ಆರೋಗ್ಯ Archives - www.buntsnow.com | web-based media For Bunts Community

ಮುಟ್ಟಿನ ಸಮಯದ ಹೊಟ್ಟೆನೋವು
ಇದೊಂದು ಅತ್ಯಂತ ಸಾಮಾನ್ಯವಾದ ತೊಂದರೆ. ಕಡಿಮೆಯೆಂದರೂ ಶೇಕಡ 80 ಮಹಿಳೆಯರು ಹದಿಹರೆಯದಲ್ಲಿ ಮುಟ್ಟು ಪ್ರಾರಂಭವಾಗುವ ಕೆಲವು ವರ್ಷಗಳಾದರೂ ಈ ನೋವನ್ನು ಅನುಭವಿಸಿರಬಹುದು. ಇದರ ತೀವ್ರತೆಯಲ್ಲಿ ವ್ಯತ್ಯಾಸ ಇರಬಹುದಷ್ಟೆ. ಹದಿಹರೆಯದಲ್ಲಿ ಮುಟ್ಟಿನ ನೋವು ತಾಯಿಗೆ ಅತೀವ ಮಾನಸಿಕ ಒತ್ತಡ ಉಂಟು ಮಾಡಿದರೆ ಮಧ್ಯ ವಯಸ್ಸಿನ ಮುಟ್ಟಿನ ನೋವು ಆ ಮಹಿಳೆಗೆ ಬಹಳ ಮಾನಸಿಕ ಒತ್ತಡ ಮತ್ತು ದೈಹಿಕ ಒತ್ತಡ ಉಂಟು ಮಾಡುತ್ತದೆ. ಮುಟ್ಟಿನ ತೊಂದರೆಗಳಲ್ಲಿ ಎರಡು ವಿಧಗಳಿವೆ.

1) ಹದಿಹರೆಯದ ಮುಟ್ಟಿನ ನೋವು : ಹುಡುಗಿ ಪ್ರಬುದ್ಧಾವಸ್ಥೆಗೆ ಬಂದ ಮೇಲೆ ಮುಟ್ಟಿನ ಜೊತೆಗೆ ಬರುವ ನೋವು ಹಲವು ರೀತಿಯ ಸಮಸ್ಯೆಗಳನ್ನು ತಂದೊಡುತ್ತವೆ. ಕಲಿಕೆಗೂ ತೊಂದರೆ ಉಂಟು ಮಾಡುವುದಲ್ಲದೇ ಆಹಾರ ಸೇವಿಸುವಲ್ಲಿಯೂ ವ್ಯತ್ಯಯವಾಗುತ್ತದೆ. ಕೆಳ ಹೊಟ್ಟೆನೋವು, ಸೊಂಟನೋವು, ತೊಡೆಗಳಲ್ಲಿ ನೋವು ಕಂಡು ಬರಬಹುದು. ಇದರ ಜೊತೆಗೆ ವಾಂತಿಭೇದಿಯೂ ಕಂಡು ಬರಬಹುದು. ಕೆಲವರಲ್ಲಿ ಯಾವುದೇ ಕಾರಣವಿಲ್ಲದೇ ಅತೀವ ಬಳಲಿಕೆಯೂ ಇರಬಹುದು. ಆದರೆ ಸಮಾಧಾನದ ವಿಷಯವೆಂದರೆ ಈ ಹರೆಯದಲ್ಲಿ ಬರುವ ಮುಟ್ಟಿನ ನೋವು ಬೇರೆ ಯಾವುದೇ ತೊಂದರೆ ಉಂಟು ಮಾಡುವುದಿಲ್ಲ. ದೇಹದ ಒಳಗೆ ಗರ್ಭಕೋಶ ಅಂಡಾಶಯಗಳಲ್ಲಿ ಯಾವುದೇ ನ್ಯೂನತೆ ಇರುವುದಿಲ್ಲ. ಪ್ರಬುದ್ಧಾವಸ್ಥೆಗೆ ಬಂದ ಕೆಲವು ವರ್ಷಗಳ ಬಳಿಕ ಅಥವಾ ಒಂದು ಹೆರಿಗೆಯ ಬಳಿಕ ತನ್ನಿಂತಾನೆಯೇ ಮರೆಯಾಗಿ ಬಿಡಬಹುದು.2) ಮಧ್ಯ ವಯಸ್ಸಿನಲ್ಲಿ ಬರುವ ಮುಟ್ಟಿನ ನೋವು : ಇದು ತೀವ್ರವೂ ಹಲವು ಬಗೆಯ ತೊಂದರೆಗಳನ್ನು ಉಂಟು ಮಾಡುವ ರೀತಿಯಲ್ಲಿರಬಹುದು. ಮದುವೆಯಾಗಿ ಮಕ್ಕಳಾದ ಮೇಲೆ ಈ ನೋವು ಕಾಣಿಸಿಕೊಳ್ಳಬಹುದು. ಹಲವರು ಇಂಥ ನೋವನ್ನು ಹಿಂದೆಂದೂ ಅನುಭವಿಸಿ ಇರದಿರಬಹುದು. ಈ ಪ್ರಾಯದಲ್ಲಿ ಬರುವ ನೋವನ್ನು ಕಡೆಗಣಿಸಬಾರದು. ಆ ಕೂಡಲೇ ಹೊಟ್ಟೆಯ ಸ್ಕ್ಯಾನ್ ಮಾಡುವುದು ಅತೀ ಅಗತ್ಯ. ಯಾಕೆಂದರೆ ಮಧ್ಯವಯಸ್ಸಿನ ಹೊಟ್ಟೆಯ ನೋವಿಗೆ ಗರ್ಭಕೋಶದ ಗೆಡ್ಡೆ, ಅಂಡಾಶಯದ ಗುಳ್ಳೆ, ಎಂಡೋಮೆಟಿಯೋಸಿಸ್ ಎನ್ನುವ ತೊಂದರೆಗಳು ಕಾರಣವಾಗಿರಲೂಬಹುದು.ಪರಿಹಾರ : ಎರಡು ವಿಧಗಳ ಹೊಟ್ಟೆನೋವುಗಳಿಗೆ ಹೋಮಿಯೋಪಥಿ ಅತ್ಯುತ್ತಮ ಪರಿಹಾರ ನೀಡಬಲ್ಲದು. ಉದಾಹರಣೆಗೆ ಹದಿಹರೆಯದ ಹೊಟ್ಟೆನೋವು, ವಾಂತಿಭೇದಿ, ಆಯಾಸಗಳನ್ನು ಯಾವುದೋ ನೋವು ನಿವಾರಕ ಮಾತ್ರೆಗಳನ್ನು ನೀಡದೇ, ಅಡ್ಡ ಪರಿಣಾಮಗಳು ಇಲ್ಲದೇ ಗುಣಪಡಿಸಬಹುದು. ಕಾಲೇಜಿಗೆ ಹೋಗುವವರು ರಜೆ ಮಾಡಬೇಕಾಗಿಯೂ ಬರುವುದಿಲ್ಲ. ಹೋಮಿಯೋಪಥಿಯಲ್ಲಿ 20 ಕ್ಕಿಂತಲೂ ಹೆಚ್ಚು ಔಷಧಿಗಳು ಮುಟ್ಟಿನ ತೊಂದರೆಗಳನ್ನು ಗುಣಪಡಿಸಲೆಂದೇ ಇವೆ. ಇಷ್ಟು ಔಷಧಗಳು ಬೇರೆ ಯಾವುದೇ ವೈದ್ಯಕೀಯ ಪದ್ಧತಿಯಲ್ಲೂ ಇರುವುದಿಲ್ಲ. ಮಧ್ಯವಯಸ್ಕರಲ್ಲಿ ಬರುವ ಮುಟ್ಟಿನ ನೋವಿಗೆ ಕಾರಣವಾಗಿರುವ ಸಾಧ್ಯತೆಯನ್ನು ಕಂಡುಹಿಡಿದು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕಾಗಬಹುದು. ಉದಾಹರಣೆಗೆ ಗರ್ಭಕೋಶದಲ್ಲಿ ಗಡ್ಡೆ ಇದ್ದರೆ ಶಸ್ತ್ರಚಿಕಿತ್ಸೆ ಇಲ್ಲದೆ ಹೋಮಿಯೋಪಥಿ ಔಷಧಿ ಮೂಲಕ ಕಡಿಮೆ ಮಾಡಬಹುದು. ಅಂಡಾಶಯದ ತೊಂದರೆಯನ್ನು ಶಮನ ಮಾಡಬಹುದು. ಮುಟ್ಟಿನ ಸಮಯದಲ್ಲಿ ಕೋಪ, ಬೇಸರ, ದುಃಖ, ಖಿನ್ನತೆ ಇತ್ಯಾದಿಗಳನ್ನು ಕಾಣಬಹುದು. ಹೋಮಿಯೋಪಥಿಯಲ್ಲಿ ಇದಕ್ಕೆ ಉತ್ತಮ ಔಷಧಿಗಳಿವೆ. ಒಟ್ಟಿನಲ್ಲಿ ಮುಟ್ಟಿನ ನೋವಿಗೆ ಹೋಮಿಯೋಪಥಿ ನೀಡುವ ಪರಿಹಾರವು ಪರಿಪೂರ್ಣ ಮತ್ತು ಶಾಶ್ವತವಾಗಿದೆ.ಬರಹ : ಡಾ. ಪ್ರವೀಣ್ ರಾಜ್ ಆಳ್ವ

ಕೆನರಾ ಹೊಮಿಯೋ ಕ್ಲಿನಿಕ್ ಮಂಗಳೂರು

9448483214

The post ಮುಟ್ಟಿನ ಸಮಯದ ಹೊಟ್ಟೆನೋವು appeared first on www.buntsnow.com |  web-based media For Bunts Community.

ಜ್ವರ- ಮಕ್ಕಳನ್ನು ಕಾಡುವ ಮಾಯಾವಿ…
ಡಾಕ್ಟ್ರೆ ಮಗುವಿಗೆ ಜ್ವರ.. ತುಂಬಾ ಸುಡ್ತಾ ಇದಾನೆ… ಇದು ನಾವು ದಿನನಿತ್ಯ ಹಲವಾರು ಬಾರಿ ಕೇಳುವಂತಹ ವಾಕ್ಯ. ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೆ ಎಲ್ಲರೂ ಜ್ವರದಿಂದ ಬಳಲಿದವರೇ. ಆದರೆ ಕಾರಣ ಒಬ್ಬೊಬ್ಬರಲ್ಲೂ ಬೇರೆಯೇ. ಜ್ವರ ಎಂಬುದೊಂದು ರೋಗವಲ್ಲ. ಅದೊಂದು ರೋಗ ಲಕ್ಷಣ. ದೇಹದಲ್ಲಿ ಎಲ್ಲವೂ ಸರಿಯಿಲ್ಲ ಎಂದು ನಮಗೆ ತಿಳಿಸುವ ರಕ್ಷಣ ವಿಧಾನ. ಮನುಷ್ಯನ ದೇಹ ಸೋಂಕಿನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ನಡೆಸುವ ಹೋರಾಟದ ಸಂಕೇತ. ಸಾಧಾರಣವಾದ ವೈರಲ್‌ ಜ್ವರದಿಂದ ಹಿಡಿದು, ಯಾವ ಪರೀಕ್ಷೆಗಳಲ್ಲೂ ಸುಳಿವು ಕೊಡದ, ಯಾವ ಚಿಕಿತ್ಸೆಗೂ ಬಗ್ಗದ ಜ್ವರಗಳು ಕೂಡ ಇವೆ.

ಮಕ್ಕಳಲ್ಲಿ ಜ್ವರ ಸರ್ವೇ ಸಾಮಾನ್ಯ. ಕಾರಣಗಳು ಹಲವಾರು. ಕೆಲವು ಮುಖ್ಯ ಕಾರಣಗಳೆಂದರೆ,

1. ವೈರಸ್‌ ಜ್ವರ

2. ಡೆಂಗ್ಯೂ

3. ಟೈಫಾಯ್ಡ

4. ಮಲೇರಿಯಾ

5. ಮೂತ್ರದ ಸೋಂಕು

6. ನ್ಯುಮೋನಿಯ

ಶಾಲೆಗೆ ಹೋಗುವ ಮಕ್ಕಳಲ್ಲಿ ತುಂಬಾ ಸಾಮಾನ್ಯವಾಗಿ ಬರುವಂಥದ್ದು ವೈರಲ್‌ ಫೀವರ್‌. ಶೀತ, ಕೆಮ್ಮು, ವಾಂತಿ, ಭೇದಿಗಳಿಂದ ಪ್ರಾರಂಭ­ವಾಗಿ, ಜ್ವರವಾಗಿ 3-4 ದಿನ ಕಾಡಿ, ದೇಹದ ಪ್ರತಿರಕ್ಷಣ ದಾಳಿಗೆ ತಂತಾನೇ ಕಡಿಮೆಯಾಗು­ವಂತಹ ಸೋಂಕು. ಗಾಳಿಯಿಂದ ಹರಡುವ ವೈರಲ್‌ ಜ್ವರ, ಜನಜಂಗುಳಿಯಿರುವ ಜಾಗಗಳಲ್ಲಿ (ಶಾಲೆ, ಸಮಾರಂಭ) ಬೇಗ ಹರಡಿ, ಒಂದು ಮಗುವಿಗೆ ಸೋಂಕಾದರೆ, ಮನೆಯ ಇತರರಿಗೂ ಹಬ್ಬಿ, ಗುಣವಾಗುತ್ತದೆ.

ವರ್ಷದಲ್ಲಿ ಮೂರು ನಾಲ್ಕು ಬಾರಿಯಾದರೂ ಕಾಡುವ ಈ ಜ್ವರ ನಿರುಪದ್ರವಿ. ಜ್ವರ, ಶೀತಗಳನ್ನು ಹತೋಟಿಯಲ್ಲಿಡುವ ಔಷಧ, ಬೆಚ್ಚಗಿನ ನೀರು, ಒಳ್ಳೆಯ ಆಹಾರ, ನಿದ್ರೆ ಮತ್ತು ದೇಹದ ರೋಗ ನಿರೋಧಕ ಶಕ್ತಿ ಅಷ್ಟೇ ಸಾಕು, ಮಕ್ಕಳಲ್ಲಿ ಬರುವ ಹೆಚ್ಚಿನ ಜ್ವರಗಳು ಈ ವರ್ಗದಲ್ಲಿ ಬರುತ್ತದೆ. ಇನ್ನು ಕೆಲವು ಜ್ವರಗಳು (ಡೆಂಗ್ಯೂ, ಚಿಕನ್‌ ಗುನ್ಯ) ಸೊಳ್ಳೆಗಳಿಂದ ಹರಡುತ್ತವೆ. ಅತಿಯಾದ ಜ್ವರ, ಮೈಕೈ ನೋವು, ತಲೆನೋವುಗಳಿಂದ ಕಾಡಿಸಿ, ಕೆಲವೊಮ್ಮೆ ತಾವಾಗಿಯೇ ಕಡಿಮೆಯಾದರೆ, ಕೆಲವೊಮ್ಮೆ ರಕ್ತದೊತ್ತಡ ತಗ್ಗಿಸಿ, ಬಿಳಿ ರಕ್ತ ಕಣಗಳ ಮೇಲೆ ದಾಳಿ ಮಾಡಿ ಇಲ್ಲದ ತೊಂದರೆ ಕೊಡುತ್ತದೆ.

ಕೆಲವೊಂದು ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಬೇಕಾಗಬಹುದು. ಜ್ವರ 4 ದಿನಕ್ಕಿಂತ ಹೆಚ್ಚು ದಿನ ಇದ್ದರೆ ವೈದ್ಯರಲ್ಲಿ ತೋರಿಸುವುದು ಅತೀ ಮುಖ್ಯ. ಸುತ್ತಮುತ್ತಲಿನ ಪ್ರದೇಶವನ್ನು ಶುದ್ಧವಾಗಿಡುವುದು, ನೀರು ನಿಲ್ಲದಂತೆ ನೋಡಿ ಕೊಳ್ಳುವುದು, ಸೊಳ್ಳೆ ಪರದೆಗಳ ಬಳಕೆ ಈ ಕಾಯಿಲೆಗಳು ಬರದಂತೆ ನೋಡಿ­ಕೊಳ್ಳುವ ವಿಧಾನ.

ಮತ್ತೆ ಕೆಲವು ಜ್ವರಗಳಲ್ಲಿ (ಟೈಫಾಯಿಡ್, ಮೂತ್ರ ಸೋಂಕು, ನ್ಯುಮೋನಿಯ, ಮೆದುಳು ಜ್ವರ) ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಿ ಸರಿಯಾದ ಆ್ಯಂಟಿ ಬಯೋಟಿಕ್ಸ್‌ ಮತ್ತು ಇತರ ಚಿಕಿತ್ಸೆಗಳನ್ನು ನೀಡುವುದು ಮಹತ್ವದ್ದಾಗಿ­ರುತ್ತದೆ. ವಿಳಂಬವಾದರೆ ಜೀವಕ್ಕೆ ಅಪಾಯ­ವಾಗುವ ಸಾಧ್ಯತೆಯೂ ಇದೆ. ಇಂತಹ ಕಾಯಿಲೆ­ಗಳು ಬರದಂತೆ ತಡೆಯಲು ಪೌಷ್ಟಿಕಾಂಶಯುಕ್ತ ಆಹಾರ, ಲಸಿಕೆಗಳನ್ನು ಕಾಲಕಾಲಕ್ಕೆ ಹಾಕಿಸುವುದು ಸಹಾಯಕವಾಗುತ್ತದೆ.

ಇನ್ನೊಂದು ಮುಖ್ಯ ಪ್ರಶ್ನೆ, ಮಗುವಿಗೆ ಹಾಲೂಡುತ್ತಿರುವ ತಾಯಿಗೆ ಜ್ವರ ಬಂದರೆ ಏನು ಮಾಡಬೇಕೆಂಬುದು. ಎದೆ ಹಾಲಿನಿಂದ ಜ್ವರ ಮಗು­ವಿಗೆ ಹರಡುವುದಿಲ್ಲ. ಬದಲಾಗಿ ತಾಯಿಯ ಹಾಲಿನಲ್ಲಿರುವ ಪ್ರತಿಕಾಯಗಳು ಮಗುವಿನಲ್ಲಿ ಕಾಯಿಲೆ ತೀವ್ರ ಸ್ವರೂಪಕ್ಕೆ ಹೋಗದಂತೆ ತಡೆಯುತ್ತವೆ. ಆದರೆ ತಾಯಿ ಮಗುವನ್ನು ಮುಟ್ಟುವ ಮುನ್ನ ಕೈ ತೊಳೆಯುವುದು, ಕೆಮ್ಮು-ಶೀತ ಇದ್ದಾಗ ಮಾಸ್ಕ್ ಹಾಕಿಕೊಂಡಿರುವುದು ಮುಖ್ಯ. ತಾಯಿ ತೆಗೆದು­ಕೊಳ್ಳುವ ಔಷಧಗಳು ಹಾಲಿನ ಮೂಲಕ ಮಗುವನ್ನು ತಲುಪುವುದರಿಂದ ವೈದ್ಯರ ಸಲಹೆ ಪಡೆದು ಔಷಧ ತೆಗೆದುಕೊಳ್ಳುವುದು ಸೂಕ್ತ.

ಇನ್ನು, ಒಂದು ವರ್ಷದ ಕೆಳಗಿನ ಮಕ್ಕಳಿಗೆ ಜ್ವರ ಬಂದರೆ ಹೆಚ್ಚಿನ ಕಾಳಜಿಯ ಆವಶ್ಯಕತೆ ಇರುತ್ತದೆ. ಅದರಲ್ಲೂ ಎರಡು ತಿಂಗಳಿಗಿಂತ ಸಣ್ಣ ಮಕ್ಕಳಲ್ಲಿ ಸಣ್ಣ ಕೆಮ್ಮು, ಶೀತ ಸಹ ಶ್ವಾಸಕೋಶದ ಸೋಂಕಾಗಿ (ನ್ಯುಮೋನಿಯ), ರಕ್ತದ ಸೋಂಕಾಗಿ ಹಬ್ಬುವ ಸಾಧ್ಯತೆ ಜಾಸ್ತಿ. ಇಂತಹ ಮಕ್ಕಳಿಗೆ ರಕ್ತ ಪರೀಕ್ಷೆ, ಆ್ಯಂಟಿ ಬಯೋಟಿಕ್‌ ಇಂಜೆಕ್ಷನ್‌ಗಳ ಆವಶ್ಯಕತೆಯೂ ಜಾಸ್ತಿ. ಹಾಗಾಗಿ ಪುಟ್ಟ ಮಗುವಿಗೆ ಮತ್ತು ಹಾಲೂಡುವ ತಾಯಿಗೆ ಸೋಂಕು ತಗಲದಂತೆ ನೋಡಿಕೊಳ್ಳಬೇಕು.

ಕಳೆದ 3 ವರ್ಷಗಳಿಂದ ಎಲ್ಲರನ್ನೂ ಭಯಭೀತ­ರಾಗಿಸಿದ ಮತ್ತೊಂದು ಜ್ವರ ಕೋವಿಡ್‌-19. ಈಗ ಎಲ್ಲವೂ ಸಾಮಾನ್ಯ ಸ್ಥಿತಿಗೆ ಬಂದಿದ್ದರೂ ಚೀನದಲ್ಲಿ ಎದ್ದಿರುವ ಮತ್ಯಾವುದೋ ಜ್ವರ ಎಲ್ಲರನ್ನೂ ತಲೆ ಕೆಡಿಸಿ­ಕೊಳ್ಳುವಂತೆ ಮಾಡಿದೆ. ಏನೇ ಇರಲಿ, ಹೆಚ್ಚಿನ ಜ್ವರಗಳು ಹಾನಿಕಾರಕವಲ್ಲ. ಸರಿಯಾದ ಸಮಯದಲ್ಲಿ ವೈದ್ಯರ ಭೇಟಿ, ಸರಿಯಾದ ಚಿಕಿತ್ಸೆ, ಉತ್ತಮ ಆಹಾರ, ನೀರು ಹೆಚ್ಚಿನ ಜ್ವರಗಳನ್ನು ಗುಣಪಡಿ­ಸುತ್ತದೆ.

ವೈದ್ಯರ ಪಾತ್ರವೇನು?

-ಜ್ವರದ ಕಾರಣವನ್ನು ಪತ್ತೆ ಹಚ್ಚಿ ಕಾಯಿಲೆಯ ತೀವ್ರತೆಯ ಆಧಾರದ ಮೇಲೆ ಚಿಕಿತ್ಸೆ ನೀಡುವುದು.

-ಆವಶ್ಯಕತೆ ಇದ್ದಲ್ಲಿ ಮಾತ್ರ ಆ್ಯಂಟಿ ಬಯೋಟಿಕ್‌ ನೀಡುವುದು. ಅನವಶ್ಯಕ ಆ್ಯಂಟಿಬಯೋಟಿಕ್‌ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಕೊಡುವುದು.

ಕಾಯಿಲೆ ಬರದಿರುವಂತೆ ನೋಡಿ­ಕೊಳ್ಳುವ ಮುನ್ನೆಚ್ಚರಿಕೆಯ ಬಗೆಗೆ ಮಾಹಿತಿ.

-ಸರಕಾರದಿಂದ ಕೊಡುವ ಲಸಿಕೆಗಳ ಜತೆಗೆ ಉಪಲಬ್ಧವಿರುವ ಎಲ್ಲಾ ಲಸಿಕೆಗಳ ಬಗೆಗೆ ಮಾಹಿತಿ ನೀಡಿ, ಲಸಿಕೆ ತೆಗೆದುಕೊಳ್ಳಲು ಪ್ರೋತ್ಸಾಹಿಸುವುದು.

-ಮಗುವಿನ ಆಹಾರ ಪದ್ಧತಿ, ಕಾಯಿಲೆ­ಗಳನ್ನು ಹತ್ತಿಕ್ಕುವಲ್ಲಿ ಪೋಷಕಾಂಶದ ಪಾತ್ರದ ಬಗೆಗಿನ ಮಾಹಿತಿ.

-ಸುತ್ತಮುತ್ತಲಿನ ಪರಿಸರದ ಬಗೆಗಿನ ಕಾಳಜಿ, ಶುದ್ಧ ನೀರು, ಗಾಳಿ, ಆಹಾರದ ಮಹತ್ವದ ಬಗೆಗೆ ತಿಳಿವಳಿಕೆ ನೀಡುವುದು. – ಪೋಷಕರ ಆತಂಕ, ಪ್ರಶ್ನೆಗಳನ್ನು ಬಗೆಹರಿಸುವುದು.

ಜ್ವರ ಎಂಬ ಭಯ ಬೇಡ, ಆದರೆ ಕಾಳಜಿ ಖಂಡಿತ ಇರಲಿ.

The post ಜ್ವರ- ಮಕ್ಕಳನ್ನು ಕಾಡುವ ಮಾಯಾವಿ… appeared first on www.buntsnow.com |  web-based media For Bunts Community.

” ದೇಹದಲ್ಲಿನ ಕೊಬ್ಬಿನಂಶ ಮತ್ತು ಯಕೃತ್ತು ಸಮಸ್ಯೆಯನ್ನು ದೂರ ಮಾಡುವ ಏಕೈಕ ಮನೆಮದ್ದು -“ಬೆಳ್ಳುಳ್ಳಿ ಸೇವನೆ…!”
” ದೇಹದಲ್ಲಿನ ಬ್ಯಾಕ್ಟೀರಿಯ ಮತ್ತು ವಿಟಮಿನ್, ನಾರಿನಂಶ ಉತ್ಪನ್ನಗಳನ್ನು ದೇಹಕ್ಕೆ ಸಾಗಿಸುವ ಮತ್ತು ಆರೋಗ್ಯ ನಿಯಂತ್ರಕ ಬೆಳ್ಳುಳ್ಳಿ ಸೇವನೆ – ಸದೃಢ ಆರೋಗ್ಯದ ದ್ಯೋತಕ…!”

ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ,ಕುಂದಾಪುರ ಉಡುಪಿ ಜಿಲ್ಲೆ (ಪತ್ರಕರ್ತರು  & ಮಾಧ್ಯಮ ವಿಶ್ಲೇಷಕರು)

m: 9632581508

ಭಾರತೀಯ ಸಾಂಸ್ಕೃತಿಕ ವಿಚಾರಕ್ಕೆ ಸಂಬಂಧಪಟ್ಟಂತೆ ಭಾರತದ ಅಡುಗೆ ಪದಾರ್ಥಗಳಲ್ಲಿ ಬೆಳ್ಳುಳ್ಳಿಯನ್ನು ಜಾಸ್ತಿ ಬಳಸುವುದರಿಂದ ಆರೋಗ್ಯಕರ ಲಕ್ಷಣವು  ಪದಾರ್ಥಗಳಲ್ಲಿ ಸೇವನೆ ಮಾಡಬೇಕು. ಬೆಳ್ಳುಳ್ಳಿ ನಮ್ಮ ಅಡುಗೆಯಲ್ಲಿ ಹೆಚ್ಚು ಬಳಸುವುದರಿಂದ ದೇಹದಲ್ಲಿನ ಕೊಬ್ಬಿನಂಶ ಮತ್ತು ನಾರಿನಾಂಶ  ಹೆಚ್ಚುಗೊಳಿಸುವುದರೊಂದಿಗೆ ಅದರಲ್ಲಿನ ಪ್ರಾಮುಖ್ಯತೆಯನ್ನು ಕೂಡ ಹಿಂದಿನ ಪಾರಂಪರಿಕ ಅಡುಗೆ ಮನೆಯಲ್ಲಿ ಬಳಸಲಾಗುತ್ತದೆ. ವಿವಿಧ ಹೋಟೆಲ್ಗಳಲ್ಲಿ ಮತ್ತು ಅಡುಗೆ ಸಿದ್ಧಪಡಿಸುವ ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಉತ್ತಮ ಒಗ್ಗರಣೆಯ ಉತ್ಪನ್ನವಾಗಿ ಬಳಕೆ ಮಾಡುತ್ತೇವೆ. ಅದಲ್ಲದೆ ಸಾಂಬಾರು ಪದಾರ್ಥ ಮತ್ತು ರಸಂ ಮಾಡುವಾಗ ಬೆಳ್ಳುಳ್ಳಿಯನ್ನು ಹೆಚ್ಚು ಬಳಸುತ್ತಾರೆ. ಪಾರಂಪರಿಕ ಅಡುಗೆ ಪದಾರ್ಥಗಳಲ್ಲಿ ಬೆಳ್ಳುಳ್ಳಿ ,ಕರಿಬೇವು, ಹಸಿಮೆಣಸಿನಕಾಯಿ ಹಾಗೂ ಬ್ಯಾಡಗಿ ಮೆಣಸುಗಳನ್ನು ಬಳಸಿ ಅಡುಗೆಯನ್ನು ಸಿದ್ಧಪಡಿಸುತ್ತಾರೆ. ಆ ಕಾರಣಕ್ಕಾಗಿ ಬೆಳ್ಳುಳ್ಳಿ ಮಹತ್ತರ ಪಾತ್ರ ವಹಿಸುತ್ತದೆ. ಮಹಿಳೆಯರು ಹೆಚ್ಚಾಗಿ ಅಡುಗೆಯನ್ನು ಸಿದ್ಧಪಡಿಸುವಾಗ ಬೆಳ್ಳುಳ್ಳಿ ಸಾಸಿವೆ, ಕಡಲೆ ಬೇಳೆ ಒಗ್ಗರಣೆಯನ್ನು ಉಪಯೋಗಿಸಿದ ನಂತರವೇ ವಿಶೇಷ ರೀತಿಯಲ್ಲಿ ಅಡುಗೆಯನ್ನು ತಯಾರು ಮಾಡುತ್ತಾರೆ. ಕರ್ನಾಟಕದ ಹಾಗೂ ಕರಾವಳಿ ಶೈಲಿಯಲ್ಲಿ ಮಾಡುವ ಉತ್ಪನ್ನಗಳನ್ನು ಬೆಳ್ಳುಳ್ಳಿಸುವುದರಿಂದ ಕಣ್ಣಿಗೆ ತಂಪು ನೀಡುವುದರೊಂದಿಗೆ ತಲೆ ನೋವು ನಿವಾರಕವಾಗಿ ಕೂಡ ಬೆಳ್ಳುಳ್ಳಿಯನ್ನ ಬಳಕೆ ಮಾಡುತ್ತಾರೆ. ಅದಲ್ಲದೆ ಹಳ್ಳಿಗಳ ಕಡೆಯಲ್ಲಿ ಮಕ್ಕಳಿಗೆ ಅಥವಾ ವಯಸ್ಕರಿಗೆ ಹಲ್ಲು ನೋವು ಬಂದಂತಹ ಸಂದರ್ಭದಲ್ಲಿ ಬೆಳ್ಳುಳ್ಳಿಯನ್ನು ಸಣ್ಣದಾಗಿ ಜಜ್ಜಿ ಅದನ್ನು ವಸಡು ನೋವು ಸಂದರ್ಭದಲ್ಲಿ ಬಳಕೆ ಮಾಡುವುದರಿಂದ ಹೊಸದು ನೋವು ಕಡಿಮೆ ಆಗುತ್ತದೆ. ಅದಲ್ಲದೆ ಹಲ್ಲುಗಳ ಗಟ್ಟಿತನಕ್ಕೆ ಬೆಳ್ಳುಳ್ಳಿ ಸಹಕಾರಿಯಾಗುತ್ತದೆ. ಒಟ್ಟಾರೆಯಾಗಿ ಭಾರತೀಯ ಸಂಸ್ಕೃತಿಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ಪದಾರ್ಥಗಳಲ್ಲಿ ಬಳಸುವುದರಿಂದ ಜಠರ ಸಂಬಂಧಿ ಕಾಯಿಲೆಗಳು ದೂರವಾಗುವುದರೊಂದಿಗೆ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಾವು ಭಾರತೀಯರು ಬಳಸುವಂತಹ ಪ್ರತಿಯೊಂದು ಸಾಂಬಾರು ಪದಾರ್ಥದಲ್ಲಿ ಹಲವಾರು ಆರೋಗ್ಯದ ಗುಣಗಳು ಅಡಗಿವೆ. ಹಿಂದಿನವರ ಜೀವನಶೈಲಿ ಮತ್ತು ಆಹಾರ ಕ್ರಮವನ್ನು ನೋಡಿದರೆ ಅವರ ಆರೋಗ್ಯದ ಗುಟ್ಟನ್ನು ನಾವು ತಿಳಿದುಕೊಳ್ಳಬಹುದು. ಹಾಗಾಗಿ ನಾವು ಕೂಡ ಅವರ ಜೀವನಶೈಲಿಯನ್ನು ನಾವು ಅಳವಡಿಸಿಕೊಂಡರೆ ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು. ಸಾವಿರಾರು ವರ್ಷಗಳಿಂದ

ಬಳಕೆ ಮಾಡಿಕೊಂಡು ಬರುತ್ತಾ ಇರುವಂತಹ ಬೆಳ್ಳುಳ್ಳಿ ನಮ್ಮ ಅಡುಗೆಯಲ್ಲಿ ಬಹಳನೇ ಒಂದು ಅಪಾರವಾದ ಪಾತ್ರವನ್ನು ಹೊಂದಿದೆ. ಇದು ಕೇವಲ ಅಡುಗೆಗೆ ಮಾತ್ರವಲ್ಲದೆ ನಮ್ಮ ಆರೋಗ್ಯದ ರಕ್ಷಣೆ ಮಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಈ ಹುರಿದ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ಹಲವಾರು ರೀತಿಯ ಪೌಷ್ಟಿಕಾಂಶಗಳನ್ನು ನಾವು ಪಡೆದುಕೊಳ್ಳಬಹುದು.

ಈ ಹುರಿದ ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವಂತಹ ಶಕ್ತಿ ಇದೆ. ನಿತ್ಯ ಇದನ್ನು ನಾವು ಸೇವನೆ ಮಾಡುತ್ತಾ ಬಂದರೆ ಹಲವು ರೀತಿಯ ಆರೋಗ್ಯದ ಸಮಸ್ಯೆಗಳಿಂದ ದೂರ ಇರಬಹುದು. ಈ ಬೆಳ್ಳುಳ್ಳಿ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಬೆಳ್ಳುಳ್ಳಿಯಲ್ಲಿ ಪ್ರೋಟಿನ್ ವಿಟಮಿನ್ ಸಿ ವಿಟಮಿನ್ ಬಿ ಮೆಗ್ನೇಶಿಯಂ ಕ್ಯಾಲ್ಸಿಯಂ ಸೇರಿದಂತೆ ಹಲವಾರು ಪೌಷ್ಟಿಕಾಂಶಗಳು ಮಹಾಪೂರವೇ ಇದರಲ್ಲಿ ಅಡಗಿದೆಇದೆಲ್ಲ ಪೋಸ್ಟಿಕ ಅಂಶಗಳನ್ನು ಒಳಗೊಂಡಿರುವ ಬೆಳ್ಳುಳ್ಳಿಯನ್ನು ನಾವು ಇದನ್ನು ಹರಿದು ಸೇವನೆ ಮಾಡುವುದರಿಂದ ನಮ್ಮ ದೇಹವು ಸಧೃಢ ಗೊಳ್ಳುವುದರೊಂದಿಗೆ ಅನಾರೋಗ್ಯ ಸಮಸ್ಯೆಯನ್ನು ದೂರ ಮಾಡುವುದರೊಂದಿಗೆ ಉಸಿರಾಟದ ಸಮಸ್ಯೆಯನ್ನು ಕೂಡ ಸದೃಢ ರೀತಿಯಲ್ಲಿ ಬದುಕುವಂತೆ ಮಾಡುತ್ತದೆ ಬೆಳ್ಳುಳ್ಳಿ ಸೇವನೆ ಸಾಂಪ್ರದಾಯಿಕ ಅಡುಗೆ ಪದ್ದತಿಯಲ್ಲಿ ಬಳಸುವುದರಿಂದ ನಮ್ಮ ದೇಹ ಸೇರಲ್ಪಟ್ಟು ಸದೃಢ ಆರೋಗ್ಯದ ವಾಹಕವನ್ನು ನಿಯಂತ್ರಿಸುವುದೇ ಬೆಳ್ಳುಳ್ಳಿಯ ಕಾಯಕ….!”

ಆರೋಗ್ಯಕ್ಕೆ ಇಷ್ಟೆಲ್ಲ ಲಾಭವಿದೆ ಎಂದು ಇಂದಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ.  ನೀವು ರಾತ್ರಿ ಮಲಗುವ ಮುನ್ನ ಈ ಬೆಳ್ಳುಳ್ಳಿಯನ್ನು ಉರಿದು ಸೇವನೆ ಮಾಡಿ ಮಲಗುವುದರಿಂದ ಬೆಳಗ್ಗೆ ಮೂತ್ರ ವಿಸರ್ಜನೆ ಮೂಲಕ ಮತ್ತು ಮಲವಿಸರ್ಜನೆ ಮೂಲಕ ನಮ್ಮ ದೇಹದಲ್ಲಿ ಇರುವಂತಹ ಹಲವಾರು ವಿಷಕಾರಿ ಅಂಶಗಳನ್ನು ಇದು ತೆರೆದು ಹೊರ ಹಾಕುತ್ತದೆ. ಮತ್ತು ರಾತ್ರಿ ಮಲಗುವ ಮುನ್ನ ಹುರಿದು ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದರಿಂದ ನಮ್ಮ ಹೃದಯ ಯಾವಾಗಲೂ ಆರೋಗ್ಯಕರವಾಗಿರಲು ಸಹಾಯವಾಗುತ್ತದೆ.

ಬೆಳ್ಳುಳ್ಳಿಯನ್ನ ಎಚ್ಚೆತವಾಗಿ ಬಳಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುತ್ತದೆ ಅದಲ್ಲದೆ ಕಬ್ಬಿಣಾಂಶ ಹಾಗೂ ಮೊಲವಿಸರ್ಜನೆ ಮೂತ್ರ ವಿಸರ್ಜನೆ ಸಂದರ್ಭದಲ್ಲಿ ವಿಷಕಾರಿ ಅಂಶವನ್ನ ತೆಗೆದು ಹಾಕುವುದರೊಂದಿಗೆ ಕೊಲೆಸ್ಟ್ರಾ  ಕೂಡ ಕಡಿಮೆ ಮಾಡುತ್ತದೆ. ಆರೋಗ್ಯಕರ ವಾತಾವರಣವನ್ನ ನಿರ್ಮಾಣ ಮಾಡಲು ಬೆಳ್ಳುಳ್ಳಿ ಸಹಕರಿಸುತ್ತದೆ.ಉತ್ತಮ ಪರಿಮಳ ಅದಲ್ಲದೆ ಭೇದಲಿನ ಜಠರು ಸಣ್ಣ ಕರುಳು ದೊಡ್ಡ ಕರುಳು ಶ್ವಾಸಕೋಶ ಹಾಗೂ ಯಕೃತ್ತಿಗಳಂತಹ ಸಮಸ್ಯೆಗಳನ್ನು ದೂರ ಮಾಡುವುದರೊಂದಿಗೆ ಬೆಳ್ಳುಳ್ಳಿ ಪ್ರತಿನಿತ್ಯ ಆಹಾರದಲ್ಲಿ ಬಳಸಬೇಕು. ಎನ್ನುವುದು ಒಂದು ಪಾರಂಪರಿಕ ಅಡುಗೆ ಪದ್ಧತಿಯಲ್ಲಿ ಬಂದಿದೆ. ಒಗ್ಗರಣೆ ಮಾಡುವಂತಹ ಸಂದರ್ಭದಲ್ಲಿ ಮಾತ್ರ ಬಳಸದೆ, ಪದಾರ್ಥಗಳನ್ನು ಸಿದ್ಧಪಡಿಸುವಂತಹ ರೀತಿಯಲ್ಲಿ ಬೆಳ್ಳುಳ್ಳಿ ಎಚ್ಚೆತವಾಗಿ ಬಳಸುವುದರಿಂದ ಕೂಡ ರೋಗಗಳಲ್ಲಿನ ಸಮಸ್ಯೆ ಹಾಗೂ ಆರೋಗ್ಯಕರ ಬದುಕಿಗೆ ಕಾರಣವಾಗದೆ.  ನಿಯಂತ್ರಣದಲ್ಲಿರಲು ಸಹಕರಿಸುತ್ತದೆ ಎನ್ನುವುದು ಹಿರಿಯರ ಅಂಬೋಣ….!”

-ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ ಉಡುಪಿ ಜಿಲ್ಲೆ.m: 9632581508

The post ” ದೇಹದಲ್ಲಿನ ಕೊಬ್ಬಿನಂಶ ಮತ್ತು ಯಕೃತ್ತು ಸಮಸ್ಯೆಯನ್ನು ದೂರ ಮಾಡುವ ಏಕೈಕ ಮನೆಮದ್ದು -“ಬೆಳ್ಳುಳ್ಳಿ ಸೇವನೆ…!” appeared first on www.buntsnow.com |  web-based media For Bunts Community.

ಆಹಾರದ ಪಥ, ಆರೋಗ್ಯಪಥ
ಭೂತದ ನೆನಪಿಲ್ಲದ ವರ್ತಮಾನ ಭವಿಷ್ಯದ ಕಲ್ಪನೆ ಮಾಡಲಾರದು,ನೆಲದಲ್ಲಿ ಬೇರಿಳಿಸದ ವೃಕ್ಷ ಆಕಾಶದಲ್ಲಿ ಕೊಂಬೆಗಳನ್ನು ಚಾಚಲಾರದು ಎನ್ನುವ ವಸ್ತುಸ್ಥಿತಿ ನಮಗಿರಬೇಕು.ನಾವು ನಿಸರ್ಗದ ಕೂಸು,ಈ ಪ್ರಕೃತಿ ನಮ್ಮ ಆಡಂಬೋಲ. ನಮ್ಮ ಸಾಂಸ್ಕೃತಿಕ ಪ್ರಜ್ಞೆ, ಪಾರಂಪರಿಕ ಮೌಲ್ಯ, ನಾಗರಿಕತೆಯ ಅರಿವು,  ಆಯುರ್ವೇದ ಸ್ಥಾಪಿತ ಆರೋಗ್ಯ ಸೂತ್ರಗಳು, ಜನಪದದ ಆಚರಣೆ, ಗುರುಹಿರಿಯರ ಜೀವನಾದರ್ಶ, ಸಂತರ ಪಥದರ್ಶನ, ದಾರ್ಶನಿಕರ ನಿರೂಪ….ಹೀಗೆ ಭಾರತೀಯ ಮಣ್ಣಲ್ಲಿ ಕಣ್ಣಾಗಿರುವ ಸಾವಿರದ ಸಾವಿರಸಾವಿರ ಜೀವನ ಪದ್ಧತಿಯ ಅಸಂಖ್ಯ  ಎಳೆ ಎಳೆಯ ಸದ್ವಿಚಾರಗಳು, ಸದ್ವೃತ್ತದ ಔನ್ನತ್ಯ ನಮ್ಮ ಬದುಕಿನ ಭಾಗವಾಗಬೇಕು.

ಕವಲು ಹಾದಿಯಲ್ಲಿ ನಿಂತ ನಾವೀಗ ಅಂತರಂಗಕ್ಕೆ ಕಿವಿಕೊಡಬೇಕು. ನಮ್ಮ ನಡೆ-ನುಡಿ, ಆಚಾರ-ವಿಚಾರ, ಹಾವ-ಬಾವ, ಆಹಾರ-ವಿಹಾರ, ವಿಧಿ-ನಿಷೇಧ…ಎಲ್ಲವುಗಳ ಬಗೆಗಾಗಿನ ಪರಿಕಲ್ಪನೆಯನ್ನು ಪುನರ್ ವ್ಯಾಖ್ಯಾನಿಸಬೇಕು.

ಆತ್ಯಂತಿಕ ಸತ್ಯದ ಸ್ವರೂಪ, ಅಲ್ಲಿರುವ ಗಟ್ಟಿತನದ ಮಾನಕೀಕರಣ, ತಲೆಮಾರುಗಳಿಂದ ಆಚರಿಸಿ ಅನುಸರಿಸಿ ಅನುಭವಿಸಿದ ಗುಣಾತ್ಮಕ ಪರಿಣಾಮ ಆಯುರ್ವೇದದ ಆಹಾರ ಪದ್ಧತಿಯ ಪ್ರತಿ ಪದಗಳಲ್ಲಿ ಪ್ರತಿಫಲಿಸಿದೆ.

“ಆಹಾರ” ಜನರ ಜೀವನ ನಿರ್ವಹಣೆಗೆ ಇಂಧನವಾಗಿ,ಆರೋಗ್ಯ ಕಾಪಾಡಲು ಔಷಧವಾಗಿ ಮತ್ತು ಧನಾತ್ಮಕ ಆರೋಗ್ಯದ ಮುಖೇನ ರೋಗರುಜಿನಗಳಿಂದ ಮುಕ್ತವಾದ ಬದುಕು ನಡೆಸಲು ಪ್ರಕೃತಿ ನಮಗಿತ್ತ ಅನನ್ಯ ಕೊಡುಗೆ.

ಆಹಾರದ ವಿಧ:

ನಾವು ಸೇವಿಸುವ ಆಹಾರವು ವಿವಿಧ ರೀತಿಯಲ್ಲಿ ಹುರಿದ,ಕರಿದ,ಬೇಯಿಸಿದ,ಕಾಯಿಸಿದ ಹಸಿಯಾದ,ಬಿಸಿಯಾದ ತರವಾಗಿದ್ದು ಮುಖ್ಯವಾಗಿ ಈ ರೀತಿಯಾಗಿ ವಿಭಾಗಿಸಲಾಗಿದೆ.

ಭೋಜ್ಯ: ಅನಂದವಾಗಿ ಸವಿದು ಉಣ್ಣುವ ಆಹಾರ, ಉದಾ: ಹಬ್ಬದೂಟ

ಭಕ್ಷ್ಯ: ಕಚ್ಚಿ ಅಗಿದು ನುಂಗುವ ಆಹಾರ,ಉದಾ: ಹೋಳಿಗೆ

ಚರ್ವ್ಯ: ಜಗಿದು ತಿನ್ನುವ ಆಹಾರ,ಉದಾ: ಹಪ್ಪಳ,ಚಕ್ಕುಲಿ

ಲೇಹ್ಯ: ನಾಲಿಗೆಯಿಂದ ನೆಕ್ಕುವ ಆಹಾರ, ಉದಾ:ಜೇನುತುಪ್ಪ

ಚೂಸ್ಯ: ಚೀಪುತ್ತಾ ಸವಿಯುವ ಆಹಾರ,ಉದಾ: ಮಾವಿನ ಹಣ್ಣು

ಪೇಯ: ಕುಡಿಯುವ ದ್ರವಪದಾರ್ಥದ ಆಹಾರ

ಆಹಾರ ವರ್ಗ:

ಪ್ರಕೃತಿಯ ಮಡಿಲಲ್ಲಿ ದೊರಕುವ ಸಾವಯವ ತಾಜಾ ಆಹಾರ ಪದಾರ್ಥಗಳನ್ನು ಬೇರೆಬೇರೆ ವರ್ಗಗಳಾಗಿ ವಿವರಿಸಿದ ಉಲ್ಲೇಖ ಆಯುರ್ವೇದದಲ್ಲಿ ಸ್ಪಷ್ಟವಾಗಿದೆ.

ಶೂಕಧಾನ್ಯ ವರ್ಗ: ಏಕದಳ/ಸಿರಿಧಾನ್ಯಗಳು

ಶಮೀಧಾನ್ಯ ವರ್ಗ:ದ್ವಿದಳ ಧಾನ್ಯಗಳು

ಮಾಂಸ ವರ್ಗ:ನೆಲ ಜಲದ ಮಾಂಸ

ಶಾಕ ವರ್ಗ: ತರಕಾರಿಗಳು

ಫಲ ವರ್ಗ:ಹಣ್ಣುಹಂಪಲು

ಹರೀತ ವರ್ಗ:ಹಸಿರು ಸೊಪ್ಪು

ಮದ್ಯ ವರ್ಗ: ಹುಳಿಬರಿಸಿ ತಯಾರಿಸಿದ ಮದ್ಯಗಳು

ಜಲ ವರ್ಗ:ವಿವಿಧ ಮೂಲದ ಶುದ್ಧ ನೀರು

ಗೋರಸ ವರ್ಗ:ಹಾಲು ಮತ್ತು ಹಾಲಿನ ಉತ್ಪನ್ನಗಳು

ಇಕ್ಷು ವರ್ಗ: ಕಬ್ಬಿನ ಹಾಲಿನಿಂದ ತಯಾರಿಸಿದ ಉತ್ಪನ್ನಗಳು

ಕೃತಾನ್ನ ವರ್ಗ: ಅಕ್ಕಿ ಮತ್ತು ಗಿಡಮೂಲಿಕೆಗಲಿಂದ ತಯಾಸಿದ ಪೇಯ,ವಿಲೇಪಿ,ಮಂಡ,ಯೂಷ ಇತ್ಯಾದಿ

ಆಹಾರೋಪಯೋಗಿ ವರ್ಗ: ಅಡುಗೆಗೆ ಬಳಸುವ ವಿವಿಧ ತೈಲಗಳು,ಹಿಪ್ಪಲಿ, ಶುಂಠಿ ಇತ್ಯಾದಿ

ಆಹಾರದ ಮಾರ್ಗಸೂಚಿಗಳು:

ಬದುಕಿನಲ್ಲಿ ಪ್ರತಿಯೊಂದರಲ್ಲೂ ಕಾಣಸಿಗುವ ಮಾರ್ಗಸೂಚಿಗಳಂತೆ ತಿನ್ನುವ ಆಹಾರ,ಉಣ್ಣುವ ಭೋಜನಕ್ಕೂ ನಿರ್ದಿಷ್ಟ ವಿಧಿ ನಿಷೇಧಗಳಿವೆ. ಸರಿಯಾದ ಕ್ರಮದಲ್ಲಿ ಆಹಾರದ ಮಾರ್ಗಸೂಚಿಗಳನ್ನು ಅನುಸರಿಸಿದರೆ ರೋಗಮುಕ್ತ ಸ್ವಾಸ್ಥ್ಯಯುಕ್ತ ಜೀವನ ನಮ್ಮದಾಗುತ್ತದೆ.

* ಕಾಲೇ ಭೋಜನ – ಹೊತ್ತಿಗೆ ಸರಿಯಾಗಿ ಭೋಜನ ಮಾಡಬೇಕು

* ಸಾತ್ಮ್ಯ ಭೋಜನ – ನಾಲಿಗೆ, ದೇಹ ಹಾಗೂ ಮನಸ್ಸಿಗೆ ಒಗ್ಗುವ ಭೋಜನ

* ಹಿತ ಭೋಜನ – ಮೈಮನಕ್ಕೆ ಹಿತವಾದ ಆಹಾರ

* ಶುಚಿ ಭೋಜನ – ಶುಚಿಯಾಗಿ ತಯಾರಿಸಿದ ಆಹಾರ

* ಸ್ನಿಗ್ಧ ಭೋಜನ – ಮೃದು ಮತ್ತು ಸ್ನಿಗ್ದವಾದ ಪದಾರ್ಥಗಳಿಂದ ಸಿದ್ಧಪಡಿಸಿದ ಆಹಾರ

* ಉಷ್ಣ ಭೋಜನ – ಬಿಸಿಯಿರುವ ಭೋಜನ

* ಲಘು ಭೋಜನ – ಜೀರ್ಣಕ್ರೀಯೆಗೆ ಸುಲಭವಾದ ಭೋಜನ

* ತನ್ಮನ ಭೋಜನ – ತಾನು ಮನಕ್ಕೆ ಆಹ್ಲಾದ ನೀಡುವ ಭೋಜನ

* ಷಡ್ರಸ ಭೋಜನ – ಆರು ರಸಗಳಿಂದ ಕೂಡಿದ ಭೋಜನ

* ಮಧುರಪ್ರಾಯ ಭೋಜನ – ಮೊದಲು ಸಿಹಿಯಾದ ರಸದಿಂದ ತೊಡಗುವ ಭೋಜನ

* ನಾತಿದ್ರುತ ಭೋಜನ – ಗಡಿಬಿಡಿ ಇಲ್ಲದ ಸಾವಧಾನದ ಭೋಜನ ಸೇವನೆ

* ನಾತಿವಿಳಂಬಿತ ಭೋಜನ – ಅತೀ ನಿದಾನವಾಗಿ,ವಿಳಂಬವಾಗಿ ಸಹ ಊಟ ಮಾಡಬಾರದು

* ಸ್ನಾತ – ಸ್ನಾನ ಮಾಡಿ ಶುಚಿಯಾಗಿ ಬಂದು ಭೋಜನ ಸೇವನೆ

* ಕ್ಷುತ್ ವಾನ್ – ಸರಿಯಾಗಿ ಹಸಿವು ಅನುಭವಕ್ಕೆ ಬಂದ ನಂತರವೇ ಭೋಜನ

* ಧೌತ ಕರಪಾದಾನನ – ಕೈ ಕಾಲು ಮುಖ ತೊಳೆದ ಬಳಿಕವೇ ಭೋಜನ ಸೇವನೆ

* ಪಿತೃ- ದೇವ ತರ್ಪಣ – ರೂಢಿಯ ಪಾಲನೆ

* ಅತಿಥಿ – ಬಾಲ – ಗುರು ತರ್ಪಣ- ಅತಿಥಿ,ಮಕ್ಕಳು, ಗುರುಹಿರಿಯರಿಗೆ ಬಡಿಸಿದ ನಂತರ ಭೋಜನ

* ಅನಿಂದಾ – ಊಟವನ್ನು ನಿಂದಿಸದೆ,ಆಕ್ಷೇಪಿಸದೆ, ಹೀಯಾಳಿಸದೆ ಗೌರವಿಸಿ ಸೇವಿಸಬೇಕು

* ಮೌನ – ಆದ್ಯಂತ ಭೋಜನ ಕಾಲದಲ್ಲಿ ಮೌನವಾಗಿದ್ದು ಆಹಾರ ಸೇವಿಸಬೇಕು.

ಆಹಾರವಿಧಿ ವಿಶೇಷಾಯತನ:

ಆಹಾರದ ಸಂಬಂಧ ವ್ಯಕ್ತಿಯ ಮೇಲೆ ಬೇರೆಬೇರೆ ಕಾರಣಗಳಿಗಾಗಿ ವ್ಯತ್ಯಯವಾಗುತ್ತದೆ. ಅದನ್ನೇ ಆಯುರ್ವೇದ ಶಾಸ್ತ್ರ ಆಹಾರದ ಬಗೆಗಾಗಿನ ಆಯತನವೆಂದು ಗುರುತಿಸಿ ಅದರ ಪ್ರಾಮುಖ್ಯತೆಯ ವಿವರಣೆ ಕೊಟ್ಟಿದೆ.

ಪ್ರಕೃತಿ: ಆಹಾರ ಗುರು-ಲಘು, ಶೀತ-ಉಷ್ಣ, ಸ್ನಿಗ್ಧ-ರೂಕ್ಷ ಗುಣಲಕ್ಷಣಗಳನ್ನು ಹೊಂದಿದ್ದು ಪಚನಕ್ರೀಯೆಯಲ್ಲಿ ತನ್ನದೇ ಪ್ರಭಾವವನ್ನು ಬೀರುತ್ತದೆ.

ಉದಾ:ಹಾಲು,ಮೊಸರು,ಮಾಂಸ ಗುರುಗುಣಗಳಿಂದ ಕೂಡಿದ್ದು ಜೀರ್ಣಕ್ರೀಯೆಗೆ ಕಷ್ಟವಾಗುತ್ತದೆ.

ಹೆಸರುಕಾಳು ಮೊದಲಾದ ಧಾನ್ಯಗಳು ಬೇಗ ಜೀರ್ಣವಾಗುತ್ತವೆ.

ಕರಣ: ಕೆಲವು ಆಹಾರ ದ್ರವ್ಯಗಳನ್ನು ಸಂಸ್ಕರಣ ಮಾಡಿ ಉಪಯೋಗಿಸಬೇಕು ಆದರೆ ಕೆಲವನ್ನು ಮಾಡಲೇಬಾರದು.

ಉದಾ: ಮೊಸರನ್ನು ಕಾಯಿಸಿ ಸೇವಿಸಬಾರದು.

ಸಂಯೋಗ: ಒಂದಕ್ಕಿಂತ ಹೆಚ್ಚಿನ ದ್ರವ್ಯಗಳನ್ನು ಬಳಸಿ ಆಹಾರ ತಯಾರಿಸುವಾಗ ಅವುಗಳ ಗುಣವೃದ್ಧಿಯಾಗುವಂತೆ ಸಂಯೋಜಿಸಬೇಕು.

ರಾಶಿ: ಸೇವಿಸಬೇಕಾದ ಆಹಾರದ ಪ್ರಮಾಣ ಆ ವ್ಯಕ್ತಿಯ ಜೀರ್ಣ ಶಕ್ತಿ ಮತ್ತು ತಿನ್ನುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ.

ದೇಶ:ಯಾವ ಪ್ರದೇಶದಲ್ಲಿರುವ ವ್ಯಕ್ತಿ ಯಾವ ಆಹಾರಕ್ಕೆ ಒಗ್ಗಿಹೋಗಿದ್ದಾನೋ ಅದು ಸೂಕ್ತ ಮತ್ತು ಆಯಾಯ ಪ್ರದೇಶದಲ್ಲಿ ಬೆಳೆಯುವ ಆಹಾರ ಪದಾರ್ಥಗಳ ಗುಣಲಕ್ಷಣಗಳು ಅಲ್ಲಿನ ಮಣ್ಣಿನ ಗುಣಕ್ಕೆ ನಿರ್ಭರವಾಗಿವೆ.

ಕಾಲ:ದೈನಂದಿನ,ಋತು ಅನುಸಾರ,ಜೀರ್ಣಾವಸ್ಥೆ ಮುಂತಾದ ವಿಷಯಗಳ ಮೇಲೆ ಸೇವಿಸುವ ಆಹಾರದ ಕಾಲ ನಿಗದಿಮಾಡಬೇಕು.

ಉಪಯೋಗಸಂಸ್ಥಾ: ಆಹಾರದ ಮಾರ್ಗಸೂಚಿಗಳು ಏನೆಲ್ಲಾ ಇವೆಯೋ ಅವೆಲ್ಲವನ್ನು ಚಾಚೂ ತಪ್ಪದೆ ಕಡ್ಡಾಯವಾಗಿ ಪಾಲಿಸಬೇಕು.

ಉಪಯೋಕ್ತಾ:ಆಹಾರ ಸೇವಿಸುವ ವ್ಯಕ್ತಿ ತನಗೆ ಅಭ್ಯಾಸವಿರುವ,ಭಾಧಕವಿರದ, ಒಗ್ಗುವ, ಇಷ್ಟವಿರುವ ಆಹಾರ ಪದಾರ್ಥಗಳನ್ನೇ ಇಷ್ಟಪಟ್ಟು ಆನಂದಿಸಿ ತಿನ್ನಬೇಕು.

ದ್ವಾದಶ ಅಶನ ವಿಧಿ:

ಆಚಾರ್ಯ ಸುಶ್ರುತರು ಹನ್ನೆರಡು ಭೋಜನ ವಿಧಿಯನ್ನು ನಿರ್ದೇಶಿಸಿದ್ದು ಅದು ಪ್ರಮುಖವಾಗಿ ರೋಗ ಪ್ರಶಮನ ಹಾಗೂ ಪ್ರತಿಬಂಧಕವಾಗಿ ಹೆಚ್ಚು ಬೆಳಕು ಚೆಲ್ಲುತ್ತದೆ.

ಶೀತ ಆಹಾರ – ಶರೀರದಲ್ಲಿ ಪಿತ್ತದೋಷ ಪ್ರಕೋಪವಾದಾಗ

ಉಷ್ಣ ಆಹಾರ – ಕಫ ವಾತ ದೋಷ ವಿಕಾರದಲ್ಲಿ

ಸ್ನಿಗ್ಧ ಆಹಾರ – ವಾತರೋಗದಲ್ಲಿ

ರೂಕ್ಷ ಆಹಾರ – ಕಫಜ ವಿಕಾರಗಳಲ್ಲಿ

ದ್ರವ ಆಹಾರ – ದೇಹದಲ್ಲಿ ದ್ರವಾಂಶದ ಕೊರತೆಯಾದಲ್ಲಿ

ಶುಷ್ಕ ಆಹಾರ – ಜಿಡ್ಡು/ ಎಣ್ಣೆಯ ಅಂಶ ಶರೀರದಲ್ಲಿ ಹೆಚ್ಚು ಗೋಚರವಾದಲ್ಲಿ

ಏಕ ಕಾಲಿಕಾ ಆಹಾರ – ಅಜೀರ್ಣ,ಹಸಿವು ಕಡಿಮೆಯಾದ ಪಕ್ಷದಲ್ಲಿ ಒಂದೊತ್ತಿನ ಊಟ.

ದ್ವಿ ಕಾಲಿಕಾ ಆಹಾರ – ಸ್ವಸ್ಥವಾಗಿದ್ದಾಗ

ಔಷಧಯುಕ್ತ ಆಹಾರ – ರೋಗಿಯ ಬಲ ಕಡಿಮೆಯಾಗಿದ್ದಾಗ ಔಷಧವನ್ನು ಆಹಾರದ ಜೊತೆ ಸೇವಿಸುವುದು

ಮಾತ್ರಾಹೀನ ಆಹಾರ – ಪಾಚಕಾಗ್ನಿಯ ಬಲ ಕಡಿಮೆಯಿದ್ದಾಗ ಪ್ರಮಾಣಕ್ಕಿಂತ ಕಡಿಮೆ ತಿನ್ನುವುದು

ವೃತ್ತಿ ಪ್ರಯೋಜಕ ಆಹಾರ – ಎಲ್ಲ ಪೋಷಕಾಂಶಗಳಿಂದ ಕ್ರೋಢೀಕೃತ ಸಮತೋಲಿತ ಆಹಾರ

ವಿರುದ್ಧ ಆಹಾರ:

ಕೆಲವೊಮ್ಮೆ ಕೆಲವು ಆಹಾರ ಪದಾರ್ಥಗಳು ನಿರ್ಧಿಷ್ಟ ವಿಷಯ ವಿಚಾರಗಳಿಂದಾಗಿ ಪರಸ್ಪರ ವಿರೋಧಿಗಳಾಗಿ ಪರಿಣಮಿಸಿ ಶರೀರದ ಮೇಲೆ ವಿಪರೀತ ವಿಷಾಕ್ತ ಪರಿಣಾಮ ಬೀರುತ್ತದೆ.ಹೊಸ ರೋಗದ/ಸಮಸ್ಯೆಯ ಜನ್ಮಕ್ಕೆ ಕಾರಣವಾಗುತ್ತದೆ.ಇದನ್ನೇ ಆಯುರ್ವೇದ ಅಷ್ಠಾದಶ ವಿರುದ್ಧ ಆಹಾರ ಎಂದು ಘೋಷಿಸಿದ್ದು.

* ದೇಶ ವಿರುದ್ಧ – ಉಷ್ಣಪ್ರದೇಶದಲ್ಲಿ ವಾಸಿಸುವವರು ಮದ್ಯಪಾನ ಮಾಡುವುದು

* ಕಾಲ ವಿರುದ್ಧ – ಚಳಿಗಾಲದಲ್ಲಿ ಅತಿತಣ್ಣಗಿನ ಪದಾರ್ಥಗಳನ್ನು ಸೇವಿಸುವುದು

* ಅಗ್ನಿ ವಿರುದ್ಧ- ಹೊಟ್ಟೆಹಸಿವು ಜೋರಾಗಿದ್ದಾಗ ಸ್ವಲ್ಪ ತಿನ್ನುವುದು ಮತ್ತೆ ಹಸಿವಿಲ್ಲದಿದ್ದರೂ ಆಕಂಠ ಭೋಜನ

* ಮಾತ್ರಾವಿರುದ್ಧ – ಹಸುವಿನ ತುಪ್ಪ ಮತ್ತು ಜೇನು ತುಪ್ಪವನ್ನು ಸಮಪ್ರಮಾಣದಲ್ಲಿ ಸೇವಿಸುವುದು

* ಸಾತ್ಮ್ಯವಿರುದ್ಧ- ಶರೀರಕ್ಕೆ ಒಗ್ಗದ ಹಿಡಿಸದ ಆಹಾರ ಸೇವನೆ

* ದೋಷ ವಿರುದ್ಧ – ವಾತದೋಷದ ಉಪದ್ರವ ಇರುವಾಗ ಪುನಃ ಕಷಾಯರಸ ಪದಾರ್ಥ ಸೇವನೆ

* ಸಂಸ್ಕಾರ ವಿರುದ್ಧ – ಜೇನುತುಪ್ಪವನ್ನು ಕಾಯಿಸಿ ಸೇವಿಸುವುದು

* ವೀರ್ಯ ವಿರುದ್ಧ – ಉದಾ: ಮೀನು ಮತ್ತು ಹಾಲು ಜೊತೆಯಾಗಿ ಸೇವಿಸುವುದು

* ಕೋಷ್ಠ ವಿರುದ್ಧ – ಮಲಬದ್ಧತೆ ಇರುವಾಗ ಪುನಃ ಅದಕ್ಕೆ ಕಾರಣವಾಗುವ ಆಹಾರ ಸೇವನೆ

* ಅವಸ್ಥಾ ವಿರುದ್ಧ – ಸ್ವಂತ ಆರೋಗ್ಯದ ಅವಸ್ಥೆಯ ಆಗುಹೋಗುಗಳ ಅರಿವಿಲ್ಲದೆ ಅರಿವಿಲ್ಲದ ಪದಾರ್ಥದ ಸೇವನೆ

* ಕ್ರಮ ವಿರುದ್ಧ – ಜೇನುತುಪ್ಪ ಸೇವಿಸಿದ ಕೂಡಲೇ ಬಿಸಿನೀರು ಕುಡಿಯುವುದು

* ಪರಿಹಾರ ವಿರುದ್ಧ – ಬಿಸಿ ಖಾರ ಪದಾರ್ಥ ತಿಂದ ಬೆನ್ನಿಗೇ ತಂಪು ಪಾನೀಯ ಸೇವಿಸುವುದು.

* ಉಪಚಾರ ವಿರುದ್ಧ –  ಬಿಸಿಬಿಸಿ ಬಿಸಿನೀರು ಸ್ನಾನ ಮಾಡಿದ ಕೂಡಲೇ ತಣ್ಣೀರು ಕುಡಿಯುವುದು.

* ಪಾಕ ವಿರುದ್ಧ – ಅರೆಬೆಂದ,ಅತಿಬೆಂದ, ಕರಟಿದ ಒಟ್ಟಾರೆ ಪಾಕ ಸರಿಯಿರದ ಆಹಾರ ಸೇವನೆ

* ಸಂಯೋಗ ವಿರುದ್ಧ – ಹುಳಿಯಾದ ಹಣ್ಣಿನ ರಸ ಹಾಲಿನೊಂದಿಗೆ ಬೆರೆಸಿ ಮಿಲ್ಕ್ ಶೇಕ್ ಮಾಡಿ ಕುಡಿಯುವುದು.

* ಹೃದಯ ವಿರುದ್ಧ – ಇಷ್ಟವಿಲ್ಲದ ಕಷಾಯ ಮಕ್ಕಳು ಕುಡಿದ ಹಾಗೆ. ಇಷ್ಟವಿಲ್ಲದ ಆಹಾರ ಸೇವನೆ ಕಷ್ಟಪಟ್ಟು.

* ಸಂಪತ ವಿರುದ್ಧ – ಗುಣಹೀನ ಕಳಪೆ ಗುಣಮಟ್ಟದ ದ್ರವ್ಯಗಳಿಂದ ಆಹಾರ ತಯಾರಿಸುವುದು.ವೆಜಿಟೇಬಲ್ ಎಣ್ಣೆ ಬಳಸಿ ಕೇಸರಿಬಾತ್ ಮಾಡಿದಂತೆ

* ವಿಧಿ ವಿರುದ್ಧ – ಆಹಾರ ಸೇವನಾವಿಧಿ ಮಾರ್ಗಸೂಚಿಗಳ ಉಲ್ಲಂಘನೆ

ಪಥ್ಯಾಪಥ್ಯ ವಿವೇಚನೆ:

ಸಹಸ್ರಸಹಸ್ರ ಸಂಖ್ಯೆಯ ಸ್ರೋತಸ್ಸುಗಳಿಂದ ಸ್ರಜಿಸಿದ ಶರೀರ ಇದು. ಪ್ರತಿಯೊಂದು ಸ್ರೋತಸ್ಸಿನ ಪಥ ಅವರೋಧ ಪ್ರತಿರೋಧಗಳು ಮುಕ್ತವಾದಾಗ ಸ್ವಾಸ್ಥ್ಯ ನಮ್ಮದಾಗುತ್ತದೆ. ಆ ಅದೇ ಪಥಗಳ ಆರೋಗ್ಯ ನಾವು ಸೇವಿಸುವ ಆಹಾರದ ಮೇಲೆ ನಿಂತಿದೆ,ಹಾಗಾಗಿ ಅದನ್ನೇ ಪಥ್ಯ ಎನ್ನುತ್ತೇವೆ.

ಶರೀರೋಪಚಯ,ಬಲ,ವರ್ಣ,ಸುಖ,ಓಜ,ತೇಜ,ಧೃತಿ, ಮೇಧಾ,ಪ್ರತಿಭಾ,ತುಷ್ಟಿ,ಪುಷ್ಟಿ,ಸೌಸ್ವರ್ಯ,

ಜೀವಿತ,ಆಯುಷ್ಯ….ಹೀಗೆ ಎಲ್ಲವೂ ನಾವು ಅನುಸರಿಸುವ ಪಥ್ಯಾಹಾರ ನಮಗೀಯುತ್ತದೆ. ಪಥ್ಯವನ್ನು ಪಾಲಿಸುವ ವ್ಯಕ್ತಿಗೆ ಔಷಧದ ಹಂಗಿಲ್ಲ ಮತ್ತು ಅಪಥ್ಯದ ಜೊತೆಗೆ ರಾಜಿಯಾದವನಿಗೆ ಮದ್ದುಕೊಟ್ಟರೂ ವ್ಯರ್ಥ.

ನಾವು ಏನಾಗುತ್ತೇವೆ,ನಮಗೇನಾಗುತ್ತದೆ ಮತ್ತು ಏಕೆ ಹೀಗೆ ರೋಗದ ಗೂಡಾಗುತ್ತೇವೆ ಎನ್ನುವುದು ನಾವು ತಿನ್ನುವ ಆಹಾರ ನಿರ್ಧರಿಸುತ್ತದೆ ಎಂದಾದಮೇಲೆ ಆಹಾರದ ಬಗ್ಗೆ ವಿಚಾರ ಅಗತ್ಯ ಮಾಡಲೇಬೇಕು. ಆಹಾರದ ಸತ್ ಆಚಾರದ ಕುರಿತು ಯೋಚಿಸಬೇಕು.

ತ್ರಿಕರಣಕ್ಕೆ ಒಪ್ಪುವ ಆಹಾರ ಸೇವನೆಯ ಮಾದರಿ ಕ್ರಮವಿಧಾನಗಳನ್ನು ಪಾಲಿಸೋಣ. ಸದಾಚಾರದರ ಆರೋಗ್ಯ ಮಾರ್ಗಸೂಚಿಗಳ ಮೂಲಕ ದೇಶ-ದೇಹವನ್ನು ಕಾಡುತ್ತಿರುವ ವೈರಾಣುಗಳನ್ನು ಗೆಲ್ಲೋಣ.ಹಿತವಾಗಿ ಮಿತವಾಗಿ ತಿನ್ನುತ್ತಾ, ರಾಗ ರೋಗಗಳ ಸವಾಲುಗಳನ್ನು ಮೆಟ್ಟುತ್ತಾ ಆನಂದಮಯ ಬದುಕು ಕಟ್ಟೋಣ.

ಡಾ.ಬುಡ್ನಾರು ವಿನಯಚಂದ್ರ ಶೆಟ್ಟಿ

9611497446

ನಿಕಟಪೂರ್ವ ಪ್ರಾಂಶುಪಾಲರು,

ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು,ಮೂಡುಬಿದಿರೆ.

ಆಡಳಿತ ನಿರ್ದೇಶಕರು,

ಕ್ಷೇಮಧಾಮ ಆಯುರ್ವೇದ ಆಸ್ಪತ್ರೆ,

ಬ್ರಹ್ಮಾವರ,ಉಡುಪಿ

The post ಆಹಾರದ ಪಥ, ಆರೋಗ್ಯಪಥ appeared first on www.buntsnow.com |  web-based media For Bunts Community.

ಆಹಾರ ಆರೋಗ್ಯ
ಲೇಖನ – ವಿವೇಕ್ ಆಳ್ವ.

ಕ್ಲಾಸಲ್ಲಿ ಗಮನವಿರದ ಒಬ್ಬ ವಿದ್ಯಾರ್ಥಿಯಲ್ಲಿ  ಕಾರಣವೇನಿರಬಹುದು ಎಂದು ಮಾತನಾಡಿಸಿದಾಗ ಒಂದು ವಿಷಯ ಬೆಳಕಿಗೆ ಬಂತು. ಆತ 9 ಗಂಟೆಗೆ ಕ್ಯಾಂಪಸ್ ಗೆ ಕಾಲಿಡಬೇಕಾದರೆ ಬೆಳ್ಳಂಬೆಳಗ್ಗೆ 6.20ರ ಬಸ್ಸಿಗೆ ಹೊರಡಲೇಬೇಕಂತೆ. ಬಸ್ ಮಿಸ್ ಆಯಿತೆಂದರೆ ಮಧ್ಯಾಹ್ನ ನಂತರವೇ ಕ್ಲಾಸ್. ಇದು ದೂರದ ಹಳ್ಳೀ ಕಡೆಯಿಂದ ಬರುವ ಮಕ್ಕಳ ನೈಜ ಚಿತ್ರಣ. ಇದು ಒಂದು ಎಕ್ಸಾಂಪಲ್ ಅಷ್ಟೇ. ಅಮೇರಿಕಾದ ಶಾಲೆಗಳಲ್ಲಿ ಮಕ್ಕಳನ್ನು ಜಾಯಿನ್ ಮಾಡಬೇಕಾದರೆ ಶಾಲೆಯಿಂದ ಮೂರು ಮೈಲಿ ದೂರದೊಳಗಿನ ಶಾಲೆಗೇ ಸೇರಿಸಬೇಕಂತೆ. ಅದಕ್ಕೆ ಸ್ಕೂಲ್ ಡಿಸ್ಟ್ರಿಕ್ಟ್ ಅಂತ ಹೆಸರೂ ಕೊಟ್ಟಿದ್ದಾರೆ. ಅಂದರೆ ನೀವೇನಾದರೂ ದೂರದ ಶಾಲೆಗೆ ನಿಮ್ಮ ಮಗುವನ್ನು ಸೇರಿಸಬೇಕಾದರೆ  ನೀವು ಮನೆಯನ್ನೇ ಶಾಲೆಗೆ ಹತ್ತಿರ ಬರುವ ರೀತಿಯಲ್ಲಿ ಬದಲಾಯಿಸಬೇಕಾಗುತ್ತದೆ..!.

ಮಗುವಿನ ಮುಂದಿನ ಭವಿಷ್ಯದ ದೃಷ್ಟಿಯಿಂದ ಅವರು ಯಾವ ತ್ಯಾಗಕ್ಕೂ ಸಿಧ್ದವಿರಬೇಕು ಎಂಬ ಲೆಸನ್ ಅವರಿಂದ ಕಲಿತಂತಾಯಿತು.

ಡಿಸ್ಟೆನ್ಸ್ ವಿಷಯ ನಮ್ಮಲ್ಲಿ ಸುಲಭವಿಲ್ಲ ಅಂತ ನನಗೂ ಗೊತ್ತು ನಿಮಗೂ ಗೊತ್ತು.

ನಮ್ಮ ರಿಯಲ್ ಮ್ಯಾಟರ್ ಗೆ ಬರೋಣ. ನಾನು ಹೇಳಿದ ಆ ಹುಡುಗ ತುಂಬಾನೇ ಕ್ಷೀಣವಾಗಿಯೇ ಇದ್ದ. ಆತನ ವಯಸ್ಸಿಗೆ ಸರಿಯಾದ ಬೆಳವಣಿಗೆ ಕಂಡಿರಲಿಲ್ಲ. ಮತ್ತೂ ವಿಚಾರಿಸಿದಾಗ ಒಂದು ಶಾಕಿಂಗ್ ನ್ಯೂಸ್ ಹೇಳಿದ್ದಾನೆ. ಬೆಳಗ್ಗಿನ ಬ್ರೇಕ್ ಫಾಸ್ಟ್ ಮಾಡದೆ ಒಂದು ವರ್ಷಕ್ಕೂ ಮೇಲಾಯಿತು ಅಂತ. ಕೇಳಿ ತುಂಬ ಸಂಕಟವಾಯಿತು. ಏನಿದ್ದರೂ ಮಧ್ಯಾಹ್ನದ ಊಟ. ನಂತರ ಮನೆಗೆ ಮುಟ್ಟಿದ ನಂತರ ರಾತ್ರಿ ಊಟ. ಇದು ದಿನಚರಿ. ಆತ ಇದಕ್ಕೆ ಒಗ್ಗಿಹೋಗಿದ್ದಾನೆ ನಿಜ. ಆದರೆ ಮುಂದೆ ಆರೋಗ್ಯ ಸ್ಥಿತಿ ಹೇಗಾಗಬೇಡ.ಬುದ್ಧಿ ಶಕ್ತಿ, ಶರೀರ ಬೆಳೆಯುವ ಹಂತದಲ್ಲಿ ಎಷ್ಟೊಂದು ಆಹಾರದ ಅಗತ್ಯವಿದೆ. ಇಲ್ಲಿ ಮಾಲ್ ನ್ಯೂಟ್ರೀಷಿಯನ್ ನಿಂದ ಬಳಲುವ ವಿದ್ಯಾರ್ಥಿಗಳ ಸಂಖ್ಯೆ ತುಂಬಾನೇ ದೊಡ್ಡ ದಿದೆ ಅಂತ ಅನ್ನಿಸಿತು. ಯಾವ ಫುಡ್ ಎಕ್ಸ್ಪರ್ಟ್ ಗಳನ್ನು ಕೇಳಿದರೂ ಬೆಳಗಿನ ಬ್ರೇಕ್ ಫಾಸ್ಟ್ ಮಿಸ್ ಮಾಡಬೇಡಿ ಅಂತಾರೆ. ಒಮ್ಮೆಗೆ ಒಂದಷ್ಟು ತಿಂದು ಹೊಟ್ಟೆ ಖಾಲಿಬಿಡಬೇಡಿ ಅಂತಾರೆ. ನಾವು ಶಾಲೆಗೆ ಹೋಗುವಾಗ ವಾಟರ್ ಬೆಲ್ ಅಂತ ಇತ್ತು. ಹೆಸರೇ ಸೂಚಿಸುವಂತೆ ಶಾಲೆಯಲ್ಲಿರುವ ಎಲ್ಲಾ ಮಕ್ಕಳು ಒಂದು ರೌಂಡ್ ನೀರು ಕುಡಿದು ಬರಲಿ ಅಂತ ಕೊಡುವ ಬೆಲ್. ಶರೀರ ಡೀಹೈಡ್ರೇಶನ್ ಆಗಬಾರದೆಂಬ  ಕಾಳಜಿಯ ಬೆಲ್ ಅದು.

ಈಗಂತು ನಾಲೆಡ್ಜ್ ಅನ್ನುವುದು ಪಬ್ಲಿಕ್ ಡೊಮೈನ್. ಕೇವಲ ಒಂದೈದು ನಿಮಿಷ ಮೊಬೈಲ್ ಮಾಹಿತಿಗಾರನಲ್ಲಿ ಆಹಾರದ ಬಗ್ಗೆ ಕೇಳಿದರೆ ಸಾಕು ಭೂಲೋಕದ ಎಲ್ಲಾ ಆಹಾರದ  ಮಾಹಿತಿಗಳನ್ನು ಕೆಲವೇ ನಿಮಿಷಗಳಲ್ಲಿ ನಿಮಗೆ ಉಣಬಡಿಸುತ್ತವೆ. ವಿವಿಧ ದೇಶಗಳು ಮಕ್ಕಳ ಬ್ಯಾಲೆನ್ಸಡ್ ಆಹಾರದ ಬಗ್ಗೆ ಎಷ್ಟೊಂದು ಕಾಳಜಿ ವಹಿಸುತ್ತವೆ ಅಂತ ತಿಳಿಯಬಹುದು. ಎಲ್ಲವನ್ನೂ ಗಮನಿಸಿದಾಗ ನನಗೆ ಕಂಡದ್ದು ನಮ್ಮದೇಶದಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಯಾವ ಬೆಳಯನ್ನಾದರೂ ಇಲ್ಲಿ ಬೆಳೆಯಬಹುದಾದ ವಾತಾವರಣ ಇದೆ. ಅವರಂತೆ ಎಲ್ಲಾ ಆಹಾರದೊಟ್ಟಿಗೆ ಮಾಂಸಾಹಾರವನ್ನು ಬೆರೆಸುವ ಪರಿಪಾಠ ನಮಗಿಲ್ಲ. ಕೇವಲ ಮೈದಾದಿಂದ ಮಾಡಿದ ಬ್ರೆಡ್, ಚೀಸ್,ಪೊಟೇಟೋಸ್, ಮಯೋನೀಸ್,ಸಾಸ್, ಫ್ರೆಂಚ್ ಫ್ರೈ, ನೂಡಲ್ಸ್,ಡೋನಟ್,  ಸಲಾಡ್ ಗಳ ಒಳಗಡೆ ಅವರ ಲೈಫ್ಸ್ಟೈಲ್ ಗಳಿದ್ದರೆ, ನಮ್ಮ  ಬೆಳಗ್ಗಿನ ತಂಡಿಗಳ ಮೆನು ನೋಡಿದರೆ ಅವರ ಬಾಡಿ ವೈಬ್ರೇಶನ್ ಆಗುವುದಂತೂ ಗ್ಯಾರಂಟಿ. ನಮ್ಮಲ್ಲಿ ಎಲ್ಲವೂ ಇತ್ತು. ಈಗಲೂ ಇದೆ, ಆದರೆ ಆಸಕ್ತಿ ಬದಲಾವಣೆಯಾಗಿದೆ ಅಷ್ಟೆ.

ಮಕ್ಕಳ ಆಹಾರದ ವಿಷಯದಲ್ಲಿ ನಾವು ರಾಜಿಮಾಡಲೇಬಾರದು.ಅವರಿಗೆ ಕಾಲಕಾಲಕ್ಕೆ ಯಾವರೀತಿಯ ಆಹಾರಕೊಡಬೇಕು ಅಂತ ನಾವು ತಿಳಿದುಕೊಂಡಿರಬೇಕು. ಬೆಳೆಯುವ ಮಕ್ಕಳಿಗೆ ಸತ್ವಯುತ, ರಾಸಾಯನಿಕ ರಹಿತ, ಪೌಷ್ಟಿಕ ಆಹಾರದ ಅಗತ್ಯವಿರುತ್ತದೆ. ಅದು ಅವರ ಭವಿಷ್ಯದಲ್ಲಿ ನೇರಪರಿಣಾಮ ಬೀರುತ್ತದೆ. ಇತ್ತೀಚೆಗೆ ಪ್ರಸಿದ್ದ ವೈದ್ಯರೊಬ್ಬರು ಮಾತನಾಡುವಾಗ ಹೇಳುತ್ತಿದ್ದರು ಅಮೇರಿಕಾದ ಶಾಲೆಗಳಲ್ಲಿ  ” ನೆಲಕಡಲೆ ಬೀಜ ಗಳ ನಿಷೇಧಿತ ತರಗತಿ ”  ಅಂತ ವಿಂಗಡಣೆ ಮಾಡಿರುತ್ತಾರೆ, ಏಕೆಂದರೆ ಕಡಲೆಬೀಜದ ಗಾಳಿ ಸೋಕಿದರೂ ಅಲರ್ಜಿಯಾಗುವ ಮಕ್ಕಳಿರುತ್ತಾರೆ.ಅವರಿಗೆ ಇದರಿಂದ ತೊಂದರೆಯಾಗಬಾರದೆಂದು ಯಾರೂ ತಮ್ಮ ಟಿಫಿನ್ ಬಾಕ್ಸ್ ಗಳಲ್ಲಿ ತರುವಹಾಗಿಲ್ಲ ಎಂಬ ರೂಲ್ಸ್ ಮಾಡಿರುತ್ತಾರಂತೆ.

ಇದು ಕಾಳಜಿ ಅಂದರೆ. ನಾವೂ ನಮ್ಮ ಮಕ್ಕಳ ಸೂಕ್ಷ್ಮ ಸಂವೇದನೆಯ ಮನಸ್ಸನ್ನು ಅರಿತಾಗಲೇ ಸ್ವಸ್ಥ ಸಮಾಜದ ನಿರ್ಮಾಣ ಮಾಡಲು ಸಾಧ್ಯ. ಏನಂತೀರಿ.

ಭಾವನೆಗಳನ್ನು ಬಂಧಿಸಬೇಡಿ !

ಹತ್ತು ದಿನಗಳ ಹೋರಾಟದ ನಂತರ ಒಬ್ಬ ವ್ಯಕ್ತಿಯು ತನ್ನ ಕರೋನಾ  ನೆಗೆಟಿವ್ ವರದಿಯೊಂದಿಗೆ ಆಸ್ಪತ್ರೆಯ ರಿಸೆಪ್ಶನ್ ನಲ್ಲಿ ನಿಂತಿದ್ದ.

ಕೆಲವರು ಅವನನ್ನು ಹೊಗಳುತ್ತಾ ಚಪ್ಪಾಳೆ ತಟ್ಟುತ್ತಿದ್ದರು. ದೊಡ್ಡ ಯುದ್ಧದಿಂದ ಗೆದ್ದ ಬಂದಂತೆ.

ಆದರೆ ಆ ವ್ಯಕ್ತಿಯ ಮುಖದಲ್ಲಿ ಆತಂಕದ ಚಿಂತೆ ಇತ್ತು. ಯಾಕೋ ಸಂತಸ ಮನದಲ್ಲಿ ಅಥವಾ ವ್ಯಕ್ತಿತ್ವದಲ್ಲಿ ತೋರಿ ಬರುತ್ತಿರಲಿಲ್ಲ.

ಆಸ್ಪತ್ರೆಯಿಂದ ಹೊರಬಂದು ಕಾರಿನಲ್ಲಿ ಮನೆಗೆ ಹೋಗುವಾಗ ಕಳೆದ “ಐಸೊಲೇಷನ್ ” ಎಂಬ ಅಪಾಯಕಾರಿ ಮತ್ತು ಅಸಹನೀಯ ಸಮಯವನ್ನು ನೆನಪಿಸಿಕೊಳ್ಳುತ್ತಿದ್ದ.

ಸಿಗದ  ಕನಿಷ್ಠ ಸೌಲಭ್ಯಗಳು, ಸಾಕಷ್ಟು ಬೆಳಕು ಮತ್ತು, ಯಾವುದೇ ಮನರಂಜನಾ ವಿಧಾನಗಳ ಅಲಭ್ಯತೆ, 10 ದಿನದಲ್ಲಿ ಬಂದು ಯಾರೂ ಮಾತನಾಡಿಸಲಿಲ್ಲ ಅಥವಾ ಯಾರೊಬ್ಬರೂ ಹತ್ತಿರ ಬರಲಿಲ್ಲ.  ಆಹಾರವನ್ನು ಸಹ ಸರಳವಾಗಿ ಒಂದು ತಟ್ಟೆಯಲ್ಲಿ ತುಂಬಿಸಿ ಕೈದಿಗೆ ನೀಡುವಂತೆ ನೀಡಲಾಗುತ್ತಿತ್ತು

ಆ 10 ದಿನಗಳನ್ನು ಅವನು ಹೇಗೆ ಕಳೆದ ಅ ಆತಂಕ ಮಾನಸಿಕ ವೇದನೆ ತಮ್ಮವರ ಅನುಪಸ್ಥಿತಿಯಲ್ಲಿ ಯಾರು ನಮ್ಮವರು ಯಾರು ಪರರು ಎಂದು ತಿಳಿಯದೆ ಒಬ್ಬಂಟಿಯಾಗಿ ಕಳೆದ ರಾತ್ರಿ-ಹಗಲು ಇನ್ನೊಮ್ಮೆ ಮನದಲ್ಲಿ ಬಂದು ಮರೆಯಾಗುತ್ತದೆ.

ಮನೆಗೆ ತಲುಪಿದಾಗ ಸ್ವಾಗತಕ್ಕಾಗಿ ನಿಂತ  ಉತ್ಸಾಹಭರಿತ ಹೆಂಡತಿ ಮತ್ತು ಮಕ್ಕಳನ್ನು ನಿರ್ಲಕ್ಷಿಸಿ ಮನೆಯ ಮೂಲೆಯ ಕೋಣೆಗೆ ಹೋದ ಅಲ್ಲಿ ಆತನ ತಾಯಿ ಕಳೆದ ಐದು ವರ್ಷಗಳಿಂದ  ಅಸೌಖ್ಯದಿಂದ ಮಲಗಿದ್ದಳು.

ತಾಯಿಯನ್ನು ಕಂಡೊಡನೆ ತಾಯಿಯ ಪಾದಕ್ಕೆ ಬಿದ್ದು ಗೊಳೋ ಎಂದು  ಅತ್ತು ಬಿಡುತ್ತಾನೆ ಹಾಗೂ ತನ್ನ ಅಮ್ಮನನ್ನು ಎತ್ತಿಕೊಂಡು ಕೋಣೆಯಿಂದ ಹೊರಬರುತ್ತಾನೆ.

ತಂದೆಯ ಮರಣದ ನಂತರ, ಕಳೆದ 5 ವರ್ಷಗಳಿಂದ ಪ್ರತ್ಯೇಕತೆಯ ಐಸೋಲೇಶನ್ ನಲ್ಲಿ ತಾಯಿ ಇದ್ದಳು. ಅನಾರೋಗ್ಯದಿಂದ ಬಳಲುತ್ತಿರುವ ತಾಯಿಗೆ ಹೇಳಿದ”ಅಮ್ಮ ಇವತ್ತಿನಿಂದ ನಾವ್ಯಾರು ಬೇರೆಬೇರೆಯಾಗಿ ಜೀವಿಸುವ ಅಗತ್ಯವಿಲ್ಲ” ನಾವೆಲ್ಲರೂ ಒಂದೇ ಸೂರಿನಡಿ ಒಟ್ಟಿಗೆ

ಬದುಕೋನ ಎಂದು ತಾಯಿಯನ್ನು ಅಪ್ಪಿಕೊಂಡ.

ಮಗನು ತನ್ನ ಹೆಂಡತಿಯ ಮುಂದೆ ಇದನ್ನು ಹೇಳಲು ಹೇಗೆ ಧೈರ್ಯಮಾಡಿದನು ಎಂದು ತಾಯಿ ಕೂಡ ಆಶ್ಚರ್ಯ ದೊಂದಿಗೆ ಮನದೊಳಗೆ ಸಂತಸ ಪಟ್ಟಳು.

ಹೃದಯದ ಇಷ್ಟು ದೊಡ್ಡ ಬದಲಾವಣೆ ಇದ್ದಕ್ಕಿದ್ದಂತೆ ಹೇಗೆ ಸಂಭವಿಸಿತು? ಎಂದು ತಾಯಿ ಯೋಚಿಸುವ ಮೊದಲೇ  ಮಗನು ತನ್ನ  ಏಕಾಂತತೆಯ ಎಲ್ಲಾ ವಿಷಯಗಳನ್ನು  ತಾಯಿಗೆ ತಿಳಿಸಿದನು ಮತ್ತು  ಏಕಾಂತತೆ ಎಷ್ಟು ನೋವಿನಿಂದ ಕೂಡಿದೆ ಎಂಬುದನ್ನು ಈಗ ನಾನು ಅರಿತುಕೊಂಡೆ ಎಂದು ಹೇಳಿ ಇನ್ನೊಮ್ಮೆ ದುಃಖಪಟ್ಟ.

ಮಗನ ಈ ನಕಾರಾತ್ಮಕ ವರದಿಯು ಅವನ ತಾಯಿಯ ಜೀವನದ ಸಕಾರಾತ್ಮಕ ವರದಿಯಾಯಿತು.

ಹೀಗೆಯೇ ಜೀವನ ಒಬ್ಬರನ್ನು ಒಬ್ಬರಿಂದ ಕಸಿದು ಕೊಂಡರು ಕೂಡ  ಒಂದಲ್ಲ ಒಂದು ದಿನ ಪುನ ಸರಿದಾರಿಗೆ ಬಂದೇ ಬರುತ್ತದೆ.  ಆದರೆ ಅದನ್ನು ಅರ್ಥಮಾಡಿಕೊಳ್ಳುವ ಒಳಮನಸ್ಸು ಗಳು ಇರಬೇಕು ಅಷ್ಟೆ. ಇಂತಹ ಅನೇಕ ನಿಜ ಕಥೆಗಳನ್ನು ನಾವು ಅನುದಿನವು ಕೇಳುತ್ತಿರುತ್ತೇವೆ ಬದುಕಿನ ಕೊನೆಯ ಕ್ಷಣಗಳು ಎಷ್ಟು ದೈನ್ಯತೆಯಿಂದ ಕೂಡಿದೆ ಎಂಬುವುದನ್ನು ಎಲ್ಲರೂ ಬಲ್ಲರು. ಆದರೂ ಕೂಡ ನಾವು ನಮ್ಮದು ನನ್ನದು ಎಂಬ ಜಿಜ್ಞಾಸೆಯಲ್ಲಿ  ಬಿದ್ದು ಬದುಕನ್ನು ನರಕವನ್ನಾಗಿಸಿ ಕೊಂಡಿದ್ದೇವೆ. ಅರ್ಥಮಾಡಿಕೊಳ್ಳುವವರು ಮಾತ್ರ ಕಡಿಮೆಯೇ.

ಒಂದು ನಿರ್ದಿಷ್ಟ ಸಮಯದವರೆಗೆ ಬದುಕು ಕೊಡುವ ಈ ಜೀವನ. ಯಾವಾಗ ಕೊನೆಗೊಳ್ಳುತ್ತದೆ ಎಂದು ತಿಳಿದಿಲ್ಲ, ಅಥವಾ ಜೀವನವು ಯಾವಾಗ ಬೇಕಾದರೂ ಕೊನೆಗೊಳ್ಳುವ ನೀರಿನ ಗುಳ್ಳೆಯಂತಿದೆ ಎಂಬುದು ತಿಳಿದ ವಿಷಯ.

ಹಾಗಾದರೆ ಈ ಅಮೂಲ್ಯ ಜೀವನದ ಒಂದು ಕ್ಷಣವೂ ನಾವು ಸರಿಯಾಗಿ ಬದುಕುವುದಿಲ್ಲ. ಜೀವನದಲ್ಲಿ ಎಷ್ಟು ಕ್ಷಣಗಳಿವೆ ಎಂದು ಒಬ್ಬರೇ ಯೋಚಿಸಬಾರದು, ಆದರೆ ಒಂದು ಕ್ಷಣದಲ್ಲಿ ಎಷ್ಟು ಜೀವನವಿದೆ ಎಂದು ಯೋಚಿಸಬೇಕು.  ಕಳೆದ ಕ್ಷಣಗಳು ಕಳೆದು ಹೋಗಿದೆ ಅದರ ಬಗ್ಗೆ ಈಗ ಕುರಿತು ಪಶ್ಚಾತ್ತಾಪ ಪಡಬಾರದು.  ಇನ್ನು ಬರುವ ಕ್ಷಣಗಳ ಬಗ್ಗೆ ಪಕ್ವವಾಗಬೇಕು ಇನ್ನೊಮ್ಮೆ ಎದ್ದುನಿಂತು ಸಮಯದ ಪರಿವೇ ಇಲ್ಲದಂತೆ ಜೀವನ ದಲ್ಲಿ ಬದುಕಿ ತೋರಿಸಬೇಕು.

ನಿಮ್ಮ ಅಮೂಲ್ಯ ಜೀವನವನ್ನು ಯಾವುದೇ ರೀತಿ ವ್ಯರ್ಥ ಮಾಡಬೇಡಿ.  ಇದು ಅಮೂಲ್ಯವಾದುದು, ಅದನ್ನು ಸಾಧ್ಯವಾದಷ್ಟು ಸಂತೋಷದಿಂದ ಅನುಭವಿಸಿ.  ಸಂತೋಷವು ನಮ್ಮ ಸುತ್ತಲೂ ಇದೆ. ಅಲ್ಲಿ ಸಂತಸವನ್ನು ಹುಡುಕಿ ನಿಮ್ಮ ಸಂತೋಷಕ್ಕೆ ಒಂದು ದಾರಿ ಅಲ್ಲಿ ಖಂಡಿತ ದೊರೆಯುತ್ತದೆ. ಜೀವನ ತುಂಬಾ ನಗುವಿನ ಅಲೆಗಳಿವೆ ಸುಂದರ ಅಲೆಗಳ ನಡುವೆ ನಮ್ಮ ಕೌಟುಂಬಿಕ ಜೀವನ ಕೂಡ ಬೆರೆತುಕೊಂಡಿದೆ. ಆ ನಗುವಿನ ಅಲೆಗಳನ್ನು  ಹಿಡಿದಿಟ್ಟುಕೊಳ್ಳಿ . ಅದನ್ನು ಮಾಲೆಯಂತೆ ಪೋಣಿಸಿ ಬದುಕಿನ ಕೊರಳಿಗೆ ಹಾಕಿಕೊಳ್ಳಿ.  ನಿಮ್ಮ ಬದುಕು ಸಂತಸದ ಹೊನಲು ಆಗಿಯೇ ಅಗುತ್ತದೆ. ಅದನ್ನು ಅನುಭವಿಸಿದಾಗ ಮಾತ್ರ  ಈ ಜೀವನ ಅರ್ಥಪೂರ್ಣವಾಗಿರುತದೆ ಹಾಗೂ ಪರಿಪೂರ್ಣವಾಗುತ್ತದೆ.

ನಮ್ಮ ಕುಟುಂಬ ಮತ್ತು  ಸಂಬಂಧಿಕರು ಹಾಗೂ ಪರಿಚಯಸ್ಥರನ್ನು ಇನ್ನೊಮ್ಮೆ ಸಂಪರ್ಕಕ್ಕೆ ತರಲು ಪ್ರಯತ್ನಿಸಿ, ಯಾರನ್ನೂ ದ್ವೇಷಿಸಬೇಡಿ. ಸಣ್ಣ ಸಣ್ಣ ಭೇಟಿ ಗಳಿಗೆ ಸ್ಪಂದನೆ ನೀಡಿ .     ಕಹಿ ಅಥವಾ ಪ್ರೀತಿ ತುಂಬಿರುವ ಮನಸ್ಸುಗಳನ್ನು ಒಂದಾಗಿ ಬರಮಾಡಿಕೊಳ್ಳಿ ಆಗ ಬದುಕಿನ ಸುಂದರತೆ ನಿಮ್ಮ ಮನದಾಳದಲ್ಲಿ ಖಂಡಿತ ಬರುತ್ತದೆ.

ನಮ್ಮ ಜೀವನದಲ್ಲಿ ಶಾಲೆಯಿಂದ ಹಿಡಿದು ಇಷ್ಟರವರೆಗೆ ನಮ್ಮ ಬದುಕಿನಲ್ಲಿ ಬಂದುಹೋದ ಸ್ನೇಹಿತರನ್ನು ಅಥವಾ ಸಂಬಂಧಿಕರನ್ನು ಜೀವನದಲ್ಲಿ ಯಾವಾಗಲಾದರೂ  ನೆನಪು ಮಾಡಿಕೊಂಡಿದ್ದೀರಾ? ನಿಮ್ಮ ಜೀವನದಲ್ಲಿ ನಿಮಗಾಗಿ ಅವರು ಮಾಡಿರುವ ತ್ಯಾಗಗಳು ಸಹಾಯಗಳನ್ನು ಎಂದಾದರೂ ಈ ಜೀವನದಲ್ಲಿ ಇನ್ನೊಮ್ಮೆ

ಯೋಚಿಸಿದ್ದಿರ?.  ನೆನಪು ಮಾಡಿ  ಇಂತಹ ಸ್ನೇಹಿತರ ಒಂದು ಪಟ್ಟಿ ಮಾಡಿಕೊಳ್ಳಿ. ಇನ್ನೊಮ್ಮೆ ಅವರನ್ನು ಹತ್ತಿರ ಕರೆಯುವ ಮಾತನಾಡುವ ಪ್ರಯತ್ನಪಡಿ. ಅವರ ಖುಷಿ ಯಲ್ಲಿ ಪಾಲು ಪಡೆದುಕೊಳ್ಳಿ.ನಮ್ಮ ಸ್ನೇಹಿತರು, ನಮ್ಮ ಸಂಬಂಧಿಕರು  ಒಮ್ಮೆ ಮಾತ್ರ ನಮಗೆ ಸಿಕ್ಕಿರಬಹುದು ಆದರೆ ಈ ಬದುಕಿನ ಜಂಜಾಟಗಳ ನಡುವೆ ಮಾತನಾಡಲು ಸಮಯ ಇಲ್ಲದಿದ್ದರೂ ಕೂಡ ಈ ಮಾತುಗಳನ್ನು ಮನದಲ್ಲಿ ಕಲ್ಪಿಸಿಕೊಳ್ಳಿ.  ಬಿಟ್ಟುಹೋದ ನೆನಪುಗಳನ್ನು ಹಸನಾಗಿಸಿ. ಈ ಜಗತ್ತನ್ನು ತೊರೆದ ನಂತರ, ಯಾರೂ ಮತ್ತೆ ಯಾರನ್ನೂ ಭೇಟಿಯಾಗಲು ಬರುವುದಿಲ್ಲ, ಅವರು ನಿಮ್ಮನ್ನು ಶಾಶ್ವತವಾಗಿ ಭೇಟಿಯಾಗಿ ಎಂದೆಂದಿಗೂ ಹಿಂದೆ ಬರದೆ ಹೋಗುವವರ ಸಾಲಿನಲ್ಲಿ ಸೇರಿ ಹೋಗುತ್ತಾರೆ. ನಂತರ ನಾವು ಎಷ್ಟೇ ಪ್ರಯತ್ನಿಸಿದರೂ ಕೂಡ ಒಂದು ಸೆಕೆಂಡಿಗೆ ಸಹ, ಅವರನ್ನು ಭೇಟಿಯಾಗಲು ಆಗುವುದಿಲ್ಲ . ಅದರ ನಂತರ  ನೆನಪುಗಳು ಮತ್ತು ವಿಷಾದಗಳು ಮಾತ್ರ ಶಾಶ್ವತವಾಗಿ  ಎಂದೆಂದಿಗೂ ಉಳಿದುಬಿಡುತ್ತದೆ.

ನಮ್ಮ ಮನಸ್ಸಿನ ಭಾವನೆ ಏನೆಂದರೆ, ಮೊದಲಿಗೆ ನಾವು ಯಾವುದೇ ಮನುಷ್ಯನಲ್ಲಿ ಯಾವುದೇ ಒಳ್ಳೆಯತನವನ್ನು ಕಾಣುವುದಿಲ್ಲ. ಮತ್ತು ಅವನ ಮರಣದ ನಂತರ ನಾವು ಯಾವುದೇ ಕೊರತೆಯನ್ನು ಕೂಡ  ಕಾಣುವುದಿಲ್ಲ.  ಅವನ ದೋಷಗಳು ಸಹ ಅರ್ಹತೆಗಳಾಗಿ ಬದಲಾಗುತ್ತವೆ. ಆದರೆ ಸತ್ತನಂತರ ಉಳಿದ ಕೊರತೆಯನ್ನು  ಎಂದಿಗೂ ಪೂರೈಸಲು ಸಾಧ್ಯವಿಲ್ಲ. ಹಾಗಿರುವಾಗ ನಾವು ಸಮಯಕ್ಕೆ ಮಹತ್ವನೀಡಿ  ನಮ್ಮ ಜೀವನವನ್ನು ಪೂರ್ಣವಾಗಿ ಆನಂದಿಸ ಬೇಕು. ದುಃಖದ ಕುಲುಮೆಯಲ್ಲಿ ಅದನ್ನು ಸುಡದೆ .ಕಾರ್ಯನಿರತರಾಗಬೇಕು.

ಒಳ್ಳೆಯತನದಿಂದ ವ್ಯರ್ಥ ಮಾಡುತ್ತಿರುವ ಜೀವನದ ಮೌಲ್ಯವನ್ನು ಅವ ನು ಈಗ ತಿಳಿದುಕೊಂಡಿದ್ದಾನೆ, ಅದು ಅಮೂಲ್ಯವಾದುದು.  ಈ ಪ್ರಪಂಚದ ಜಗತ್ತಿನಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ, ನೀವು ಬದುಕಲು ಇನ್ನೊಮ್ಮೆ ಕಲಿಯಿರಿ .   ನಿಮ್ಮನ್ನು ಸಂತೋಷದಿಂದ ದೂರವಿಡಬೇಡಿ.  ಪ್ರತಿ ಸಂತೋಷವನ್ನು ಅನುಭವಿಸಿ.  ನಿಮ್ಮ ಮನಸ್ಸನ್ನು ಬಂಧಿಸಬೇಡಿ ಮತ್ತು ಅದನ್ನು ಹಾರಲು ಬಿಡಿ.  ನಾವು ಜೀವನದಲ್ಲಿ ಮುಂದೆ ಸಾಗಬೇಕು ಏಕೆಂದರೆ ನಿಶ್ಚಲತೆಯು ಜೀವನವಲ್ಲ.

ವಿವೇಕಾನಂದರು ಸರಿಯಾಗಿ ಹೇಳಿದ್ದಾರೆ, “ಎದ್ದೇಳಿ, ಎಚ್ಚರಗೊಳ್ಳಿ ಮತ್ತು ಗುರಿ ಸಾಧಿಸುವವರೆಗೆ ನಿಲ್ಲಿಸಬೇಡಿ.”   ಇದು ಜೀವನಶ್ರೇಷ್ಠ ಮಾತುಗಳಾಗಿವೆ ಹಲವು ಕಾರಣದಿಂದಾಗಿ  ತಮ್ಮ ಗುರಿಗಳನ್ನು ತ್ಯಜಿಸುವ ಜನರು ಯೋಚಿಸುತ್ತಾರೆ ಇದಕ್ಕಿಂತ ದೊಡ್ಡ ವೈಫಲ್ಯವಿಲ್ಲ ಎಂದು.  ಯಶಸ್ಸು ಮತ್ತು ವೈಫಲ್ಯವು ಒಂದೇ ನಾಣ್ಯದ ಎರಡು ಮುಖಗಳು ಪ್ರಯತ್ನವಿಲ್ಲದೆ ವೈಫಲ್ಯವಿಲ್ಲ. ವೈಫಲ್ಯವಿಲ್ಲದ ಬದುಕು ಬದುಕಲ್ಲ ಇಲ್ಲಿ ಕಲಿಕೆಗೆ ದಾರಿಯಿಲ್ಲ. ಆದ್ದರಿಂದ ಮನಸ್ಸನ್ನು ಮನಸ್ಸಿನಂತೆ ಬಿಡಿ. ಭಾವನೆಗಳನ್ನು ಬಂಧಿಸಬೇಡಿ.!

ದಿವಾಕರ್ ಶೆಟ್ಟಿ ಅಡ್ಯಾರ್.

divvakarshetty@Gmail.com

The post ಆಹಾರ ಆರೋಗ್ಯ appeared first on www.buntsnow.com |  web-based media For Bunts Community.

ದೇಹವನ್ನು ತಂಪಾಗಿರಿಸಲು ಪ್ರತಿನಿತ್ಯ ಬಳಸಿ -“ರಾಗಿ ಅಂಬಲಿ…..! ಕೊಬ್ಬಿನ ಅಂಶವನ್ನು ನೀಗಿಸಿ , ಕಬ್ಬಿಣದ ಅಂಶವನ್ನು ದೊರೆಸುವ ಏಕ ಮಾತ್ರ ಆಹಾರ – ರಾಗಿ ಅಂಬಲಿ….
ದೇಹದಲ್ಲಿನ ನಿಶಕ್ತಿ ,ಕೊಬ್ಬಿನಂಶವನ್ನು ತ್ಯಜಿಸುವ , ಅಗಾಧ ಕ್ಯಾಲ್ಸಿಯಂ ಮತ್ತು ವಿಟಮಿನ್ ಪೂರೈಸುವ ರಾಗಿ ಉತ್ತಮ ಆರೋಗ್ಯಕ್ಕೆ ರಹದಾರಿ…..!

ರಾಗಿಯಲ್ಲಿ ದೇಹಕ್ಕೆ ಬೇಕಾಗಿರುವಂತಹ ಹಲವು ಪೌಷ್ಟಿಕಾಂಶಗಳು ಇವೆ. ರಾಗಿ ರೊಟ್ಟಿ ರಾಗಿ ಮುದ್ದೆ ರಾಗಿ ಅಂಬಲಿ ಸೇವಿಸುವುದರಿಂದ ಉತ್ತಮವಾದ ಆರೋಗ್ಯವನ್ನು ಪಡೆಯಬಹುದು. ಅಷ್ಟೇ ಅಲ್ಲದೆ ಈ ಗ್ಯಾಸ್ಟಿಕ್ ಸಮಸ್ಯೆ ಅನ್ನುವುದು ಕೂಡ ಇರುವುದಿಲ್ಲ. ದೇಹಕ್ಕೆ ತಂಪು ನೀಡುವಂತಹ ರಾಗಿ ಅಂಬಲಿಯನ್ನು ಸೇವಿಸುವುದರಿಂದ ಯಾವೆಲ್ಲ ಲಾಭವಿದೆ ಅನ್ನುವುದನ್ನು ತಿಳಿಸಿಕೊಡುತ್ತೇವೆ. ರಾಗಿ ಅಂಬಲಿ ಯಲ್ಲಿ ಪ್ರೋಟಿನ್ ಹಾಗೂ ಕ್ಯಾಲ್ಸಿಯಂ ಅಂಶ ಇರುವುದರಿಂದ ಇದರ ಸೇವನೆಯಿಂದ ದೇಹಕ್ಕೆ ಉತ್ತಮ ಎನರ್ಜಿ ಹಾಗೂ ಶಕ್ತಿ ಸಿಗುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿನ ಮೂಳೆಗಳು ಬಲಿಷ್ಠವಾಗಿ ಬೆಳೆಯಲು ಸಹಾಯವಾಗುತ್ತದೆ. ಮತ್ತು ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿರುವಂತಹ ಈ ರಾಗಿಯಲ್ಲಿಉತ್ತಮ ಆರೋಗ್ಯ ಸಿಗುವುದರ ಜೊತೆಗೆ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ. ರಾಗಿ ಅಂಬಲಿಯನ್ನು ಸೇವಿಸುವುದರಿಂದ ತಲೆ ಕೂದಲ ಆರೋಗ್ಯ ಹಾಗೂ ವಿಟಮಿನ್ ಡಿ ಸಮಸ್ಯೆ ನಿವಾರಣೆಯಾಗುವುದು. ಅಷ್ಟೇ ಅಲ್ಲದೆ ರಾತ್ರಿ ವೇಳೆ ರಾಗಿಯಿಂದ ತಯಾರಿಸಿದ ಊಟವನ್ನು ಮಾಡುವುದರಿಂದ ಸುಖವಾದ ನಿದ್ರೆಯನ್ನು ಮಾಡಬಹುದು . ನಿಮಗೆ ಗೊತ್ತಿರಬಹುದು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ರಾಗಿಮುದ್ದೆ ರೊಟ್ಟಿ ಅಂಬಲಿಯನ್ನು ಸೇವಿಸುವುದರಿಂದ ಗಟ್ಟಿಯಾಗಿರುತ್ತದೆ. ಹಾಗೂ ಶಕ್ತಿಶಾಲಿಯಾಗಿ ಇರುತ್ತಾರೆ .

ಹಲವು ರೀತಿಯ ಜಂಕ್ ಫುಡ್ ಗಳು ತಿಂದು ದೇಹದಲ್ಲಿ ಬೊಜ್ಜು ಬೆಳೆಸಿಕೊಳ್ಳುವ ಬದಲು ಇದನ್ನು ಸೇವಿಸುವುದರಿಂದ ದೇಹದಲ್ಲಿ ಹಾಗೂ ರಕ್ತದಲ್ಲಿ ಕೊಬ್ಬಿನ ಅಂಶ ಇರುವುದಿಲ್ಲ. ಮಧುಮೇಹ ಸಮಸ್ಯೆ ಇರುವವರು ವಾರದಲ್ಲಿ ಮೂರು ನಾಲ್ಕು ಸಲ ಕುಡಿದರೆ ಮಧುಮೇಹ ದೂರವಾಗುತ್ತದೆ ಮತ್ತು ದೇಹ ತಣ್ಣಗಿರಲು ಇದು ಸಹಕಾರಿಯಾಗುತ್ತದೆ ಎನ್ನುವುದೇ ವಿಶೇಷ ಅದಲ್ಲದೆ ದೇಹದಲ್ಲಿನ ವಿವಿಧ ಹಾನಿಕಾರಕ ವಿಷ ಪದಾರ್ಥಗಳನ್ನ ಹೊರಹಾಕುವಲ್ಲಿ ಮತ್ತು ಜಂಗ್ ಫುಡ್ ಗಳನ್ನ ತಿಂದು ದೇಹ ಹಾಳು ಮಾಡಿಕೊಳ್ಳುವ ಬದಲು ದಿನಾಲು ಅಥವಾ ವಾರಕ್ಕೊಮ್ಮೆಯಾದರೂ ರಾಗಿಯನ್ನ ಶುದ್ಧ ನೀರಿನಲ್ಲಿ ಮಿಶ್ರಣ ಮಾಡಿ ಸೇವಿಸಿದರೆ ದೇಹದಲಾಗುವ ವಿಶೇಷ ಲಾಭಾಂಶ ದೊರೆಯುತ್ತದೆ. ಅದಲ್ಲದೆ ದೇಹದಲ್ಲಿನ ಬಡವಣಿಗೆಗಳನ್ನ ವಿಶೇಷ ರೀತಿಯಲ್ಲಿ ನಡೆಸುವುದರೊಂದಿಗೆ ಕೊಬ್ಬಿನಂಶ ಹಾಗೂ ಇನ್ನಿತರ ಸಮಸ್ಯೆಗಳು ದೂರ ತಳ್ಳುತ್ತದೆ. ಆರೋಗ್ಯ ಸಮಸ್ಯೆಗಳನ್ನ ಹಾಗೂ ದೇಹದಲ್ಲಿನ ತೇವಾಂಶ ಭರಿತ ವಾತಾವರಣಗಳನ್ನ ಹಿಡಿದಿಟ್ಟುಕೊಳ್ಳುವಲ್ಲಿ ಮತ್ತು ದೇಹದ ಉಷ್ಣಾಂಶ ಹಾಗೂ ಅದರಲ್ಲಿನ ವಿಶೇಷವಾದಂತಹ ಹಾನಿಕಾರಕ ಪದಾರ್ಥಗಳನ್ನ ಹೊರಹಾಕುವುದರೊಂದಿಗೆ ದೇಹ ತಂಪಾಗಿರುತ್ತದೆ ಇದು ಸಹಕಾರಿ ಮಾಡುತ್ತದೆ ಹಾಗೂ ರಾಗಿ ಸೇವನೆಯೂ ಆರೋಗ್ಯದ ಹಿತದೃಷ್ಟಿಯಿಂದ ತುಂಬಾ ಒಳ್ಳೆಯದು ಇದು ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಅಕ್ಕಿಯನ್ನು ಇತ್ತೀಚೆಗೆ ಹೆಚ್ಚು ಸೇವಿಸಲಾಗುತ್ತದೆ. ಅದಕ್ಕೆ ಅನುಗುಣವಾಗಿ ರಾಗಿಯನ್ನು ಕೂಡ ಸೇವಿಸುವ ಅಭ್ಯಾಸವನ್ನು ಮಾಡಿಕೊಳ್ಳಿ. ರಾಗಿಯು ದೇಹಕ್ಕೆ ತುಂಬಾ ತಂಪು. ಉರಿಯೂತದ ಸಮಸ್ಯೆ ಇರುವವರು ರಾಗಿ ಸೇವಿಸುವುದು ಉತ್ತಮ. ರಾಗಿ ಮುದ್ದೆ ತಿಂದರೆ ಎಂತಹ ಕೆಲಸವನ್ನಾದರೂ ಮಾಡುವ ಶಕ್ತಿ ನಮ್ಮ ದೇಹಕ್ಕೆ ದೊರೆಯುತ್ತದೆ ಎಂದು ಹಿರಿಯರು ಹೇಳುತ್ತಾರೆ. ಯಾವಾಗಲೂ ರಾಗಿ ಮುದ್ದೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಹೀಗಾಗಿ ಸುಲಭವಾಗಿ ರಾಗಿ ಅಂಬಲಿ ಮಾಡಿ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು. ವಿಶೇಷವಾಗಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ರಾಗಿ ಅಂಬಲಿ ಹೆಚ್ಚು ಸಹಾಯಕವಾಗಿದೆ. ಇಂದು ರಾಗಿ ಅಂಬಲಿಯನ್ನು ಹೇಗೆ ತಯಾರಿಸುವುದು ಮತ್ತು ಇದನ್ನು ಕುಡಿಯುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳೋಣ. ರಾಗಿ ಅಂಬಲಿಯನ್ನು ಸಿದ್ಧಪಡಿಸುವ ರೀತಿ ಹಾಗೆ ಬೇಕಾಗುವ ಪದಾರ್ಥಗಳನ್ನು ಗಮನಿಸುತ್ತಾ ಹೋಗೋಣ.

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

1)3 ಟೇಬಲ್ ಚಮಚ ರಾಗಿ ಹಿಟ್ಟು

2)2 ಕಪ್ ನೀರು

3)1 ಕಪ್ ಮಜ್ಜಿಗೆ

4)ಒಂದು ಚಿಟಿಕೆ ಇಂಗು

5)ರುಚಿಗೆ ಉಪ್ಪು

6)ಅರ್ಧ ಈರುಳ್ಳಿ ಸಣ್ಣಗೆ ಹೆಚ್ಚಿದ್ದು

7)4 – 5 ಕರಿಬೇವಿನ ಎಲೆ ಸಣ್ಣಗೆ ಹೆಚ್ಚಿದ್ದು

8)ಸ್ವಲ್ಪ ಕೊತ್ತಂಬರಿ ಸೊಪ್ಪು (ಬೇಕಾದಲ್ಲಿ)

ರಾಗಿ ಅಂಬಲಿ ಮಾಡುವ ವಿಧಾನ:

1)ಒಂದು ಬಟ್ಟಲಿನಲ್ಲಿ ರಾಗಿ ಹಿಟ್ಟು ತೆಗೆದುಕೊಳ್ಳಿ.

2)ಅದಕ್ಕೆ ಅರ್ಧ ಕಪ್ ನೀರು ಹಾಕಿ ಗಂಟಿಲ್ಲದಂತೆ ಕಲಸಿಕೊಳ್ಳಿ.

3)ಇನ್ನೊಂದು ಪಾತ್ರೆಯಲ್ಲಿ ಒಂದೂವರೆ ಕಪ್ ನೀರು ಕುದಿಯಲು ಇಡೀ.

4)ನೀರು ಕುದಿಯಲು ಪ್ರಾರಂಭಿಸಿದಾಗ, ನೀರಲ್ಲಿ ಕಲಸಿದ ರಾಗಿ ಹಿಟ್ಟು ಹಾಕಿ.

5)ಮಗುಚುತ್ತಾ ಒಂದೈದು ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಸ್ಟವ್ ಆಫ್ ಮಾಡಿ.

6)ಸಂಪೂರ್ಣ ಬಿಸಿ ಆರಿದ ಮೇಲೆ ಉಪ್ಪು, ಮಜ್ಜಿಗೆ ಮತ್ತು ಇಂಗು ಹಾಕಿ ಕಲಸಿ.

7)ಆಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಕರಿಬೇವು ಹಾಕಿ ಮಗುಚಿ.

ಉತ್ತಮ ಮತ್ತು ಸದೃಢ ಆರೋಗ್ಯಕ್ಕೆ ವಿಶೇಷವಾಗಿ ರಾಗಿ ಉತ್ಪನ್ನಗಳನ್ನು ಬಳಸುವುದರಿಂದ ದೇಹದಲ್ಲಿನ ಉಷ್ಣತೆ ಮತ್ತು ತಾಪಮಾನ ಸಕ್ರಿಯವಾಗಿ ಕಾಯ್ದಿರಿಸುತ್ತದೆ. ದೇಹದಲ್ಲಿನ ವಿಶೇಷವಾದಂತಹ ವಿಟಮಿನ್ ಶಕ್ತಿ ಹಾಗೂ ಕ್ಯಾಲ್ಸಿಯಂ ಬಿಡುಗಡೆಗೆ ಸಹಕರಿಸುತ್ತದೆ, ದೇಹದಲ್ಲಿನ ವಿಶೇಷವಾದಂತಹ ಗುಣಲಕ್ಷಣಗಳನ್ನು ಈ ರೀತಿಯಾಗಿ ನೋಡುವುದಾದರೆ, ರಾಗಿ ಅಂತಹ ಉತ್ಪನ್ನಗಳು ಗಟ್ಟಿಮುಟ್ಟಾಗುವುದರೊಂದಿಗೆ, ಮೂಳೆಯ ಸದೃಢತೆಯು ಕೂಡ ರಾಗಿ ಸಹಕಾರಿಯಾಗುತ್ತದೆ. ರಾಗಿ ಅಂಬಲಿಯನ್ನು ನಾವು ವಿಶೇಷವಾಗಿ ತಯಾರಿಸಿ ಕುಡಿಯುವುದರಿಂದ ದೇಹದಲ್ಲಿನ ದೇಹದಾಢ್ಯತೆ ಮತ್ತು ಆಯಾಸ ಬದಲಿನ ವಿಶೇಷವಾದಂತಹ ಕ್ಯಾಲ್ಸಿಯಂ ಬಿಡುಗಡೆಗೆ ಸಹಕರಿಸುತ್ತದೆ. ಉತ್ಪನ್ನಗಳನ್ನು ವಿಶೇಷವಾಗಿ ಬಳಸುವುದರಿಂದ ಆರೋಗ್ಯ ಸುರಕ್ಷತೆ ದಡೆಗೆ ಸಹಕಾರಿಯಾಗುತ್ತದೆ.

– ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ ಕುಂದಾಪುರ .ಉಡುಪಿ ಜಿಲ್ಲೆ (ಪತ್ರಕರ್ತರು & ಅಂಕಣಕಾರರು) Mob:9632581508.(santhoshmolahalli@gmail.com)

The post ದೇಹವನ್ನು ತಂಪಾಗಿರಿಸಲು ಪ್ರತಿನಿತ್ಯ ಬಳಸಿ -“ರಾಗಿ ಅಂಬಲಿ…..! ಕೊಬ್ಬಿನ ಅಂಶವನ್ನು ನೀಗಿಸಿ , ಕಬ್ಬಿಣದ ಅಂಶವನ್ನು ದೊರೆಸುವ ಏಕ ಮಾತ್ರ ಆಹಾರ – ರಾಗಿ ಅಂಬಲಿ…. appeared first on www.buntsnow.com |  web-based media For Bunts Community.

ದೇಹದ ಭಾಗಗಳಿಗೆ ಕಾಡುವ ಕಾಯಿಲೆಗೆ ಕರಿಬೇವು ಮನೆಮದ್ದು ; ಜಠರ ಮತ್ತು ತಲೆ ಕೂದಲಿನ ಸಮಸ್ಯೆಗೆ ಕರಿಬೇವು ಔಷಧೀಯ ಸಸ್ಯಜನ್ಯ ಸಂಪತ್ತು….!
ನಮ್ಮ ಆಹಾರದಲ್ಲಿ ದಿನವೂ ಇರಲಿ ಕರಿಬೇವು….!” ಆರೋಗ್ಯ ಸಮಸ್ಯೆ ನಿವಾರಣೆಗೆ ಎಂದೂ ಕಾಡುವುದಿಲ್ಲ ದೇಹದ ಉಷ್ಣತೆಯ ಕಾವು….!” ಕರಿಬೇವು ಔಷಧೀಯ ಸಸ್ಯ…!

ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ. ಉಡುಪಿ ಜಿಲ್ಲೆ (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು)

ನಮ್ಮ ದೈನಂದಿನ ಅಡುಗೆಯಲ್ಲಿ ಬಳಸುವಂತಹ ಕರಿಬೇವು ದೇಹದಲ್ಲಿನ ಪ್ರತಿಕೂಲ ಪರಿಸ್ಥಿತಿ ಹಾಗೂ ಜಠರ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುವುದರೊಂದಿಗೆ, ಮನುಷ್ಯನ ದೇಹಕ್ಕೆ ಬೇಕಾಗುವಂತಹ ವಿಟಮಿನ್ ಗಳನ್ನು ನೀಡುವಲ್ಲಿ ಸಹಕರಿಯಾಗುತ್ತದೆ. ಮನುಷ್ಯನ ದೇಹದಲ್ಲಿನ ಉಷ್ಣಾಂಶವನ್ನು ಇರುವುದರಿಂದ ತಲೆ ಕೂದಲಿನ ಸಮಸ್ಯೆ ತಲೆ ಹೊಟ್ಟು ನಿವಾರಣೆ, ಹಾಗೂ ಅತಿ ಉಷ್ಣವದಂತಹ ಜಾಗದಲ್ಲಿನ ಭಾಗಗಳನ್ನು ವಿಶೇಷ ರೀತಿಯಲ್ಲಿ ಸಂರಕ್ಷಿಸುವುದರ ಮೂಲಕ ಕರಿಬೇವು ಕಾರ್ಯನಿರ್ವಹಿಸುತ್ತದೆ. ಮನುಷ್ಯನ ದಿನಬಳಕೆ ವಸ್ತುಗಳಲ್ಲಿ ಕರಿಬೇವು ಅಗ್ರಪಂತಿಯಲ್ಲಿ ಇರುವುದರಿಂದ ಕೃಷಿಕರು ಎಚ್ಚೆತವಾಗಿ ತಮ್ಮ ಹಿತ್ತಲು ಗಿಡಗಳಲ್ಲಿ ಕರಿಬೇವನ್ನು ಬೆಳೆಸಿ ಇತರರಿಗೆ ಮಾದರಿ ಕೂಡ ಆಗಿದ ಉದಾರಣೆ, ರಾಜ್ಯದ ವಿವಿಧ ಭಾಗದಲ್ಲಿದೆ ಕರಿಬೇವು ನಮ್ಮ ಹಿತ್ತಲಗಳಲ್ಲಿ ಒಂದು ವೈಜ್ಞಾನಿಕ ಉಪಯೋಗಗಳಲ್ಲಿ ದೈನಂದಿನ ಅಡುಗೆ ಪದಾರ್ಥದಲ್ಲಿ ಕರಿಬೇವು ಒಗ್ಗರಣೆ ಬಿದ್ದರೆ ಮಾತ್ರ ಕೆಲವರಿಗೆ ತೃಪ್ತಿದಾಯಕವಾಗುತ್ತದೆ ಅದೇ ರೀತಿ ಕರಿಬೇವಿನ ವಿವಿಧ ಉಪಯೋಗಗಳು ನಾವು ಬಳಸುವಂತಹ ರೀತಿ ವಿಭಿನ್ನತರವಾಗಿ ಇದ್ದರೆ ಪ್ರತಿ ಅಡುಗೆಯಲ್ಲಿ ಆನಂದದಾಯಕರ ಪರಿಮಳ ಸವಿಸಬಹುದು.

ಕರಿಬೇವಿನ ಔಷಧಿ ಗುಣಗಳು :

ಕರಿಬೇವು ಎಂದಾಕ್ಷಣ ಒಗ್ಗರಣೆಯ ನೆನಪಾಗುತ್ತದೆ. ಇದನ್ನು ಒಗ್ಗರಣೆ ಸೊಪ್ಪು ಎಂದು ಕೂಡ ಕರೆಯುತ್ತಾರೆ. ಕರಿಬೇವನ್ನು ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಉಪಯೋಗಿಸದಿದ್ದರೆ ರುಚಿಯೇ ಬರುವುದಿಲ್ಲ. ಇದನ್ನು ಸಾಂಬಾರಿಗೆ ಒಗ್ಗರಣೆ ಕೊಡಲು, ಬಜೆ ಮಾಡಲು, ಚಟ್ನಿ ಮಾಡಲು, ಪಲ್ಯ ಮಾಡುವಾಗ ಇದರ ಬಳಕೆ ಹೆಚ್ಚು. ಕರಿಬೇವು ಇಲ್ಲದ ಅಡುಗೆ ರುಚಿಹೀನ ಎನ್ನಬಹುದು. ಈ ಕರಿಬೇವು ಅಡುಗೆಗೆ ಮಾತ್ರ ಸೀಮಿತವಾಗಿಲ್ಲ, ಇದನ್ನು ಸೌಂಧರ್ಯ ವರ್ಧಕವಾಗಿಯೂ ಉಪಯೋಗಿಸುತ್ತಾರೆ.

ಕರಿಬೇವಿನ ಎಲೆಗಳು ಕಡು ಹಸಿರು ಬಣ್ಣದಲ್ಲಿದ್ದು,ತುಂಬಾ ಸುವಾಸನೆ ಭರಿತವಾಗಿರುತ್ತವೆ. ಕರಿಬೇವು ದೊಡ್ಡ ಮರವಾಗಿ ಬೆಳೆಯುತ್ತದೆ. ಇದು ಕಾಡಿನಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಇದನ್ನು ಮನೆ ಅಂಗಳದಲ್ಲಿಯೂ ಸುಲಭವಾಗಿ ಬೆಳೆಸಬಹುದಾಗಿದೆ. ಕರಿಬೇವಿನಲ್ಲಿ ಕಾರ್ಬೋಹೈಡ್ರೇಟ್, ಫೈಬರ್, ಕ್ಯಾಲ್ಸಿಯಿಂ, ಕಬ್ಬಿಣ, ವಿಟಮಿನ್ ಸಿ, ,ಬಿ, ಎ ಪೋಷಕಾಂಶಗಳು ಇರುತ್ತವೆ. ಇದರ ವೈಜ್ಞಾನಿಕ ಹೆಸರು ಮರಯ ಕೊನಿಗೆ (Murraya Koenigii). ಕರಿಬೇವನ್ನು ಹೆಚ್ಚು ಹೆಚ್ಚು ಆಹಾರದಲ್ಲಿ ಬಳಸುವುದು ತುಂಬಾ ಸಹಾಯಕಾರಿಯಾಗಿದೆ. ಇದು ಹೆಚ್ಚಿನ ಔಷಧಿ ಗುಣಗಳನ್ನು ಹೊಂದಿದೆ.

ಕರಿಬೇವಿನ ಔಷಧಿ ಗುಣಗಳು ಬಿಳಿ ಕೂದಲ ಸಮಸ್ಯೆಯನ್ನು ಕರಿಬೇವು ದೂರಮಾಡುತ್ತದೆದೇಹದಲ್ಲಿ ಪೋಷಕಾಂಶದ ಕೊರತೆಯಾದಾಗ ಮಕ್ಕಳಿಗೆ ಕೂದಲು ಬೇಗ ಬಿಳಿಯಾಗುತ್ತದೆ. ಇಂತಹ ಸಮಸ್ಯೆಗೆ ಕರಿಬೇವು ತುಂಬಾ ಸಹಕಾರಿಯಾಗಿದೆ. ಹಾಗು ಕೂದಲ ಬೆಳವಣಿಗೆಗೂ ಉಪಯುಕ್ತವಾಗಿದೆ .ಕರಿಬೇವಿನ ಎಲೆಗಳನ್ನು ಒಣಗಿಸಿ, ಅದನ್ನು ಕೊಬ್ಬರಿ ಎಣ್ಣೆಯಲ್ಲಿ, ಎಣ್ಣೆ ಹಸಿರು ಬಣ್ಣಕ್ಕೆ ಬರುವ ವರೆಗೂ ಕುದಿಸಬೇಕು. ನಂತರ ತಣಿಸಿ ಕೂದಲಿಗೆ ಪ್ರತಿ ವಾರಕೊಮ್ಮೆ ಹಚ್ಚುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಯಬಹುದು.

ಎಸಿಡಿಟಿಯನ್ನು ಕರಿಬೇವು ಕಡಿಮೆಮಾಡುತ್ತದೆ:-

ಕರಿಬೇವಿನ ಮರದ ತೊಗಟೆಯನ್ನ ಒಣಗಿಸಿ, ಪುಡಿಮಾಡಿಕೊಂಡು, ಒಂದು ಚಮಚ ಆ ಪುಡಿಯನ್ನು ನೀರಲ್ಲಿ ಬೆರಸಿ ಸೇವಿಸದರೆ ಎಸಿಡಿಟಿ ಕಡಿಮೆಯಾಗುತ್ತದೆ.

ಕರಿಬೇವಿನಲ್ಲಿ ವಾಯುಕಾರಕವನ್ನು ತೆಗೆದು ಹಾಕುವ ಗುಣವಿದೆ:-

1 ರಿಂದ 2 ಚಮಚದಷ್ಟು ಕರಿಬೇವಿನ ಎಲೆಯ ರಸಕ್ಕೆ, 1 ಚಮಚ ನಿಂಬೆ ರಸ ಮತ್ತು ಸಕ್ಕರೆ ಸೇರಿಸಿ ಸೇವಿಸುವುದರಿಂದ ಅಜೀರ್ಣವನ್ನು ಹೋಗಲಾಡಿಸಬಹುದು. ಅಥವಾ ಕರಿಬೇವನ್ನು ಪ್ರತಿದಿನ ಆಹಾರದಲ್ಲೂ ಕೂಡ ಉಪಯೋಗಿಸಬಹುದು.

ಬೇಧಿ, ಆಮಶಂಕೆ ನಿವಾರಣೆಗೆ ಕರಿಬೇವು ಸಹಕಾರಿ

ಎಳೆಯದಾದ ಕರಿಬೇವಿನ ಎಲೆಯನ್ನು ಜೇನು ತುಪ್ಪದೊಂದಿಗೆ ತಿನ್ನುವುದು, ಅಥವಾ ಕರಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಮಜ್ಜಿಗೆಯೊಂದಿಗೆ ಸ್ವಲ್ಪ ಶುಂಠಿ ಸೇರಿಸಿ ಕುಡಿಯುವುದರಿಂದ ಬೇಧಿ, ಆಮಶಂಕೆಯನ್ನು ನಿವಾರಿಸಬಹುದು.

ಬೊಜ್ಜು ಕರಗಿಸಲು ಕರಿಬೇವು ಸಹಕಾರಿ:-

ಕೆಲವರಿಗೆ ದೇಹದ ತೂಕ ಕಡಿಮೆ ಮಾಡುವುದು ಹೇಗೆ ಎಂಬುದೇ ದೊಡ್ಡ ಚಿಂತೆಯಾಗಿರುತ್ತದೆ. ಕರಿಬೇವು ದೇಹದಲ್ಲಿನ ಕೊಲೆಸ್ಟ್ರಾಲನ್ನು ಕಡಿಮೆ ಮಾಡುವುದರ ಮೂಲಕ ದೇಹದ ತೂಕವನ್ನು ಕಡಿಮೆಗೊಳಿಸುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ 8 ರಿಂದ 10 ತಾಜಾ ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ದೇಹದ ತೂಕ ಕಡಿಮೆ ಮಾಡಬಹುದು.

ಕರಿಬೇವು ಕಾಮಾಲೆ ರೋಗವನ್ನು ಗುಣಪಡಿಸುವ ಗುಣವನ್ನು ಹೊಂದಿದೆ

10 ರಿಂದ 12 ಕರಿಬೇವಿನ ಎಲೆಗಳನ್ನ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಏಕೆಂದರೆ ಎಲೆಗಳ ಮೇಲೆ ಸಣ್ಣ ಪುಟ್ಟ ಕಶ್ಮಲಗಳು ಅಥವಾ ಹುಳು ಹಪ್ಪಟೆಗಳು ಹರಿದಿರುವ ಸಾಧ್ಯತೆ ಇರುತ್ತದೆ. ನಂತರ ಎಲೆಗಳನ್ನು ಅರೆದು ಆ ಮಿಶ್ರಣವನ್ನು ಸುಮಾರು 60 ರಿಂದ 100 ಮೀ ಲಿ ಎಳೆನೀರಿನೊಂದಿಗೆ ಕುಡಿಯುವುದರಿಂದ ಕಾಮಾಲೆ ರೋಗವನ್ನು ಹೋಗಲಾಡಿಸಬಹುದು.

ರಕ್ತಹೀನತೆಯ ನಿವಾರಣೆಗೆ ಕರಿಬೇವು ಸಹಕಾರಿ:-

1/2 ಚಮಚ ಕರಿಬೇವು ಸೊಪ್ಪಿನ ಪುಡಿಯನ್ನು, ಜೇನು ತುಪ್ಪದ ಜೊತೆ ಸಮ ಪ್ರಮಾಣದಲ್ಲಿ ಬೆರಸಿ ಸೇವಿಸುವುದರಿಂದ ಅದರಲ್ಲಿರುವ ಕಬ್ಬಿಣದ ಅಂಶ ರಕ್ತಹೀನತೆಯನ್ನು ನಿವಾರಿಸುತ್ತದೆ.

ಕರಿಬೇವು ಕೂದಲು ಉದುರುವುದನ್ನು ತಡೆಯುತ್ತದೆ. ಪ್ರತಿನಿತ್ಯ ಕರಿಬೇವನ್ನು ಅಡುಗೆಯಲ್ಲಿ ಬಳಸುವುದರಿಂದ ವಿವಿಧ ತರಹದ ಉಷ್ಣತೆಯ ಪ್ರಕಾರ ತೆ ಕಾಯಿಲೆಗಳು ಮತ್ತು ತಲೆ ಕೂದಲಿನ ಉತ್ತಮ ಬೆಳವಣಿಗೆ ಸಹಕರಿಸುತ್ತದೆ ಅದಲ್ಲದೆ ಪ್ರತಿನಿತ್ಯ ಬಳಸುವ ಅಡುಗೆಯಲ್ಲಿ ಕರಿಬೇವು, ಸ್ವಲ್ಪ ಪ್ರಮಾಣದಲ್ಲೂ ಬಳಸುವುದು ಅತ್ಯಗತ್ಯ. ತಲೆ ಕೂದಲಿನ ಹೊಟ್ಟು ಸಮಸ್ಯೆ ,ತಲೆ ಕೂದಲಿನ ಬೆಳೆಯುವಲ್ಲಿ ಕರಿಬೇವು ವಿಶೇಷ ಪಾತ್ರ ವಹಿಸುತ್ತದೆ.

-ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ. ಉಡುಪಿ ಜಿಲ್ಲೆ (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು)mob:9632581508

The post ದೇಹದ ಭಾಗಗಳಿಗೆ ಕಾಡುವ ಕಾಯಿಲೆಗೆ ಕರಿಬೇವು ಮನೆಮದ್ದು ; ಜಠರ ಮತ್ತು ತಲೆ ಕೂದಲಿನ ಸಮಸ್ಯೆಗೆ ಕರಿಬೇವು ಔಷಧೀಯ ಸಸ್ಯಜನ್ಯ ಸಂಪತ್ತು….! appeared first on www.buntsnow.com |  web-based media For Bunts Community.

ಮಳೆಗಾಲದಲ್ಲಿ ಆರೋಗ್ಯದ ಕಡೆಗೂ ಗಮನ ಹರಿಸಬೇಕು..
ಋತು ಬದಲಾದಂತೆ ಆ ಋತುವಿಗೆ ತಕ್ಕಂತೆ ಜೀವನ ಶೈಲಿ ಬದಲಾಯಿಸಿಕೊಳ್ಳಬೇಕು. ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳದೇ ಇದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದೀಗ ಮಳೆಗಾಲ ಆರಂಭವಾಗಿದೆ. ಚಳಿಗಾಲ, ಬೇಸಗೆ ಕಾಲಕ್ಕಿಂತಲೂ ಹೆಚ್ಚಿನ ಕಾಳಜಿ ಮಳೆಗಾಲದಲ್ಲಿ ಅಗತ್ಯವಿದೆ. ಮಳೆಯನ್ನು ಸಂಭ್ರಮಿಸುವುದರೊಂದಿಗೆ ಆರೋಗ್ಯದ ಕಡೆಗೂ ಗಮನಹರಿಸಬೇಕು.

ಸಾಮಾನ್ಯವಾಗಿ ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳೂ ಹೆಚ್ಚು. ಈ ವೇಳೆ ತೇವಾಂಶದ ಪ್ರಮಾಣ ಹೆಚ್ಚಾಗಿರುವುದರಿಂದ ದೇಹದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನೀರಿನಿಂದ ಹರಡುವ ರೋಗಗಳಾದ ಡಯೇರಿಯಾ, ಕಾಲರಾ, ಜಠರ ಸಮಸ್ಯೆ, ಭೇದಿ ಹಾಗೂ ಸಾಮಾನ್ಯ ಶೀತ, ಜ್ವರ ಮತ್ತು ಸೊಳ್ಳೆಗಳಿಂದ ಉಂಟಾಗುವ ಡೆಂಘೀ ಮತ್ತು ಮಲೇರಿಯಾ ಮಳೆಗಾಲದ ಸಾಮಾನ್ಯ. ಹೀಗಾಗಿ ಆರೋಗ್ಯ ಸಮಸ್ಯೆಗಳಾಗಿವೆ. ಮಳೆಗಾಲದ ಸೋಂಕಿನಿಂದ ದೂರವಿರಲು ಮುನ್ನೆಚ್ಚರಿಕೆ ಕ್ರಮ ಅತೀ ಮುಖ್ಯವಾಗಿದೆ.

ಪರಿಸರ ಸ್ವಚ್ಛವಾಗಿಡಿ

ಸುತ್ತಮುತ್ತಲಿನ ಪರಿಸರ ನಮ್ಮ ಆರೋಗ್ಯವನ್ನು ಕೆಡಿಸುತ್ತದೆ. ನಾವು ಇರುವಲ್ಲಿ ನೀರು ನಿಂತಿದ್ದರೆ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವುದು. ಸೊಳ್ಳೆಗಳಿಂದ ರೋಗಗಳು ಹರಡುತ್ತವೆ. ಪರಿಸರದಲ್ಲಿ ನೀರು ನಿಲ್ಲದಂತೆ ಕಾಳಜಿವಹಿಸ ಬೇಕಾಗುತ್ತದೆ. ಮನೆಯ ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿಡಿ ಅಥವಾ ಕಿಟಕಿಗಳಿಗೆ ಸೊಳ್ಳೆ ಪರೆದಯನ್ನು ಹಾಕಿ, ಮನೆಗೆ ಸೊಳ್ಳೆ ಪ್ರವೇಶಿಸದಂತೆ ತಡೆಯಿರಿ. ಸೊಳ್ಳೆಗಳಿಂದ ಡೆಂಗ್ಯು, ಮಲೇರಿಯ, ಚಿಕನ್‌ ಗುನ್ಯಾ, ಆನೆ ಕಾಲು ರೋಗಗಳು ಮತ್ತು ನೊಣಗಳಿಂದ ಕಾಲರಾ ಹರಡುತ್ತದೆ.

ಮುನ್ನೆಚ್ಚರಿಕೆಗಳು ಕ್ರಮ ಸೂಕ್ತ ಆಹಾರ ಸೇವಿಸಿ

ಮಳೆಗಾಲದಲ್ಲಿ ನೀರಿನಿಂದ ಯಾವ ರೀತಿಯ ರೋಗಗಳು ಹರಡುತ್ತವೆ ಎಂದು ಊಹಿಸುವುದು ಬಹಳ ಕಷ್ಟ. ಹೀಗಾಗಿ ಹೊರಗಿನ ಆಹಾರಗಳನ್ನು ಸೇವಿಸುವುದು ಕಡಿಮೆ ಮಾಡುವುದು ಉತ್ತಮ. ದೇಹದ ರೋಗನಿರೋಧಕತೆ ಹೆಚ್ಚಿಸಲು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು. ರೋಗಾಣುಗಳ ಬಾಧೆ ನಿವಾರಿಸಲು ಬೇಯಿಸುವ ಮುನ್ನ ತರಕಾರಿ, ಸೊಪ್ಪುಗಳನ್ನು ಸರಿಯಾಗಿ ಉಪ್ಪು ನೀರಿನಲ್ಲಿ ತೊಳೆಯುವುದು ಉತ್ತಮ. ಬಿಸಿಯಾದ ಆಹಾರ ಸೇವಿಸಬೇಕು. ಗಿಡಮೂಲಿಕೆಗಳ ಚಹಾವನ್ನು ಸೇವಿಸಬೇಕು. ಸಾಕಷ್ಟು ಶುದ್ಧ ನೀರನ್ನು ಕುಡಿಯಿರಿ. ಬೆಳ್ಳುಳ್ಳಿ, ಕೆಂಪು ಮೆಣಸು ಶುಂಠಿ, ಇಂಗು, ಜೀರಿಗೆ, ಅರಿಶಿಣ ಮತ್ತು ಕೊತ್ತಂಬರಿಗಳನ್ನು ಆಹಾರದಲ್ಲಿ ಹೆಚ್ಚು ಬಳಸಬೇಕು.

ಮನೆ ಮದ್ದು

ಮಳೆಗಾಲದಲ್ಲಿ ಶೀತ, ಕೆಮ್ಮು , ತಲೆನೋವು ಸಾಮಾನ್ಯವಾಗಿರುತ್ತದೆ. ಒಬ್ಬರಿಗೆ ಬಂದರೆ ಸಾಕು ಮನೆ ಮಂದಿಯನ್ನೆಲ್ಲಾ ಕಾಡುತ್ತದೆ. ಹಾಗಾಗಿ ನೆಗಡಿ, ಕೆಮ್ಮು ಬಾರದಂತೆ ಮುನ್ನೆಚ್ಚರಿಕೆಯ ಕ್ರಮ ವಹಿಸುವುದು ಮುಖ್ಯ. ಕೆಮ್ಮು, ನೆಗಡಿ ಉಂಟಾದರೆ ಮನೆಯಲ್ಲಿಯೇ ಔಷಧಿ ತಯಾರಿಸಿಕೊಂಡು ಗುಣಮುಖರಾಗಬಹುದು.

·  ತುಳಸಿ ಎಲೆಯನ್ನು ಬಿಸಿನೀರಿನಲ್ಲಿ ಹಾಕಿ ಕುಡಿಯುವುದರಿಂದ ನೆಗಡಿ, ಕೆಮ್ಮು ಬರುವುದಿಲ್ಲ.

·  ಅಲರ್ಜಿ ಸಮಸ್ಯೆ ಇದ್ದರೆ ಕರವಸ್ತ್ರಕ್ಕೆ ನೀಲಗಿರಿ ಎಣ್ಣೆ ಹಾಕಿ ವಾಸನೆ ತೆಗೆದುಕೊಳ್ಳಿ. ಇದರಿಂದ ಸೀನು ಬರುವುದಿಲ್ಲ.

·  ಮುಖ ತೊಳೆಯಲು, ಸ್ನಾನ ಮಾಡಲು ಬಿಸಿನೀರನ್ನೇ ಬಳಸಿ.

·  ಒಂದು ಚಮಚ ಜೇನಿಗೆ ಸ್ವಲ್ಪ ಕರಿಮೆಣಸಿನ ಪುಡಿ ಮಾಡಿ ಅದಕ್ಕೆ ತುಳಸಿ ರಸ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ರಾತ್ರಿ ಮಲಗುವ ಮೊದಲು ಸೇವಿಸಿ.

·  ಒಂದು ಲೋಟ ಹಾಲಿಗೆ ಸ್ವಲ್ಪ ಅರಿಶಿಣ ಮತ್ತು ಒಂದು ಎಸಳು ಬೆಳ್ಳುಳ್ಳಿ ಹಾಕಿ ಕುದಿಸಿ ಕುಡಿಯಿರಿ.

·  ಶುಂಠಿ ಕಾಫಿ ಮಾಡಿ ಕುಡಿದರೆ ಶೀತ, ಕೆಮ್ಮು, ತಲೆ ನೋವು ಕಡಿಮೆಯಾಗುತ್ತದೆ. ಕಾಫಿ ಕುಡಿಯದವರು, ಶುಂಠಿ ಸೇರಿಸಿ ಟೀ ಮಾಡಿ ಕುಡಿಯಬಹುದು.

The post ಮಳೆಗಾಲದಲ್ಲಿ ಆರೋಗ್ಯದ ಕಡೆಗೂ ಗಮನ ಹರಿಸಬೇಕು.. appeared first on www.buntsnow.com |  web-based media For Bunts Community.

ಮಳೆಗಾಲದ ಕೆಮ್ಮು, ಶೀತಕ್ಕೆ ಇದು ತುಂಬಾ ಉತ್ತಮ ಔಷಧ.
ಮಳೆಗಾಲ ಬಂದಾಗ ಮನಸ್ಸುಗಳು ಚೈತನ್ಯದಿಂದ ನಲಿಯುತ್ತವೆ. ಮಳೆಗಾಲ ಬಂದರೆ ಆರೋಗ್ಯ ಸಮಸ್ಯೆಗಳೂ ಅದರೊಂದಿಗೆ ಆಗಮನಿಸುತ್ತವೆ. ಸ್ವಲ್ಪ ಹೊತ್ತು ಮಳೆಯಲ್ಲಿದ್ದರೆ ಸಾಕು ಥಂಡಿ ಆವರಿಸಿ ಶೀತವಾಗಿ ಬಿಡುತ್ತದೆ. ಶೀತವನ್ನು ಕೆಮ್ಮು, ಜ್ವರ ಹಿಂಬಾಲಿಸುತ್ತವೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಈ ಸಮಸ್ಯೆಗಳು ಜನರ ಜೀವಹಿಂಡಿ ಬಿಡುತ್ತವೆ. ಇದರೊಂದಿಗೆ ವೈರಲ್‌ ಹಾಗೂ ಬ್ಯಾಕ್ಟೀರಿಯಾದ ಸೋಂಕುಗಳು ಹೆಚ್ಚಾಗುತ್ತವೆ. ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಬಹು ಬೇಗನೇ ಕಡಿಮೆಗೊಂಡು ಶೀತ, ಜ್ವರದಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಮಳೆಗಾಲ ಬಂದಾಗ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮಾಡಿದರೆ ಶೀತದಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಬರದಂತೆ ತಡೆಗಟ್ಟಬಹುದು. ಅದರಲ್ಲೂ ನೈಸರ್ಗಿಕ ದೊರಕುವ ಮನೆ ಮದ್ದುಗಳನ್ನು ಸಿದ್ದಪಡಿಸಿಕೊಂಡ ಸೇವಿಸಿದ್ದೇ ಆದಲ್ಲಿ ಈ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಆದರೆ ಇಂದಿನ ಮನೆಗಳಲ್ಲಿ ಹಿರಿಯರಿಲ್ಲದ ಕಾರಣ ಶೀತದಂತಹ ಸಮಸ್ಯೆಗಳಿಗೆ ಯಾವ ಮನೆ ಮದ್ದುಗಳು ಒಳ್ಳೆಯದು ಎಂದು ತಿಳಿದುಕೊಳ್ಳುವುದು ಕಷ್ಟವಾಗಬಹುದು.

ಹಿಂದೆ ಇಂತಹ ಸಾಮಾನ್ಯ ಕಾಯಿಲೆಗಳಿಗೆ ಯಾರೂ ಕೂಡ ವೈದ್ಯರ ಬಳಿ ಓಡುತ್ತಿರಲಿಲ್ಲ. ಬದಲಾಗಿ ಮನೆಯ ಅಡುಗೆ ಮನೆಯಲ್ಲೇ ಇರುವ, ಔಷಧೀಯ ಗುಣಗಳನ್ನು ಹೊಂದಿರುವ ವಸ್ತುಗಳನ್ನೇ ಉಪಯೋಗಿಸುತ್ತಿದ್ದರು. ಆದರೆ ಇಂದು ಎಲ್ಲದ್ದಕ್ಕೂ ವೈದ್ಯರ ಸಲಹೆಗಳೇ ಬೇಕು. ಈ ಔಷಧಗಳು ಕಾಯಿಲೆಗಳನ್ನು ಗುಣಪಡಿಸಬಹುದು. ಆದರೆ ಇನ್ನೊಂದು ರೀತಿಯಲ್ಲಿ ದೇಹಕ್ಕೆ ಮಾರಕವಾಗಬಹುದು. ಶೀತ, ಕೆಮ್ಮಿನಂತಹ ಸಾಮಾನ್ಯ ಕಾಯಿಲೆಗೆ ಮನೆಯಲ್ಲಿ ರಾಮಬಾಣವಿದೆ. ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇಲ್ಲಿದೆ ಸುಲಭ ದಾರಿ.

ಈರುಳ್ಳಿ ನೀರು!

ಪ್ರತಿಯೊಂದು ಆಹಾರಕ್ಕೂ ನಾವು ಈರುಳ್ಳಿಯನ್ನು ಸಾಮಾನ್ಯವಾಗಿ ಬಳಸುತ್ತವೆ. ನೀರಿನಲ್ಲಿ ಮೊದಲೇ ನೆನೆಸಿದ ಈರುಳ್ಳಿಯಿಂದ ತಯಾರಿಸಿದ ಮಿಶ್ರಣವು ನಿಮ್ಮ ದೇಹವನ್ನು ರೀಜಾರ್ಜ್‌ ಮಾಡಲು ಹಾಗೂ ಮಳೆಗಾಲದಲ್ಲಿ ವೈರಲ್‌ ಕಾಯಿಲೆಗಳಿಂದ ಸುರಕ್ಷಿತವಾಗಿರಿಸಲು ಅದ್ಭುತವಾದ ಮಾರ್ಗ. ಶೀತ, ಕೆಮ್ಮು ಅಥವಾ ಇಂತಹ ಪ್ರಮುಖ ಸೋಂಕುಗಳನ್ನು ನಿವಾರಿಸಲು ಇದು ಉತ್ತಮ.

ತಯಾರಿ ಹೇಗೆ?

ಒಂದು ಈರುಳ್ಳಿಯನ್ನು ತೆಗೆದುಕೊಂಡು ಸಣ್ಣಕ್ಕೆ ತುಂಡರಿಸಿಕೊಳ್ಳಿ. ಅನಂತರ ಅದನ್ನು ಒಂದು ಪಾತ್ರಕ್ಕೆ ನೀರು ಹಾಕಿ ತುಂಡರಿಸಿದ ಈರುಳ್ಳಿನ್ನು ಅದಕ್ಕೆ ಹಾಕಿ 6-8 ಗಂಟೆಗಳ ಕಾಲ ನೆನೆಯಲು ಬಿಡಿ. ಅಷ್ಟು ಸಮಯ ನೆನೆದ ಬಳಿಕ ದಿನಕ್ಕೆನ ಎರಡು ಬಾರಿ 2-3 ಚಮಚ ಈ ನೀರನ್ನು ಕುಡಿಯಿರಿ. ಈ ಪಾನೀಯವನ್ನು ಮಕ್ಕಳಿಗೂ ನೀಡಬಹುದು.ಆದರೆ ಡೋಸೇಜ್‌ ಕಡಿಮೆ ಮಾಡಬೇಕು. ರುಚಿಗಾಗಿ ಜೇನು ತುಪ್ಪ ಸೇರಿಸಬಹುದು.

The post ಮಳೆಗಾಲದ ಕೆಮ್ಮು, ಶೀತಕ್ಕೆ ಇದು ತುಂಬಾ ಉತ್ತಮ ಔಷಧ. appeared first on www.buntsnow.com |  web-based media For Bunts Community.

ಮಧುಮೇಹಿಗಳ ರಾಷ್ಟ್ರವಾಗುತ್ತಿದೆ ಭಾರತ
ಆಧುನಿಕ ಜೀವನ ಶೈಲಿ, ಜಂಕ್‌ ಫ‌ುಡ್‌ ಸೇವನೆ, ವ್ಯಾಯಾಮದ ಕೊರತೆ, ಒತ್ತಡದ ಬದುಕು ಇವೆಲ್ಲವುಗಳನ್ನು ನಿಭಾಯಿಸುವಲ್ಲಿ ವಿಫ‌ಲವಾಗಿರುವ ಭಾರತವು ಇಂದು ಮಧುಮೇಹಿಗಳ ರಾಷ್ಟ್ರವಾಗುತ್ತಿದೆ. ದಿ ಲ್ಯಾನ್‌ಸೆಟ್‌ ಜರ್ನಲ್‌ ಇತ್ತೀಚಿಗೆ ಪ್ರಕಟಿಸಿದ ಸಮೀಕ್ಷೆಯ ವರದಿಯಲ್ಲಿ ಈ ಮಾಹಿತಿ ಹೊರಬಿದ್ದಿದೆ. ಭಾರತದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿದ ಆರೋಗ್ಯ ಸಮೀಕ್ಷೆಯಲ್ಲಿ ದೇಶದಲ್ಲಿ ಮಧುಮೇಹ ಸಮಸ್ಯೆಗೆ ಒಳಗಾಗಿರುವವರ ಸಂಖ್ಯೆ ಅಧಿಕವಾಗಿದ್ದು ಈ ನಿಟ್ಟಿನಲ್ಲಿ ಶೀಘ್ರವಾಗಿ ಕ್ರಮ ತೆಗೆದು ಕೊಳ್ಳಬೇಕು ಎಂದು ವರದಿ ಹೇಳಿದೆ. ಏನಿದು ವರದಿ ? ವರದಿಯಲ್ಲೇನಿದೆ? ಎಂಬ ಮಾಹಿತಿ ಇಲ್ಲಿದೆ.

ಯಾರ ಸಮೀಕ್ಷೆ ?

ಮದ್ರಾಸ್‌ ಡಯಾಬಿಟಿಕ್ಸ್‌ ರಿಸರ್ಚ್‌ ಫೌಂಡೇಶನ್‌ (ಎಂಡಿಆರ್‌ಆಫ್ ), ಇಂಡಿಯನ್‌ ಕೌನ್ಸಿಲ್‌ ಆಫ್ ಮೆಡಿಕಲ್‌ ರಿಸರ್ಚ್‌ (ಐಸಿಎಂಆರ್‌), ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಜಂಟಿಯಾಗಿ ಮಧುಮೇಹ ಹಾಗೂ ಕ್ರೋನಿಕ್‌ ನಾನ್‌ ಕಮ್ಯುನಿಕೇಬಲ್‌ ಡಿಸೀಸ್‌ನ (ಎನ್‌ಸಿಡಿ ) ಮೇಲೆ ಕೈಗೊಂಡ ದೇಶದ ಅತೀ ದೊಡ್ಡ ಸಮೀಕ್ಷೆ ಇದಾಗಿದೆ.

ಗೋವಾದಲ್ಲಿ ಅಧಿಕ

ಈ ಸಮೀಕ್ಷೆಯ ಪ್ರಕಾರ 2019-2021ರ ನಡುವೆ ಭಾರತದಲ್ಲಿ 101 ಮಿಲಿಯನ್‌ ಮಧುಮೇಹ ಹಾಗೂ 136 ಮಿಲಿಯನ್‌ ಜನರು ಪೂರ್ವ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಾಜ್ಯವಾರು ಸಮೀಕ್ಷೆಯಲ್ಲಿ ಗೋವಾ ಗರಿಷ್ಠ ಅಂದರೆ ಶೇ.26.4 ರಷ್ಟು ಮಧುಮೇಹಿಗಳನ್ನು ಒಳಗೊಂಡಿದ್ದು ಮೊದಲ ಸ್ಥಾನದಲ್ಲಿದ್ದರೆ, ಅನಂತರದ ಸ್ಥಾನದಲ್ಲಿ ಪುದುಚೇರಿ, ಕೇರಳ (ಶೇ.25) ರಾಜ್ಯಗಳಿವೆ. ಇನ್ನು ಕನಿಷ್ಠ ಅಂದರೆ ಶೇ.4.8ರಷ್ಟು ಮಧುಮೇಹಿಗಳನ್ನು ಹೊಂದಿರುವ ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ. ವರದಿಯ ಪ್ರಕಾರ ಭಾರತದ ಗ್ರಾಮೀಣ ಭಾಗದಲ್ಲಿ ಮುಂದಿನ 5 ವರ್ಷಗಳಲ್ಲಿ ಈ ಪರಿಸ್ಥಿತಿ ತೀವ್ರಸ್ತರಕ್ಕೆ ಹೋಗಲಿದೆ ಎಂದು ಎಚ್ಚರಿಸಿದೆ. ಜತೆಗೆ ವಿಶ್ವಸಂಸ್ಥೆಯು ಕುರುಡುತನ, ಕಿಡ್ನಿ ವೈಫ‌ಲ್ಯ, ಹೃದಯಾಘಾತ, ಪಾರ್ಶ್ವವಾಯು ಅಂತಹ ಸಮಸ್ಯೆಗಳಿಗೆ ಮಧುಮೇಹವೇ ಮೂಲ ಕಾರಣವಾಗಬಹುದು ಎಂದು ಎಚ್ಚರಿಸಿದೆ.

ಮಧುಮೇಹ ದೊಂದಿಗೆ ದೇಶದಲ್ಲಿ 315 ಮಿಲಿಯನ್‌ ಮಂದಿ ಅಧಿಕ ರಕ್ತದೊತ್ತಡ, 254 ಮಿಲಿಯನ್‌ ಬೊಜ್ಜಿನ ಹಾಗೂ 351 ಮಿಲಿಯನ್‌ ಹೊಟ್ಟೆಯ ಬೊಜ್ಜಿನ ಸಮಸ್ಯೆಗೆ ಒಳಗಾಗಿದ್ದಾರೆ ಅಲ್ಲದೇ 213 ಮಿಲಿಯನ್‌ ಜನರು ಹೈಪರ್‌ಕೊಲೆಸ್ಟ್ರಾಲ್‌ ಹಾಗೂ 185 ಮಿಲಿಯನ್‌ ಮಂದಿ ಅಧಿಕ ಎಲ್‌ಡಿಎಲ್‌ ಕೊಲೆಸ್ಟ್ರಾಲ್‌ನ್ನು ಹೊಂದಿದ್ದಾರೆ ಎಂದು ವರದಿಯಲ್ಲಿದೆ.

ಮಧುಮೇಹ ಹಾಗೂ ಎನ್‌ಸಿಡಿ

ಸಮಸ್ಯೆಯು ದೇಶದಲ್ಲಿ ಊಹಿಸಿದ್ದಕ್ಕಿಂತ ಹೆಚ್ಚಿದ್ದು, ಕೆಲವು ರಾಜ್ಯಗಳಲ್ಲಿ ಇದು ಅಧಿಕ ವಾಗುವ ಲಕ್ಷಣಗಳಿವೆ ಎಂದು ವರದಿ ಉಲ್ಲೇಖೀಸಿದೆ. ಈ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ರಾಜ್ಯವಾರು ಯೋಜನೆಗಳನ್ನು ಶೀಘ್ರವಾಗಿ ರೂಪಿಸುವ ಅಗತ್ಯವಿದೆ ಎಂದು ಸಂಶೋಧನಕಾರರು ಅಭಿಪ್ರಾಯಪಟ್ಟಿದ್ದಾರೆ.

The post ಮಧುಮೇಹಿಗಳ ರಾಷ್ಟ್ರವಾಗುತ್ತಿದೆ ಭಾರತ appeared first on www.buntsnow.com |  web-based media For Bunts Community.