
ಕುಂದಾಪುರದ ಪ್ರತಿಷ್ಠಿತ ಭಂಡಾರ್ ಕಾರ್ಸ್ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಸುಖಾನಂದ ಶೆಟ್ಟಿ ಅಂಪಾರು ಇವರು ಹೆಸರಾಂತ ಲೇಖಕಿ ಹಾಗೂ ವಿಶ್ರಾಂತ ಪ್ರಾಧ್ಯಾಪಕರಾದ ಡಾ| ರೇಖಾ ಬನ್ನಾಡಿಯವರ ಮಾರ್ಗದರ್ಶನದಲ್ಲಿ ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರದ (ಮಾಹೆ) ಮೂಲಕ ಸಲ್ಲಿಸಿದ ಕೊಲ್ಲೂರು ಒಂದು ಸಾಂಸ್ಕೃತಿಕ ಅಧ್ಯಯನ (A cultural Study in Kolluru) ಎಂಬ ಮಹಾಪ್ರಬಂಧಕ್ಕೆ ಪ್ರತಿಷ್ಠಿತ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಶ್ರೀಯುತರು ಬ್ರಹ್ಮಾವರ ಹೇರೂರು ದೊಡ್ಡಮನೆ ನಿವೃತ್ತ ಪದವೀಧರ ಮುಖ್ಯೋಪಾಧ್ಯಾಯರಾದ ಎಚ್. ಬಿ ಬಾಬಯ್ಯ ಶೆಟ್ಟಿ ಮತ್ತು ಅಂಪಾರು ಹೊಸ ಮನೆ ಶಾರದಾ ಬಿ ಶೆಟ್ಟಿಯವರ ಸುಪುತ್ರ.































































































































