ಅಂಕಣ Archives - www.buntsnow.com | web-based media For Bunts Community

ತುಳುವರ ಕಾಲಜ್ಞಾನದ ಜೈವ ವಿಜ್ಞಾನ : ಆಟಿ ಮತ್ತು ಸೋಣ
ತುಳುನಾಡಿನ ಕಾಲಜ್ಞಾನವು ಕೇವಲ ತಿಂಗಳುಗಳ ಲೆಕ್ಕಾಚಾರವಲ್ಲ. ಅದು ಪ್ರಕೃತಿ, ಕೃಷಿ, ಆಹಾರ, ಆರೋಗ್ಯ ಮತ್ತು ಮಾನವ ಜೀವನಶೈಲಿಯನ್ನು ಒಂದೇ ವ್ಯವಸ್ಥೆಯಾಗಿ ನೋಡುವ ಜೀವನದರ್ಶನವಾಗಿದೆ. ಈ ವ್ಯವಸ್ಥೆಯಲ್ಲಿ ಆಟಿ ಮತ್ತು ಸೋಣ ಎರಡು ಪ್ರಮುಖ ಅಧ್ಯಾಯಗಳಾಗಿವೆ. ಒಂದು ದೇಹವನ್ನು ಪ್ರಕೃತಿಯೊಂದಿಗೆ ಹೊಂದಿಸಿಕೊಳ್ಳುವ ಕಾಲವಾದರೆ, ಇನ್ನೊಂದು ದೇಹಕ್ಕೆ ಹೊಸ ಶಕ್ತಿ ಮತ್ತು ಸಮೃದ್ಧಿಯನ್ನು ತುಂಬುವ ಕಾಲವಾಗಿದೆ. ಮಲಯಾಳದಲ್ಲಿ ಇದೇ ತಿಂಗಳನ್ನು ಕರ್ಕಟಕಂ ಮತ್ತು ಚಿಂಗಂ ಎಂದು ಕರೆಯುತ್ತಾರೆ. ತುಳುನಾಡಿನ ಆಟಿ ಮತ್ತು ಕೇರಳದ ಕರ್ಕಟಕಂ ಒಂದೇ ಸೌರ ಮಾಸವಾಗಿದ್ದು, ಎರಡೂ ಪ್ರದೇಶಗಳಲ್ಲಿ ಇದನ್ನು ಋತುಬದಲಾವಣೆಗೆ ಹೊಂದಿಕೊಳ್ಳುವ ಅವಧಿಯಾಗಿ ಪರಿಗಣಿಸಲಾಗಿದೆ. ತುಳುನಾಡಿನಲ್ಲಿ ಆಟಿ ಗಂಜಿ, ಆಟಿ ಕಷಾಯ ಮತ್ತು ಋತುಸಹಜ ಸೊಪ್ಪುಗಳಿಗೆ ಮಹತ್ವವಿದ್ದರೆ, ಕೇರಳದಲ್ಲಿ ಕರ್ಕಟಕ ಗಂಜಿ ಮತ್ತು ಆಯುರ್ವೇದದ ಋತುಚರ್ಯೆ ಬೆಳವಣಿಗೆಯಾಯಿತು. ದಕ್ಷಿಣ ಪಶ್ಚಿಮ ಮಾರುತ ಮಳೆಯ ಸಮಯದಲ್ಲಿ ಪ್ರಕೃತಿಯಲ್ಲಿ ಮಹತ್ತರ ಬದಲಾವಣೆಗಳು ನಡೆಯುತ್ತವೆ. ಇದೇ ಅವಧಿಯಲ್ಲಿ ಖಗೋಳಶಾಸ್ತ್ರದ ಪ್ರಕಾರ ಭೂಮಿಯು ತನ್ನ ಕಕ್ಷೆಯಲ್ಲಿ ಸೂರ್ಯನಿಂದ ಅತ್ಯಂತ ದೂರದ ಸ್ಥಾನವಾದ ಅಪ್ಹೀಲಿಯನ್ (Aphelion) ಸಮೀಪದಲ್ಲಿರುತ್ತದೆ. ಆದಾಗ್ಯೂ, ಮಳೆ, ಹೆಚ್ಚಿದ ಆರ್ದ್ರತೆ, ತೇವಾಂಶ ಮತ್ತು ಋತುಬದಲಾವಣೆಯ ಪರಿಣಾಮವಾಗಿ ಪ್ರಕೃತಿಯಲ್ಲೂ ಹಾಗೂ ಮಾನವ ದೇಹದಲ್ಲೂ ಗಮನಾರ್ಹ ಬದಲಾವಣೆಗಳು ಉಂಟಾಗುತ್ತವೆ. ಬೀಜಗಳು ಮೊಳಕೆಯೊಡೆಯುತ್ತವೆ, ಕಾಡು ಸೊಪ್ಪುಗಳು ಬೆಳೆಯುತ್ತವೆ, ಹೊಲಗಳಲ್ಲಿ ಭತ್ತ ಬೇರುಬಿಡುತ್ತದೆ. ಆದ್ದರಿಂದ ಆಟಿಯನ್ನು ಜೀವ ಮರುಸೃಷ್ಟಿಯ ಕಾಲವೆಂದು ಕರೆಯಬಹುದು. ಪ್ರಕೃತಿಯಲ್ಲಿ ನಡೆಯುವ ಈ ಬದಲಾವಣೆಗಳು ಮಾನವನ ಆರೋಗ್ಯದಲ್ಲಿಯೂ ಪರಿಣಾಮ ಬೀರುತ್ತವೆ ಎಂಬುದನ್ನು ತುಳುವರು ತಮ್ಮ ಅನುಭವದಿಂದ ಅರಿತಿದ್ದರು. ತುಳುವರ ತತ್ವಚಿಂತನೆಯ ಪ್ರಕಾರ, ಪ್ರಕೃತಿಯೇ ಈ ಸಮಯದಲ್ಲಿ ದೇಹವನ್ನು ಶುದ್ಧೀಕರಿಸಿ ಹೊಸ ಚೈತನ್ಯವನ್ನು ನೀಡುವ ಪ್ರಕ್ರಿಯೆಯನ್ನು ಆರಂಭಿಸುತ್ತದೆ. ಈ ಸಂದರ್ಭದಲ್ಲಿ ದೇಹದಲ್ಲಿ ಆಯಾಸ, ನೋವು, ಜೀರ್ಣಕ್ರಿಯೆಯ ಏರುಪೇರು ಹಾಗೂ ಆರೋಗ್ಯದಲ್ಲಿ ಬದಲಾವಣೆಗಳು ಕಂಡುಬರಬಹುದು ಎಂಬುದು ಜನಪದ ಅನುಭವವಾಗಿತ್ತು. ಆದ್ದರಿಂದಲೇ ಅವರು ತಮ್ಮ ಆಹಾರ ಮತ್ತು ಜೀವನಕ್ರಮವನ್ನು ಋತುಮಾನಕ್ಕೆ ಅನುಗುಣವಾಗಿ ಬದಲಾಯಿಸುತ್ತಿದ್ದರು.

ಆಟಿ ತಿಂಗಳಲ್ಲಿ ಸಾಮಾನ್ಯ ದಿನಗಳಂತೆ ಆಹಾರ ಸೇವಿಸಿದರೆ ದೇಹ ಮತ್ತಷ್ಟು ಅಸಮತೋಲನಗೊಳ್ಳುತ್ತದೆ ಎಂಬ ನಂಬಿಕೆ ಇತ್ತು. ಆಯುರ್ವೇದದ ಪ್ರಕಾರ ವರ್ಷಾ ಋತುವಿನಲ್ಲಿ ಜೀರ್ಣಾಗ್ನಿ ಕ್ಷೀಣಿಸಬಹುದು ಮತ್ತು ವಾತ, ಪಿತ್ತ, ಕಫಗಳ ಸಮತೋಲನದಲ್ಲಿ ವ್ಯತ್ಯಾಸ ಉಂಟಾಗಬಹುದು ಎಂದು ವಿವರಿಸಲಾಗಿದೆ. ಆದ್ದರಿಂದ ದೇಹದ ಸಮತೋಲನವನ್ನು ಕಾಪಾಡುವ ಉದ್ದೇಶದಿಂದ ಆಟಿ ತಿಂಗಳಲ್ಲಿ ಆಹಾರದಲ್ಲಿ ಸಂಯಮ ಪಾಲಿಸಲಾಗುತ್ತಿತ್ತು. ಪ್ರಕೃತಿಯಲ್ಲಿ ಸಹಜವಾಗಿ ಬೆಳೆಯುವ ಸೊಪ್ಪುಗಳು, ತರಕಾರಿಗಳು, ಆಟಿ ಗಂಜಿ, ಆಟಿ ಕಷಾಯ ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸುವ ಮೂಲಕ ದೇಹವನ್ನು ಮುಂದಿನ ಋತುಗಳಿಗೆ ಸಜ್ಜುಗೊಳಿಸುವ ಪದ್ಧತಿ ರೂಪುಗೊಂಡಿತ್ತು. ತುಳುನಾಡಿನ ತತ್ವಚಿಂತನೆಯ ಪ್ರಕಾರ ಆಟಿ ತಿಂಗಳು ದೇಹವನ್ನು ಶುದ್ಧೀಕರಿಸುವ ಅವಧಿಯಾಗಿದೆ. ಇದನ್ನು ಆಧುನಿಕ ವೈದ್ಯಕೀಯದ “ಡಿಟಾಕ್ಸ್” ಎಂಬ ಪದದೊಂದಿಗೆ ನೇರವಾಗಿ ಸಮೀಕರಿಸ ಬಹುದು. ಋತುಸಹಜ ಜೀವನಶೈಲಿಯ ಮೂಲಕ ದೇಹವನ್ನು ಹೊಸ ಪರಿಸರಕ್ಕೆ ಹೊಂದಿಸುವ ಜನಪದ ಆರೋಗ್ಯ ಜ್ಞಾನವೆಂದು ಅರ್ಥೈಸಬಹುದು. ಇಂದಿನ ಪೌಷ್ಟಿಕ ವಿಜ್ಞಾನವೂ ಸ್ಥಳೀಯ, ಋತುಸಹಜ ಮತ್ತು ವೈವಿಧ್ಯಮಯ ಆಹಾರ ಆರೋಗ್ಯಕ್ಕೆ ಅನುಕೂಲಕರವೆಂದು ಒಪ್ಪಿಕೊಳ್ಳುತ್ತದೆ. ಆದ್ದರಿಂದ ಆಟಿಯ ಆಹಾರ ಪದ್ಧತಿಯನ್ನು ಅನುಭವದ ಆಧಾರದ ಮೇಲೆ ರೂಪುಗೊಂಡ ಜನಪದ ಆರೋಗ್ಯ ವಿಜ್ಞಾನವಾಗಿ ಅಧ್ಯಯನ ಮಾಡುವ ಅಗತ್ಯವಿದೆ.

ತುಳುವರು ಆಟಿಯನ್ನು “ಬಂಞದ ತಿಂಗಳು” ಎಂದು ಕರೆಯುತ್ತಾರೆ. ಆದರೆ ಇದರ ಅರ್ಥ ಆಹಾರದ ಕೊರತೆ ಎಂಬುದಲ್ಲ. ದೇಹವನ್ನು ಆರೋಗ್ಯಪೂರ್ಣವಾಗಿಡಲು ಹೆಚ್ಚು ಜಾಗ್ರತೆ, ಸಂಯಮ ಮತ್ತು ಶಿಸ್ತು ಪಾಲಿಸಬೇಕಾದ ದಿನಗಳು ಎಂಬುದೇ ಅದರ ಅರ್ಥ. ಹೀಗಾಗಿ ಆಟಿ ಕಷ್ಟದ ತಿಂಗಳಲ್ಲ; ಅದು ಹನ್ನೊಂದು ತಿಂಗಳ ಜೀವನಶೈಲಿಯ ನಂತರ ದೇಹವನ್ನು ಮರುಸಜ್ಜುಗೊಳಿಸಿ ಇನ್ನೊಂದು ವರ್ಷ ಆರೋಗ್ಯದಿಂದ ಬದುಕಲು ಸಿದ್ಧಗೊಳಿಸುವ ಬದುಕುಳಿಯುವ (Survival) ತಿಂಗಳು. ಈ ಸಂದರ್ಭದಲ್ಲಿ ಪಾಲೆ ಕಷಾಯ ಸೇರಿದಂತೆ ವಿವಿಧ ಔಷಧೀಯ ಕಷಾಯಗಳನ್ನು ಸೇವಿಸುವ ಸಂಪ್ರದಾಯವಿತ್ತು. ಜನಪದ ನಂಬಿಕೆಯ ಪ್ರಕಾರ ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತದೆ. ಈ ನಂಬಿಕೆಯನ್ನು ಆಧುನಿಕ ವೈದ್ಯಕೀಯದಲ್ಲಿ ಕೂಡ ಸಾಬೀತು ಆಗಿದ್ದು ಇನ್ನಷ್ಟು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಅಗತ್ಯವಿದೆ.

ಆಟಿ ತಿಂಗಳಲ್ಲಿ ಆಟಿಕಳಂಜ ಮನೆಮನೆಗೆ ಬಂದು ಮಾರಿಯನ್ನು ಕಳೆಯುವ ಆಚರಣೆ ನಡೆಯುತ್ತದೆ. ಇದು ಕೇವಲ ಧಾರ್ಮಿಕ ಆಚರಣೆಯಲ್ಲ; ಜನರಲ್ಲಿ ಆತ್ಮಸ್ಥೈರ್ಯ, ಧೈರ್ಯ, ಆಶಾಭಾವನೆ ಮತ್ತು ಹೊಸ ಬದುಕಿನ ವಿಶ್ವಾಸವನ್ನು ಮೂಡಿಸುವ ಸಾಮಾಜಿಕ ಸಾಂಸ್ಕೃತಿಕ ವ್ಯವಸ್ಥೆಯಾಗಿದೆ. ಆಟಿ ತಿಂಗಳ ನಂತರ ಬರುವ ಸೋಣ ತುಳುವರ ಕಾಲಜ್ಞಾನದಲ್ಲಿ ಸಮೃದ್ಧಿಯ ಸಂಕೇತವಾಗಿದೆ. ಆಟಿಯಲ್ಲಿ ದೇಹ ಸಂಯಮ ಮತ್ತು ಶುದ್ಧೀಕರಣದ ಹಂತವನ್ನು ದಾಟಿದ ನಂತರ, ಸೋಣದಲ್ಲಿ ಮತ್ತೆ ದೇಹಕ್ಕೆ ಶಕ್ತಿ, ಉಲ್ಲಾಸ ಮತ್ತು ಪೌಷ್ಟಿಕಾಂಶಗಳನ್ನು ನೀಡುವ ಜೀವನಚಕ್ರ ಆರಂಭವಾಗುತ್ತದೆ. ಇಂದಿಗೂ ತುಳುನಾಡಿನ ಕೆಲವು ಕಡೆಗಳಲ್ಲಿ ಸೋಣ ಶನಿವಾರ ಉಣ್ಪುನೆ, ಸೋಣ ಸೋಮವಾರ ಉಣ್ಪುನೆ ಮತ್ತು ಸೋಣ ಶುಕ್ರವಾರ ಉಣ್ಪುನೆ ಎಂಬ ವಿಶೇಷ ಭೋಜನದ ಸಂಪ್ರದಾಯ ಜೀವಂತವಾಗಿದೆ. ಈ ವಿಶೇಷ ಊಟಗಳು ಆಟಿಯ ನಂತರ ದೇಹಕ್ಕೆ ವೈವಿಧ್ಯಮಯ ಪೌಷ್ಟಿಕಾಂಶಗಳನ್ನು ಒದಗಿಸುವ ಜನಪದ ಆರೋಗ್ಯ ಪದ್ಧತಿಯ ಭಾಗವೆಂದು ಅರ್ಥೈಸಬಹುದು.

ಕೇರಳದಲ್ಲಿ ಇದೇ ಅವಧಿಯನ್ನು ಓಣಂ ಹಬ್ಬದ ಮೂಲಕ ಆಚರಿಸಲಾಗುತ್ತದೆ. ಓಣಸದ್ಯೆ ಮತ್ತು ತುಳುನಾಡಿನ ಸೋಣದ ವಿಶೇಷ ಭೋಜನ ಎರಡೂ ಮಳೆಗಾಲದ ನಂತರ ಪ್ರಕೃತಿಯ ಸಮೃದ್ಧಿಗೆ ಸಲ್ಲಿಸುವ ಕೃತಜ್ಞತೆಯ ಅಭಿವ್ಯಕ್ತಿಗಳಾಗಿವೆ. ಆಟಿಯಲ್ಲಿ ಆಟಿಕಳಂಜ ಬಂದರೆ, ಸೋಣದಲ್ಲಿ ಜೋಗಿ ಮನೆಮನೆಗೆ ಬರುತ್ತಾನೆ. ಜೋಗಿಯು ಹೊಸ ಚೈತನ್ಯ, ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ಜನರಲ್ಲಿ ತುಂಬುತ್ತಾನೆ ಎಂಬ ನಂಬಿಕೆ ಇದೆ. ಆಟಿಕಳಂಜನನ್ನು ಬೆರ್ಮೆರನ ಮಗ ಎಂದು, ಜೋಗಿಯನ್ನು ಬಲಿ ಚಕ್ರವರ್ತಿಯ ಆಗಮನ ಎಂದು ನಂಬುವ ಸಂಪ್ರದಾಯವಿದೆ. ಕೇರಳದಲ್ಲಿ ಇದೇ ಪರಂಪರೆಯನ್ನು ಮಾವೇಲಿ ಆಗಮನವೆಂದು ಆಚರಿಸಲಾಗುತ್ತದೆ. ತುಳು ಪಾಡ್ದನಗಳಲ್ಲಿಯೂ ಬಲಿ ಚಕ್ರವರ್ತಿಯ ಆಗಮನದ ಉಲ್ಲೇಖಗಳು ಕಂಡುಬರುತ್ತವೆ. ಜನಪದ ನಂಬಿಕೆಯ ಪ್ರಕಾರ ಬಲಿ ಚಕ್ರವರ್ತಿಯು ಆಟಿದ ಅಮಾಸೆಗ್, ಸೋಣದ ಸಂಕ್ರಾಂತಿಗ್ ಮತ್ತು ಬೊಂತೆಲ್‌ದ ಕೊಡಿ ಪರ್ಬೊಗ್ ಮೂರು ಸಂದರ್ಭಗಳಲ್ಲಿ ಬರುತ್ತಾನೆ ಎಂಬ ನಂಬಿಕೆಯೂ ಪ್ರಚಲಿತವಾಗಿದೆ. “ಬಿತ್ತಿಲ್ ಮಾರ್ದಾಂಡಲ, ಸೋಣ ಉಣೊಡು” ಎಂಬ ತುಳು ಗಾದೆಯ ಅರ್ಥ ಮನೆ ಮಾರಿಯಾದರೂ ಸೋನದಲ್ಲಿ ಊಟ ಮಾಡಬೇಕು ಎಂದು. ಅಂದರೆ ಇದರ ಅರ್ಥ ಮನೆ ಮಾರುವುದಲ್ಲ; ಆರೋಗ್ಯವನ್ನು ಮೊದಲ ಆದ್ಯತೆಯಾಗಿ ಕಾಪಾಡಿ, ಸಮೃದ್ಧಿ ಬಂದಾಗ ಅದನ್ನು ಕುಟುಂಬ ಮತ್ತು ಸಮಾಜದೊಂದಿಗೆ ಹಂಚಿಕೊಳ್ಳಬೇಕು ಎಂಬುದು.

ಇಂದು ಆಧುನಿಕ ವಿಜ್ಞಾನ ಋತುಸಹಜ ಆಹಾರ, ಸ್ಥಳೀಯ ಆಹಾರ, ಸುಸ್ಥಿರ ಜೀವನ, ಪರಿಸರ ಹೊಂದಾಣಿಕೆ ಮತ್ತು ಸಮುದಾಯದ ಆರೋಗ್ಯದ ಮಹತ್ವವನ್ನು ಒತ್ತಿ ಹೇಳುತ್ತಿದೆ. ತುಳುವರ ಆಟಿ–ಸೋಣ ಜೀವನಪದ್ಧತಿಯಲ್ಲಿ ಈ ಎಲ್ಲ ತತ್ವಗಳ ಅನುಭವಜನ್ಯ ರೂಪವನ್ನು ಕಾಣಬಹುದು. ಆಟಿ ಗಂಜಿ, ಕಾಡು ಸೊಪ್ಪುಗಳು, ಪಾಲೆ ಕಷಾಯ ಹಾಗೂ ಇತರ ಜನಪದ ಆಚರಣೆಗಳ ಆರೋಗ್ಯ ಪ್ರಯೋಜನಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಅಗತ್ಯ ಇನ್ನೂ ಇದೆ. ಹೀಗಾಗಿ ಆಟಿ ಮತ್ತು ಸೋಣ ಕೇವಲ ಎರಡು ತಿಂಗಳುಗಳಲ್ಲ. ಅವು ಪ್ರಕೃತಿ, ಆರೋಗ್ಯ, ಆಹಾರ, ಕೃಷಿ ಮತ್ತು ಮಾನವ ಜೀವನವನ್ನು ಸಮತೋಲನದಿಂದ ನಡೆಸುವ ತುಳುವರ ಕಾಲಜ್ಞಾನದ ಜೀವಂತ ಜೈವ ವಿಜ್ಞಾನವಾಗಿದೆ. ಸಂಯಮದಿಂದ ಆರಂಭವಾಗಿ ಸಮೃದ್ಧಿಯಲ್ಲಿ ಪೂರ್ಣಗೊಳ್ಳುವ ಈ ಜೀವನಚಕ್ರವು ಇಂದಿನ ಸುಸ್ಥಿರ ಬದುಕಿನ ಚಿಂತನೆಗೂ ಮಹತ್ವದ ಪ್ರೇರಣೆಯಾಗಿದೆ.

The post ತುಳುವರ ಕಾಲಜ್ಞಾನದ ಜೈವ ವಿಜ್ಞಾನ : ಆಟಿ ಮತ್ತು ಸೋಣ appeared first on www.buntsnow.com |  web-based media For Bunts Community.

ಅಪಸ್ಮಾರ ಕಾಯಿಲೆಗೆ ಕುರ್ನಾಡು ಗುತ್ತಿನ ಗಿರಾವು ದೈವದ ಅಂಗಣದಲ್ಲಿದೆ ಮದ್ದು!
ಹುಟ್ಟಿದ ಪ್ರತಿಯೊಂದು ಜೀವಿಗೂ ದೈಹಿಕ ಸ್ವಾಸ್ಥ್ಯ ಎಂಬುದು ಅತ್ಯಗತ್ಯ. ಮಾನಸಿಕ ಮತ್ತು ದೈಹಿಕ ಆರೋಗ್ಯದ ಸಮತೋಲನ ಒಬ್ಬ ಮನುಷ್ಯನ ಅವಿಭಾಜ್ಯ ಅಂಗ. ಅಂತಹ ಮಾನಸಿಕ ರೋಗಕ್ಕೆ ಸಂಬಂಧಪಟ್ಟ ಒಂದು ಅಪರೂಪದ ರೋಗದ ಬಗ್ಗೆ ಮತ್ತು ಅದನ್ನು ಹೇಗೆ ಗುಣಪಡಿಸಲು ಸಾಧ್ಯ ಎಂಬುದರ ಬಗ್ಗೆ ನಾನು ಇಲ್ಲಿ ಬರೆಯುತ್ತಿದ್ದೇನೆ. ಪಿಡ್ಸ್ / ಮೂರ್ಛೆ ರೋಗ ಅಥವಾ ಅಪಸ್ಮಾರ ಕಾಯಿಲೆಯ ಬಗ್ಗೆ ನಾವೆಲ್ಲರೂ ಕೇಳಿರುತ್ತೇವೆ. ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ (WHO) ಅಥವಾ ವಿಶ್ವ ಆರೋಗ್ಯ ಸಂಸ್ಥೆಯ ಒಂದು ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿ ಸುಮಾರು 50 ಮಿಲಿಯನ್ (5 ಕೋಟಿ) ಜನರು ಈ ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದಾರೆ‌. ಅದೇ ನಮ್ಮ ಭಾರತ ದೇಶದಲ್ಲಿ ನೋಡುವುದಾದರೆ, ಪ್ರತೀ 1000 ಜನರಲ್ಲಿ 5 ರಿಂದ 10 ಜನ ಎಂದರೆ, ಸರಿ ಸುಮಾರು ಒಂದು ಕೋಟಿಗೂ ಅಧಿಕ ಮಂದಿ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಪಸ್ಮಾರ ಎಂಬ ಕಾಯಿಲೆಯು ಮೆದುಳಿನ ನರಕೋಶಗಳು ಅಸಹಜವಾಗಿ ಮತ್ತು ಅತಿಯಾಗಿ ವಿದ್ಯುತ್ ಸಂಕೇತಗಳನ್ನು ಉತ್ಪಾದಿಸಿದಾಗ ಉಂಟಾಗುತ್ತದೆ. ತಲೆಗೆ ತೀವ್ರ ಗಾಯವಾದ್ದರಿಂದ, ಮೆದುಳಿನ ಸೋಂಕುಗಳು (ಉದಾಹರಣೆಗೆ ಮೆನಿಂಜೈಟಿಸ್), ಜನ್ಮಜಾತ ಮೆದುಳಿನ ಬೆಳವಣಿಗೆಯ ಸಮಸ್ಯೆಗಳು, ಪಾರ್ಶ್ವವಾಯು, ಮೆದುಳಿನ ಗಡ್ಡೆ, ಆನುವಂಶಿಕ ಕಾರಣಗಳಿಂದ, ಜನನದ ಸಮಯದಲ್ಲಿ ಮೆದುಳಿಗೆ ಆಮ್ಲಜನಕದ ಕೊರತೆ, ಭಯ, ನೋವು, ಮಾನಸಿಕ ಒತ್ತಡಗಳ ಕಾರಣ ದೇಹದ ಪ್ರತಿಕ್ರಿಯೆಯಲ್ಲಿ ರಕ್ತದೊತ್ತಡ ಹಠಾತ್ ಕುಸಿಯಬಹುದು. ಇದರಿಂದ ಮೆದುಳಿಗೆ ಸಾಕಷ್ಟು ರಕ್ತ ತಲುಪದ ಕಾರಣ ಕೆಲವೊಮ್ಮೆ ಮೂರ್ಛೆ ಉಂಟಾಗುತ್ತದೆ. ಇದನ್ನೇ ಅಪಸ್ಮಾರ / ಪಿಡ್ಸ್ / ಎಪಿಲೆಪ್ಸಿ ಎಂದು ಕರೆಯಲಾಗುತ್ತದೆ. ವೈದ್ಯಕೀಯ ಸಹಾಯದಿಂದ ಸುಮಾರು 60 ರಿಂದ 70% ಜನರಲ್ಲಿ ಈ ಕಾಯಿಲೆಯನ್ನು ನಿಯಂತ್ರಣಕ್ಕೆ ತರಬಹುದು. ಆದರೆ ಸಂಪೂರ್ಣ ಗುಣಮುಖವಾಗುವ ಸಾಧ್ಯತೆ ಅದರ ಮೂಲ ಕಾರಣದ ಮೇಲೆ ಅವಲಂಬಿತವಾಗಿರುತ್ತದೆ. ಇಂತಹ ಸಂಪೂರ್ಣ ಗುಣಮುಖವಾಗದಿದ್ದರೂ ನಿಯಂತ್ರಣದಲ್ಲಿಡಬಹುದಾದ ಕಾಯಿಲೆಗೆ ಪರಿಪೂರ್ಣವಾಗಿ ಗುಣಮುಖಗೊಳಿಸಬಲ್ಲ ಸರಳ ಮದ್ದಿನ ಕ್ರಮ ನಮ್ಮ ದೈವಾರಾಧನೆಯಲ್ಲಿ ಇದೆ. ಹೌದು. ಇದು ಆಶ್ಚರ್ಯವಾದರೂ ನಿಜ. ತುಳುನಾಡು ಎಂಬ ನಂಬಿಕೆಯ ಪುಟ್ಟ ಜಗತ್ತಿನೊಳಗೆ ಇರುವ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮೆಂಬಳ ಮಾಗಣೆಗೆ ಸೇರಿದ ಕುರ್ನಾಡು ಗ್ರಾಮದಲ್ಲಿ ಆರಾಧಿಸಲ್ಪಡುವ ಒಂದು ಅಪರೂಪದ ದೈವದ ಅಂಗನದಲ್ಲಿ ಈ ರೋಗಕ್ಕೆ ಇದೆ ಶಾಶ್ವತ ಪರಿಹಾರ. ಈ ದೈವದ ಹೆಸರು ‘ಗಿರಾವು’. ಕುರ್ನಾಡು ಗುತ್ತಿನ ಪ್ರಧಾನ ದೈವವಾಗಿ, ನಾಲ್ಕು ಗ್ರಾಮ ಒಂದು ಮಾಗಣೆಯ ಅಧಿಪತಿ ಸೋಮನಾಥ ದೇವರ ಬಂಟನಾಗಿ ಆರಾಧನೆ ಪಡೆಯುವ ಈ ದೈವ ಕುರ್ನಾಡು ಮತ್ತು ಚೇಳೂರು ಪರಿಸರದಲ್ಲಿ ಆರಾಧನೆ ಪಡೆದುಕೊಂಡು ಬಂದಿದೆ. ಕುರ್ನಾಡು ಗುತ್ತು ಈ ದೈವದ ಮೂಲಸ್ಥಾನವಾಗಿದ್ದು, ಪಿಡ್ಸ್ ರೋಗಕ್ಕೆ ಸಂಬಂಧಿಸಿ ಅನೇಕ ಮಂದಿ ಬಂದು ದೈವದ ಪ್ರಸಾದವನ್ನು ಸ್ವೀಕರಿಸಿ ಗುಣಮುಖರಾಗಿರುತ್ತಾರೆ. ಈ ದೈವಕ್ಕೆ ಬಹಳ ವಿಶೇಷವಾಗಿ ಮನೆಯಲ್ಲೇ ಸಾಕಿದ ಪರಿಪೂರ್ಣ ಬಿಳಿ ಹುಂಜವನ್ನು (ಶಾಸ್ತ್ರ ಬೊಲ್ಲೆ ಕೋರಿ) ಒಪ್ಪಿಸುವ ಕ್ರಮ. ಈ ಕೋಳಿಯಲ್ಲಿ ಯಾವುದೇ ಇತರ ಬಣ್ಣದ ಮಿಶ್ರಣವಿರಬಾರದು. ಹೆಚ್ಚಿನ ದೈವಗಳ ಸಂಧಿ ಪಾಡ್ದನಗಳಲ್ಲಿ ದೈವಗಳು ಶಾಸ್ತ್ರ ಬೊಲ್ಲೆ ಕೋಳಿಯಾಗಿ ಕೂಗಿದ ಕಥಾನಕಗಳಿವೆ. ಆದ್ದರಿಂದ ಬಿಳಿ‌ ಹುಂಜವನ್ನು ತುಳುನಾಡಿನಲ್ಲಿ ಇತರ ಯಾವುದೇ ದೈವಗಳಿಗೆ ಒಪ್ಪಿಸುವ ಕ್ರಮವಿಲ್ಲ. ಆದರೇ ಗಿರಾವು ದೈವದ ಆರಾಧನೆಯಲ್ಲಿ ಬಿಳಿ ಹುಂಜವೇ ಪ್ರಧಾನ. ದೈವದ ಮೂಲಸ್ಥಳ ಕುರ್ನಾಡು ಮತ್ತು ಚೇಳೂರು ಎರಡೂ ಕಡೆಯಲ್ಲೂ ಈ ಅಪಸ್ಮಾರ ಕಾಯಿಲೆಯನ್ನು ಪರಿಹರಿಸಿಕೊಳ್ಳಬಹುದು. ಈ ಕಾಯಿಲೆಯನ್ನು ಪರಿಹರಿಸಿಕೊಳ್ಳಲು ಬೇಕಾದ ಸಾಹಿತ್ಯಗಳು ಮತ್ತು ಮದ್ದಿನ ಕ್ರಮವನ್ನು ಕೆಳಗೆ ವಿವರಿಸಿದ್ದೇನೆ.

ಕುರ್ನಾಡಿನಲ್ಲಿ ಮದ್ದಿನ ಕ್ರಮ : ಕೆಲವರು ಗಿರಾವು ದೈವದ ನೇಮದ ಸಂದರ್ಭದಲ್ಲೇ ಬಂದು ದೈವದ ಬಳಿ ಈ ರೋಗದ ಬಗ್ಗೆ ಮೊದಲು ಅರಿಕೆ ಮಾಡುತ್ತಾರೆ. ನೇಮದ ಸಂದರ್ಭವನ್ನು ಹೊರತುಪಡಿಸಿ ಬರುವುದಾದರೇ ಕುರ್ನಾಡು ಶ್ರೀ ಸೋಮನಾಥ ದೇವಾಲಯದಲ್ಲಿ ತಂತ್ರಿಯವರು ಕುರ್ನಾಡು ಗುತ್ತಿನವರ ಸಮ್ಮುಖದಲ್ಲಿ ಮೊದಲು ಪ್ರಾರ್ಥನೆ ಮಾಡಬೇಕು. ತದನಂತರ, ಒಂದು ಪರಿಪೂರ್ಣ ಊರಿನ ಬಿಳಿ ಹುಂಜವನ್ನು ತಯಾರು ಮಾಡಬೇಕು (ಫಾರ್ಮ್ ನಲ್ಲಿ ಸಿಗುವ ಕೋಳಿ ಅಥವಾ ಬಿಳಿ ಬ್ರಾಯಿಲರ್ ಕೋಳಿ ಆಗುವುದಿಲ್ಲ). ರೋಗಿಯು ಬೆಳಿಗ್ಗೆ ಎದ್ದು, ತಲೆಗೆ ಸ್ನಾನ ಮಾಡಿ ಈ ಬಿಳಿ ಹುಂಜಕ್ಕೆ ಅಕ್ಕಿಯನ್ನು ತನ್ನ ಕೈಯಲ್ಲಿ ಮುಷ್ಟಿ ಹಿಡಿದು ತಲೆಯ ಸುತ್ತ ಮೂರು ಬಾರಿ ಪ್ರದಕ್ಷಿಣೆ ಮಾಡಿ, 48 ದಿವಸ (ಒಂದು ಮಂಡಲ) ಆಹಾರ ಹಾಕಬೇಕು. ನಂತರ ಈ ಕೋಳಿಯನ್ನು ಕುರ್ನಾಡು ಗುತ್ತಿಗೆ ತಂದು ಒಪ್ಪಿಸಬೇಕು. ಅಲ್ಲಿ ಕುರ್ನಾಡು ಗುತ್ತಿನ ಪ್ರತಿನಿಧಿ ಗಿರಾವು ದೈವವನ್ನು ನೆನೆದು ಕೊಡುವ ಭಸ್ಮವನ್ನು ಸ್ವೀಕರಿಸಬೇಕು. ಅಂದು ರೋಗದ ಪರಿಮಿತಿಯನ್ನು ಗಮನಿಸಲಾಗುತ್ತದೆ. ಒಂದು ವೇಳೆ ರೋಗ ಕಡಿಮೆಯಾಗದಿದ್ದಲ್ಲಿ ಪುನಃ ದೈವದ ಬಳಿ ಪ್ರಾರ್ಥಿಸಿ ಎಣ್ಣೆ ಮತ್ತು ತುಪ್ಪವನ್ನು ಸಂದೈತ ಮಾಡಬೇಕು. ಒಪ್ಪಿಸಿದ ಎಣ್ಣೆ ತುಪ್ಪವನ್ನು ಮರಳಿ ಪಡೆದು, ಮುಂದಿನ 48 ದಿವಸಗಳ ಕಾಲ ರೋಗಿಯು ಈ ಎಣ್ಣೆ ಮತ್ತು ತುಪ್ಪವನ್ನು ಸ್ವೀಕರಿಸಬೇಕು. ಎಣ್ಣೆಯನ್ನು ನಿತ್ಯ ತಲೆಗೆ ಹಾಕಬೇಕು. ತುಪ್ಪವನ್ನು ಬಾಯಿಯಲ್ಲಿ ನೆಕ್ಕಿ ಸೇವಿಸಬೇಕು. ಒಂದು ವೇಳೆ ಮೊದಲ‌ 48 ದಿವಸದ ನಂತರ ಕುರ್ನಾಡು ಗುತ್ತಿಗೆ ಈ ಕೋಳಿಯನ್ನು ಒಪ್ಪಿಸಲು ಸಾಧ್ಯವಾಗದಿದ್ದಲ್ಲಿ ಬರುವ ನೇಮದ ಸಂದರ್ಭದಲ್ಲಿಯೂ ದೈವಕ್ಕೆ ಒಪ್ಪಿಸಬಹುದು. ಕುರ್ನಾಡಿನಲ್ಲಿ ಗಿರಾವು ದೈವಕ್ಕೆ ಮೂರು ನೇಮ ನಡೆಯುತ್ತದೆ. ಮೊದಲು ದೊಂಪದಬಲಿ, ಎರಡನೆಯದಾಗಿ ಸೋಮನಾಥ ದೇವರ ಜಾತ್ರೆಯ ಧ್ವಜ ಅವರೋಹಣವಾದ ಬಳಿಕ ಗೋಪುರದ ಬಾಗಿಲಿನಲ್ಲಿ ನಡೆಯುವ ನೇಮ ಹಾಗೂ ಏಪ್ರಿಲ್ ತಿಂಗಳಿನ 28 ಅಥವಾ 29 ತಾರೀಕಿನಂದು ನಡೆಯುವ ಕೊನೆಯ ಸಾನದಾಯನ. ಈ ಮೂರು ನೇಮದಲ್ಲಿ ಯಾವುದಾದರೂ ಒಂದು ನೇಮದ ಸಂದರ್ಭದಲ್ಲಿ ಬಂದು ಈ ಕೋಳಿಯನ್ನು ಒಪ್ಪಿಸಬಹುದು. ಅದರೆ, ಈ ಕೋಳಿಯನ್ನು ಬಹಳ ಸೂಕ್ಷ್ಮವಾಗಿ ನೋಡಿಕೊಳ್ಳಬೇಕು. ಈ ಕೋಳಿಯನ್ನು ನೇಮದ ದಿನದವರೆಗೆ ಬೇರೆ ಯಾವುದೇ ಪ್ರಾಣಿಗಳು (ನಾಯಿ, ಕಾಡು ಬೆಕ್ಕು ಇತ್ಯಾದಿ) ಮುಟ್ಟದಂತೆ ಬಹಳ ಜೋಪಾನವಾಗಿ ಕಾಪಾಡಿಕೊಂಡು ಬರಬೇಕು. ಹಾಗಾಗಿ ನೇಮದ ಸಂದರ್ಭದಲ್ಲಿ ಕೋಳಿಯನ್ನು ಒಪ್ಪಿಸುವವರು ನೇಮಕ್ಕೆ ನಿಗದಿಯಾದ ದಿನದಿಂದ 48 ದಿವಸದ ಮೊದಲು ಈ ಕ್ರಮವನ್ನು ಶುರು ಮಾಡಿದರೆ ಉತ್ತಮ. ರೋಗ ಪರಿಪೂರ್ಣವಾಗಿ ಗುಣವಾದ ಬಳಿಕ ಸೋಮನಾಥ ದೇವರಿಗೆ ಒಂದು ಸೇವೆ (ರುದ್ರಾಭಿಷೇಕ, ಕಾಣಿಕೆ ಅಥವಾ ಇತರ ಯಾವುದಾದರು ಸಣ್ಣ ಸೇವೆ) ಮತ್ತು ಗಿರಾವು ದೈವದ ಕೈಯಿಂದ ನೇಮದ ಸಂದರ್ಭದಲ್ಲಿ ‘ನಿಮೂರ್ತಿದ ಬೂಳ್ಯ’ ಹಿಡಿಯುವ ಸಂಪ್ರದಾಯ.

ಚೇಳೂರಿನಲ್ಲಿ ಮದ್ದಿನ ಕ್ರಮ : ಮೊದಲು ಈ ಪಿಡ್ಸ್ ಕಾಯಿಲೆಗೆ ಒಳಪಟ್ಟಂತಹ ವ್ಯಕ್ತಿ ಮತ್ತು ಕುಟುಂಬಿಕರು ಚೇಳೂರು ಗಿರಾವು ದೈವದ ಭಂಡಾರದ ಮನೆಯಲ್ಲಿ ಅರಿಕೆ ಮಾಡಬೇಕು. ನಂತರ ಅವರ ಮಾರ್ಗದರ್ಶನದ ಮೇರೆಗೆ ಒಂದು ಪರಿಪೂರ್ಣ ಊರಿನ ಬಿಳಿ ಹುಂಜವನ್ನು ತಯಾರು ಮಾಡಬೇಕು. ನಂತರ 48 ದಿವಸ ಪಿಡ್ಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಬೆಳಿಗ್ಗೆ ಎದ್ದು, ಸ್ನಾನ ಮಾಡಿ ಗಿರಾವು ದೈವವನ್ನು ನೆನೆದು, ಒಂದು ಮುಷ್ಟಿ ಅಕ್ಕಿಯನ್ನು ತನ್ನ ತಲೆಗೆ ಮೂರು ಬಾರಿ ಸುತ್ತಿಸಿ, ಈ ಬಿಳಿ ಹುಂಜಕ್ಕೆ ಆಹಾರವಾಗಿ ಹಾಕಬೇಕು. 48 ದಿವಸದ ನಂತರ ಬರುವ ಮೊದಲ ಮಂಗಳವಾರದ ದಿನ ಮತ್ತೊಮ್ಮೆ ಭಂಡಾರದ ಮನೆಗೆ ಹೋಗಬೇಕು. ಅಲ್ಲಿ ಹಿರಿಯರು ರೋಗದ ಪರಿಮಿತಿಯನ್ನು ಗಮನಿಸಿ, ರೋಗಿಗೆ 48 ದಿವಸಕ್ಕೆ ಬೇಕಾಗುವಷ್ಟು ಎಣ್ಣೆ ಮತ್ತು ತುಪ್ಪವನ್ನು (ಎಣ್ಣೆ-ನೈ) ಕೊಡುತ್ತಾರೆ. ಅಕ್ಕಿ ಹಾಕಿ ಸಾಕಿದ ಕೋಳಿಯನ್ನು ಅಂದೇ ಭಂಡಾರದ ಮನೆಯಲ್ಲಿ ಒಪ್ಪಿಸಬಹುದು ಅಥವಾ ಚೇಳೂರು ಗ್ರಾಮದಲ್ಲಿ ಗಿರಾವು ದೈವಕ್ಕೆ ನಡೆಯುವ ನೇಮದ ಸಂದರ್ಭದಲ್ಲಿಯೂ ತಂದು ಒಪ್ಪಿಸಬಹುದು. ರೋಗಿಗೆ ಕೊಟ್ಟಂತಹ ಎಣ್ಣೆಯನ್ನು ಸ್ವಲ್ಪ ತಲೆಗೆ ಹಾಕಬೇಕು. ತುಪ್ಪವನ್ನು ಬಾಯಿಯಲ್ಲಿ ಸೇವಿಸಬೇಕು. ಈ ಕ್ರಮವನ್ನು 48 ದಿವಸ ನಿರಂತರ ಮಾಡಬೇಕು. ಒಂದು ವೇಳೆ ರೋಗಿಯು ಆಯುರ್ವೇದ / ಅಲೋಪತಿಗೆ ಸಂಬಂಧಿಸಿ ವೈದ್ಯರಿಂದ ಈ ಮೊದಲೇ ಔಷಧಿಯನ್ನು ಪಡೆಯುತ್ತಿದ್ದರೆ ಅದನ್ನು ಸಂಪೂರ್ಣವಾಗಿ ನಿಲ್ಲಿಸಬಾರದು. ಈ ಕ್ರಮದ ಜೊತೆಗೆ ಅದನ್ನೂ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ (ಡೋಸೇಜ್) ತೆಗೆದುಕೊಳ್ಳುತ್ತಾ ಬರಬೇಕು. ಉದಾಹರಣೆಗೆ ಬಹಳ ತೀವ್ರ ಸ್ಥಿತಿಯಲ್ಲಿ ಪಿಡ್ಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು ವೈದ್ಯರ ಸಲಹೆಯಂತೆ ದಿವಸಕ್ಕೆ 5 ಮಾತ್ರೆಗಳನ್ನು ಸೇವಿಸುತ್ತಿದ್ದರೆ ಈ ಕ್ರಮವನ್ನು ಪಾಲಿಸಲು ಪ್ರಾರಂಭಿಸಿದ ಬಳಿಕ ಮೊದಲ 10 ದಿವಸ 4 ಮಾತ್ರೆಗಳು, ನಂತರದ 10 ದಿವಸ ಮೂರು, ನಂತರ ಎರಡು ಹೀಗೆ ನಿಧಾನ ಗತಿಯಲ್ಲಿ ಕಡಿಮೆ ಮಾಡಿಕೊಂಡು ಬರಬೇಕು. ಒಂದು ವೇಳೆ ಮೇಲೆ ತಿಳಿಸಿದ ಎರಡೂ ಕ್ರಮಗಳಲ್ಲಿ ಅಂದರೆ 48 ದಿವಸ ಕೋಳಿಗೆ ಆಹಾರ ಮತ್ತು 48 ದಿವಸ ಎಣ್ಣೆ ತುಪ್ಪ ಸೇವಿಸಿದ ನಂತರವೂ ರೋಗ ಕಡಿಮೆಯಾಗದಿದ್ದಲ್ಲಿ, ಮಂಗಳವಾರದ ದಿನ ಭಂಡಾರದ ಮನೆಗೆ ಭೇಟಿ ನೀಡಿದರೆ ಅಲ್ಲಿ ಗಿರಾವು ದೈವವನ್ನು ನೆನೆದು ನೂಲು (ಉರ್ಕು) ಕೊಡುತ್ತಾರೆ. ಇದನ್ನು ರೋಗಿಯು ಕಟ್ಟಿಕೊಂಡರೆ ರೋಗ ನಿಧಾನವಾಗಿ ಗುಣವಾಗುತ್ತದೆ. ಈ ರೋಗ ಕಡಿಮೆಯಾದ ಬಳಿಕ ವ್ಯಕ್ತಿ ಹಾಗೂ ಕುಟುಂಬಿಕರು ಸೇರಿ ಗಿರಾವು ದೈವದ ನೇಮದಲ್ಲಿ ದೈವದ ಕೈಯಿಂದ ‘ನಿಮೂರ್ತಿದ ಬೂಳ್ಯ’ ಹಿಡಿಯಬೇಕು. ಚೇಳೂರಿನಲ್ಲಿ ‘ಕೆದ್ರಕಟ್ಟೆ’ ಎಂಬ ಜಾಗದಲ್ಲಿ ಏಪ್ರಿಲ್ 7 ತಾರೀಕಿಗೆ ದೈವಕ್ಕೆ ದೊಂಪದಬಲಿ ನಡೆಯುತ್ತದೆ. ನಂತರ ಮೇ 11 ತಾರೀಕಿಗೆ ಸಾನದಾಯನ ನೆರವೇರುತ್ತದೆ.

ಗಿರಾವು ದೈವದ ನೇಮ ಬಹಳ ವಿಶೇಷ ಮತ್ತು ವಿಶಿಷ್ಟ. ಹಾಳೆಯ ಮೊಗವನ್ನು ಕಟ್ಟಿ ನೇಮ ನಡೆಯುವ ಸಂಪ್ರದಾಯ. ದೈವದ ಎರಡೂ ಕೈಗೆ ತೆಂಗಿನ ಗರಿಯ ಸೂಟೆಯನ್ನು ಕೊಟ್ಟು ದೈವ ಅಡ್ಡ ಬಿದ್ದು ವಸಯ ಆಗುವ ಕ್ರಮ. ನೇಮದ ನಡುವೆ ದೈವ ಒಮ್ಮೆ ಶಾಂತ ಸ್ವಭಾವದಲ್ಲಿ ವರ್ತಿಸುತ್ತದೆ. ಗುತ್ತಿನ ಪ್ರತಿನಿಧಿ ಹೂ ಹಾಕಿ, ದೈವವನ್ನು ಶೃಂಗಾರಗೊಳಿಸಿದ ಬಳಿಕ ಪುನಃ ಸ್ವಲ್ಪ ಉಗ್ರದಲ್ಲಿ ಕತ್ತೇರಿ ಕಾಲಿನ ನಲಿಕೆಯಲ್ಲಿ ತಲೆಗೆ ಗಡಿ ಹಾಕಿ ದೈವದ ನೇಮ ಮುಂದುವರಿಯುತ್ತದೆ. ಕುರ್ನಾಡು ಮಾಗಣೆಯಲ್ಲಿ ಪ್ರಧಾನ ದೈವವಾಗಿ ಗಿರಾವು ದೈವ ಸ್ಥಾನಮಾನ ಪಡೆದಿದೆ. ಚೇಳೂರು ಗ್ರಾಮದಲ್ಲಿ ಅಂಗರಕೃಷ್ಣ ಎಂಬ ದೈವ ಪ್ರಧಾನವಾಗಿ ಆರಾಧನೆ ಪಡೆದುಕೊಂಡು ಬಂದಿದ್ದು, ಜನಪದ ಐತಿಹ್ಯದ ಪ್ರಕಾರ ಅಂಗಾರಕೃಷ್ಣ ದೈವವು ಕುರ್ನಾಡಿನ ಗಿರಾವು ದೈವವನ್ನು ಚೇಳೂರಿಗೆ ಕರೆ ತಂದು ನಿನಗೆ ನಾನು ಚೇಳೂರಿನಲ್ಲಿ ನೋಂಬ್ರತದ ಸೇವೆಯನ್ನು ಕೊಡುತ್ತೇನೆ ಎಂಬ ಮಾತು ಕೊಟ್ಟಿತು ಎಂಬ ಮಾಹಿತಿ ನಮಗೆ ಸಿಗುತ್ತದೆ. ತುಳುನಾಡಿನ ದೈವಾರಾಧನೆ ಎಂಬ ನಂಬಿಕೆಯ ಜಗತ್ತಿನೊಳಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಒಂದು ಪುಟ್ಟ ಊರಿನಲ್ಲಿ ಪಿಡ್ಸ್ ಕಾಯಿಲೆಗೆ ಮದ್ದಿದೆ ಎಂಬ ಮಾಹಿತಿಯನ್ನು ನಾನು ಓದುಗರ ಮುಂದಿಟ್ಟಿದೇನೆ. ಹಲವು ವರುಷಗಳ ಕಾಲ ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ದಿನ ನಿತ್ಯ ಆಸ್ಪತ್ರೆಗೆ ಅಲೆದಾಡುತ್ತಿರುವ ಜನರಿಗೆ ದೈವಾರಾಧನೆಯಲ್ಲಿರುವ ಒಂದು ಸರಳ ಮದ್ದಿನ ಕ್ರಮದ ಬಗ್ಗೆ ಮಾಹಿತಿಯನ್ನು ಕೊಟ್ಟರೆ ಅವರಿಗೆ ಉಪಯೋಗವಾಗಬಹುದು ಎಂಬ ಉದ್ದೇಶದಿಂದ ಈ ಬರಹವನ್ನು ನಾನು ಬರೆದಿದ್ದೇನೆ. ಈ ಮದ್ದಿನ ಕ್ರಮ ಮತ್ತು ಗಿರಾವು ದೈವದ ಆರಾಧನೆಯ ಬಗ್ಗೆ ನನಗೆ ಮಾಹಿತಿಯನ್ನು ಒದಗಿಸಿದ ಚೇಳೂರಿನಲ್ಲಿ ಗಿರಾವು ದೈವದ ಸೇವೆಯನ್ನು ಮಾಡುವ ದೈವನರ್ತಕರಾದ ಸಜಿಪ ಶೇಖರ ಪಂಬದರಿಗೂ ಹಾಗೂ ಕುರ್ನಾಡಿನಲ್ಲಿ ಗಿರಾವು ದೈವದ ಸೇವೆಯನ್ನು ಮಾಡುವ ಸೂರಜ್ ಬಂಗೇರ ಇವರಿಗೂ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಧನ್ಯವಾದಗಳು.

ಬರಹ : ಶರಣ್ ಶೆಟ್ಟಿ ಕೂರಿಯಾಳ ಪಡು

The post ಅಪಸ್ಮಾರ ಕಾಯಿಲೆಗೆ ಕುರ್ನಾಡು ಗುತ್ತಿನ ಗಿರಾವು ದೈವದ ಅಂಗಣದಲ್ಲಿದೆ ಮದ್ದು! appeared first on www.buntsnow.com |  web-based media For Bunts Community.

ತುಳು ಕ್ಯಾಲೆಂಡರ್ ಒಂದು ನಾಗರಿಕತೆಯ ಸಾಕ್ಷಿಯೇ?
ಒಂದು ನಾಗರಿಕತೆಯ ಶ್ರೇಷ್ಠತೆಯನ್ನು ಅದರ ಅರಮನೆಗಳು, ದೇವಾಲಯಗಳು ಅಥವಾ ಸಾಹಿತ್ಯದಿಂದ ಮಾತ್ರ ಅಳೆಯಲಾಗುವುದಿಲ್ಲ. ಆ ಸಮಾಜವು ಕಾಲವನ್ನು ಹೇಗೆ ಅರ್ಥ ಮಾಡಿಕೊಂಡಿತು? ಋತುಗಳನ್ನು ಹೇಗೆ ಗುರುತಿಸಿತು? ಕೃಷಿಯನ್ನು ಹೇಗೆ ಸಂಘಟಿಸಿತು? ಮತ್ತು ಪ್ರಕೃತಿಯ ಚಲನೆಯನ್ನು ಹೇಗೆ ವೈಜ್ಞಾನಿಕವಾಗಿ ಗಮನಿಸಿತು? ಎಂಬುವುದು ಅದರ ನಾಗರಿಕತೆಯ ಪ್ರಮುಖ ಮಾನದಂಡಗಳಾಗಿವೆ. ಆದ್ದರಿಂದಲೇ ಜಗತ್ತಿನ ಪ್ರತಿಯೊಂದು ಪ್ರಾಚೀನ ನಾಗರಿಕತೆಯು ತನ್ನದೇ ಆದ ಕಾಲಗಣನಾ ಪದ್ಧತಿಯನ್ನು ರೂಪಿಸಿಕೊಂಡಿದೆ. ಈಜಿಪ್ಟಿನವರು ನೈಲ್ ನದಿಯ ಪ್ರವಾಹವನ್ನು ಆಧರಿಸಿ ತಮ್ಮ ಕ್ಯಾಲೆಂಡರ್ ನಿರ್ಮಿಸಿದರು. ಮಾಯಾ ನಾಗರಿಕತೆಯು ಸೂರ್ಯ, ಚಂದ್ರ ಮತ್ತು ಗ್ರಹಗಳ ಚಲನೆಯನ್ನು ಆಧರಿಸಿದ ಅತ್ಯಂತ ನಿಖರ ಕಾಲಗಣನಾ ವ್ಯವಸ್ಥೆಯನ್ನು ರೂಪಿಸಿತು. ಭಾರತೀಯ ಉಪಖಂಡದಲ್ಲಿ ಸೌರಮಾನ ಮತ್ತು ಚಂದ್ರಮಾನ ಪರಂಪರೆಗಳು ಸಾವಿರಾರು ವರ್ಷಗಳಿಂದ ಬೆಳವಣಿಗೆಯಾದವು. ಈ ಹಿನ್ನೆಲೆಯಲ್ಲಿ ತುಳುನಾಡಿನಲ್ಲಿ ಇಂದಿಗೂ ಜೀವಂತವಾಗಿರುವ ತುಳು ಕ್ಯಾಲೆಂಡರ್ ಕೇವಲ ತಿಂಗಳುಗಳ ಹೆಸರಿನ ಪಟ್ಟಿಯಲ್ಲ. ಅದು ತುಳುನಾಡಿನ ಜನರ ಖಗೋಳ ಜ್ಞಾನ, ಪ್ರಕೃತಿ ಅರಿವು, ಕೃಷಿ ಜೀವನ, ಋತು ವಿಜ್ಞಾನ ಮತ್ತು ಸಾಂಸ್ಕೃತಿಕ ಸಂಘಟನೆಯ ಜೀವಂತ ದಾಖಲೆ. ಪಗ್ಗು, ಬೇಶ್ಯ, ಕಾರ್ತೆಲ್, ಆಟಿ, ಸೋಣ, ನಿರ್ನಾಳ, ಬೊಂತೆಲು, ಜಾರ್ದೆ, ಪೆರಾರ್ದೆ, ಪೊನ್ನಿ, ಮಾಯಿ ಮತ್ತು ಸುಗ್ಗಿ ಎಂಬ ಹನ್ನೆರಡು ತಿಂಗಳ ಹೆಸರುಗಳು ಇಂದಿಗೂ ತುಳುನಾಡಿನ ಜನಜೀವನದಲ್ಲಿ ಬಳಕೆಯಲ್ಲಿವೆ. ಈ ಹೆಸರುಗಳು ಕೇವಲ ಕಾಲದ ಗುರುತುಗಳಲ್ಲ. ಅವು ಪ್ರಕೃತಿಯ ಚಕ್ರದೊಂದಿಗೆ ಬೆಸೆದುಕೊಂಡಿರುವ ಜೀವನ ತತ್ತ್ವಗಳಾಗಿವೆ.

ತುಳು ಕ್ಯಾಲೆಂಡರ್ ಒಂದು ಸೌರಮಾನ ಕಾಲಗಣನಾ ವ್ಯವಸ್ಥೆ. ತಿಂಗಳುಗಳು ಸೂರ್ಯನ ಸಂಕ್ರಮಣದ ಆಧಾರದ ಮೇಲೆ ಆರಂಭವಾಗುತ್ತವೆ. ಪ್ರತಿ ತಿಂಗಳ ಮೊದಲ ದಿನವನ್ನು ಸಿಂಗೊಡೆ (ತಿಂಗೊಡೆ) ಎಂದು ಕರೆಯಲಾಗುತ್ತದೆ. ತಿಂಗಳ ಪರಿವರ್ತನೆಯನ್ನು ಸಂಕ್ರಮಣದ ಮೂಲಕ ಗುರುತಿಸುವ ಈ ಪದ್ಧತಿ ತುಳುನಾಡಿನ ಸ್ವಂತ ಕಾಲ ಪರಿಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ. ಇದರಿಂದ ತುಳುನಾಡಿನ ಜನರು ಸೂರ್ಯನ ಚಲನೆಯನ್ನು ಗಮನಿಸಿ ಕಾಲವನ್ನು ವಿಭಾಗಿಸುವ ಜ್ಞಾನವನ್ನು ಹೊಂದಿದ್ದರು ಎಂಬುದನ್ನು ಊಹಿಸಬಹುದು. ತುಳುನಾಡಿನ ಹೊಸ ವರ್ಷವನ್ನು ಬಿಸು ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಏಪ್ರಿಲ್ 14 ಅಥವಾ 15ರಂದು, ಸೂರ್ಯನು ಮೇಷ ರಾಶಿಗೆ ಪ್ರವೇಶಿಸುವ ಸಂದರ್ಭದಲ್ಲಿ ಆಚರಿಸಲಾಗುತ್ತದೆ. ಇದೇ ದಿನ ಕೇರಳದಲ್ಲಿ ವಿಷು, ತಮಿಳುನಾಡಿನಲ್ಲಿ ಪುತಾಂಡು, ಅಸ್ಸಾಂನಲ್ಲಿ ರೊಂಗಾಲಿ ಬಿಹು, ಪಂಜಾಬಿನಲ್ಲಿ ವೈಶಾಖಿ ಆಚರಿಸಲಾಗುತ್ತದೆ. ಭಾರತದ ವಿವಿಧ ಭಾಗಗಳಲ್ಲಿ ಇದೇ ಸಮಯದಲ್ಲಿ ಸೌರ ಹೊಸ ವರ್ಷದ ಆಚರಣೆ ನಡೆಯುವುದು. ಪ್ರಾಚೀನ ಸೌರ ಕಾಲಗಣನೆಯ ವಿಶಾಲ ಪರಂಪರೆಯನ್ನು ಸೂಚಿಸುತ್ತದೆ.

ಇಲ್ಲಿ ಒಂದು ಕುತೂಹಲಕಾರಿ ಭಾಷಾ ಶಾಸ್ತ್ರೀಯ ಪ್ರಶ್ನೆ ಉದ್ಭವಿಸುತ್ತದೆ. ತುಳುವಿನ ಬಿಸು, ಅಸ್ಸಾಮಿನ ಬಿಹು, ಕೇರಳದ ವಿಷು ಮತ್ತು ಸಂಸ್ಕೃತದ ವಿಷುವ ಈ ಪದಗಳ ನಡುವೆ ಯಾವುದಾದರೂ ಐತಿಹಾಸಿಕ ಅಥವಾ ಸಾಂಸ್ಕೃತಿಕ ಸಂಬಂಧವಿದೆಯೇ? ಕೆಲವು ಭಾಷಾ ಶಾಸ್ತ್ರಜ್ಞರು ‘ವಿಷು’ ಮತ್ತು ‘ವಿಷುವ’ ನಡುವಿನ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಆದರೆ ‘ಬಿಸು’ ಮತ್ತು ‘ಬಿಹು’ ಪದಗಳ ಕುರಿತು ಇನ್ನೂ ಸಮಗ್ರ ತೌಲನಿಕ ಅಧ್ಯಯನ ನಡೆದಿಲ್ಲ. ಆದ್ದರಿಂದ ಈ ಪದಗಳ ಪರಸ್ಪರ ಸಂಬಂಧವನ್ನು ಭಾಷಾಶಾಸ್ತ್ರ, ಜನಪದ ಮತ್ತು ಇತಿಹಾಸದ ಬೆಳಕಿನಲ್ಲಿ ಮರು ಪರಿಶೀಲಿಸುವ ಅಗತ್ಯವಿದೆ. ಖಗೋಳಶಾಸ್ತ್ರದ ಪ್ರಕಾರ ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ವಸಂತ ವಿಷುವ (Spring Equinox) ಮತ್ತು ಮೇಷ ಸಂಕ್ರಾಂತಿ ಬಹುತೇಕ ಒಂದೇ ಸಮಯದಲ್ಲಿ ಸಂಭವಿಸುತ್ತಿದ್ದವು. ಭೂಮಿಯ ಅಕ್ಷದ ಅಯನಚಲನ (Precession of the Equinoxes) ಪರಿಣಾಮವಾಗಿ ಇಂದಿಗೆ ಅವುಗಳ ನಡುವೆ ದಿನಗಳ ಅಂತರ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ‘ಬಿಸು’ ಎಂಬ ಹೆಸರು ಪ್ರಾಚೀನ ವಿಷುವಿನ ಸ್ಮೃತಿಯನ್ನು ಉಳಿಸಿಕೊಂಡಿರಬಹುದೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಅಭಿಪ್ರಾಯವನ್ನು ಇನ್ನೂ ಐತಿಹಾಸಿಕವಾಗಿ ಸಾಬೀತುಪಡಿಸಲಾಗಿಲ್ಲ. ಆದ್ದರಿಂದ ಇದನ್ನು ಒಂದು ಸಂಶೋಧನಾ ಊಹೆಯಾಗಿ ಮಾತ್ರ ಪರಿಗಣಿಸಬೇಕು.

ತುಳು ಭಾಷೆಯಲ್ಲಿ ಕಾಲವನ್ನು ಸೂಚಿಸುವ ಕೆಲವು ವಿಶಿಷ್ಟ ಪದಗಳು ಇಂದಿಗೂ ಬಳಕೆಯಲ್ಲಿವೆ. ಸಿಂಗೊಡೆ ತಿಂಗಳ ಮೊದಲ ದಿನವನ್ನು, ಕೋಡೆ ನಿನ್ನೆಯನ್ನು, ಇಡೆ ಮಧ್ಯಂತರ ಸಮಯವನ್ನು, ಅಮಾಸೆ ಅಮಾವಾಸ್ಯೆಯನ್ನು ಮತ್ತು ಪುನ್ನಮೆ ಹುಣ್ಣಿಮೆಯನ್ನು ಸೂಚಿಸುತ್ತವೆ. ಈ ಪದಗಳು ತುಳುನಾಡಿನ ಕಾಲ ಪರಿಕಲ್ಪನೆಯ ಜೀವಂತ ಭಾಷಾ ಅವಶೇಷಗಳಾಗಿರಬಹುದು. ಪಾಡ್ದನಗಳು, ಹಳೆಯ ತುಳು ನಿಘಂಟುಗಳು, ಮೌಖಿಕ ಪರಂಪರೆ ಮತ್ತು ಶಾಸನಗಳಲ್ಲಿ ಈ ಪದಗಳ ಬಳಕೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿದರೆ ತುಳುನಾಡಿನ ಕಾಲಗಣನೆಯ ಇತಿಹಾಸವನ್ನು ಇನ್ನಷ್ಟು ಸ್ಪಷ್ಟಪಡಿಸಲು ಸಾಧ್ಯವಾಗಬಹುದು. ಈ ಪದಗಳ ಅಧ್ಯಯನದ ಸಂದರ್ಭದಲ್ಲಿ ಮತ್ತೊಂದು ಕುತೂಹಲಕಾರಿ ಪ್ರಶ್ನೆಯೂ ಉದ್ಭವಿಸುತ್ತದೆ. ತುಳು ಭಾಷೆಯ ಇಡೆ, ಕೋಡೆ, ಸಿಂಗೊಡೆ ಮೊದಲಾದ ಕಾಲಸೂಚಕ ಪದಗಳು ಮತ್ತು ಇಂಗ್ಲಿಷಿನ day ಎಂಬ ಪದದ ನಡುವೆ ಕಂಡು ಬರುವ ಧ್ವನಿಸಾಮ್ಯ ಕೇವಲ ಯಾದೃಚ್ಛಿಕವೇ? ಅಥವಾ ಅದು ಯಾವುದಾದರೂ ಅತ್ಯಂತ ಪ್ರಾಚೀನ ಭಾಷಾ ಸಂಪರ್ಕದ ದೂರದ ಪ್ರತಿಧ್ವನಿಯೇ? ಈ ಲೇಖಕನ ಅಭಿಪ್ರಾಯದಲ್ಲಿ ಇದು ಮುಂದಿನ ಸಂಶೋಧನೆಗೆ ಅರ್ಹವಾದ ಒಂದು ಭಾಷಾ ಶಾಸ್ತ್ರೀಯ ಊಹೆ ಮಾತ್ರ. ಪ್ರಸ್ತುತ ಅಂಗೀಕೃತ ಭಾಷಾಶಾಸ್ತ್ರವು ಇಂಗ್ಲಿಷಿನ day ಪದಕ್ಕೆ ಜರ್ಮನಿಕ್ ಮೂಲವನ್ನು ಸೂಚಿಸುತ್ತದೆ. ಆದ್ದರಿಂದ ಈ ಲೇಖನದಲ್ಲಿ ಮಂಡಿಸಿರುವ ಅಭಿಪ್ರಾಯವು ಯಾವುದೇ ನಿರ್ಣಾಯಕ ತೀರ್ಮಾನವಲ್ಲ. ಬದಲಿಗೆ ಹೊಸ ಸಂಶೋಧನೆಗೆ ಆಹ್ವಾನ ನೀಡುವ ಪರಿಕಲ್ಪನೆಯಾಗಿದೆ.

ತುಳು ಕ್ಯಾಲೆಂಡರ್ ಕೃಷಿ ಜೀವನದೊಂದಿಗೆ ಅತ್ಯಂತ ನಿಕಟವಾಗಿ ಸಂಬಂಧ ಹೊಂದಿದೆ. ಆಟಿ ತಿಂಗಳು ಭಾರೀ ಮಳೆಯ ಕಾಲವಾಗಿದ್ದು, ಕೃಷಿ ವಿಶ್ರಾಂತಿ, ಆಟಿಕಳೆಂಜ, ಔಷಧೀಯ ಆಹಾರ ಮತ್ತು ಆರೋಗ್ಯ ಸಂಪ್ರದಾಯಗಳೊಂದಿಗೆ ಸಂಬಂಧ ಹೊಂದಿದೆ. ಸುಗ್ಗಿ ಕೊಯ್ಲಿನ ಕಾಲವನ್ನು ಸೂಚಿಸುತ್ತದೆ. ಈ ರೀತಿಯಾಗಿ ತಿಂಗಳುಗಳ ಹೆಸರುಗಳು ಮತ್ತು ಕೃಷಿ ಚಟುವಟಿಕೆಗಳ ನಡುವಿನ ಸಂಬಂಧವು ತುಳುನಾಡಿನ ಜನರು ಋತುಚಕ್ರವನ್ನು ಸೂಕ್ಷ್ಮವಾಗಿ ಗಮನಿಸಿ ತಮ್ಮ ಜೀವನವನ್ನು ಅದರೊಂದಿಗೆ ಹೊಂದಿಸಿಕೊಂಡಿದ್ದರು ಎಂಬುದನ್ನು ಸೂಚಿಸುತ್ತದೆ. ಇಂದಿನ ಗ್ರೆಗೋರಿಯನ್ ಕ್ಯಾಲೆಂಡರ್ ಕೂಡಾ ಸೌರಮಾನ ಪದ್ಧತಿಯೇ ಆಗಿದ್ದರೂ, ಅದರ ರಚನೆ ತುಳು ಕ್ಯಾಲೆಂಡರಿಗಿಂತ ಭಿನ್ನವಾಗಿದೆ. ಗ್ರೆಗೋರಿಯನ್ ಕ್ಯಾಲೆಂಡರ್ ನಿಗದಿತ ದಿನಾಂಕಗಳನ್ನು ಅನುಸರಿಸುತ್ತದೆ. ತುಳು ಕ್ಯಾಲೆಂಡರ್ ಸೂರ್ಯನ ಸಂಕ್ರಮಣವನ್ನು ಅನುಸರಿಸುತ್ತದೆ. ಎರಡೂ ಸೌರಮಾನ ಪದ್ಧತಿಗಳಾಗಿದ್ದರೂ, ಅವುಗಳ ಸಾಂಸ್ಕೃತಿಕ ಹಿನ್ನೆಲೆ, ಕಾಲ ವಿಭಜನೆಯ ವಿಧಾನ ಮತ್ತು ಸ್ಥಳೀಯ ಜೀವನದೊಂದಿಗೆ ಹೊಂದಿರುವ ಸಂಬಂಧ ವಿಭಿನ್ನವಾಗಿದೆ. ತುಳು ಕ್ಯಾಲೆಂಡರ್ ಒಂದೇ ಆಧಾರದ ಮೇಲೆ ತುಳುನಾಡಿನ ಪ್ರಾಚೀನ ನಾಗರಿಕತೆಯನ್ನು ಸಾಬೀತುಪಡಿಸಲು ಸಾಧ್ಯವಿಲ್ಲ. ಆದರೆ ಅದು ತುಳುನಾಡಿನ ಪ್ರಾಚೀನ ಜ್ಞಾನ ಪರಂಪರೆಯ ಒಂದು ಪ್ರಮುಖ ಸಾಂಸ್ಕೃತಿಕ ಸಾಕ್ಷಿಯಾಗಿದೆ. ಶಾಸನಗಳು, ಪುರಾತತ್ತ್ವದ ಆವಿಷ್ಕಾರಗಳು, ಪಾಡ್ದನಗಳು, ಸ್ಥಳನಾಮಗಳು, ಭಾಷಾ ಶಾಸ್ತ್ರೀಯ ಅಧ್ಯಯನಗಳು ಮತ್ತು ಕಾಲಗಣನಾ ಪರಂಪರೆಗಳನ್ನು ಒಟ್ಟಾಗಿ ವಿಶ್ಲೇಷಿಸಿದಾಗ ಮಾತ್ರ ತುಳುನಾಡಿನ ಪ್ರಾಚೀನ ಇತಿಹಾಸದ ಸಮಗ್ರ ಚಿತ್ರಣವನ್ನು ರೂಪಿಸಲು ಸಾಧ್ಯವಾಗುತ್ತದೆ. ಬಹುಶಃ ಭವಿಷ್ಯದ ಸಂಶೋಧನೆಗಳು ಬಿಸು, ಬಿಹು, ವಿಷು, ವಿಷುವ, ಸಿಂಗೊಡೆ, ಕೋಡೆ, ಇಡೆ, ಆಟಿ ಮತ್ತು ಸುಗ್ಗಿ ಮೊದಲಾದ ಪದಗಳ ಹಿಂದಿರುವ ಸಾಂಸ್ಕೃತಿಕ ಮತ್ತು ಭಾಷಾ ಶಾಸ್ತ್ರೀಯ ಪದರಗಳನ್ನು ಇನ್ನಷ್ಟು ಸ್ಪಷ್ಟಪಡಿಸಬಹುದು. ಅವುಗಳ ಮೂಲಕ ತುಳುನಾಡಿನ ಪ್ರಾಚೀನ ಕಾಲಗಣನಾ ಜ್ಞಾನವು ಹೊಸ ಆಯಾಮಗಳಲ್ಲಿ ಬೆಳಕಿಗೆ ಬರಬಹುದು. ತುಳು ಕ್ಯಾಲೆಂಡರ್ ಕೇವಲ ಕಾಲವನ್ನು ಅಳೆಯುವ ಸಾಧನವಲ್ಲ. ಅದು ಕಾಲವನ್ನೇ ಮೀರಿ ಉಳಿದುಕೊಂಡಿರುವ ತುಳುನಾಡಿನ ಸಾಂಸ್ಕೃತಿಕ ಸ್ಮೃತಿ, ಪ್ರಕೃತಿ ಜ್ಞಾನ ಮತ್ತು ನಾಗರಿಕತೆಯ ಜೀವಂತ ಸಾಕ್ಷಿಗಳಲ್ಲಿ ಒಂದಾಗಿದೆ. ಅದರ ಕುರಿತು ನಡೆಯುವ ಪ್ರತಿಯೊಂದು ಹೊಸ ಸಂಶೋಧನೆಯೂ ತುಳುನಾಡಿನ ಇತಿಹಾಸವನ್ನು ಇನ್ನಷ್ಟು ಸಮೃದ್ಧಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.

The post ತುಳು ಕ್ಯಾಲೆಂಡರ್ ಒಂದು ನಾಗರಿಕತೆಯ ಸಾಕ್ಷಿಯೇ? appeared first on www.buntsnow.com |  web-based media For Bunts Community.

ಅಲಿವೊಂದುಪ್ಪುನ ಅಂಕಾಯನದ ಚೆಂಡ್
ನಮ್ಮ ತುಳುನಾಡ್ದ ಜನೊಕ್ಕುಲೆನ ಸಂಪ್ರದಾಯೊಡು, ಕ್ರಿಷಿ, ದೈವ ದೇವತಾರಾಧನೆ, ಆಟ ಕೂಟ, ಕಂಬುಳ, ಕೋರ್ದಟ್ಟ ಇಂಚಿನ ಮಾತ ಒಂಜೊಂಜಿ ಜನ ಮೆಚ್ಚಿಗೆದ ಕ್ಷೇತ್ರೊಲಾದುಂಡು. ಒಂಜಿ ಕಾಲೊಡು ನಮ್ಮಕುಲು ಬೆನ್ನಿ ಬೆಂದ್ ದ್ ವರ್ಷೊಗು ೧೦೦/೨೦೦ ಮುಡಿ ಗೇಣಿ ಕೊರೊಂದಿತ್ತಿನ ಇಲ್ಲುಲ್ಲಾ ಇತ್ತ್ಂಡ್. ೧೯೭೦ ದ ಸಮಯೊಡು ಭೂ ಮಸೂದೆ ಬತ್ತಿನೆಡ್ದಾವರ, ಸಾಗೋಲಿ ಮಲ್ತ್ ದ್ ದಿನದೆಪ್ಪೆರೆ ಬಂಙಂದ್ ತೆರೀದ್ ಜೋಕುಲೆನ್ ಬೊಂಬಾಯಿಗ್ ದೇರಿಯೆರ್. ನಮ್ಮ ಜೋಕುಲು ಜುವ್ವ ಗಟ್ಟಿತ್ತ್ ದ್ ಚುರುಕಾದಿತ್ತಿನೆಟ್ಟಾತ್ರ ಒಲ್ಪಾ ಪೋಂಡಲಾ ನೀಂದೊಂದಿತ್ತೆರ್. ಊರುಡು ಅಂಚಿನ ವಾತಾವರಣೊಡು, ಮಸ್ತ್ ಜನೊಕ್ಕುಲ್ಡಪ್ಪ ಮಲ್ಲ್ಯಾತಿನೆಟ್ಟಾತ್ರ ಸಮಾಜೊಡು ಬದುಕುನೆಂಚಾಂದ್ ತೆರಿಯೊಂದೆರ್. ಎಚ್ಚಿನಕುಲು ಕೋಟೆಡೆ ಕೆಲಸ ಬೊಕ್ಕ ಅಲ್ಪಲ್ಪನೆ ಉಂತೆರೆಲಾ ಇತ್ತಿನೆಟ್ಟಾತ್ರ, ಬಯ್ಯದ ೫/೬ ಗಂಟೆಡ್ದ್ ಬೊಕ್ಕ ದಾಲ ಕೆಲಸ ಇಜ್ಜಿ, ಇಲ್ಲಡೆ ಪೊಯೆರೆ ಇಜ್ಜಿ, ಅಲ್ಪನೆ ಮುಟ್ಟೊಡೇ ನಮ್ಮ ಹಿರಿಯೆರ್ ಅಕಲ್ನ ದೂರ ದೃಷ್ಟಿಡ್ ಮಲ್ದಿನ, ಕನ್ನಡ ಮಾಧ್ಯಮದ ರಾತ್ರೆ ಶಾಲೆ ಏರ್ಪಾಡ್ ಮಲ್ತಿತ್ತಿನೆಟ್ಟಾತ್ರ, ಕೆಲವೆರ್ ರಾತ್ರೆ ಶಾಲೆಗ್ ಪೋಯೆರ್, ಕೆಲವೆರ್ ಚೆಂಡ್ ಗೊಬ್ಬೆರೆ ಅಲ್ಪದ ಅದಗದ ಮಂಗಳೂರು ಮೈದಾನ್, ಕ್ರಾಸ್ ಮೈದಾನ್, ಆಝಾದ್ ಮೈದಾನ್ಗ್ ಪೋಯೆರ್. ಈ ರಡ್ಡ್ ಕ್ಷೇತ್ರೊಡ್ಲಾ ನಮ್ಮ ಜೋಕುಲು ಬಾರಿ ಉಷಾರಾಯೆರ್. ಅಂಚಾದ್ ಚೆಂಡ್ ಗೊಬ್ಬಿನಕಲೆಗ್ಲಾ, ಕಲ್ತಿನಕಲೆಗ್ಲಾ ಟಾಟ, ಮಫತ್ಲಾಲ್, ಮಹೀಂದ್ರ, ಓರ್ಕೆ, ರೈಲ್ವೆ, ಬ್ಯಾಂಕ್ಲೆಡ್ ಮಾತ ಕೆಲಸ ತಿಕ್ಂಡ್. ಕೆಲವೆರ್ ಹೋಟೆಲ್, ಕ್ಯಾಂಟಿನ್ ಡ್ ಕೆಲಸ ಮಲ್ತೆರ್, ಈ ಕ್ಷೇತ್ರದಕುಲ್ಲಾ ಎಡ್ಡೆ ಉಷಾರಾಯೆರ್. ಇತ್ತೆ ಎಚ್ಚಿನಕಲ್ನ ಜೋಕುಲು ಎಡ್ಡೆ ಕಲ್ತ್ ದ್, ಎಡೆಡ್ಡೆ ಕಂಪನಿಲೆಡ್ ಕೆಲಸಾಂಡ್. ಕೆಲವೆರ್ ಊರುಗು ಪೋಯೆರ್. ಕೆಲವೆರ್ ಹೋಟೇಲ್, ಬಾರ್ ಮಾತ ಮಲ್ತೆರ್. ಚೆಂಡ್ ಗೊಬ್ಬುದಿನಕಲ್ನಲಾ ಜೀವನ ಪ್ರಗತಿಯಾಂಡ್, ನಮ್ಮ ದೇಶಲ ಪ್ರಗತಿಯಾಂಡ್.

ಇತ್ತೆದ ಕಾಲೊಡು ನಮ್ಮ ಊರುಡು ಫಿರಾಕ್ ಡ್ದಿಂಚಿ ಬೈದಿನ ಅಂಕ ಆಯನೊಡು ನಡತೊಂದಿತ್ತಿನ ಚೆಂಡ್ ದ ಪೊರ್ಲು ಉಂತೊಂದು ಬರೊಂದಿತ್ತಿಲೆಕ ತೋಜುಂಡು. ನಮ್ಮ ಈ ಪೊರ್ಲುದ ಚೆಂಡಾಟೊನು ಉಂತಾವಂದೆ, ನಮ್ಮ ಜೋಕುಲೆನ್ ಒಟ್ಟುಪಾಡ್ದ್ ಇತ್ತೆದ ನಿಜವಾಯಿನ ಅಂತರ್ರಾಷ್ಟೀಯ ಮಟ್ಟದ ಚೆಂಡಾಟೊಗು ಪರಿವರ್ತನೆ ಮಲ್ತ್ ದ್, ಪರಿವರ್ತನೆನೆ ಪ್ರಗತಿದ ಮೂಲ ಪಂಡಿಲೆಕ, ಆ ಆ ದೈವ ದೇವಸ್ಥಾನೊಗು ತಾಗುನ ಊರುದ ಟೀಮ್ ಮಲ್ತ್ ದ್ ಅಕಲ್ನ ಮದ್ಯೊಡು, ೧೦ ದಿನೊಡ್ದುಂಬುವೇ ಒಂಜಿ ಟೂರ್ನಮೆಂಟ್ ದೀದ್ ಐತ್ತ ಫೈನಲ್ ಮ್ಯಾಚಿನ್ ಜಾತ್ರೆದಾನಿ ದೀಂಡ ನಮ್ಮ ಊರ್ದಕಲ್ಡ ಒಂಜಿ ಪೊಸ ಉಲ್ಲಾಸ ಪೊಸ ಒಗ್ಗಟ್ಟ್ ಸುರುವಾಯೆರೆ ಸಾದ್ಯ ಉಂಡು. ಪಿರಾಕ್ ಡ್ದಿಂಚಿ ಈ ದೈವ ದೇವಸ್ಥಾನೊಲೆಡ್ ಈ ಚೆಂಡ್ ದ ಸಂಪ್ರದಾಯ ನಡತೊಂದುಂಡು. ಅಂಚಿನೆಟ್ಟ್ ಪೊಳಲಿ, ಜಂತೊಟ್ಟು, ತೋಕೂರು, ಕಂಡೇವು, ಪಡ್ರೆ, ಬಪ್ಪನಾಡ್ ಇಂಚ ಮಾತ ಮಸ್ತ್ ಕಡೆಟ್ಟಾಪುಂಡು. ಈ ರೀತಿ ಆಂಡ ನಮ್ಮ ಜಾತ್ರೆಲೆಗ್ ಮಸ್ತ್ ಜವನೇರ್ಲ, ಜನೊಕ್ಕಲ್ಲಾ ಸೇರೆರ್. ಅತ್ತಾವಂದೆ ನಮ್ಮ ಹಿರಿಯೆರ್ ಮಲ್ದಿನ ಕಟ್ಟು ಕಟ್ಟಲೆಲಾ ಒರಿವು ಪಂಡ್ದ್ ಎನ್ನ ಅನಿಸಿಕೆ.

ಈ ವಿಷಯೊನು ಬರೆವೊಡ್ಡ ದುಂಬು ನೆತ್ತ ವಿಷಯೊನು ನಮ್ಮ ತೋಕೂರು ಗುತ್ತಿನಾರಾಯಿನ ದಿವಾಕರ್ ಆಳ್ವೆರ್ಡಲಾ ತೆರಿವೊಂದು ಆರ್ನ ಆಶೀರ್ವಾದಲಾ ಗೆತೊಂಡೆ. ಅಂಚೆನೆ ನಮ್ಮ ತಡಂಬೈಲ್ದ ನಿರಂಜನ್ ಶೆಟ್ಟಿ, ಮೇರ್ ಯೇರ್ ಇಂಡಿಯ ಫುಟ್ಬಾಲ್ ಟೀಮ್ದ ಮುಖ್ಯ ಸದಸ್ಯೆರಾದಿತ್ತ್ ದ್ ಅತ್ತಾವಂದೆ ಮಹಾರಾಷ್ಟ್ರ ರಾಜ್ಯೊಗುಲಾ ಗೊಬ್ಬುದು ನಮ್ಮ ತುಳುವೆರೆಗೊಂಜಿ ಕೀರ್ತಿ ಕನದ್ದಿನ ಆಟಗಾರೆರೆಡ್ ಮೇರ್ಲ ಒರಿಯಾದುಲ್ಲೆರ್ ಇಂದ್ ಪನೆರೆ ಬಾರಿ ಅಭಿಮಾನಾಪುಂಡು. ಅತ್ತಾವಂದೆ ನಮ್ಮ ಪಡ್ರೆದ ಪದ್ಮನಾಭ ನರ್ಸಣ್ಣ ಶೆಟ್ಟಿ ಮೇರ್ ಎಲ್ಯ ಪ್ರಾಯೊಡು ಮುಂಬಯಿಗ್ ಪೋದು, ಅಲ್ಪ ಕ್ಯಾಂಟೀನ್ಡ್ ಕೆಲಸ ಮಲ್ತ್ ದ್ ಅಂಚೆನೆ ಶ್ರೀ ಗುರುನಾರಾಯಣ ರಾತ್ರಿ ಶಾಲೆಗ್ ಪೋವೊಂದಿತ್ತಿಲೆಕಾನೆ ಫುಟ್ಬಾಲ್ಲ ಎಡ್ಡೆ ಗೊಬ್ಬೊಂದಿತ್ತಿನೆಟ್ಟಾತ್ರ, ಐತ್ತ ಬಲೋಟ್ಟೆ ಯೂನಿಯನ್ ಬ್ಯಾಂಕ್ ಡ್ ಕೆಲಸಾದ್, ಅಲ್ಪದ ಫುಟ್ಬಾಲ್ ಟೀಮ್ದ ಎಡ್ಡೆ ಆಟಗಾರೆ ಆದಿತ್ತ್ ದ್ ಸದ್ಯೊಗು ಈ ಕ್ಷೇತ್ರೊಡೆ ಸುಖ ಸಂಸಾರ ಮಲ್ತೊಂದುಲ್ಲೆರ್. ಈ ವಿಷಯೊಗು ಅಕಲ್ನಲ ಸಂಪೂರ್ಣ ಸಮರ್ಥನೆ ಬೊಕ್ಕ ಬೆಂಬಲ ಉಂಡುಂದು ಬಾರಿ ಖುಷಿಯಾಯೆರ್. ನಮ್ಮ ಈ ಚೆಂಡಾಟ ಸದಾ ಸೂರ್ಯೆ ಚಂದ್ರೆ ಉಪ್ಪುನೆಟ್ಟ ಮೆರೆಯೊಂದುಪ್ಪಡುಂದು ಆಶೆಡ್.

ಬರವು : ಡಿ.ಕೆ ಶೆಟ್ಟಿ ಸೂರಿಂಜೆ

The post ಅಲಿವೊಂದುಪ್ಪುನ ಅಂಕಾಯನದ ಚೆಂಡ್ appeared first on www.buntsnow.com |  web-based media For Bunts Community.

ಕರಾವಳಿ ಅಭಿವೃದ್ಧಿಯ ಬಗ್ಗೆ ಹೊಸ ಸರಕಾರದ ಕಾಳಜಿ ಸ್ವಾಗತಾರ್ಹ
ಕರಾವಳಿ ಅಭಿವೃದ್ಧಿಯ ಬಗ್ಗೆ ಹೊಸ ಸರಕಾರದ ಕಾಳಜಿ ಸ್ವಾಗತಾರ್ಹ. ಎಷ್ಟೋ ವರ್ಷಗಳಿಂದ ಕರಾವಳಿಗರು ಬೆಂಗಳೂರಿಗಿಂತ ಜಾಸ್ತಿ ಮುಂಬೈ ಹಾಗೂ ಗಲ್ಫ್ ರಾಷ್ಟ್ರಗಳಿಗೆ ಉದ್ಯೋಗ ಹಾಗೂ ಆರ್ಥಿಕತೆಗೆ ವಲಸೆ ಹೋಗಿದ್ದು ಅಷ್ಟೇ ನಿಜ. ಇದಕ್ಕೆ ಬೆಂಗಳೂರಿನ ರಸ್ತೆ ಸಂಪರ್ಕದ ತೊಂದರೆಗಳು ಕೂಡಾ ಅಷ್ಟೇ ಕಾರಣವಾಗಿದ್ದು, ವಿಭಿನ್ನ ಸಂಸ್ಕೃತಿ ಕೂಡಾ ಕಾರಣವಾಗಿದ್ದು ನಿಜ. ಕೊಡಗು, ಚಿಕ್ಕಮಗಳೂರು, ಹಾಸನದ ಜನ ಮಕ್ಕಳ ವಿದ್ಯಾಭ್ಯಾಸ, ದೇವಸ್ಥಾನ ಹಾಗೂ ಅರೋಗ್ಯ ಸೇವೆಗೆ ಮಂಗಳೂರು ಹಾಗೂ ಉಡುಪಿಯೊಂದಿಗೆ ಕರ್ನಾಟಕದ ಉಳಿದ ಭಾಗಕ್ಕೆ ಕೊಂಡಿಯಾಗಿದ್ದು ಅಷ್ಟೇ ನಿಜ. ಕರಾವಳಿ ಪ್ರವಾಸೋದ್ಯಮ 5 ಸ್ಟಾರ್ ಹೋಟೆಲ್, ಬೀಚ್, ಸ್ಪೋರ್ಟ್ಸ್, ಬ್ರುವಾರಿಸ್ ಹಾಗೂ ಕಾಸಿನೋಗೆ ತನ್ನನ್ನು ತಾನು ಸಂಕುಚಿಸಿಕೊಂಡರೆ ಅಪಾಯಕಾರಿ. ನೆರೆ ರಾಜ್ಯಗಳ ಗಾಂಜಾ, ಇತರ ಡ್ರಗ್ಸ್ ಮಾಫಿಯ ಮಂಗಳೂರಿನಿಂದ ಮಣಿಪಾಲದವರೆಗೆ ಪಸವರಿಸಿದ್ದು ಅದು ಇನ್ನೂ ಜಾಸ್ತಿಯಾಗುವ ಭಯವಿದೆ. ಮಂಗಳೂರು ಹಾಗೂ ಉಡುಪಿಯ ದಕ್ಷ ಪೊಲೀಸ್ ಅಧಿಕಾರಿಗಳು ಅದಕ್ಕೆ ಕಡಿವಾಣ ಹಾಕಿದ್ದರು ಅದು ವ್ಯಕ್ತಿಪರವಾಗಬಾರದು.

ಟೆಂಪಲ್ ಟೂರಿಸಂ, ಮೆಡಿಕಲ್ ಟೂರಿಸಮ್, ಬೀಚ್ ಟೂರಿಸಮ್, ಯೋಗ ಹಾಗೂ ಆಯುರ್ವೇದ, ಎಜುಕೇಶನ್ ಟೂರಿಸಮ್ ಹಾಗೂ ಕಲ್ಚರಲ್ ಟೂರಿಸಮ್, AI ಟೂರಿಸಮ್ ಹಾಗೂ ಅಗ್ರಿಕಲ್ಚರ್ ಟೂರಿಸಮ್, ಫಿಷರೀಸ್ ಸರಕಾರದ ಅಧ್ಯತೆಯಾಗಬೇಕು. ಮುಖ್ಯವಾಗಿ ಸ್ಥಳೀಯ ಯುವಕ ಯುವತಿಯರಿಗೆ ಉದ್ಯೋಗ, ಸ್ವಉದ್ಯೋಗ ಸೃಷ್ಟಿಯಾಗಬೇಕು. ಕರಾವಳಿಯ ಸಂಸ್ಕೃತಿಗೆ ಯಾವುದೇ ರೀತಿಯ ಧಕ್ಕೆಯಾಗದ ರೀತಿ ಸೂಕ್ಷ್ಮವಾಗಿ ಕಾರ್ಯಕ್ರಮಗಳನ್ನು ಆಳವಡಿಸುವುದು ತುಂಬಾ ಮುಖ್ಯ.

ಬರಹ : ರಾಕೇಶ್ ಅಜಿಲ

The post ಕರಾವಳಿ ಅಭಿವೃದ್ಧಿಯ ಬಗ್ಗೆ ಹೊಸ ಸರಕಾರದ ಕಾಳಜಿ ಸ್ವಾಗತಾರ್ಹ appeared first on www.buntsnow.com |  web-based media For Bunts Community.

ಬೊಂದೆ
ಎಚ್ಚಿನಗುಲು ಪಿನಯೆರ್, ಬೊಂದೆ ಪಂಡ ದಾದ ಪಂದ್. ಬೂತಾಯಿದ ನನಾತ್ ಸಸಾರದ ಪುದರೇ ಬೊಂದೆ. ಜೋರ್‌ದ ಪೊನ್ನುಲೆಗ್ ‘ನಿನನ್ ಆಲ್ ಒಂಜಿ ಬೊಂದೆಗ್ ಅಡವು ದೀವೊಲು’ ಇಂಚ ಪನುವೆರ್ ಪೊಂಜೋವುಲು ತನ್ಕ್‌ಲೆನ (ಪಾಪದ) ಆನ್ ಜೋಕುಲೆಗ್. ಒವುಲ ಒಂಜಿ ಪಿರಿಯದ ವಸ್ತುನು ಸರಿಟ್ ತೂವಂದೆ ಪತ್ತಂದೆ ಕನತಡ, ಆ ವಸ್ತ್ ಬಿಲೆಕ್ ತಕ್ಕಂತಿನ ಅತ್ತ್‌ಡ, ‘ಪೋಯೆರ್, ಬೂತಾಯಿ ಕಂತಿಲಕ್ಕ ಕನತೆರ್’ ಪಂದ್ ಇಲ್ಲದ ಬಾಕಿದಗುಲು (ಎಚ್ಚಾದ್ ಬುಡೆದಿ) ಅಂಗ್‌ಸಾವೆರ್. ಪಂಡ ಬೊಂದೆಗ್ ದಾಲ ಬಿಲೆನೇ ಇಜ್ಜಿ. ದುಂಬು ನಮ್ಮೂರ್‌ದ ಕಡಲ್‌ಡ್ ಬಾರಿ ಬೂತಾಯಿದ ಚೊಪ್ಪ. ಸಂತೆಡ್ ಪಲ್ಲಾಯಿಡ್ ಗೋರುದು ಮಾರುನು ಬೂತಾಯಿ, ಚಕ್ರೊಗು (25 ನಯಾ ಪೈಸೆ) ಒಂಜಿ ಪಲ್ಲಾಯಿ ನಿಲ್ಕೆ. ಲೆಕ್ಕ ಮಲ್ತ್ ಏರ್ ಕುಲ್ಲುನು, ರಡ್ಡ್ ರಡ್ಡ್ ನಾಲ್, ನಾಲ್ ನಾಲ್ ಆಜಿ, ಆಜಿ ಆಜಿ.. ಪನೊಂದು. ಒರೊರಾ ರಂಪೊನಿಗ್ ಮಸ್ತ್ ಬೂತಾಯಿ ಬೂರ್ದು, ಮಾರ್ದ್ ಪೋವಂದೆ, ಮರಿಯೊಲೊಡು ನುಂಗಾವರೆಲಾ ಆವಂದೆ, ಕಡೆಕ್ ಕುಟ್ಟೆ ಮಲ್ಪುನು. ಪಂಡ ಲಾರಿಗಟ್ಟಲೆ ಬೊಂದೆನ್ ಮನ್ನ ಅಡಿಕ್ ಪಾಡ್ದ್, ಕುರಿಪಾದ್ ಮಲ್ತಿನ ಗೊಬ್ಬರೊಗು ಕುಟ್ಟೆ ಗೊಬ್ಬರ ಪನ್ಪೆರ್. ಬೊಂದೆ ಪಂಡ ಏತ್ ಸಸಾರ ಪಂಡ, ‘ಅಂಬಡೆ ಬುಲೆದ್ ಕುಂಬುಡ ಆವಾ, ಬೂತಾಯಿ ಬುಲೆಂಡ ಬಂಗುಡೆ ಆವಾ?’ ಪಂದ್ ಒಂಜಿ ಗಾದೆ ಉಂಡು. ಅಪಗಾ ಬಂಗುಡೆಗ್ ಎಡ್ಡೇನೆ ಮರ್ಯೆದಿ ಉಂಡು. ಎಲ್ಯ ಜೋಕುಲು ಲಡಾಯಿ ಮಲ್ತೊಂದು ಪೆಟ್ಟ್ ಕೊರೊನ್ನಗ, ಐಟ್ ಪಾಪದ ಬಾಲೆಗ್ ಪನುವೆರ್ ಪೆರಿಯಾಕ್ಲು ‘ನನ ಬೂತಾಯಿ ಕೊರ್ದು ಬಂಗುಡೆ ಗೆತೊನಡ’. ಪಂಡ ಪಾಪದ ಬಾಲೆ ಸುರುಕು ಮೆಲ್ಲ ಮುಟ್ಟಾಂಡ (ಪೆಟ್ಟ್), ಆ ಜೋರುದ ಬಾಲೆ ಕಯಿತ್ (ಜೋರುಡು) ಹಾಕುಂಡು ಪಂದ್ ಪನ್ಪಿನಿ.

ಮರಿಯಾಲೊಡು ಮರಕಾಲ್ದಿ ಬೂತಾಯಿ ಕನತ್‌ದ್, ಗೆತೊನಿ ಗೆತೊನಿ ಪಂದ್ ರಂದುನ ಇತ್ಂಡ್. ಅಪಗ, ಮೀನ್‌ಗ್ ಪಾಡರೆ ಪುಲಿ ಇಜ್ಜಿ ಪನುವೆರ್ ಇಲ್ಲಡ್. ಮೀನ್‌ದ, ತೆತ್ತಿದ ರಸತ ಕಯಿಪುಗು ಪುದರೇ ‘ಪುಲಿ’. ಮೀನ್‌ದ ಪುಲಿ, ತೆತ್ತಿದ ಪುಲಿ. ಬೆರನೆರ್ ಕಾಚಿ ಕುಂಬುಡ, ತೌತೆದ ‘ಹುಳಿ’ ಮಲ್ಪುವೆರ್. ನಮ ಅವ್ವೆನ್ ಪುಲಿ ಕೊದ್ದೆಲ್ ಪನ್ಪ. ಅಂಚ ಬೂತಾಯಿಗ್‌ಲಾ ಮಸ್ತ್ ಪುಲಿ ಬೋಡು, ಪುನ್ಕೆದ ಪುಲಿ ಎಡ್ಡೆ, ಇಜ್ಜಿಡ ಕಡೆಕ್ ಕರ್ಂಡೆ ಪುಲಿಲಾ ಆಪುಂಡು. ಕರ್ಂಡೆದ ಕೊಡಿ (ತೆಗ್‌ಲೆ ಇರೆ) ಪಾಡ್ದ್‌ಲಾ ಬೂತಾಯಿದ ಪುಲಿ ಮಲ್ತೊಂದು ಇತ್ತೆರ್. ಮೀನ್‌ಗ್ ಪುಲಿ ಮುಂಚಿ ಕೊಡಕ್ಕೆನೆ ಆವೊಡು, ತಾರಾಯಿ ಒಂತೆ ಇಯಾವುಂಡು. ಮೀನ್‌ಲೆಡ್ ಬೂತಾಯಿ ಮಹಾ ಪುರಲ್. ತಿಂದಿನ ಮನದಾನಿ ಮೆಯಿ ಬೆಗತ್ಂಡ, ಬೆಗರ್‌ಲಾ ಪುರಲ್ ಬರ್ಪುಂಡು. ಇ ಹೋಟೆಲ್‌ಲೆಡ್ ನಿಗಲೆಗ್ ಬುತಾಯಿದ ಪುಲಿ ತಿಕ್ಕಂದ್. ಒಂಜೈವ ವರ್ಸ ದುಂಬು, ಎಂಕಲೆ ಊರುದ ಕಲಿತ ಗಡಂಗ್‌ಡ್ ಮೋಂಟನ್ನನ ಬೂತಾಯಿ ಪ್ರೈ ಪುದರ್ ಪೋತಿನ. ಯಾನ್ ಏತೋ ವರ್ಸೊಡು ಬೂತಾಯಿ ತಿನೊಂದು ಇತುಜಿ. ಅಂಚ ಕೋಡೆ ಬೊಂದೆ ಕಂತಿನಿ. ಮೂಲು ಕಡಲ್‌ದ ಬೂತಾಯಿಲಾ ತಿಕ್ಕುಂಡು, ಕೆದುತ (ಚಪ್ಪೆ ನೀರ್‌ದ) ಲಾ ತಿಕ್ಕುಂಡು. ಚೂರೇ ಚೂರು ಪುರಾಲ್ ಇಜ್ಜಿ. ಪಟೊಟು ಪಾಡ್ದಿನ ಆ ಬೂತಾಯಿಲು ದಾನೆ ಬಂಗುಡೆಡ್ದ್ ಮಸ್ತ್ ಎಲ್ಲಿ ಉಲ್ಲನಾ? ಒಂಜೊಂಜಿ 75 /80 ಗ್ರಾಂ ಉಲ್ಲ. ಐನ್ ಬೂತಾಯಿಗ್ 160 ರುಪಾಯಿ ಕೊರಿಯೆ. ಚಡ್ತೆ ಮಲ್ಪುಲೆಕ್ಕ ಇಜ್ಜಿದೇ ಮೂಲು.

ಮುಲ್ತ ಮನ್ನ ಬಿಸಲೆಡ್, ನಮ್ಮೂರುದ ಪುಲಿ, ಮುಂಚಿ ಪಾಡ್ದ್ ಕೊಡಕ್ಕೆನದ ಪುಲಿ ಮಲ್ತೊಲು ಮೋಲು. ರಡ್ಡ್ ಬಾಯಿ ನುಪ್ಪು ಎಚ್ಚ ಸೇರ್ಂಡ್ ಪನ್‌ಕ. ಬೂತಾಯಿ ಒಂಜಿ ಸೂಪರ್ ಫುಡ್‌ಗೆ. ಕೊಲೆಸ್ಟ್ರಾಲ್ ಬೊಕ್ಕ ಟ್ರೈಗ್ಲಿಸರೈಡ್‌‌ಲೆನ್ ಕಡಿಮೆ ಮಲ್ಪುನ ಒಮೆಗಾ-3 ಮಸ್ತ್ ಉಂಡುಗೆ. ಅಂಚೆನೆ ಎಲು ಬೊಕ್ಕ ನರೊಕುಲೆಗ್ ಅಗತ್ಯ ಬೋಡಾಪಿನ ವಿಟಾಮಿನ್ ಡಿ, ಬಿ12 ಬೂತಾಯಿಡ್ ಉಂಡುಗೆ. ಸುಲಬೊಡು ಜೀರ್ನ ಆಪಿನ ಪ್ರೋಟೀನ್ ಅತ್ತಾವಂದೆ ರಂಜಕ, ಕ್ಯಾಲ್ಸಿಯಂ, ಕರ್ಬ ಇಂಚಿತ್ತಿನ ಕನಿಜೊಲು ಬೊಂದೆಡ್ ದಿಂಜಿದ್ ಉಂಡುಗೆ. ಶುಭ ಮಂಗಲದ ಸಿನಿಮಾದ ‘ಸೂರ್ಯಂಗು ಚಂದ್ರಂಗೂ ಬಂದಾರೆ ಮುನಿಸು, ನಗ್ತಾದ ಬೂತಾಯಿ ಮನಸ್ಸು….’ ಪದ ಕೇಂಡಿನಾತ್ ಸರ್ತಿ ಬೂತಾಯಿಲಾ ನಿನೆಪಾಪುಂಡು, ಭೂ ತಾಯಿ ದಾಯೆಗ್ ತೆಲುಪುವೊಲು ಪಂದ್ ಸೋದ್ಯಲಾ ಆಪುಂಡು. ಆಂಡ ಮುಲ್ಪ ‘ನಗ್’ ಪನ್ನಗ ತೆಲಿಪುನು ಪಂದ್ ಅರ್ತನಾ, ನಗ್ಗು (ಞಗ್ಗ್‌) ಪಂಡ ನಲ್ಲಿಯುನು ಪಂದ್ ಅರ್ತನಾ? ಮನಸ್ ಮುದ್ಯುನು (ತುಂಡಾಪಿನಿ) ಪನ್ಪಿನ ಕೇಂದ್ ಇಪ್ಪರ್.

ಬರವು : ಕೌಡೂರು ನಾರಾಯಣ ಶೆಟ್ಟಿ ಇಟೆಲಿ

The post ಬೊಂದೆ appeared first on www.buntsnow.com |  web-based media For Bunts Community.

ಪೂಜೆಯ ಬಳಿಕ ಆರತಿ ತಟ್ಟೆಗೆ ಕಡ್ಡಾಯವಾಗಿ ಹಣ ಹಾಕಬೇಕು ಯಾಕೆ?
ಸನಾತನ ಹಿಂದೂ ಧರ್ಮದಲ್ಲಿ ದೇವಸ್ಥಾನಗಳಿಗಾಗಲಿ ಅಥವಾ ಮನೆಯಲ್ಲಾಗಲಿ ಪೂಜೆ ಮುಗಿದ ನಂತರ ದೇವರಿಗೆ ಮಹಾ ಮಂಗಳಾರತಿ ಮಾಡುವುದು ಕಡ್ಡಾಯ. ಆದರೆ, ಆರತಿ ತಟ್ಟೆಯನ್ನು ಭಕ್ತರ ಮುಂದೆ ತಂದಾಗ ಅದಕ್ಕೆ ಕಡ್ಡಾಯವಾಗಿ ಹಣ ಅಥವಾ ನಾಣ್ಯಗಳನ್ನು ಹಾಕುವ ಸಂಪ್ರದಾಯ ಇಂದಿಗೂ ನಡೆದುಕೊಂಡು ಬಂದಿದೆ. ಇದು ಕೇವಲ ಮೂಢನಂಬಿಕೆಯಲ್ಲ ಅಥವಾ ಬಲವಂತದ ಆಚರಣೆಯಲ್ಲ. ಇದರ ಹಿಂದೆ ಆಳವಾದ ಧಾರ್ಮಿಕ, ಐತಿಹಾಸಿಕ ಮತ್ತು ವೈಜ್ಞಾನಿಕ ಕಾರಣಗಳಿವೆ ಎಂದು ಶಾಸ್ತ್ರ ಹೇಳಿದೆ. ಶಾಸ್ತ್ರಗಳ ಪ್ರಕಾರ, ಭಗವಂತನು ನಮಗೆ ನೀಡಿರುವ ಐಶ್ವರ್ಯ, ಆರೋಗ್ಯ ಮತ್ತು ಪ್ರಕೃತಿಯ ಕೊಡುಗೆಗಳಿಗೆ ಪ್ರತಿಯಾಗಿ ನಾವು ಕೃತಜ್ಞತೆ ಸಲ್ಲಿಸಬೇಕು. ಆರತಿ ತಟ್ಟೆಗೆ ನಾಣ್ಯವನ್ನು ಹಾಕುವುದು ಎಂದರೆ ನಮ್ಮಲ್ಲಿರುವ ‘ಮಮಕಾರ’ ಮತ್ತು ‘ಅಹಂಕಾರ’ವನ್ನು ದೇವರ ಪಾದಕ್ಕೆ ಅರ್ಪಿಸುವುದು ಎಂದರ್ಥ. ದೇವಸ್ಥಾನಕ್ಕೆ ಹೋದಾಗ ಬರಿಗೈಯಲ್ಲಿ ಹೋಗಬಾರದು ಮತ್ತು ಬರಿಗೈಯಲ್ಲಿ ವಾಪಸು ಬರಬಾರದು ಎಂಬ ನಿಯಮವಿದೆ. ಭಕ್ತಿಪೂರ್ವಕವಾಗಿ ನೀಡುವ ಈ ಕಾಣಿಕೆ ಮನುಷ್ಯನಲ್ಲಿ ಕಂಜೂಸು ಗುಣವನ್ನು ದೂರ ಮಾಡಿ, ತ್ಯಾಗ ಮನೋಭಾವನೆಯನ್ನು ಬೆಳೆಸುತ್ತದೆ.

ಪ್ರಾಚೀನ ಇತಿಹಾಸವನ್ನು ಗಮನಿಸಿದರೆ, ದೇವಸ್ಥಾನಗಳು ಕೇವಲ ಪೂಜಾ ಸ್ಥಳಗಳಾಗಿರಲಿಲ್ಲ. ಅವು ಇಡೀ ಸಮಾಜದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಾಗಿದ್ದವು. ರಾಜರು ಮತ್ತು ಶ್ರೀಮಂತರು ದೇವಸ್ಥಾನಗಳಿಗೆ ಭಾರಿ ದಾನ ನೀಡುತ್ತಿದ್ದರು. ಆದರೆ ಸಾಮಾನ್ಯ ಜನರಿಗೂ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಲು ಅವಕಾಶ ಸಿಗಲೆಂದು ಆರತಿ ತಟ್ಟೆಗೆ ಸಣ್ಣ ಕಾಣಿಕೆ ಹಾಕುವ ಪದ್ಧತಿ ಜಾರಿಗೆ ಬಂತು. ಈ ರೀತಿ ಸಂಗ್ರಹವಾದ ಹಣವನ್ನು ದೇವಸ್ಥಾನದ ದೀಪದ ಎಣ್ಣೆ, ಪೂಜಾ ಸಾಮಗ್ರಿಗಳು, ಅರ್ಚಕರ ಜೀವನೋಪಾಯ ಹಾಗೂ ಅಲ್ಲಿಗೆ ಬರುವ ಬಡ ಭಕ್ತರ ಅನ್ನದಾನಕ್ಕೆ ಬಳಸಲಾಗುತ್ತಿತ್ತು. ಹಳೆಯ ಕಾಲದಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳು ಸಂಪೂರ್ಣವಾಗಿ ಚಿನ್ನ, ಬೆಳ್ಳಿ ಅಥವಾ ತಾಮ್ರದ ಲೋಹದಿಂದ ಮಾಡಲ್ಪಟ್ಟಿದ್ದವು. ಆರತಿಯನ್ನು ಸಾಮಾನ್ಯವಾಗಿ ತಾಮ್ರ ಅಥವಾ ಹಿತ್ತಾಳೆ ತಟ್ಟೆಯಲ್ಲೇ ಬೆಳಗಲಾಗುತ್ತದೆ. ಲೋಹದ ನಾಣ್ಯಗಳು ತಟ್ಟೆಗೆ ಸ್ಪರ್ಶಿಸಿದಾಗ ಮತ್ತು ಕರ್ಪೂರದ ಶಾಖ ತಗುಲಿದಾಗ, ಅಲ್ಲಿ ಒಂದು ಧನಾತ್ಮಕ ಶಕ್ತಿ ಹಾಗೂ ಕಂಪನ ಉತ್ಪತ್ತಿಯಾಗುತ್ತದೆ. ಭಕ್ತರು ಆರತಿ ತೆಗೆದುಕೊಳ್ಳುವಾಗ ಕೈಗಳನ್ನು ತಟ್ಟೆಯ ಹತ್ತಿರ ತಂದಾಗ ಆ ದಿವ್ಯ ಲೋಹದ ಶಕ್ತಿ ಅವರ ದೇಹವನ್ನು ಪ್ರವೇಶಿಸುತ್ತದೆ ಎಂಬ ವೈಜ್ಞಾನಿಕ ನಂಬಿಕೆಯೂ ಇದೆ. ಶಾಸ್ತ್ರಗಳ ಪ್ರಕಾರ, ಆರತಿ ತಟ್ಟೆಗೆ ಇಷ್ಟೇ ಹಣ ಹಾಕಬೇಕು ಎಂಬ ಯಾವುದೇ ಕಟ್ಟುಪಾಡುಗಳಿಲ್ಲ. ನಿಮ್ಮ ಶಕ್ತಿ ಮತ್ತು ಭಕ್ತಿಗೆ ಅನುಗುಣವಾಗಿ ಶ್ರದ್ಧೆಯಿಂದ ಒಂದು ರೂಪಾಯಿ ಹಾಕಿದರೂ ಅದು ಕೋಟಿ ಪುಣ್ಯವನ್ನು ತರುತ್ತದೆ. ಇಲ್ಲಿ ಭಕ್ತಿ ಪ್ರಧಾನವೇ ಹೊರತು ಹಣದ ಮೌಲ್ಯವಲ್ಲ ಎಂದು ಧರ್ಮಶಾಸ್ತ್ರಗಳು ಸಾರುತ್ತವೆ.

ಕೃಪೆ : ಸತ್ಸಂಗ

The post ಪೂಜೆಯ ಬಳಿಕ ಆರತಿ ತಟ್ಟೆಗೆ ಕಡ್ಡಾಯವಾಗಿ ಹಣ ಹಾಕಬೇಕು ಯಾಕೆ? appeared first on www.buntsnow.com |  web-based media For Bunts Community.

ಶಿಕ್ಷಣದ ಲಕ್ಷಣ ಬದುಕು ಕಲಿಸುವಂತಿರಲಿ
ಬೇಸಿಗೆ ಶಿಬಿರ, ಕೆಲವಷ್ಟು ಕಾರ್ಯಾಗಾರ, ಟ್ರಿಪ್, ಅಪ್ಪ ಅಮ್ಮನ ಜೊತೆ, ಪ್ರೆಂಡ್ಸ್ ಜೊತೆ ತಿರುಗಾಟ, ಆಟ, ಕೂಟ, ಮೋಜು ಮಸ್ತಿ ಎಲ್ಲವೂ ಮುಗಿಸಿ ಮಕ್ಕಳು ಶಾಲೆಗೆ ತಯಾರಾದರು. ಸ್ವಲ್ಪ ದಿವಸ ರಿಲೇಕ್ಸ್ ಆಗಿದ್ದ ಅಪ್ಪ ಅಮ್ಮನೂ ಮತ್ತೆ ಬೆಳಿಗ್ಗೆ ಬೇಗ ಎದ್ದು ಮಕ್ಕಳಿಗೆ ಬೇಕಾದ್ದೆಲ್ಲಾ ತಯಾರು ಮಾಡುವ ಬೆಳಿಗ್ಗಿನ ಗಡಿಬಿಡಿ ಮತ್ತೆ ಪ್ರಾರಂಭವಾಯಿತು. ಮೊದಲಾಗಿ ದಾಖಲಾಗಿ ಶಾಲೆಗೆ ಹೊರಟ ಪುಟಾಣಿಗಳಿಗೆ ಏನೇನೆಲ್ಲಾ ಶೃಂಗಾರ ಮಾಡಿ ಅವರ ಜೊತೆ ಫೋಟೋ, ಸೆಲ್ಫಿ ತೆಗೆದು ಬೀಳ್ಕೊಡುವ ಸುಸಮಯ ಮತ್ತೆ ಬಂತು. ಎಲ್ಲಾ ಮುದ್ದು ಪುಟಾಣಿಗಳಿಗೂ ಶಿಕ್ಷಣದ ಹೊಸ ವರ್ಷದ ಶುಭಾಶಯಗಳು. ಯುನಿಫಾರ್ಮ್ ಶೂ ಧರಿಸಿ, ಕೈಯಲ್ಲಿ ಒಂದು ನೀರಿನ ಬಾಟಲ್, ಬೆನ್ನಿಗೆ ಪುಸ್ತಕದ ಮಣ ಭಾರದ ಚೀಲ ಹೊತ್ತು ಧೋ ಎಂದು ಸುರಿವ ಮಳೆಗೆ ಕೊಡೆಯೋ ರೈನ್ ಕೋಟೋ ಧರಿಸಿ ನಡೆದು ಹೋಗುತ್ತಿದ್ದ ಆ ಕಾಲ ಕಳೆಯಿತು. ಈಗ ಎಲ್ಲವೂ ಬದಲಾಗಿದೆ. ಇದೆಲ್ಲವೂ ತಂದೆಯೋ ತಾಯೋ ಹೊತ್ತು ಮಗುವಿನ ಕೈ ಹಿಡಿದು ಮನೆಯೆದುರು ಬರುವ ಶಾಲೆಯ ಬಸ್ಸೋ ವ್ಯಾನೋ ಹತ್ತಿಸುವ ದಿನಗಳು. ಮಳೆಗೆ ತಾಯಿ ತಂದೆ ಒದ್ದೆಯಾದರೂ ಮಕ್ಕಳು ಒದ್ದೆಯಾಗದ ಹಾಗೆ ಜಾಗ್ರತೆ ವಹಿಸುವ ಪುಣ್ಯಾತ್ಮರು. ಈ ಪುಣ್ಯ ನಮಗಿರಲಿಲ್ಲ. ಆಗ ತಂದೆಯೋ ತಾಯೋ ಅವರವರ ಕೆಲಸ ಕೃಷಿ ಕೆಲಸವೊ, ದನದ ಹಟ್ಟಿಯಲ್ಲೋ, ಮನೆ ಕೆಲಸದಲ್ಲೋ, ಗದ್ದೆಯಲ್ಲೋ ಇರುತ್ತಿದ್ದರು. ನಾವು ಮನೆಯಿಂದ ಹೋಗುತ್ತಿದ್ದ ನಮ್ಮ ಅಣ್ಣ ಅಕ್ಕನೋ ಅಥವಾ ನೆರೆಮನೆಯವರ ಜೊತೆಯೋ ಶಾಲೆಗೆ ಹೋಗಬೇಕಿತ್ತು. ಆಗ ಬಸ್ಸು ಬಿಡಿ ಸೈಕಲ್ಲೂ ನೋಡಲು ಸಿಗುತ್ತಿರಲಿಲ್ಲ. ಈಗಿನ ಮಕ್ಕಳಿಗೆ ಎಲ್ಲಾ ಸೌಲಭ್ಯಗಳೂ ಎಲ್ಲಾ ರೀತಿಯ ಪೂರಕ ವಾತಾವರಣದಲ್ಲಿ ಸಿಗುತ್ತಿರುವುದು ಸಂತೋಷದಾಯಕವೇ. ಈಗಿನ ಹೆಚ್ಚಿನ ಮಕ್ಕಳು ಪಾಠದಲ್ಲಿ ಒಳ್ಳೆಯ ಸಾಧನೆ ಮಾಡಿ 650 ಕ್ಕೆ 650 ಅಂಕ ಪಡೆಯುತ್ತಿದ್ದಾರೆ ಅದೂ ಖುಷಿ ಕೊಡುವ ವಿಚಾರವೇ. ಅವರಿಗೆ ಬೇರೇನೂ ಮನೆಗೆಲಸ ಕಾರ್ಯಗಳಿಲ್ಲದೆ ಕೇವಲ ಪಾಠ ಪುಸ್ತಕ ಓದುವುದು ಮಾತ್ರ ಕೆಲಸ. ಹಾಗಾಗಿ ನನಗಂತೂ ಅದು ದೊಡ್ಡ ಸಾಧನೆ ಎಂದೆನಿಸುತ್ತಿಲ್ಲ. ಆದರೂ ಈಗಿನ ಗಮನವನ್ನು ಎಲ್ಲೆಲ್ಲೋ ಕೊಂಡೊಯ್ಯುವ ಮಾಧ್ಯಮಗಳ ಸಾವಿರ ಉಪದ್ರವಗಳ ನಡುವೆ, ಅದನ್ನಾದರೂ ನಿಯತ್ತಿನಿಂದ ಮಾಡುವುದು ಅವರ ಸಾಧನೆ ಎಂದೆನಿಸಬಹುದೇನೋ? !. ಆದರೆ ಅದೇ ಹತ್ತಿಪ್ಪತ್ತು ವರ್ಷಗಳ ಮೊದಲಿನ ಮಕ್ಕಳ ಸಾಮಾನ್ಯ ಜ್ಞಾನ, ಬೌದ್ಧಿಕ ಬೆಳವಣಿಗೆ, ಮಾನಸಿಕ, ದೈಹಿಕ ಬೆಳವಣಿಗೆಗಳನ್ನು ಗಮನಿಸಿ ಇಂದಿನ ಮಕ್ಕಳಿಗೆ ಹೋಲಿಸಿದರೆ ಮಾತ್ರ ತುಂಬಾನೇ ಬೇಸರ ತರುತ್ತಿದೆ. ಹಿಂದಿನ ಬಾಲ್ಯದ ಶಾಲೆಯ ವ್ಯವಸ್ಥೆ ಒಂದೇ ಹಾಲಿನಲ್ಲಿ ಮಧ್ಯ ಮಧ್ಯೆ ವಿಭಾಜಕಗಳನ್ನು (ತಟ್ಟಿ) ಇರಿಸಿ ಮಾಡುತ್ತಿದ್ದ ಬೇರೆ ಬೇರೆ ತರಗತಿಗಳು. ಕೆಲವಾರು ಪೀರಿಯೆಡ್ ಗಳು ಹೊರಗಡೆ ಮರದ ಬುಡದ ನೆರಳಲ್ಲಿ, ಇನ್ನು ಆಟದ ಮೈದಾನದ ಮಣ್ಣಿನಲ್ಲಿ ಬಿದ್ದು ಎದ್ದು ಹೀಗೆಲ್ಲಾ ಸ್ವಚ್ಛಂದವಾದ ವಾತಾವರಣದಲ್ಲಿ ನಡೆಯುತ್ತಿತ್ತು. ಆಗ ಶಿಕ್ಷಕರು ಎಂದರೆ ಗೌರವ ಮಾತ್ರವಲ್ಲದೆ ಹೆದರಿಕೆಯೂ ಇತ್ತು. ಕಾರಣ ಅವರ ವ್ಯಕ್ತಿತ್ವ. ಅವರು ಕೇವಲ ಪಾಠ ಹೇಳಲು ಸೀಮಿತವಾಗಿರದೆ ಬದುಕು ಕಲಿಸುತ್ತಿದ್ದರು. ಅದೇ ರೀತಿ ಮನೆಯಲ್ಲೂ ಅಪ್ಪ ಅಮ್ಮ ತಮ್ಮ ಜೀವನ ಶೈಲಿಯಲ್ಲಿ ಏನೂ ಹೇಳದೆಯೇ ಕಷ್ಟದ ಕಚಗುಳಿಯ ಬದುಕು ಕಲಿಸುತ್ತಿದ್ದರು. ಶಾಲೆಯಲ್ಲಿ ಏನಾದರೂ ತಪ್ಪುಗಳು ನಡೆದು ಮಾಸ್ಟ್ರಿಂದ ಪೆಟ್ಟು ತಿನ್ನುವ ಸಂದರ್ಭ ಬಂದರೂ ಮನೆಯಲ್ಲಿ ಹೇಳುವಂತಿಲ್ಲ. ಯಾಕೆಂದರೆ ಹೇಳಿದರೆ ಮನೆಯಲ್ಲಿ ಇನ್ನೆರಡು ಪೆಟ್ಟು ಬೀಳುವ ಭಯವಿತ್ತು. ಆದರೆ ಈಗ ಶಾಲೆಯಲ್ಲೂ ಶಿಕ್ಷೆಯೇ ಇರದ ಶಿಕ್ಷಣ ಮತ್ತು ಮನೆಯಲ್ಲಿ ಎಂತ ತಪ್ಪಿಗೂ ತಂದೆ ತಾಯಿಯ ಅಭಯ.

ಆ ಕಾಲದಲ್ಲಿ ಶಿಕ್ಷಕರು ಶಿಸ್ತು ಕಲಿಸುವ ಸಿಪಾಯಿಗಳಾಗಿದ್ದರು. ಅವರೂ ಹತ್ತಾರು ಕಿಲೋಮೀಟರ್ ನಡೆದುಕೊಂಡು ಶಾಲೆಗೆ ಬರಬೇಕಾಗಿತ್ತು. ಆದರೂ ಸರಿಯಾದ ಸಮಯಕ್ಕೆ ಶಾಲೆ ತಲುಪುತ್ತಿದ್ದರು. ಆದರೆ ಕ್ಷಮಿಸಿ, ಈಗ ಹೆಚ್ಚಿನ ಶಿಕ್ಷಕರು ಸಂಬಳಕ್ಕಾಗಿ ದುಡಿವ ನೌಕರರು ಅಷ್ಟೇ. ಆ ಕಾಲದಲ್ಲಿ ಬೇಗ ಶಾಲೆಗೆ ತಲುಪಿದರೆ ಜಗಲಿಯಲ್ಲಿ ಕುಳಿತೇ ಸ್ಟಡೀ ಪೀರಿಯೆಡ್. ಅದಕ್ಕೆ ಒಬ್ಬ ಲೀಡರ್. ಟೀಚರ್ ಬರದಿದ್ದ ಪಿರಿಯಡ್ ಓದದಿದ್ದರೆ ಮಾತಾಡಿದರೆ ಅವರ ಹೆಸರು ಬರೆದು ಬೇರೆ ಟೀಚರ್ ಅಥವಾ ಮಾಸ್ಟ್ರಿಗೆ ಕೊಡಬೇಕಿತ್ತು. ಮತ್ತೆ ಶಿಕ್ಷಕರಿಂದ ಅದಕ್ಕೆ ಹೊಂದುವ ಶಿಕ್ಷೆ. ಹಾಗೆಯೇ ಆಮೇಲೆ ಶಾಲೆಯ ಜಗಲಿಯಲ್ಲಿ ಎಸೆಂಬ್ಲಿ. ಅದರಲ್ಲಿ ದಿನಪತ್ರಿಕೆಯ ಹೆಡ್ ಲೈನ್ಸ್ ಓದುವುದು, ಹೆಡ್ ಮಾಸ್ಟ್ರ ಮಾತುಗಳು. ಪ್ರಾರ್ಥನೆ ಕೊನೆಗೆ ನಾಡಗೀತೆ ಹೇಳುತ್ತಾ ಸಾಲಲ್ಲಿ ಕ್ಲಾಸ್ ರೂಮ್ಗೆ ಪ್ರವೇಶ. ಇದು ದಿನನಿತ್ಯದ ಕ್ರಮವಾಗಿತ್ತು. ಈಗ ಇದೆಲ್ಲವೂ ಅವರವರ ಕ್ಲಾಸ್ ರೂಮ್ ನ ಒಳಗೆಯೇ ನಡೆಯುತ್ತದೆ. ಇದರಿಂದ ಅದೇ ಶಾಲೆಯ ಇತರ ಕ್ಲಾಸ್ ಗಳ ಮಕ್ಕಳ ಪರಿಚಯವಾಗಲೀ, ಸಂಪರ್ಕವಾಗಲೀ ಇರದು. ಈ ಸಂವಹನ ಎಲ್ಲಿಯವರೆಗೆ ಕಡಿಮೆಯಾಗಿದೆ ಎಂದರೆ ಕೇವಲ ಮಕ್ಕಳ ಪರಿಚಯವಿಲ್ಲದಿರುವುದು ಮಾತ್ರವಲ್ಲದೆ ಅದೇ ಶಾಲೆಯ ಶಿಕ್ಷಕರ ಪರಿಚಯವೂ ಎಲ್ಲಾ ಮಕ್ಕಳಿಗೆ ಇಲ್ಲ!. ಈ ಪರಸ್ಪರ ಸಂವಹನದ ಕೊರತೆ ಇದು ಸರಿಯಲ್ಲ.

ಈಗಿನ ಹೊಸ ತಲೆಮಾರಿನ ಮಕ್ಕಳ ಹೆತ್ತವರು, ಪೋಷಕರು ಮತ್ತು ಶಾಲಾ ಮೇನೇಜ್ಮೆಂಟಿನಲ್ಲಿ ಒಂದು ಮನವಿ : ದಯವಿಟ್ಟು ಮಕ್ಕಳಿಗೆ ಸಾಧ್ಯವಾದಷ್ಟು ಪುಸ್ತಕದ ಪಾಠಕ್ಕಿಂತಲೂ ನಿತ್ಯ ಜೀವನದಲ್ಲಿ ಅಗತ್ಯವಾಗಿ ಉಪಯೋಗವಾಗುವ ಮನುಷ್ಯ ಮನುಷ್ಯನ ಸಂಬಂಧ, ಸಂಸಾರ ಮತ್ತು ಸಂಬಂಧಗಳ ಮಹತ್ವ, ನಿತ್ಯದ ಶಿಸ್ತಿನ ದಿನಚರಿ, ನೀರಿನ ಉಳಿತಾಯದ ಪ್ರಯೋಜನದ ಪಾಠ, ಕೃಷಿಕನ ಮತ್ತು ಕೃಷಿ ಉತ್ಪನ್ನಗಳ ಮಾಹಿತಿ, ಪರಿಸರದ, ಪ್ರಕೃತಿಯ ಆಗು ಹೋಗುಗಳ ಬಗೆಗಿನ ಮಾಹಿತಿ, ಮಾನವೀಯ ಮೌಲ್ಯಗಳ ಮಹತ್ವ ಇತ್ಯಾದಿಗಳನ್ನು ಸಣ್ಣ ಪ್ರಾಯದಲ್ಲೇ ಕೊಡುವ ಪ್ರಯತ್ನ ನಡೆಯಲಿ. ಕಷ್ಟದಲ್ಲಿರುವವರ ಬಗ್ಗೆ ತಾತ್ಸಾರದ ಬದಲು ಕರುಣೆ, ಅನುಕಂಪ, ಹಿರಿಯರ ಬಗ್ಗೆ ಗೌರವ, ಕಿರಿಯರಲ್ಲಿ ಪ್ರೀತಿ ಕಾಳಜಿ ಬರುವಂತಹ ವಾತಾವರಣ ನಿರ್ಮಾಣವಾಗಬೇಕಾಗಿದೆ. ಅದೇ ರೀತಿ ಮುಖ್ಯವಾಗಿ ನಮ್ಮ ಸುತ್ತಮುತ್ತಲಿನ ಸಮಾಜದ ಸಮಾಚಾರ, ಸಾಮಾಜಿಕ ಚಟುವಟಿಕೆಗಳ ಬಗ್ಗೆ ಮಾಹಿತಿ, ಪಠ್ಯವಲ್ಲದೆ ಜೀವನಕ್ಕೆ ಸಂತೋಷ ನೆಮ್ಮದಿ ಕೊಡುವಂತಹ ಹವ್ಯಾಸ, ಅಭ್ಯಾಸಗಳ ಪರಿಚಯ, ತಮ್ಮ ದೈಹಿಕ ಶುಧ್ದತೆ ಮತ್ತು ಆರೋಗ್ಯದ ಕಾಳಜಿ, ನಮ್ಮಿಂದ ಅತೀತವಾದ ಶಕ್ತಿಗಳ ಮೇಲೆ ವಿಶ್ವಾಸ, ನಂಬಿಕೆ, ಶಿಸ್ತಿನ ದಿನಚರಿಯ ಪಾಠ ಮತ್ತು ಯಾವುದಾದರೂ ಒಂದಾದರೂ ಕಲಾ ನೈಪುಣ್ಯತೆಯನ್ನು ಕಡ್ಡಾಯವಾಗಿ ಕಲಿಸುವ ವ್ಯವಸ್ಥೆಯು ಆಗಲೇಬೇಕಾಗಿದೆ. ಈಗಿನ ಯುವ ಸಮಾಜ ಮುಖ್ಯವಾಗಿ ಕಳೆದುಕೊಂಡಿರುವುದು ಈ ಮೌಲ್ಯಗಳನ್ನೇ!. ಅದನ್ನು ಹೇಳಿಕೊಟ್ಟಲ್ಲಿ ಈ ನಮ್ಮ ಮಕ್ಕಳಿಗೆ ಮುಂದೆ ಅವರ ಜೀವನದಲ್ಲಿ ಬರುವ ಯಾವುದೇ ಒತ್ತಡ, ಸಮಸ್ಯೆ, ಗೊಂದಲ, ಸಂಧಿಗ್ಧತೆಯ ಸಂದರ್ಭದಲ್ಲೂ ಸ್ಥಿರವಾಗಿ ಮತ್ತು ಧೈರ್ಯದಿಂದ ಎದುರಿಸುವ ತಾಕತ್ತು ಬರಲು ಅದು ಸಹಕಾರಿಯಾಗುತ್ತದೆ. ಅದುವೇ ನಿಜವಾದ ಜೀವನದ ತಾಕತ್ತು ಮತ್ತು ಆತ್ಮಸ್ಥೈರ್ಯ ತುಂಬುವ ಶಕ್ತಿ. ಇದಾಗದಿದ್ದರೆ, ಈಗ ದಿನನಿತ್ಯ ನೋಡುತ್ತಿರುವ ಸಣ್ಣ ಕಾರಣಕ್ಕಾಗಿ ಆತ್ಮಹತ್ಯೆ, ಡಿಪ್ರೆಷನ್ ಇಂತಹವುಗಳಿಂದ ಬದುಕನ್ನೇ ಅಂತ್ಯಗೊಳಿಸಲು ಪ್ರಯತ್ನಿಸುವವರ ಸಂಖ್ಯೆ ಮತ್ತೂ ಹೆಚ್ಚಾಗಬಹುದು!. ಇದು ಒಂದು ಆತಂಕಕಾರಿ ಬೆಳವಣಿಗೆಯಾಗಿದೆ. ಹಾಗಾಗಿ ಶಿಕ್ಷಣವೆಂಬುದನ್ನು ಕೇವಲ ಉದ್ಯೋಗ ಸಂಬಳ ಮತ್ತು ಅದರಿಂದ ಆಧುನಿಕ ಜೀವನ ನಿರ್ವಹಣೆ ಎಂಬುದಕ್ಕೆ ಮಾತ್ರ ಸೀಮಿತಗೊಳಿಸದೆ, ಈ ಬಾಲ್ಯದ ಪ್ರಾಥಮಿಕ ಶಿಕ್ಷಣದಲ್ಲೇ ಯಾವ ಪರಿಸ್ಥಿತಿಯಲ್ಲಿಯೂ ಯಾವುದೇ ಒತ್ತಡವನ್ನು ಸಹಿಸುವ ಮತ್ತು ಸುಲಲಿತವಾಗಿ ನಿಭಾಯಿಸುವ ಶಕ್ತಿಯನ್ನು ನಾವು ನಮ್ಮ ಮಕ್ಕಳಿಗೆ ಬರುವಂತೆ ಮಾಡಬೇಕಾಗಿದೆ. ಇದು ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಶಕ್ತಿ ತುಂಬುತ್ತದೆ. ಜೀವನದ ಸರಿಯಾದ ದಾರಿ ಕಲಿಸುತ್ತದೆ. ದಯವಿಟ್ಟು ಸರಕಾರದ ಶಿಕ್ಷಣ ಇಲಾಖೆಗಳೂ ಈ ಬಗ್ಗೆ ಗಮನಹರಿಸಿ ನಮ್ಮ ಭಾರತದ ಭವ್ಯ ಭವಿಷ್ಯದ ಚುಕ್ಕಾಣಿ ಹಿಡಿಯಬೇಕಾದ ನಮ್ಮ ಮುಂದಿನ ಪೀಳಿಗೆಯನ್ನು ಈ ಮೇಲಿನ ಗುಣಗಳಿಂದ ಬಲಿಷ್ಠಗೊಳಿಸಬೇಕಾಗಿದೆ. ಶಿಕ್ಷಣದಿಂದ ಜೀವನಕ್ಕೆ ಶಕ್ತಿ, ಮಕ್ಕಳಿಗೆ ಬರಲಿ ಅದರ ಮೇಲೆ ಭಕ್ತಿ, ಅದರಿಂದ ಮೂಡಲಿ ಹೊಸ ಯುಕ್ತಿ.

ಬರಹ : ಶರತ್ ಶೆಟ್ಟಿ ಪಡುಪಳ್ಳಿ

The post ಶಿಕ್ಷಣದ ಲಕ್ಷಣ ಬದುಕು ಕಲಿಸುವಂತಿರಲಿ appeared first on www.buntsnow.com |  web-based media For Bunts Community.

ಕಲ್ವೆ ಬೊಕ್ಕ ನಾಲ್ವೆರ್ ಬೇರದಗುಲು
ಒಂಜಾನೊಂಜಿ ನಕರೆ. ಆ ನಕರೆಡ್ ಒರಿ ಕಂಡು ಕಲುವೆ. ಒವ್ವಾ ಜಲ್ಮದ ಕರ್ಮ ಅರ್ದೆರೆ ಬೈದೆ. ಆ ನಕರೊಗು ಪರವೂರು, ಪರದೇಸೊಡ್ಡ್ ನಾಲ್ ಜನ ಬೇರದಗುಲು ಬತ್ತೆರ್. ಊರ್ದ ಉಲಾಯಿದ ಮಾರುನ ವಸ್ತುಲೆನ್ ಕಮ್ಮಿ ಬಿಲೆಕ್ ಗೆತೊಂದು, ದಾಸ್ತಾನ್ ಮಲ್ತ್‌ದ್, ಬಿಲೆ ಏರಿಗಿನ ಅತ್ತ್‌ಡ ಏರಾದ್ ಮಾರುನು. ಆಂತೂ ಅಗಲೆನ ಬೇರದ ಚಾತುರ್ಪಾಯೊಡು ಲಾಯಿಕ್ ಸಂಪಾದನೆ ಮಲ್ತೊಂದು ಇತ್ತೆರ್. ಉಂದೆನ್ ಆ ಕಲ್ವೆ ತೂಯೆ. ಎಂಚಂಡಲಾ ಮಲ್ತ್‌ದ್ ಆಗಲೆಗ್ ನಂಬೊಲಿಕೆ ಪುಟ್ಟಾದ್, ಅಗಲೆನ ಒಟ್ಟುಗೇ ಇತ್‌ದ್ ಅಗಲೆನ ಗಂಟ್ ಪಿಸ್ಕಾವೊಡು ಪಂದ್ ಕುಂದುಕುಸೆಲ್ ಮಲ್ತೆ. ಅಗಲೆಡ ಬಗ್ಗು ಕೋಮಟಿಗೆ ಪಾತೆರೊಂದು, ಬುಟ್ಟಿಚಾಕರಿ ಮಲ್ತೊಂದು ಅಗಲೆನ ಒಟ್ಟುಗೇ ಕುದ್ದು ಲಕ್ಕರೆ ಸುರು ಮಲ್ತೆ. ಹಾದರಗಿತ್ತಿಗ್ ನಾಸಿಗೆ ಜಾಸ್ತಿಗೆ, ಕಡಲ್ದ ಉಪ್ಪು ನೀರ್ ತಂಪುಗೆ, ಕವುಡು ಮಂಗಲೆರ್ ಬುದ್ಯಂತೆರ್‌ಗೆ, ಅಂಚೆನೆ ದುಷ್ಟೆರ್ ಮೋನೆದಕ್ಕ ತೀಪೆ ತೀಪೆ ಪಾತೆರ ಪಾತೆರುವೆರ್ಗೆ. ಇಂಚೆನೆ ಆ ಕಲ್ವೆ ಅಗಲೆನ ಚಾಕರಿ ಮಲ್ತೊಂದು, ದೊಡ್ಡು ಬಂಗಾರ್ ಲಕ್ಕಾವರೆ ಸರಿಸಮತ ಪೊರ್ತು ಗೊತ್ತುನು ಕಾತೊಂದು ಇತಿಲಕ್ಕನೇ ವರ್ಸ ರಡ್ಡ್ ವರ್ಸ ಕರಿಂಡ್. ಬೇರದಗಲೆಡ ಮಸ್ತ್ ಸಂಪೊತ್ತು ಒಟ್ಟ್ ಆಂಡ್. ಆಂಡ ದರಿದರಿ ಇಲ್ಲ್ ಎನ್ನರೆ ಪಸ್ಂಡ್. ಪಿರ ಪೋಪಿನಿ ಪಂದ್ ನಿಗದಿ ಮಲ್ತೆರ್. ಅಲ್ತ್ ಅಕಲೆನ ಊರುಗು ಪೋಪಿನ ತಾದಿ ಕಾಡ್ ಗುಡ್ಡೆ ಕಡತ್ ಪೋಪಿನ ದೂರದ ತಾದಿ, ಕಲ್ವೆರ್ ಕಾಕೆರ್ ತಾದ್ಯೆ ಪೋಪಿನಗಲೆನ ತರೆ ಮಂಡೆ ದರ್ತ್ ದೊಡ್ಡು ಬಂಗಾರ್ ಕಂಡುನ ಕಾಲ. ಅಂಚ ಅಗುಲು ಅಗಲೆಡ ಇತ್ತಿನ ಮಾತ ಆಸ್ತಿ ಬದ್‌ಕ್ ಮಾರ್ದ್, ಬಂಗಾರ್, ಪದ್ದೆಯಿ ಪನವು ಕೊರ್ದು ಒಂಜೊಂಜಿ ಎಡ್ಡೆ ವಜಿರ ಗೆತೊಂಬೆರ್. ಅವ್ವೆನ್ ದಿಂಗ್‌ದ್ ಊರುಗು ಪಿದಾಡಿಯೆರ್, ನಾಲ್ವೆರ್‌ಲಾ. ಉಂದೇನ್ ತೂದು ಕಲ್ವಗ್ ಬಾರಿ ಅಕಿಲಾಸ ಆಂಡ್. ಎನ್ನಿನ ಮನ್ನಾಂಡ್, ಪೆದ್ದಿನ ಪೊನ್ನಾಂಡ್ ಪನ್ಪಿ ಗಾದೆದಲೆಕ್ಕ ಆಂಡ್ ಕಲ್ವನ ಕೊಂತು ಕುಸೆಲ್. “ಗಂಟ್ ಲಕ್ಕಾವರೆ ಆಯಿಜಿ, ನನ ಮೊಗಲೆನ ಬೆರಿಯ ಪೋದು, ಒರಿಯೊರ್ಯಗ್ ಇಸ ಕೊರ್ದ್ ಕೆರ್ದ್, ಬಂಜಿ ಸಿಗಿತ್‌ದ್ ವಜ್ರ ಕಂಡುವೆ” ಇಂಚ ಅಲಾಚನೆ ಮಲ್ತ್‌ದ್ ಕಲ್ವೆ ಬೇರ ದಗಲೆಡ “ಈತ್ ದಿನ ಒಂಜಪ್ಪೆ ಬಾಲೆಲೆಕ್ಕ ಇತ್ತ ನಮ. ನಿಗಲೆನ್ ಬುಡ್ದ್ ಬದುಕುನ ಅಬ್ಬೆಸನೇ ತತ್ತ್ ಪೋತುಂಡು. ಇತ್ತೆ ಎನನ್ ಬುಡ್ದ್ ಪೋಯರಾಂಡ, ನಡು ನೀರ್‌ಡ್ ಕಯಿ ಬುಡಿಲೆಕ್ಕ ಆವು. ಓ ಎನ್ನ ಜೀವದ ಜೋಸ್ತಿಲೆ, ಎನನ್‌ಲಾ ನಿಗಲೊಟ್ಟುಗು ಲೆಸೊಂದು ಪೋಲೆ” ಪಂದ್ ಬುಲಿತೆ. ಕಲ್ವನ ಪಾತೆರ ಸತ್ಯ ಪಂದ್ ನಂಬಿನ ಆ ಬೇರದಗಲೆಗ್ ಪಾಪ ಪುನ್ಯ ತೋಜಿಂಡ್. ಬೇಲೆಗ್‌ಲಾ ಒಂಜಿ ಜನ ಆಪುಂಡು ಪಂದ್ ಆಯನ್‌ಲಾ ಒಟ್ಟುಗು ಲೆಸೊಂದು ಪೋಯೆರ್.

ಇಂಚ ಆ ಐವೆರ್ ನಾಲ್ ನಕರೆ, ಕೋಟೆ, ಪೇಂಟೆ, ಊರು ಕೇರಿ, ಬೊಟ್ಟು ಬೈಲ್, ಪಾಡಿ ಗುಡ್ಡೆ ಕಡತೊಂದು ಪೋದು ಒಂಜಿ ಕಾಡ ಅರುಕು ಬತ್ತೆರ್. ಅಲ್ಪ ಬೋಂಟೆದ ಮಂದೆಲು ಇತ್ತೆರ್. ಅಗುಲು ಕಾಡ ಮುರ್ಗೊಲೆನ ಬೋಂಟೆ ದೇರುನು ಕಮ್ಮಿ, ಆ ತಾದ್ಯೆ ಪೋಪಿನಗಲೆನ್ ಸೂರೆ ಮಲ್ಪುನೇ ಜಾಸ್ತಿ. ಅಗಲೆನ ಒಂಜಿ ಪಕ್ಕಿ ಏರ್ಲಾ ಪೊಸಬೆರ್ ಆ ತಾದಿಡೆ ಬತ್ತೆರ್‌ಡ ಅಗಲೆಡ ದಾದ ಸಂಪೊತ್ತು ಉಂಡು ಪಂದ್ ಲೆತ್ತ್ ಪನ್ಪುಂಡು. ಅಂಚೆನೆ ಇ ಐವೆರೆ ತೆಪ್ಪ ತೂದು ಪಕ್ಕಿ ಕರೆವುಂಡು “ಅಲಾ ಬತ್ತೆರ್, ಲಚ್ಚ ಲಚ್ಚದ ಸಿರಿ ಸಂಪೊತ್ತುದ ಜನೊಕುಲು, ಪತ್ತಿ, ಮಂಡೆ ದರ್ಪಿ”. ಕಾಡ ಕಲ್ವೆರ್ ಮೊಕಲೆನ್ ತಡೆತ್ ಉಂತಾಯೆರ್, ಮೈಟ್ ಕೈಟ್, ಪಾಡಿ ಅಂಗಿ ಕುಂಟುಡು, ಕುಂಟುದ ಗಂಟ್‌ಡ್, ನುಪ್ಪುದ ಪೊದಿಕೆಡ್ ಕೊಡಿ ಕಡೆ ನಾಡಿಯೆರ್. ಅಂಗಿ ಕುಂಟು ಪೂರಾ ಮಾಪದ್, ಬಜಿ ಮೈಟ್ ಉಂತಾಯೆರ್. ಲಚ್ಚ ಬುಡಿ, ಒಂಜಿ ಲಚ್ಮನ ಟಂಕೆಲಾ ತಿಕ್‌ಜಿ. “ಎಂಕಲೆನ ಪಕ್ಕಿ ಇನಿ ಮುಟ್ಟ ಪಂತಿ ಪಾತೆರ ಸುಲ್ಲಾತ್‌ಜಿ. ಓಲು ದೆಂಗ ದೀತರ್ ಪನಿ. ಎಡ್ಡೆ ಪಾತೆರೊಡು ಪಂಡ್‌ಜರ್ಡಾ ಬಂಜಿ ಸೀಗ್‌ತ್‌ದ್, ಚರ್ಮ ಜಾರದ್ ನಾಡುವ” ಪಂದ್ ಬಿಸತ್ತಿಡ್ ಬಂಜಿಗ್ ಗೀರುನ ಪಗ್‌ರ್ ಮಲ್ತೆ ಬೋಂಟ್ರೆ. ಅಪಗ ಬೇರದಗಲೆನ ಒಟ್ಟುಡು ಇತಿನ ಕಲ್ವೆ ಎನ್ನಿಯೆ “ಇತ್ತೆ ಮೊಗಲೆಡ್ ಒರಿಯನ ಬಂಜಿ ಸಿಗಿತ್‌ದ ವಜಿರ ತಿಕ್ಂಡ, ಬಾಕಿ ನಾಲ್ ಜನತಲಾ ಬಂಜಿ ಸಿಗಿಪುವೆರ್. ಯಾನ್‌ಲಾ ಸೈಪಿನಿ ನಿಗಂಟ್. ಒಂಜಿ ಏಲ್ಯ ಎನ್ನ ಬಂಜಿ ಸಿಗಿತ್‌ದ್ ದಾಲ ತಿಕ್‌ಜಿಡ, ಬಾಕಿದಗಲೆನ ಜೀವ ಬುಡುವೆರ್”. ಇ ಕಲ್ವೆ ಆ ಬೊಂಟ್ರಡ ಪಂಡೆ “ಅಯ್ಯಾ ಮಾರಾಯ, ಎಂಕುಲು ಪುಟ್ ಬಲತಿನ ಊರುಡು ಬಂಜಿ ದಿಂಜಾವಾರೆ ಬಂಙ ಆದ್, ಕುಜರ್ಮೆಗ್ ಪರವೂರು ಪೋವೊಂದುಲ್ಲ. ಎಂಕಲೆಡ ದೊಡ್ಡು ದುಗ್ಗಾನಿ ಇಜ್ಜಿ, ಮೆಯ್ಯ ಕಯ್ಯ ಪಿದಾಡ್ದಿನಿ. ನಿಗಲೆನ ಪಕ್ಕಿ ಸುಲ್ಲು ಪನೊಂದು ಉಂಡು. ನಂಬೊಲಿಗೆ ಬರ್ಪುಜಿಡ ಎನ್ನ ಬಂಜಿನ್ ಸಿಗಿತ್ ತೂಲ”.

ಆ ಕಾಡ ಕಲ್ವೆರೆಗ್‌ಲಾ ಎಕ್ಕಂದೆಲ್ ಪುಟುಂಡು. ಆಜಿ ಮೂಜಿ ಎನ್ನ್‌ದ್ ಆಯನ ಬಂಜಿ ಬಿಚ್ಚಾದ್ ನಾಡಿಯೆರ್. ದಾಲಾ ಇಜ್ಜಿ, ಕರ್ಲ್ ಕಪ್ಪಡೆ ಬುಂಡ. ತರೆ ಮಂಡೆ ದರ್ಪುನ ಕಲ್ವೆರೇ ಆಂಡಲಾ ದಾಲಾ ಲಾಬದಾಂತೆ ಮಾನ್ಯ ಕೆರ್ಪಿನ ಕಲೆಪಾಡಿನ, ಗರ್ಗುಡೆರ್ ಅಗುಲತ್ತ್. ಬಾಕಿದ ನಾಲ್ ಜನೊನು ಬುಡ್ದ್ ಬುಡಿಯೆರ್. ಬದ್‌ಕಿನ ಆ ನಾಲ್ ದಿನ, ಬದ್ಹಕರೆಗಸ್ರ ನಾಲ್ ಜನತ ಬದ್‌ಕ್‌ದ ಸಂಪಾದನೆ ಕಂಡ್‌ದ್ ಪಾಪ ಸಂಪಾದನೆ ಮಲ್ತಿತಿನ ಕಲ್ವೆ, ಸೈತ್‌ದ ನಾಲ್ ಜನತ ಜೀವ ಒರ್ತ್‌ದ್ ಪುನ್ಯ ಕಟೊಂಡೆ. ಜೀವೊಗು ಜೀವ ಕೊರ್ದು, ‘ಜೀವದ ಜೋಸ್ತಿ’ ಪಂದ್ ಪಂತಿನ ಸುಲ್ಲುನು ನಿಜ ಮಲ್ತೆ. ಆಯನ ಬಲಿದಾನ ನಿನೆತ್‌ದ್, ಕನ್ನ್ ನನೆಂಡ್ ಆ ನಾಲ್ವೆರೆಗ್, ನಾಲ್ ಪನಿ ಕನ್ನ ನೀರ್ ತಿರ್ತ ನೆಲಕ್ಕ್ ಬೂರ್ಂಡ್. ಮಿತ್ತ ಬಾನೊಗು ಕಯಿ ಮುಗಿದ್ ಆಯನ ಆತ್ಮೊಗು ಸದ್ಗತಿ ಬಯಕ್‌ದ್, ತಿರ್ತ್ ನೆಲ ತೂವೊಂದು ಪಜ್ಜ ದುಂಬು ದೀಯರೆ. ಚದಿತಾಯೆ ಚಂಙಾಯಿ ಅತ್ತ್, ಚಪ್ಪುಡಿಕಳಿತಾಯೆ ಬೇಲೆಗತ್ತ್‌ಗೆ. ಆಂಡ ಕೆರಪೆ ಚಂಙಾಯಿಡ್ದ್, ವಿವೇಕಿ ಪಗೆಮಾನಿ ಬೇಸ್.

ಬರವು : ಕೌಡೂರು ನಾರಾಯಣ ಶೆಟ್ಟಿ, ಇಟೆಲಿ

The post ಕಲ್ವೆ ಬೊಕ್ಕ ನಾಲ್ವೆರ್ ಬೇರದಗುಲು appeared first on www.buntsnow.com |  web-based media For Bunts Community.

ಜಾಲ್ ಪಾದೆ ಆವೊಡು
ಎರು ಆರ್ಯೆ ಆಂಡ ಕೊಟ್ಟೆ ಗುದ್ದುನ ಕರ್ಚಿ ಇಜ್ಜಿ. ಈ ಎರ್ಲು ಪರು ಸರ್ಕೆಗ್ ಬತ್ತಿನದಗ ಕೊಟ್ಟೆಗ್ ಕಲ್ಲ್ ಪಾಡೊಡು‌, ಇಜ್ಜಿಡ ಐಕ್ಲೆನ ಅಬತಾರ ತಡೆವರೆ ತೀರುಜಿ. ಬೊಕ್ಕ ಐಕ್ಲೆನ ನರನಾಡಿ ಬಂದ್ ಆಪುಂಡುಗೆ, ಕಾರ್ ಮರಕಟ್ಟುಂಡುಗೆ. ಪರು ಸರ್ಕೆ ಪನ್ನಗ ಎಡ್ಮ ಪರು (ಕೂಲಿ) ಕದೆಪುನು (ಅಡಿ ದೀಪಿನಿ, ಬರ್ಪಿನಿ). ನಾಲ್ ವರ್ಸ ಪೂರಾ ಆವೊಡು. ಎರು, ಬೋರಿನ್ ನಾಲ್ ಕಾರ್ಗ್ ಬಲ್ಲ್ ಅರ್ಕಲ್ ಪಾಡ್ದ್ ಮುಟ್ಟ ಒಯಿಪುನಗ, ನಾಲ್ ಕಾರ್ ಒಟ್ಟು ಆನಗ ಕೈಕಂಜಿ ಮಗುರುವ. ಸರೀ ತಪ್ಪು ಅಡಿಕ್ ಪಾಡ್ದ್ ಇಪ್ಪೊಡು ಕಿದೆಟ್. ಬೊಕ್ಕ ಅಡಿಟ್ ಮನೆ ದೀದ್, ಮಿತ್ತ್‌ಡ್ದ ಕೊಟ್ಟೆ ದೀದ್, ಉದ್ದ ಉರುಂಟುದ ಕಲ್ಲ್‌ಡ್ ಞಂಕ್ಕ ಞಂಕ್ಕ ಗುದ್ದಿಯೆರ್ ಪೊಸಲ್ಲ್ ದೇವು ಪೂಜಾರ್ಲು, ಎರ್ಲೆನ ಕೊಟ್ಟೆನ್. ಬಾರಿ ಜಾಗ್ರತೆ ಬೋಡು, ಪೆಟ್ಟ್ ತತ್ತ್‌ದ್ ತಾವುದ ಕೋಡಿಗ್ ಬೂರ್ಂಡ, ಕೈಟೆ ಜೀವ ಬುಡುವ ಎರು ಬೋರಿಲು. ಐತ ಮುದೆಲ್ದ ನರಂಬುನು ಗುದ್ದುದ್ದು ನೀರ್ ಮಲ್ಪುನು‌. ಗುದ್ದುನಗ (ಬವುಸ) ಆತ್ ಬೇನೆ ಆಪುಜಿ. ಗುದ್ದರೆ ಪತ್ತೊಡ್ದುಂಬು, ಕನ್ನ್‌ಗ್ ಬೊಲ್ ನೆಯಿ ಪೂಜಿವೆರ್. ಗುದ್ದ್‌ದ್ ಆಯಿ ಬೊಕ್ಕ, ಎನ್ನೆಡ್ ಕಲತ್‌ದ್ ಪೊನ್ನೆದೆನ್ನೆದ ಕರಿ ಪೂಜುವೆರ್. ವಾರ ಇಡೀ ಕೆಂಪು ಕೆಂಪು ಬಾತ್ ಪೋಪುಂಡು‌. ಕೆಲವು ಎರ್ಲು ನಾಲ್ ನಾಲ್ ದಿನ ಜೆಪ್ಪುಜ. ಐಕ್ಲೆನ ಕಾರಡಿಗ್ ತೆಗ್‌ಲೆ ತೆಗ್‌ಲೆ ತಪ್ಪು ಕುತ್ತ್‌ದ್, ಕೋಲ್ ಜತ್ತ್‌ದ್ ಕಂತ್ ಪಾಡುವೆರ್. ಕೊಟ್ಟೆ ಗುದ್ದಿನ ಎರ್ಲೆಗ್ ಒರ್ಂಬ ಪತ್ತ್ ದಿನ ಸನ್ನಾಯ ಪಾಡುವೆರ್, ಪೆದಿಮೆದಿಯಲ್ಲೆಗ್ ಪಾಡಿಲೆಕ್ಕ. ಕುಡು, ಎನ್ನೆ, ಪುರ್ಗ, ತಾರಾಯಿದ ಗಂಜಿ ಇಂಚ ಮಾತ. ಬೊಕ್ಕ ಚಿರ್ಂಟುಂಡು ಪನ್ಕ. ಇತ್ತೆ ಗೋ (Veterinary) ಡಾಕ್ಟರ್‌ನಗುಲು ಇಕ್ಕುಲಿಡ್ ಕೊಟ್ಟೆ (testicles)ಗ್ ಪೋಪಿನ ನೆತ್ತ್‌ರ್‌ದ ನರಂಬುನು ಒತುದು ಞಂಪ್ಪೆ (ಪೊಡಿ) ಮಲ್ಪುವೆರ್. ಏರಾ ಜೋಕುಲು ಉಂದೆನ್ ತೂದು, ಒರಿ ಆನನ್ ಕೈಕಾರ್ ಕಟ್‌ದ್, ಕಲ್ಲ್‌ಡ್ ಗುದ್ದುದು ಕೆರ್ದೆ ಬುಡ್ತೆರ್‌ಗೆ. ತಾವುದ ಕೋಡಿ, ಅಂಜೋವೆನ ವೀಕ್ ಪಾಯಿಂಟ್. ಕ್ರಿಕೆಟ್‌ಡ್ ಸೆಂಟರ್ ಪ್ಯಾಡ್ ಪಾಡುವೆರ್, ಅಂಜೋವು.

ಬುಡೆದಿ ಗೊಡ್ಡು ಆಂಡ, ಬಾಯಕೆ ಪಾಡೊಡು ಪಂದ್ ಇಜ್ಜಿ. ಸೀರೆ, ಬಂಗಾರ್, ಬಯಕೆದ ಅಡ್ಡೆ, ಊರುಗು ಉನಸ್, ಸನ್ನಾಯ ಪೂರ ಒರಿವುಂಡು. ಅಪ್ಪೆಲ್ಲೆದಕ್ಲೆಗ್‌ಲಾ ಎಚ್ಚಿ ಕಡಿಮೆ ನಲ್ಪ ದಿನ, ಪೆದ್ಮೆದಿ ತಾಂಕುನ, ಮರ್ದ್ ಅಡ್ಪಿನ, ಬೊಲ್ಲೆ ತಪ್ಪು ಪಾಡ್ದ್ ಬೆಂದ್ರ್ ಕೈಪುನ ಕರ್ಚಿ ಇಜ್ಜಿ. ಕುಡ ಬಾಲೆ ತುವ್ವರೆಗ್ ಬರ್ಪಿನಗಲೆಗ್ ಪೆದ್ಮೆದಿಗ್ ಅಡ್ತಿನ ಮರ್ದ್, ಬಾಜೆಲ್, ಬಚ್ಚಿರೆ ಕೊರೊಡು. ಕೆಲವೆರ್ ಬಾಲೆದ ಕೈಟ್ ದಾಲ ಕೊರ್ಪೆರ್, ಕೆಲವೆರ್ ಪಿರ ಪೋನಗ ತಾದಿಡೆ ಬಾಲೆಗ್ ದಾದಾಂಡಲ ಇಲ್ಲೆ ಪನೊಂದು ಪೋಪೆರ್. ಬಂಜಿ ಬಾಂಪ್ರಿ, ಪಿಂಕನ್ ಪೀಂಪ್ರಿ, ಕನ್ನ್ ಬಿದ್ದ್, ಕಾರ್ ಅಟ್ಟೆ, ಮೂಂಕು ಮೂಜಿ ಮುಲ, ಮಂಡೆ ಗೋಂಟು, ಅಂಗೆಲ್ ಬಾಯಿ, ದುಡಿ ಈತ್ ಉದ್ದ, ಬನ್ನ ಮಜ್ಜಿ ತುಂಡು, ಆನ್ ಬಾಲೆ ಆಂಡ ಗಂಟ್… ಒಂಜಾ ರಡ್ಡಾ ಪುರು ಬಾಲೆಲೆಡ್ ಊರ್ದಗಲೆ ತೋಜುನ ದೋಸೊಲು. ಅಂಚ ಬುಡೆದಿ ಗೊಡ್ಡು ಆಂಡ ಇ ಪೂರಾ ಕರ್ಚಿ, ಮಂಡೆ ಬೆಚ್ಚೊಲು ಇಜ್ಜಿ. ಅಂಚ ದುಂಬೊರಿ ಇಂಚಲಾ ಪಂತೆಗೆ ‘ಅಮ್ಮೆ ರಡ್ಡ್ ಕೊರಿಯೆಡಾ, ತಪ್ಪಾಡ್ದ್ ಪೋಯಿನ ರಡ್ಡ್ ತಿಕಿಯಡ, ಎನ್ನ ಬುದ್ದಿಡ್ ರಡ್ ಮಲ್ತೆಡ, ಮೂಜಿ ಜೋಡು ದಪ್ಪುನ ಅಯ. ಮುಪ್ಪ ಮುಡಿ ಗೇನಿದ ಬೆನ್ನಿ ಬೆನೊಲಿ’. ಇಂಚೆನೇ ಕನ್ನಡೊಡು ಪಂತೆರ್ ಉಂದೆನ್ ‘ಆದರೆ, ಹೋದರೆ, ಹತ್ತಿ ಬೆಳೆದರೆ, ಅಜ್ಜಿಗೊಂದು ಪಟ್ಟೆ ಸೀರೆ’.

ತನ್ನ ಬುಡೆದಿ ಗೊಡ್ಡು ಆವಡ್ ಪಂದ್ ತುಲುವೆರ್ ಬಯಕಯೆರ್. ಅವ್ವೆ ನೂಲ್ ಪಾಡಿನಗುಲು, ಅತ್ತ್‌ಡ ಉತ್ತರ ಭಾರತದಗಲು ಬುಡೆದಿ ಗೊಡ್ಡು ಪಂದ್ ಕುಡೊಂಜಿ ಮದಿಮೆ ಆವೆರ್. ಚಂದ್ರಶೇಖರ ಕಂಬಾರೆರೆನ ‘ಜೋಕುಮಾರಸ್ವಾಮಿ’ ನಾಟಕ ತೆರಿದುಪ್ಪು ನಿಕಲೆಗ್. ಕೆಲವು ಸರ್ತಿ ಬುಡೆದಿ ಗೊಡ್ಡಾ, ಕಂಡೆನೆ ಆರ್ಯೆನಾ ಪನ್ಪಿನ ಸಂಶಯ ಬರಂದೆ ಇಪ್ಪಂದ್. ಜಾಲ್ ಪಾದೆ ಆಂಡ ಬಾರ್ ಮುಂಗೆ ಬತ್ತ್‌ದ್ ನೇಜಿ ಕೋಡ್ಯುವಾ? ಬಿತ್ತ್ (ಬಾರ್) ಜಡ್ಡ್ ಆಂಡ, ಮನ್ನ್‌ದ ಕಲೊಟುಲಾ ಕೊಡ್ಯಂದ್. ಕಡೆಕೊಂಜಿ ಕೊಂಗಿ, ಇತ್ತೆ ಗೊತ್ತಾಂಡ ಆರ್ಯೆರ್ ಏರ್ ಪಂದ್?

ಬರವು : ಕೌಡೂರು ನಾರಾಯಣ ಶೆಟ್ಟಿ ಇಟೆಲಿ.

The post ಜಾಲ್ ಪಾದೆ ಆವೊಡು appeared first on www.buntsnow.com |  web-based media For Bunts Community.