ಅಂಬಾ ಬ್ರದರ್ಸ್ ಸವಣೂರು ಇದರ ಆಶ್ರಯದಲ್ಲಿ ಸವಣೂರು ಬಸದಿ ಬಳಿಯ ನ್ಯಾಯವಾದಿ ನಿರ್ಮಲ್ ಕುಮಾರ್ ಜೈನ್ ಇವರ ಗದ್ದೆಯಲ್ಲಿ ಆಗಸ್ಟ್ 8 ರಂದು ಜರಗಿದ ‘ಕೆಸರ್ದ ಕಂಡೊಡು ಕುಸಲ್ದಗೊಬ್ಬು’ ಸಮಾರಂಭದಲ್ಲಿ ಸಿಎ ಸುದೀಪ್ ವಿ ರೈ ಅವರನ್ನು ಸನ್ಮಾನಿಸಲಾಯಿತು ಮತ್ತು ಅವರ ತಾಯಿ ಶರ್ಮಿಳಾ ವಿ ರೈ ಬೆಳ್ಳಾರೆ ಅವರನ್ನು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಸುದೀಪ್ ವಿ ರೈ ಅವರು ಮಾತನಾಡಿ, ನನ್ನನ್ನು ಗುರುತಿಸಿ ಗೌರವಿಸಿದ ಸವಣೂರಿನ ಅಂಬಾ ಬ್ರದರ್ಸ್ ತಂಡಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ನೋಟರಿ, ಹಿರಿಯ ನ್ಯಾಯವಾದಿ ನಿರ್ಮಲ್ ಕುಮಾರ್ ಜೈನ್ , ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಪಿ.ಡಿ ಕೃಷ್ಣಕುಮಾರ್ ರೈ ದೇವಸ್ಯ, ದ.ಕ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ರಾಜಲಕ್ಷ್ಮಿ ರೈ, ರಾಜ್ಯ ಯುವಜನ ಒಕ್ಕೂಟದ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಸವಣೂರು ಜೈನ ಬಸದಿಯ ಆರ್ಚಕ ಶ್ರೇಯಾಂಸ್ ಕುಮಾರ್ ಇಂದ್ರ, ಸವಣೂರು ಗ್ರಾ.ಪಂ ನಿಕಟಪೂರ್ವ ಸದಸ್ಯ ತೀರ್ಥರಾಮ್ ಕೆಡೆಂಜಿ, ಸವಣೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ನಡುಬೈಲು, ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಭರತ್, ಅಂಬಾ ಬ್ರದರ್ಸ್ ತಂಡದ ಹಿರಿಯ ಸದಸ್ಯ ಜಯರಾಮ ರೈ ಮೂಡಂಬೈಲು, ಸುದ್ದಿ ಬಿಡುಗಡೆ ದಿನಪತ್ರಿಕೆಯ ಹಿರಿಯ ವರದಿಗಾರ ಉಮಾಪ್ರಸಾದ್ ರೈ ನಡುಬೈಲು, ಸಾಮಾಜಿಕ ಮುಂದಾಳು ರಾಮಕೃಷ್ಣ ಪ್ರಭು ಉಪಸ್ಥಿತರಿದ್ದರು. ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷರುಗಳಾದ ಸಚಿನ್ ಸವಣೂರು, ದಿವಾಕರ್ ಬಸ್ತಿ, ಸವಣೂರು ಗ್ರಾ.ಪಂ ಮಾಜಿ ಸದಸ್ಯ ಸತೀಶ್ ಬಲ್ಯಾಯ, ಶೋಭಾ ರೈ ಕೆರೆಕ್ಕೋಡಿ, ನಿಭಾ ರೈ ಕೆರೆಕ್ಕೋಡಿ ಉಪಸ್ಥಿತರಿದ್ದರು. ಅಂಬಾ ಬ್ರದರ್ಸ್ ತಂಡದ ಸದಸ್ಯ ಬಾಲಚಂದ್ರ ರೈ ಕೆರೆಕ್ಕೋಡಿ ಸ್ವಾಗತಿಸಿದರು.ಲಿಖಿತ್ ರೈ ಕಲಾಯಿ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ, ವರದಿ : ಉಮಾಪ್ರಸಾದ್ ರೈ


























































































































