರಲ್ಲಿ ಕಂಡು ಬರುವ ಸ್ಥೂಲಕಾಯ ಸಮಸ್ಯೆ, ಅದರ ಕುರಿತು ಇರುವ ಜ್ಞಾನ, ಮನೋಭಾವ ಹಾಗೂ ಆಚರಣೆಗಳ ಕುರಿತು ಅಧ್ಯಯನ ನಡೆಸಿ, ಆರೋಗ್ಯ ಶಿಕ್ಷಣದ ಪರಿಣಾಮವನ್ನು ವಿಶ್ಲೇಷಿಸಿದ ಸಂಶೋಧನೆಗಾಗಿ ದೀಕ್ಷಾ ಎಂ ಶೆಟ್ಟಿ ಅವರು ಪಿಎಚ್‌ಡಿ ಪದವಿ ಪಡೆದಿದ್ದಾರೆ. ಮೈಸೂರಿನ ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ನ ನಿರ್ವಹಣಾ ಅಧ್ಯಯನ ವಿಭಾಗದಿಂದ ನಿರ್ವಹಣಾ ಶಾಸ್ತ್ರ ವಿಷಯದಲ್ಲಿ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿ ಪ್ರದಾನ ಮಾಡಲಾಗಿದೆ. ಹದಿಹರೆಯದವರ ಸ್ಥೂಲಕಾಯದ ಕುರಿತು ಜ್ಞಾನ, ಮನೋಭಾವ ಮತ್ತು ಆಚರಣೆಗಳನ್ನು ನಿರ್ಧರಿಸುವ ಅಧ್ಯಯನ ಹಾಗೂ ಸ್ಥೂಲಕಾಯ ನಿರ್ವಹಣೆಯಲ್ಲಿ ಆರೋಗ್ಯ ಶಿಕ್ಷಣದ ಪರಿಣಾಮದ ಮೌಲ್ಯಮಾಪನ ಎಂಬ ವಿಷಯದ ಕುರಿತು ಅವರು ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಈ ಸಂಶೋಧನೆಯನ್ನು ಡಾ. ಕನಕವಳ್ಳಿ ಕೆ ಕುಂದೂರಿ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಲಾಗಿದೆ. ದೀಕ್ಷಾ ಎಂ ಶೆಟ್ಟಿ ಅವರು ಮಾಧವ ಶೆಟ್ಟಿ ಬಾಳ ಮತ್ತು ಮೀರಾವಾಣಿ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದಾಳೆ.

The post ಹದಿಹರೆಯದವರ ಸ್ಥೂಲಕಾಯ ನಿರ್ವಹಣೆ ಕುರಿತು ಸಂಶೋಧನೆ : ದೀಕ್ಷಾ ಎಂ ಶೆಟ್ಟಿಗೆ ಪಿಎಚ್‌ಡಿ appeared first on www.buntsnow.com |  web-based media For Bunts Community.

ಸುಭಾಷಿತನಗರ ಅಡ್ಡ ರಸ್ತೆಯಲ್ಲಿ ರಸ್ತೆ ಸುರಕ್ಷತಾ ಉಬ್ಬು ದರ್ಪಣ ಉದ್ಘಾಟನೆ
ಸುಭಾಷಿತನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಪರವಾಗಿ ದೇಣಿಗೆ ರೂಪದಲ್ಲಿ ಎರಡು ಕಡೆ ಅಡ್ಡ ರಸ್ತೆಯಲ್ಲಿ ರಸ್ತೆ ಸುರಕ್ಷತಾ ಉಬ್ಬು ದರ್ಪಣವನ್ನು ಶ್ರೀ ದುರ್ಗಾ ಫ್ಯಾಬ್ರಿಕೇಷನ್ ವಕ್ಸ್೯ ಸುರತ್ಕಲ್ ಇದರ ಮಾಲಕ ದಿನೇಶ್ ಶೆಟ್ಟಿ ಕಬ್ಬಿನಹಿತ್ಲು ಒದಗಿಸಿ ಕೊಟ್ಟಿದ್ದು, ಇದರ ಉದ್ಘಾಟನೆಯನ್ನು ಅಸೋಸಿಯೇಶನ್ ಅಧ್ಯಕ್ಷರಾದ ರಮೇಶ್ ಶೆಟ್ಟಿ ಮತ್ತು ಪದಾಧಿಕಾರಿಗಳು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ದುರ್ಗಾ ಫ್ಯಾಬ್ರಿಕೇಷನ್ ಮಾಲಕ ದಿನೇಶ್ ಶೆಟ್ಟಿ ಕಬ್ಬಿನಹಿತ್ಲು, ಸುಭಾಷಿತನರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ ನ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಕೋಶಾಧಿಕಾರಿ ನರಸಿಂಹ ಸುವರ್ಣ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಜೊತೆ ಕಾರ್ಯದರ್ಶಿ ಲಕ್ಷ್ಮೀ ಚಂದ್ರಶೇಖರ ಆಚಾರ್ಯ, ಕಮಲಾಕ್ಷಿ ತಾರಾನಾಥ ಸಾಲ್ಯಾನ್, ಪ್ರೇಮನಾಥ ಹೆಗ್ಡೆ, ನಾಗಣ್ಣ ಶೆಟ್ಟಿ, ಸಹನಾ ಗಿರೀಶ್, ದುರ್ಗಾ ಫ್ಯಾಬ್ರಿಕೇಷನ್ ನ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು. ರಸ್ತೆ ಸುರಕ್ಷತಾ ಉಬ್ಬು ದರ್ಪಣವನ್ನು ಒದಗಿಸಿದ ದಿನೇಶ್ ಶೆಟ್ಟಿ ಅವರಿಗೆ ಅಸೋಸಿಯೇಶನ್ ಕೃತಜ್ಞತೆ ಸಲ್ಲಿಸಿದೆ.

The post ಸುಭಾಷಿತನಗರ ಅಡ್ಡ ರಸ್ತೆಯಲ್ಲಿ ರಸ್ತೆ ಸುರಕ್ಷತಾ ಉಬ್ಬು ದರ್ಪಣ ಉದ್ಘಾಟನೆ appeared first on www.buntsnow.com |  web-based media For Bunts Community.

ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು : ದೇಶದ ಮೊದಲ ಐಬಿಎಂ ಎಐ ಲ್ಯಾಬ್ ಲೋಕಾರ್ಪಣೆ
ಐಬಿಎಂ ಸಾಫ್ಟ್ವೇರ್ ಲ್ಯಾಬ್ಸ್ ಸಹಯೋಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ಸ್ಥಾಪಿಸಲಾದ ದೇಶದ ಮೊದಲ ಐಬಿಎಂ ಎಐ ಲ್ಯಾಬ್‌ನ್ನು ಉದ್ಘಾಟಿಸಲಾಯಿತು. ಉದ್ಯಮ ಶೈಕ್ಷಣಿಕ ಸಹಯೋಗವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳ ನೇರ ಪ್ರಾಯೋಗಿಕ ಅನುಭವ ಕಲ್ಪಿಸಲು ಈ ಲ್ಯಾಬ್ ಸ್ಥಾಪಿಸಲಾಗಿದೆ. ಐಬಿಎಂ ವಾಟ್ಸನ್‌ಎಕ್ಸ್ ಎಐ, ವಾಟ್ಸನ್‌ಎಕ್ಸ್ ಆರ್ಕೆಸ್ಟ್ರೇಟ್ ಹಾಗೂ ಎಐ ಆಧಾರಿತ ಡೆವಲಪರ್ ಉಪಕರಣಗಳಿಂದ ಸಜ್ಜುಗೊಂಡಿರುವ ಈ ಲ್ಯಾಬ್, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಎಂಟರ್‌ಪ್ರೈಸ್ ಎಐ ವೇದಿಕೆಗಳು ಹಾಗೂ ನೈಜ ಕೈಗಾರಿಕಾ ಅನ್ವಯಿಕೆಗಳ ಕುರಿತು ನೇರ ಅನುಭವ ನೀಡಲಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಐಬಿಎಂ ಇಂಡಿಯಾದ ವಾಟ್ಸನ್‌ಎಕ್ಸ್ ಎಐ ವಿಭಾಗದ ಕಾರ್ಯಕ್ರಮ ನಿರ್ದೇಶಕ ಹಾಗೂ ಮುಖ್ಯಸ್ಥ ರತೀಶ್ ಮುರಳೀಧರನ್, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ದೇಶದ ಮೊದಲ ಐಬಿಎಂ ಎಐ ಲ್ಯಾಬ್ ಸ್ಥಾಪಿಸಿದ ಎಂಜಿನಿಯರಿಂಗ್ ಕಾಲೇಜಾಗಿ ಹೊಸ ಮೈಲಿಗಲ್ಲು ನಿರ್ಮಿಸಿದೆ. ಎಐ ತಂತ್ರಜ್ಞಾನವು ಶಕ್ತಿಯುತ ಸಾಧನಗಳನ್ನು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಿ ಜ್ಞಾನವನ್ನು ವ್ಯಾಪಕವಾಗಿ ತಲುಪಿಸಿದೆ. ಆದರೆ ಭವಿಷ್ಯದಲ್ಲಿ ಯಶಸ್ಸು ತಂತ್ರಜ್ಞಾನದಿಂದ ಮಾತ್ರ ನಿರ್ಧಾರವಾಗುವುದಿಲ್ಲ. ಕಲಿಯುವ ಆಸಕ್ತಿ, ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಮತ್ತು ಸಮಾಜಕ್ಕೆ ಉಪಯುಕ್ತ ಪರಿಹಾರಗಳನ್ನು ಕಂಡುಹಿಡಿಯುವ ಮನೋಭಾವವೂ ಮುಖ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಕೃತಕ ಬುದ್ಧಿಮತ್ತೆಯನ್ನು ಮಾನವ ಸಾಮರ್ಥ್ಯವನ್ನು ವೃದ್ಧಿಸುವ ಸಾಧನವಾಗಿ ನೋಡಬೇಕು. ಅದು ಮಾನವನನ್ನು ಬದಲಿಸುವ ತಂತ್ರಜ್ಞಾನವಲ್ಲ. ಮಾನವೀಯ ಸಾಮಾನ್ಯ ಜ್ಞಾನ ಮತ್ತು ಎಐ ಒಂದಾದಾಗ ವಿಶ್ವಕ್ಕೆ ಅತ್ಯುತ್ತಮ ಪರಿಹಾರಗಳನ್ನು ನೀಡಬಹುದು. ಜಾಗತೀಕರಣದಿಂದ ಹಿಡಿದು ಇಂಟರ್‌ನೆಟ್ ಕ್ರಾಂತಿಯವರೆಗೆ ಪ್ರತಿಯೊಂದು ತಂತ್ರಜ್ಞಾನ ಬದಲಾವಣೆ ಉದ್ಯೋಗಗಳ ಸ್ವರೂಪವನ್ನು ಬದಲಾಯಿಸಿದೆ ಹೊರತು ಉದ್ಯೋಗಗಳನ್ನು ಸಂಪೂರ್ಣವಾಗಿ ನಾಶ ಪಡಿಸಿಲ್ಲ. ಎಐ ಕೂಡಾ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಆದ್ದರಿಂದ ಶೈಕ್ಷಣಿಕ ಸಂಸ್ಥೆಗಳು ತಮ್ಮ ಪಠ್ಯಕ್ರಮಗಳನ್ನು ಕಾಲಾನುಗುಣವಾಗಿ ಪರಿಷ್ಕರಿಸಬೇಕು ಎಂದರು. ಈ ಐಬಿಎಂ ಎಐ ಲ್ಯಾಬ್ ಮುಂದಿನ ದಿನಗಳಲ್ಲಿ ನವೀನತೆ, ಸಂಶೋಧನೆ ಮತ್ತು ಕೌಶಲ್ಯಾಭಿವೃದ್ಧಿಗೆ ಕೇಂದ್ರವಾಗಿದ್ದು, ವಿದ್ಯಾರ್ಥಿಗಳನ್ನು ಎಐ ಆಧಾರಿತ ಭವಿಷ್ಯದ ಉದ್ಯೋಗಗಳಿಗೆ ಸಜ್ಜುಗೊಳಿಸುವ ಪ್ರಮುಖ ವೇದಿಕೆಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಎಐಇಟಿಯ ಹಿರಿಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಐಬಿಎಂ ಇಂಡಿಯಾದ ಎಐ ತಜ್ಞ ಮನೋಜ್ ಬಿ. ಶೆಟ್ಟಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಎಐಇಟಿ ಪ್ರಾಂಶುಪಾಲ ಡಾ| ಪೀಟರ್ ಫೆರ್ನಾಂಡಿಸ್, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಐಬಿಎಂ ಸಾಫ್ಟ್ವೇರ್ ಲ್ಯಾಬ್ಸ್ ಪ್ರತಿನಿಧಿಗಳು ಇದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ| ಮಂಜುನಾಥ ಕೊಠಾರಿ ಸ್ವಾಗತಿಸಿ, ರಕ್ಷಿತಾ ರೈ ಕಾರ‍್ಯಕ್ರಮ ನಿರೂಪಿಸಿ, ಸಂಪತ್ ಶೆಟ್ಟಿ ವಂದಿಸಿದರು

The post ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು : ದೇಶದ ಮೊದಲ ಐಬಿಎಂ ಎಐ ಲ್ಯಾಬ್ ಲೋಕಾರ್ಪಣೆ appeared first on www.buntsnow.com |  web-based media For Bunts Community.

ಕೊಡಿಯಾಲ್ ಬೈಲ್ ನಿರ್ದೇಶನದ ನೂತನ ನಾಟಕ ‘ಶ್ರೀಮತಿ ಸತ್ಯಭಾಮ’
ಆ ಪೋಸ್ಟರೇ ಹೊಸತನವನ್ನು ತುಂಬಿಕೊಂಡಿದೆ, ತಬ್ಬಿಕೊಂಡಿದೆ. ‘ಶ್ರೀಮತಿ ಸತ್ಯಭಾಮ’ ಟೈಟಲ್ ಅನ್ನೇ ಆಭರಣ, ಸೀರೆಯಿಂದ ಅಲಂಕರಿಸಲಾಗಿದೆ. Born to Rule ಎಂಬ ಅಡಿಬರಹ ಹಾಗೂ ಸತ್ಯಭಾಮ ನಿಂತ ಭಂಗಿಯು ಆಕೆಯ ಪಾತ್ರ ಎಂಥದ್ದು ಎಂಬುದನ್ನೂ ಸೂಚಿಸುತ್ತದೆ. ಅವೆಲ್ಲವುಗಳಿಂದ ಮುಖ್ಯವಾಗಿ ಕೈಲಾಸ ವೈಕುಂಠ ತಿರ್ಗ್ದ್ ಕಲಾಸಂಗಮ ಕುಡ ಭೂಲೋಕೊಗು ಎಂಬ ಒಂದು ವಾಕ್ಯದ ಮೂಲಕ ಈ ತಂಡವು ಪೌರಾಣಿಕ ಕಥೆಗಳ ಬಳಿಕ ಮತ್ತೆ ಸಾಮಾಜಿಕ ಕಥೆಗೆ ಹೊರಳಿದೆ ಎಂಬುದನ್ನು ವಿಭಿನ್ನವಾಗಿ ತಿಳಿಸುವ ಪ್ರಯತ್ನ ಮಾಡಿದೆ. ತುಳು ರಂಗಭೂಮಿಯ ಬದಲಾವಣೆಯ ಹರಿಕಾರ, ಹೊಸತನದ ರೂವಾರಿ ಎಂದೇ ಗುರುತಿಸಿಕೊಂಡಿರುವ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಎರಡು ಮೂರು ವರ್ಷಗಳಿಂದ ಪೌರಾಣಿಕ, ಐತಿಹಾಸಿಕ ನಾಟಕಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಈಗ ಮತ್ತೆ ಸಾಮಾಜಿಕ ನಾಟಕಕ್ಕೆ ಮರಳಿದ್ದಾರೆ. ಈ ಹಿಂದೆಯೂ ಅವರು ಒರಿಯರ್ದೊರಿ ಅಸಲ್, ಮದಿಮೆ, ಕುಟುಂಬ, ಕೋಡೆ-ಇನಿ-ಎಲ್ಲೆ, ಮೈತಿದಿ ಮುಂತಾದ ಸಾಮಾಜಿಕ ನಾಟಕಗಳ ಮೂಲಕ ಜನರ ಮನಸ್ಸು ಗೆದ್ದವರು. ಅದಾದ ಬಳಿಕ ಅವರಿಗೆ ‘ಶಿವದೂತೆ ಗುಳಿಗೆ’ ನಾಟಕವು ಅಪಾರ ಖ್ಯಾತಿ ಮತ್ತು ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಅದರ ಬೆನ್ನಿಗೆ ‘ಛತ್ರಪತಿ ಶಿವಾಜಿ’ ನಾಟಕದ ಮೂಲಕ ಜನಮನ್ನಣೆ ಗಳಿಸಿದರು. ಈಗ ಈ ಬಾರಿ ‘ಶ್ರೀಮತಿ ಸತ್ಯಭಾಮ’ ಎಂಬ ಸಾಮಾಜಿಕ ನಾಟಕದ ಮೂಲಕ ಜನರ ಮುಂದೆ ಬರಲಿದ್ದಾರೆ. ‘ಶ್ರೀಮತಿ ಸತ್ಯಭಾಮ’ ನಾಟಕದ ಪೋಸ್ಟರ್ ಗಳು ವಾಟ್ಸಾಪ್ ಗ್ರೂಪ್ ಗಳಲ್ಲಿ ಭರ್ಜರಿಯಾಗಿ ಹರಿದಾಡುತ್ತಿದೆ. ಮುಖ್ಯವಾಗಿ ಸತ್ಯಭಾಮ ಪಾತ್ರಧಾರಿಯ ಬಗ್ಗೆ ಸಾಕಷ್ಟು ಕುತೂಹಲವಿದೆ. ಯಾರು ಮಾಡಿರಬಹುದು ಈ ಪಾತ್ರವನ್ನು ಎಂಬ ಕುತೂಹಲವನ್ನು ತಣಿಸಲು ಸದ್ಯಕ್ಕಂತೂ ಕೊಡಿಯಾಲ್‌ಬೈಲ್ ಸಿದ್ದರಿಲ್ಲ. ತಂಡದಲ್ಲಿ ಯಾವೆಲ್ಲಾ ಪ್ರಮುಖ ಕಲಾವಿದರು ಇದ್ದಾರೆ ಎಂಬುದನ್ನೂ ಕಾದು ನೋಡಬೇಕಷ್ಟೆ. ಈ ನಾಟಕದಲ್ಲೂ ಅದ್ದೂರಿ ಸೆಟ್ಟಿಂಗ್, ವಿಶೇಷ ತಾಂತ್ರಿಕತೆ ಬಳಸಲು ಕೊಡಿಯಾಲ್ ಬೈಲ್ ಮುಂದಾಗಿದ್ದಾರೆ.

ಅದ್ದೂರಿತನ, ತಾಂತ್ರಿಕತೆಯಿಂದಲೇ ‘ಶಿವಧೂತೆ ಗುಳಿಗೆ’ ಜನಮಚ್ಚುಗೆ ಪಡೆದಿದೆ. ಆದ್ದರಿಂದ ಹೊಸ ನಾಟಕದಲ್ಲೂ ಅದ್ದೂರಿತನಕ್ಕೆ ಕಿಂಚಿತ್ತೂ ಕೊರತೆಯಾಗಬಾರದು ಎಂದು ಕೊಡಿಯಾಲ್‌ಬೈಲ್ ವಿಶೇಷ ಆಸ್ಥೆ ವಹಿಸಿದ್ದಾರೆ. ಸಂಗೀತದ ವಿಷಯಕ್ಕೆ ಬಂದರೆ ಮತ್ತೆ ಅದೇ ಹೆಮ್ಮೆಯ ಎ.ಕೆ ವಿಜಯ್ ಕೋಕಿಲಾ ಅವರೇ ಕೆಲಸ ಮಾಡಿದ್ದಾರೆ. ಇವರು ಕಲಾಸಂಗಮದ ಹೆಮ್ಮೆಯ ಮತ್ತು ಖಾಯಂ ಸಂಗೀತ ನಿರ್ದೇಶಕರಾಗಿದ್ದಾರೆ. ಕೊಡಿಯಾಲ್‌ಬೈಲ್ ಅವರ ಎಲ್ಲಾ ಯಶಸ್ವಿ ನಾಟಕಗಳ ಹಿಂದೆ ಈ ಸಂಗೀತ ನಿರ್ದೇಶಕರ ಕೊಡುಗೆ ಪ್ರಮುಖವಾಗಿದೆ. ಶ್ರೀಮತಿ ಸತ್ಯಭಾಮ ಮೇಕಪ್‌ಗೆ ಕುಳಿತಿದ್ದಾಳೆ. ಸದ್ಯದಲ್ಲೇ ಎದ್ದು ಬರಲಿದ್ದಾಳೆ ನಿಮ್ಮ ಮುಂದೆ. ಸ್ವಾಗತಿಸಲು ಸಿದ್ಧರಾಗಿ. ವಿಜಯಕುಮಾರ್ ಕೊಡಿಯಾಲ್ ಬೈಲ್ ಯಾವುದೇ ಹೊಸ ನಾಟಕಗಳನ್ನು ಮಾಡುವಾಗ ಅಲ್ಲಿ ಅದ್ದೂರಿತನವನ್ನು ಉಳಿಸಿಕೊಳ್ಳುತ್ತಾರೆ. ತಾಂತ್ರಿಕತೆಯನ್ನೂ ಧಾರಾಳವಾಗಿ ಬಳಸಿಕೊಳ್ಳುತ್ತಾರೆ. ಈ ಮೂಲಕ ಒಂದು ಹೊಸತನ ಹಾಗೂ ಭಿನ್ನತೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಈಗ ‘ಶ್ರೀಮತಿ ಸತ್ಯಭಾಮ’ ನಾಟಕದಲ್ಲೂ ಆ ಹೊಸತನ, ಅದ್ದೂರಿತನ ಕಂಡು ಬರಲಿದೆ. ಪ್ರಸ್ತುತ ಅವರು ನಾಟಕ ರಚನೆ ಮತ್ತು ನಿರ್ದೇಶನದಲ್ಲಿ ಬಿಝಿಯಾಗಿದ್ದಾರೆ. ಅಕ್ಟೋಬರ್ ತಿಂಗಳ ಕೊನೆಯಲ್ಲಿ ‘ಶ್ರೀಮತಿ ಸತ್ಯಭಾಮ’ ನಮ್ಮ, ನಿಮ್ಮೆಲ್ಲರ ಊರಿಗೆ ಬರಲಿದ್ದಾಳೆ. ಹೀಗೆ ಸುತ್ತಾಡುತ್ತಾ ನವೆಂಬರ್ 1ರಂದು ರವಿವಾರ ಸಂಜೆ ಸುರತ್ಕಲ್‌ಗೆ ಬರುತ್ತಿದ್ದಾಳೆ. ಅಂದು ಶ್ರೀಮತಿ ಸತ್ಯಭಾಮಾಳ ಸಂಪೂರ್ಣ ಪರಿಚಯ ಪಡೆದುಕೊಳ್ಳಬಹುದು.

The post ಕೊಡಿಯಾಲ್ ಬೈಲ್ ನಿರ್ದೇಶನದ ನೂತನ ನಾಟಕ ‘ಶ್ರೀಮತಿ ಸತ್ಯಭಾಮ’ appeared first on www.buntsnow.com |  web-based media For Bunts Community.

ಪ್ರಗತಿಪರ ಕೃಷಿಕ, ಕಂಬಳ ಪ್ರೇಮಿ ನಾರಾಯಣ ರೈಯವರಿಗೆ ಅಭಿನಂದನಾ ಕಾರ್ಯಕ್ರಮ
ಕಂಬಳ ಅಭಿಮಾನಿ ಸಮಿತಿ ಕೊಂಡಾಣ ಮತ್ತು ನಮ್ಮ ಜವನೆರ್ ಕೊಂಡಾಣ ವತಿಯಿಂದ ಪ್ರಗತಿಪರ ಕೃಷಿಕ, ಕಂಬಳ ಪ್ರೇಮಿ, ಕಂಬಳ ಯಜಮಾನ ನಾರಾಯಣ ರೈ ಕೊಂಡಾಣ ಅವರಿಗೆ 90ರ ಹುಟ್ಟುಹಬ್ಬದ ಸಂಭ್ರಮದ ಅಭಿಮಾನದ ಅಭಿನಂದನಾ ಕಾರ್ಯಕ್ರಮ ಕೋಟೆಕಾರು ಬೀರಿಯ ಕೆ.ವಿ.ಎಸ್.ಎಸ್ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಿತು. ನಾರಾಯಣ ರೈ ಸೇರಿದಂತೆ ಅತಿಥಿ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ರವೀಂದ್ರ ರೈ ಕಲ್ಲಿಮಾರು ಅಭಿನಂದನಾ ಭಾಷಣ ಮಾಡಿದರು. ಕಾರ್ಯಕ್ರಮದ ರೂವಾರಿ ಸಂಘಟಕ ಶ್ರೀ ಕ್ಷೇತ್ರ ಕೊಂಡಾಣದ ಒಂದನೇ ಮನೆತನದ ಕೆಳಗಿನ ಕೋಟೆಕಾರು ಗುತ್ತು ಮುತ್ತಣ್ಣ ಶೆಟ್ಟಿ, ನಾರಾಯಣ ರೈಗಳ ಸಾಧನೆಯನ್ನು ತಿಳಿಸಿದರು.

ಕೊಂಡಾಣ ಶ್ರೀ ಪಿಲಿಚಾಮುಂಡಿ, ಮುಂಡತ್ತಾಯ, ಬಂಟ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರ್ಷರಾಜ್ ಮುದ್ಯ ಅಧ್ಯಕ್ಷತೆ ವಹಿಸಿದ್ದರು. ಹರೇಕಳ ಸೂರ್ಯಚಂದ್ರ ಕಂಬಳ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಕಂಬಳ ಸಮಿತಿ ಉಪಾಧ್ಯಕ್ಷ ಗಿರೀಶ್ ಆಳ್ವ ಮೋರ್ಲ, ಗಡಿ ಪ್ರಧಾನರಾದ ಶಿವರಾಮ ಶೆಟ್ಟಿ ಸಾಂತ್ಯಗುತ್ತು, ರಘುನಾಥ ಶೆಟ್ಟಿ ಸಾಂತ್ಯಗುತ್ತು ಹಾಗೂ ದೇವು ಶೆಟ್ಟಿ ಯಾನೆ ಮೋಹನ್ ದಾಸ್ ಭಂಡಾರಿ, ನಾಗೇಶ್ ಶೆಟ್ಟಿ ಮರಿಯನಪಾಲು, ಹರೀಶ್ ಆಳ್ವ ಸೋವೂರು ಉಪಸ್ಥಿತರಿದ್ದರು. ಸಂತೋಷ್ ಶೆಟ್ಟಿ ಮಾಡೂರು ಸ್ವಾಗತಿಸಿದರು. ಉದಯ ಕುಮಾರ್ ಶೆಟ್ಟಿ ಕೊಂಡಾಣಗುತ್ತು ವಿಜ್ಞಾಪನಾ ಪತ್ರ ವಾಚಿಸಿದರು. ಪತ್ರಕರ್ತ ವಿದ್ಯಾಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಹಾಸ್ ಶೆಟ್ಟಿ ವಂದಿಸಿದರು.

The post ಪ್ರಗತಿಪರ ಕೃಷಿಕ, ಕಂಬಳ ಪ್ರೇಮಿ ನಾರಾಯಣ ರೈಯವರಿಗೆ ಅಭಿನಂದನಾ ಕಾರ್ಯಕ್ರಮ appeared first on www.buntsnow.com |  web-based media For Bunts Community.

ಶಿಮುಂಜೆ ಪರಾರಿಯವರ ‘ಆತ್ಮದೀಪ್ತಿಯ ಬೆಳಕು’ ಸಮಗ್ರ ಸಂಪುಟ ಲೋಕಾರ್ಪಣೆ
ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗವು ಜುಲೈ 25 ಶನಿವಾರ ಬೆಳಿಗ್ಗೆ 11:30 ರಿಂದ ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನ, ಮುಂಬಯಿ ವಿಶ್ವವಿದ್ಯಾಲಯ

ವಿದ್ಯಾನಗರಿ ಸಾಂತಕ್ರೂಜ್ (ಪೂ) ಇಲ್ಲಿ ಹಿರಿಯ ಸಾಹಿತಿ, ಕವಿ ಶಿಮುಂಜೆ ಪರಾರಿ ಸಂಸ್ಮರಣೆ ಹಾಗೂ ಅವರ ನಿತ್ಯ ಆನಂದ ವಚನಗಳ ಸಮಗ್ರ ಸಂಪುಟ ‘ಆತ್ಮದೀಪ್ತಿಯ ಬೆಳಕು’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಮ್ ಇಲ್ಲಿನ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ದಿವ್ಯ ಹಸ್ತದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದ್ದು, ನಂತರ ಅವರು ಆಶೀರ್ವಚನ ನೀಡಲಿದ್ದಾರೆ. ಅದೇ ರೀತಿ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಮ್ ಇಲ್ಲಿನ ಪೂಜ್ಯ ಸಾದ್ವಿ ಶ್ರೀ ಶ್ರೀ ಮಾತಾನಂದಮಯಿ ಅವರು ಇದೇ ಸಂದರ್ಭದಲ್ಲಿ ಆಶೀರ್ವಚನವನ್ನು ನೀಡಲಿದ್ದಾರೆ. ಶಿಮುಂಜೆ ಅವರ ‘ನಿತ್ಯ ಆನಂದ ವಚನಗಳ ಮಹತ್ವ’ದ ಕುರಿತು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿರುವ ಪ್ರೊ. ಜಿ.ಎನ್ ಉಪಾಧ್ಯ ಅವರು ಮಾತನಾಡಲಿದ್ದಾರೆ. ನವೋದಯ ಕನ್ನಡ ಸೇವಾ ಸಂಘ ಥಾಣೆ ಇಲ್ಲಿನ ಅಧ್ಯಕ್ಷರಾದ ದಯಾನಂದ ಶೆಟ್ಟಿ ಹಾಗೂ ಸಂಘಟಕರಾದ ಪೇಟೆಮನೆ ಪ್ರಕಾಶ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಶಿಮುಂಜೆ ಅವರ ಸಮಗ್ರ ವಚನಗಳನ್ನು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಸಂಪಾದಿಸಿ ಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ ಕಲಾ ಭಾಗ್ವತ್ ಅವರು ಶಿಮುಂಜೆ ಅವರ ನಿತ್ಯ ಆನಂದ ವಚನಗಳ ಗಾಯನ ಪ್ರಸ್ತುತಿಯನ್ನು ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಶಿಮುಂಜೆ ಪರಾರಿ ಅವರ ಧರ್ಮಪತ್ನಿ ಚಂದ್ರಿಕಾ ಶೆಟ್ಟಿ ಹಾಗೂ ಮಕ್ಕಳಾದ ಅರ್ಚನ ಶೆಟ್ಟಿ, ಅಪರ್ಣ ಶೆಟ್ಟಿ ಮತ್ತು ಪರಿವಾರದವರು ಉಪಸ್ಥಿತರಿರುವರು.‌ ಈ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು, ಶಿಮುಂಜೆ ಪರಾರಿ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಪ್ರಕಟಣೆಯ ಮೂಲಕ ಕೋರಲಾಗಿದೆ.

ಶಿಮುಂಜೆ ಪರಾರಿ ಅವರ ಪೂರ್ಣ ಹೆಸರು ಸೀತಾರಾಮ ಮುದ್ದಣ್ಣ ಶೆಟ್ಟಿ.‌ ಅವರು ಮುಂಬಯಿಯಲ್ಲಿ ಅರಳಿದ್ದ ಪ್ರತಿಭೆ. ಮುಂಬಯಿಯಲ್ಲಿ ನೆಲೆ ನಿಂತು ತುಳು ಕನ್ನಡ ಭಾಷೆಗಳಲ್ಲಿ ಸಾಹಿತ್ಯ ಕೃಷಿ ಮಾಡಿದವರಲ್ಲಿ ಶಿಮುಂಜೆ ಪರಾರಿ ಅವರು ಪ್ರಮುಖರು. ಅವರು ಮುಂಬಯಿಯನ್ನು ಕರ್ಮಭೂಮಿಯನ್ನಾಗಿಸಿಕೊಂಡು ಇಲ್ಲಿ ಸಾಹಿತ್ಯ ಕೈಂಕರ್ಯವನ್ನು ಮಾಡಿ ಹೆಸರಾದವರು. ಬಹುಭಾಷೆಗಳನ್ನು ಬಲ್ಲ ಅವರು ತಾನು ಓದಿ ಆನಂದಿಸಿದ ಅನ್ಯಭಾಷಾ ಲೇಖಕರ ಸಾಹಿತ್ಯವನ್ನು ತುಳು ಕನ್ನಡ ಬಾಂಧವರೂ ಓದಿ ಆನಂದಿಸಲೆಂಬ ಇಚ್ಛೆಯಿಂದ ಹಲವು ಕೃತಿಗಳನ್ನು  ಅನುವಾದಿಸಿದ್ದಾರೆ. ಆ ಮೂಲಕ ಅವರು ವಿಭಿನ್ನ ಭಾಷೆಗಳನ್ನಾಡುವ ಜನರ ಹೃದಯಗಳಿಗೊಂದು ಸಂಪರ್ಕ ಸೇತುವೆಯನ್ನು ನಿರ್ಮಿಸಿದರು. ಶಿಮುಂಜೆ ಪರಾರಿ ಅವರು ನಿತ್ಯಾನಂದ ಸ್ವಾಮಿಯವರ ಪರಮ ಭಕ್ತರಾಗಿದ್ದರು.‌ ಅವರ ತಂದೆಯೊಂದಿಗೆ ಆಗಾಗ ನಿತ್ಯಾನಂದ ಸ್ವಾಮಿಯವರನ್ನು ಭೇಟಿ ಮಾಡಲು ಹೋಗುತ್ತಿದ್ದ ಅವರು ಅದೇ ಅಂಕಿತ ನಾಮದಿಂದ ನಿತ್ಯ ಆನಂದ ವಚನಗಳನ್ನು ಬರೆಯುತ್ತಿದ್ದರು. ಅದು ಐದು ಸಂಪುಟಗಳಲ್ಲಿ ಪ್ರಕಟವಾಗಿದ್ದು ಈಗ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ನಿತ್ಯ ಆನಂದ ವಚನಗಳ ಸಮಗ್ರ ಸಂಪುಟ ‘ಆತ್ಮದೀಪದ ಬೆಳಕು’ ಕೃತಿಯನ್ನು ಹೊರ ತರುತ್ತಿದೆ.

The post ಶಿಮುಂಜೆ ಪರಾರಿಯವರ ‘ಆತ್ಮದೀಪ್ತಿಯ ಬೆಳಕು’ ಸಮಗ್ರ ಸಂಪುಟ ಲೋಕಾರ್ಪಣೆ appeared first on www.buntsnow.com |  web-based media For Bunts Community.

ತುಳುವ ಮಹಾಸಭೆ ಇಂಟರ್‌ನ್ಯಾಷನಲ್ : ಪುತ್ತೂರು ವಲಯದ ನೂತನ ಕಾರ್ಯಕಾರಿ ಸಮಿತಿ ರಚನೆ
ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಪುತ್ತೂರು ವಲಯದ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸುವ ಉದ್ದೇಶದಿಂದ ಜುಲೈ 19 ರಂದು ಭಾನುವಾರ ಬೆಳಿಗ್ಗೆ 11.00 ಗಂಟೆಗೆ ಪುತ್ತೂರಿನ ಬಂಟರ ಭವನದಲ್ಲಿ ಸಭೆಯನ್ನು ನಡೆಸಲಾಯಿತು. ಸಭೆಗೆ ಪುತ್ತೂರು ವಲಯದ ಪ್ರಧಾನ ಸಂಚಾಲಕರಾದ ಮನೋಹರ ರೈ ಮನವಳಿಕೆ ಅವರು ಸ್ವಾಗತ ಕೋರಿದರು. ಬಳಿಕ ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಪ್ರಧಾನ ಕಾರ್ಯದರ್ಶಿ ಅರವಿಂದ ಬೆಳ್ಚಡ ಹಾಗೂ ತುಳುವರ್ಲ್ಡ್ ಫೌಂಡೇಶನ್‌ನ ಪ್ರಧಾನ ಸಂಚಾಲಕ ಪ್ರಮೋದ್ ಸಪ್ರೆ ಅವರು ತುಳುವರ್ಲ್ಡ್ ಫೌಂಡೇಶನ್ ಮತ್ತು ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಧ್ಯೇಯ, ಉದ್ದೇಶಗಳು ಹಾಗೂ ಚಟುವಟಿಕೆಗಳ ಕುರಿತು ಸಭಿಕರಿಗೆ ವಿವರಿಸಿದರು.

ನಂತರ ನಡೆದ ಚರ್ಚೆಯ ಬಳಿಕ, ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಅಧ್ಯಕ್ಷರಾಗಿ ಶ್ರೀಮತಿ ವೇದಾವತಿ ಪೂಜಾರಿ, ಉಪಾಧ್ಯಕ್ಷರಾಗಿ ಜಯಪ್ರಕಾಶ್ ರೈ, ಶ್ರೀಮತಿ ನಯನಾ ರೈ, ಶ್ರೀಮತಿ ಇಂದಿರಾ ರೈ, ಕಾರ್ಯದರ್ಶಿಯಾಗಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಖಜಾಂಚಿಯಾಗಿ ಶ್ರೀಮತಿ ಪುಷ್ಪಲತಾ ಕೆ, ಕಾರ್ಯಕಾರಿ ಸಮಿತಿಯ ಸಲಹೆಗಾರರಾಗಿ ಸದಾಶಿವ ರೈ ದಂಬೆಕ್ಕಾನ, ಚಂದ್ರಹಾಸ ರೈ, ದುರ್ಗಾಪ್ರಸಾದ ರೈ ಕುಂಬ್ರ, ದಯಾನಂದ ರೈ ಮನವಳಿಕೆ ಆಯ್ಕೆಯಾದರು ಹಾಗೂ ಎಲ್ಲಾ ಸದಸ್ಯರು ಸರ್ವಾನುಮತದಿಂದ ಅನುಮೋದಿಸಿದರು. ವಸಂತ ರೈ ಕುತ್ತೆತ್ತೂರು ಅವರು ವಂದನಾರ್ಪಣೆ ಸಲ್ಲಿಸುವ ಮೂಲಕ ಸಭೆಯು ಯಶಸ್ವಿಯಾಗಿ ಸಮಾಪ್ತಿಯಾಯಿತು.

The post ತುಳುವ ಮಹಾಸಭೆ ಇಂಟರ್‌ನ್ಯಾಷನಲ್ : ಪುತ್ತೂರು ವಲಯದ ನೂತನ ಕಾರ್ಯಕಾರಿ ಸಮಿತಿ ರಚನೆ appeared first on www.buntsnow.com |  web-based media For Bunts Community.

ತುಳುವ ಮಹಾಸಭೆ ಇಂಟರ್ನ್ಯಾಷನಲ್ : ಮಹಾರಾಷ್ಟ್ರ ರಾಜ್ಯಾಧ್ಯಕ್ಷರಾಗಿ ಹರೀಶ್ ಶೆಟ್ಟಿ ಪಡುಬಿದ್ರಿ
2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್ನ್ಯಾಷನಲ್ ನ ಮಹಾರಾಷ್ಟ್ರ ರಾಜ್ಯಾಧ್ಯಕ್ಷರಾಗಿ ಹಿರಿಯ ಸಮಾಜಸೇವಕ, ಯಶಸ್ವಿ ಸಂಘಟಕ ಹಾಗೂ ಉದ್ಯಮಿ ಹರೀಶ್ ಶೆಟ್ಟಿ ಪಡುಬಿದ್ರಿ ಅವರನ್ನು ನೇಮಕ ಮಾಡಲಾಗಿದೆ. ಮೂಲತಃ ಪಡುಬಿದ್ರಿಯವರಾದ ಹರೀಶ್ ಶೆಟ್ಟಿ ಅವರು ಸಿಂಗರ್ ಇಂಡಿಯಾ ಲಿಮಿಟೆಡ್ ಸಂಸ್ಥೆಯಲ್ಲಿ ಶಾಖಾ ಪ್ರಬಂಧಕರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಭಾರತೀಯ ಜೀವ ವಿಮಾ ನಿಗಮದ ಹಿರಿಯ ಸಲಹೆಗಾರರಾಗಿದ್ದಾರೆ. ಕಳೆದ 14 ವರ್ಷಗಳಿಂದ MDRT ಕ್ಲಬ್ ಸದಸ್ಯರಾಗಿರುವ ಅವರು ತುಳುಕೂಟ ಐರೋಲಿ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾಗಿದ್ದು, ಅಧ್ಯಕ್ಷರಾಗಿ ಯಕ್ಷಗಾನ, ನಾಟಕ, ಸಂಗೀತ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ. ‘ವಿದ್ಯಾನಿಧಿ ಕುಂಭ’ ಯೋಜನೆಯ ಮೂಲಕ ಸುಮಾರು 50 ಲಕ್ಷ ರೂಪಾಯಿ ಸಂಗ್ರಹಿಸಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿದ್ದಾರೆ. ಐರೋಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷರಾಗಿ ಸುಮಾರು 55 ಲಕ್ಷ ರೂಪಾಯಿ ವೆಚ್ಚದಲ್ಲಿ ಸಭಾಭವನ ಹಾಗೂ ಶಿಖರದ ನವೀಕರಣ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಬಂಟರ ಸಂಘ ಮುಂಬಯಿಯ ನವಿ ಮುಂಬಯಿ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷರಾಗಿ ಎರಡು ವರ್ಷಗಳ ಕಾಲ ನಿರ್ವಹಿಸಿ, ಅತ್ಯುತ್ತಮ ಪ್ರಾದೇಶಿಕ ಸಮಿತಿ ಪ್ರಶಸ್ತಿ ದೊರಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಪ್ರಸ್ತುತ ಘನ್ಸೋಲಿ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಮಂಡಲ್ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಸಂಘಟನಾ ಅನುಭವ, ಸಮಾಜಸೇವೆ, ತುಳು ಭಾಷೆ, ಸಂಸ್ಕೃತಿ ಮತ್ತು ಸಮುದಾಯದ ಅಭಿವೃದ್ಧಿಯ ಮೇಲಿನ ಬದ್ಧತೆಯನ್ನು ಪರಿಗಣಿಸಿ ತುಳುವ ಮಹಾಸಭೆ ಇಂಟರ್ನ್ಯಾಷನಲ್ ನ ಅಂತರರಾಷ್ಟ್ರೀಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಕೇಂದ್ರೀಯ ಅಧ್ಯಕ್ಷ ಡಾ. ಅವಿನ್ ಬಿ.ಆರ್ ಆಳ್ವ, ಕರ್ನಾಟಕ ರಾಜ್ಯಾಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಾಡಿ ಹಾಗೂ ಪ್ರಧಾನ ಕಾರ್ಯದರ್ಶಿ ಅರವಿಂದ ಬೆಳ್ಚಡ ಅವರು ಹರೀಶ್ ಶೆಟ್ಟಿ ಪಡುಬಿದ್ರಿ ಅವರನ್ನು ಮಹಾರಾಷ್ಟ್ರ ರಾಜ್ಯಾಧ್ಯಕ್ಷರಾಗಿ ನೇಮಕಗೊಳಿಸಿದ್ದಾರೆ. 2028 ರಲ್ಲಿ ಶತಮಾನೋತ್ಸವದ ಅಂಗವಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ತುಳುವ ಮಹಾಸಭೆಯ ಸಂಘಟನೆಯನ್ನು ಬಲಪಡಿಸುವುದು, ತುಳು ಭಾಷೆ ಮತ್ತು ಸಂಸ್ಕೃತಿಯ ಪ್ರಚಾರ, ಹೊಸ ಘಟಕಗಳ ರಚನೆ, ಯುವಜನರನ್ನು ಸಂಘಟಿಸುವುದು ಹಾಗೂ ಮಹಾರಾಷ್ಟ್ರದಾದ್ಯಂತ ತುಳುವ ಸಮುದಾಯವನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಈ ನೇಮಕ ಮಹತ್ವದ ಹೆಜ್ಜೆಯಾಗಿದೆ. ಈ ನೇಮಕವನ್ನು ತುಳು ವರ್ಲ್ಡ್ ಫೌಂಡೇಶನ್ ನ ಗೌರವಾಧ್ಯಕ್ಷ ಶ್ರೀ ಹರಿನಾರಾಯಣದಾಸ ಅಸ್ರಣ್ಣ, ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ ರೈ ಕುತ್ತೆತ್ತೂರು ಹಾಗೂ ನಿರ್ದೇಶಕ ಡಾ| ರಾಜೇಶ್ ಕೃಷ್ಣ ಆಳ್ವ ಅವರು ಹರ್ಷದಿಂದ ಸ್ವಾಗತಿಸಿ, ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.

The post ತುಳುವ ಮಹಾಸಭೆ ಇಂಟರ್ನ್ಯಾಷನಲ್ : ಮಹಾರಾಷ್ಟ್ರ ರಾಜ್ಯಾಧ್ಯಕ್ಷರಾಗಿ ಹರೀಶ್ ಶೆಟ್ಟಿ ಪಡುಬಿದ್ರಿ appeared first on www.buntsnow.com |  web-based media For Bunts Community.

‘ಕ್ರೀಡಾ ದಾಖಲೆಗಳ ಮಾಹಿತಿ ಹಾಗೂ ತರಬೇತಿ’ ಸಾಧನೆಗೆ ಸ್ಪೂರ್ತಿ -ಡಾ| ಸುಧಾಕರ ಶೆಟ್ಟಿ
ಕ್ರೀಡಾ ದಾಖಲೆಗಳ ಮಾಹಿತಿ ಹಾಗೂ ತರಬೇತಿ ವಿದ್ಯಾರ್ಥಿಗಳ ಸಾಧನೆಗೆ ಸ್ಪೂರ್ತಿಯಾಗಿರುತ್ತದೆ. ದೈಹಿಕ ಶಿಕ್ಷಣ ಉಪನ್ಯಾಸಕರು ಈ ನಿಟ್ಟಿನಲ್ಲಿ ಕಾರ್ಯಪೃವೃತ್ತರಾಗಬೇಕು ಹಾಗೂ ಕ್ರೀಡಾ ಸಾಧಕರು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧಿಸುವಂತಾಗಬೇಕು ಎಂದು ಅಜೆಕಾರು ಪದ್ಮ ಗೋಪಾಲ ಎಜ್ಯುಕೇಷನ್‌ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿ ಶುಭ ಹಾರೈಸಿದರು. ಇವರು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದಲ್ಲಿ, ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ವತಿಯಿಂದ ನಡೆದ ರಾಷ್ಟ್ರೀಯ ಪಂದ್ಯಾಟ ಮತ್ತು ಕ್ರೀಡಾಕೂಟದಲ್ಲಿ ಭಾಗವಹಿಸಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾದ ರಮೇಶ್‌ ಕಾಂಚನ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ವಿಭಾಗದ ಉಪನಿರ್ದೇಶಕರಾದ ಶ್ರೀ ರವೀಂದ್ರಉಪಾಧ್ಯ ಇವರು ಮುಂದೆ ಬರುವ ಕ್ರೀಡಾಕೂಟಗಳಿಗೆ ಇಲಾಖೆಯ ಸಂಪೂರ್ಣ ಬೆಂಬಲವಿರುವುದು ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.

ರಾಷ್ಟ್ರೀಯ ಪಂದ್ಯಾಟ ಮತ್ತು ಕ್ರೀಡಾಕೂಟದಲ್ಲಿ ಭಾಗವಹಿಸಿದ ಸಾಧಕರಿಗೆ ಮತ್ತು ತರಬೇತುದಾರರಿಗೆ ಸನ್ಮಾನಿಸಲಾಯಿತು.ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ವಿಭಾಗದ ನಿವೃತ್ತ ಉಪನಿರ್ದೇಶಕರಾದ ಶ್ರೀ ಮಾರುತಿ ಹಾಗೂ ಮಂಗಳೂರು ಉತ್ತರದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀ ಜೀವನ್‌ ಕುಮಾರ್‌ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪ.ಪೂ. ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಮಂಜುನಾಥ ಭಟ್‌,ಉಡುಪಿ ಜಿಲ್ಲಾ ಅನುದಾನಿತ ಹಾಗೂ ಅನುದಾನರಹಿತ ಪ. ಪೂ.ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ದಯಾನಂದ ಪೈ, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ ದಿನೇಶ್‌ ಎಮ್‌ ಕೊಡವೂರು, ಮಣಿಪಾಲ ಜ್ಞಾನಸುಧಾ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಗಣೇಶ್‌ ಶೆಟ್ಟಿ, ಉಡುಪಿ ಜಿಲ್ಲಾ ಪ.ಪೂ. ಕಾಲೇಜುಗಳ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಸತೀಶ್‌ ಹೆಗ್ಡೆ ಶಾನಾಡಿ, ಕ್ರೀಡಾ ಸಂಯೋಜಕರಾದ ದಿನೇಶ್‌ ಕುಮಾರ್‌ ಎ, ಕಾರ್ಯದರ್ಶಿ ಸುಕೇಶ್‌ ಶೆಟ್ಟಿ ಉಪಸ್ಥಿತರಿದ್ದರು. ಮಣಿಪಾಲ ಜ್ಞಾನಸುಧಾ ಪ.ಪೂ. ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕಿ ಶಮಿತ ಹಾಗೂ ಅಮೃತ ಭಾರತಿ ಕಾಲೇಜಿನ ವಿಜಯ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

The post ‘ಕ್ರೀಡಾ ದಾಖಲೆಗಳ ಮಾಹಿತಿ ಹಾಗೂ ತರಬೇತಿ’ ಸಾಧನೆಗೆ ಸ್ಪೂರ್ತಿ -ಡಾ| ಸುಧಾಕರ ಶೆಟ್ಟಿ appeared first on www.buntsnow.com |  web-based media For Bunts Community.

ರೆಡ್ ಕ್ರಾಸ್ ಕಾರ್ಯದರ್ಶಿ ಕಿಶೋರ್‌ ಚಂದ್ರ ಹೆಗ್ಡೆಯವರಿಗೆ ಬೀಳ್ಕೊಡುಗೆ
ಇಂಡಿಯನ್ ರೆಡ್‌ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಕಿಶೋರ್‌ ಚಂದ್ರ ಹೆಗ್ಡೆಯವರಿಗೆ ಬೀಳ್ಕೊಡುಗೆ ಮತ್ತು ಗೌರವಾರ್ಪಣೆ ಕಾರ್ಯಕ್ರಮ ಜಿಲ್ಲಾ ರೆಡ್‌ ಕ್ರಾಸ್ ಸೊಸೈಟಿಯ ಕಚೇರಿ ಸಭಾಂಗಣದಲ್ಲಿ ನಡೆಯಿತು. ರೆಡ್‌ಕ್ರಾಸ್ ಜಿಲ್ಲಾ ಘಟಕದ ಛೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ, ವಿಜಯ ಬ್ಯಾಂಕ್‌ನ ಎಜಿಎಂ ಆಗಿ, ಖಾಯಂ ಜನತಾ ನ್ಯಾಯಾಲಯದ ಸದಸ್ಯರಾಗಿ, ಪ್ರಭಾರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದ ಕಿಶೋರ್‌ ಚಂದ್ರ ಹೆಗ್ಡೆ ಅವರು ಜಿಲ್ಲಾ ರೆಡ್‌ ಕ್ರಾಸ್ ಸೊಸೈಟಿಯ ಕಾರ್ಯದರ್ಶಿಯಾಗಿ ಸಂಸ್ಥೆಯ ಬಲವರ್ಧನೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಕಾರ್ಯ ನಿರ್ವಹಣೆ, ಬದ್ಧತೆ, ಸಮರ್ಪಿತ ಸೇವೆ ರೆಡ್‌ ಕ್ರಾಸ್‌ಗೆ ಸದಾ ಸ್ಪೂರ್ತಿದಾಯಕವಾಗಿದೆ ಎಂದರು.

ರೆಡ್‌ ಕ್ರಾಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಬಿ. ಸಚ್ಚಿದಾನಂದ ರೈ, ಖಜಾಂಜಿ ಗುರುದತ್ ಎಂ ನಾಯಕ್, ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಪಿ.ಬಿ ಹರೀಶ್ ರೈ, ಡಾ. ಸುಮನ ಬಿ., ರಾಘವೇಂದ್ರ ರಾವ್, ಸಿಬ್ಬಂದಿ ಮಲ್ಲಿಕಾ, ಅನಿತಾ, ಗಿರೀಶ್ ಕುಮಾರ್ ಉಪಸ್ಥಿತರಿದ್ದರು.

The post ರೆಡ್ ಕ್ರಾಸ್ ಕಾರ್ಯದರ್ಶಿ ಕಿಶೋರ್‌ ಚಂದ್ರ ಹೆಗ್ಡೆಯವರಿಗೆ ಬೀಳ್ಕೊಡುಗೆ appeared first on www.buntsnow.com |  web-based media For Bunts Community.