
ಜೂನ್ 6 ರಂದು ಹುಬ್ಬಳ್ಳಿ ಧಾರವಾಡ ಬಂಟರ ಸಂಘದಲ್ಲಿ ಜರುಗಿದ ಪದಾಧಿಕಾರಿಗಳ ಹಾಗೂ ಸಲಹಾ ಸಮಿತಿ ಸಭೆಯಲ್ಲಿ ನೂತನ ಅಧ್ಯಕ್ಷರಾದ ರಾಜೇಂದ್ರ ವಿ ಶೆಟ್ಟಿಯವರನ್ನು ಸಲಹಾ ಸಮಿತಿಯ ವತಿಯಿಂದ ಸನ್ಮಾನಿಸಿ, ಗೌರವಿಸಿ ಮುಂದಿನ ಅವಧಿಯ ಕಾರ್ಯಚಟುವಟಿಕೆಗಳಿಗೆ ಶುಭಾಶಯಗಳನ್ನು ಕೋರಲಾಯಿತು. ರಾಜೇಂದ್ರ ಶೆಟ್ಟಿಯವರ ನಾಯಕತ್ವದಲ್ಲಿ ಸಂಘವು ಇನ್ನಷ್ಟು ಅಭಿವೃದ್ಧಿ ಹೊಂದಿ ಸಮಾಜ ಸೇವೆಯಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸಲಿ ಎಂದು ಹಾರೈಸಿದರು. ಈ ಸಂಧರ್ಭ ಮಾಜಿ ಅಧ್ಯಕ್ಷರುಗಳಾದ ಸುಭಾಷ್ಚಂದ್ರ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ವಿಜಯಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.































































































































