
ಕರಾವಳಿ ಸಾಂಸ್ಕೃತಿಕ ಸಂಘ ಬಳ್ಳಾರಿ ಇದರ ಉದ್ಘಾಟನಾ ಸಮಾರಂಭ ಹಾಗೂ ಸಾಧಕರಿಗೆ ಅಭಿನಂದನಾ ಸಮಾರಂಭ ಇತ್ತೀಚಿಗೆ ಬಳ್ಳಾರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕಾಪು ಕ್ಷೇತ್ರದ ಜನಪ್ರಿಯ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಸಮಾಜ ಸೇವಕರಾದ ಡಾ. ಪಿ ರಾಧಾಕೃಷ್ಣ ರಾವ್, ಮಾಜಿ ಶಾಸಕರಾದ ಸೋಮಶೇಖರ ರೆಡ್ಡಿ, ಬೆಂಗಳೂರು ಕರ್ನಾಟಕ ಬ್ಯಾಂಕ್ ನಿರ್ದೇಶಕರಾದ ಕೆ. ಗುರುರಾಜ ಆಚಾರ್ಯ, ಕರಾವಳಿ ಸಾಂಸ್ಕೃತಿಕ ಸಂಘ, ಬಳ್ಳಾರಿ ಗೌರವಾಧ್ಯಕ್ಷರಾದ ಕೆ.ಎಲ್ ಜನಾರ್ಧನ ರಾವ್, ಅಧ್ಯಕ್ಷರಾದ ಕೆ ಸೂರ್ಯಕುಮಾರ ಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.


























































































































