
ನವಶಕ್ತಿ ಶ್ರೀಮತಿ ಕಾಶಿ ಬಾಬುಶೆಟ್ಟಿ ಸಂಸ್ಮರಣಾ ಕಾರ್ಯಕ್ರಮವು ಇದೇ ಬರುವ ಅಕ್ಟೋಬರ್ 13 ರಂದು ಮಂಗಳವಾರ ಸಂಜೆ 6.00 ಘಂಟೆಯಿಂದ ನವಶಕ್ತಿ ಗುರುವಾಯನಕೆರೆ ಇಲ್ಲಿ ನಡೆಯಲಿದ್ದು, ಡಾ. ಕಲ್ಲಡ್ಕ ಪ್ರಭಾಕರ ಭಟ್, ಡಾ| ಕೆ ಪ್ರಕಾಶ್ ಶೆಟ್ಟಿ, ಡಾ. ಎಂ ಮೋಹನ ಆಳ್ವ ಹಾಗೂ ಡಾ| ಸುಧಾಕರ ಶೆಟ್ಟಿ ಮೊದಲಾದ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದು, ಸಾಂದರ್ಭಿಕವಾಗಿ ಮಾತನಾಡಲಿದ್ದಾರೆ. ಕೀರ್ತಿಶೇಷ ನವಶಕ್ತಿ ಮಾತೃಶ್ರೀ ಕಾಶಿ ಬಾಬು ಶೆಟ್ಟಿ ಅವರ ಪ್ರಥಮ ಪುಣ್ಯತಿಥಿ ಸಂದರ್ಭದಲ್ಲಿ ಮಾತೆಯ ಮಾತೃ ರೂಪ ಅನಾವರಣ, ಕಾಶಿ ಸದನ ವಸತಿ ನಿರ್ಮಾಣಕ್ಕೆ ಸಹಾಯ ಹಸ್ತ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಮೊದಲಾದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಮಾತೃಶ್ರೀ ಅವರ ನೆನಪು ಚಿರಕಾಲ ಉಳಿಸುವ ಹಾಗೂ ಮಾತೃಶ್ರೀ ಆತ್ಮಕ್ಕೆ ಚಿರಶಾಂತಿ ಲಭಿಸುವಂತೆ ಪ್ರಾರ್ಥಿಸುವರೆ ಅವರ ಅಭಿಮಾನಿ ಬಂಧುಗಳು, ಆತ್ಮೀಯರು ಕುಟುಂಬಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವಂತೆ ಸಂಸ್ಮರಣಾ ಕಾರ್ಯಕ್ರಮದ ಆಯೋಜಕರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.




















































































































