
ಕಾರ್ಕಳ : ರಾಷ್ಟಮಟ್ಟದಲ್ಲಿ ಇಂಜಿನಿಯರಿ0ಗ್ ಪ್ರವೇಶಕ್ಕಾಗಿ ಎನ್.ಟಿ..ಎ ನಡೆಸಿದ ಜೆಇಇ ಮೈನ್(ಬಿ.ಟೆಕ್)-೨೦೨೬ರ ಪ್ರಥಮ ಹಂತದ ಫಲಿತಾ0ಶದಲ್ಲಿ ಜ್ಞಾನಸುಧಾ ಪಿ.ಯು ಕಾಲೇಜಿನ ೮ ವಿದ್ಯಾರ್ಥಿಗಳು ೯೯ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆ ಮಾಡಿರುತ್ತಾರೆ. ಟಾಪರ್ ಆಗಿ ೯೯.೯೦೫೫೧೯೯ ಪರ್ಸಂಟೈಲ್ನೊAದಿಗೆ ಕನಿಷ್ಕ್ ಅಮೀನ್ ಹೊರಹೊಮ್ಮಿದ್ದಾರೆ. ೨೨ ವಿದ್ಯಾರ್ಥಿಗಳು ೯೮ ಪರ್ಸಂಟೈಲ್ಗಿ0ತ ಅಧಿಕ, ೪೮ ವಿದ್ಯಾರ್ಥಿಗಳು ೯೭ ಪರ್ಸಂಟೈಲ್ಗಿAತ ಅಧಿಕ, ೭೪ ವಿದ್ಯಾರ್ಥಿಗಳು ೯೬ ಪರ್ಸಂಟೈಲ್ಗಿ0ತ ಅಧಿಕ, ೯೪ ವಿದ್ಯಾರ್ಥಿಗಳು ೯೫ ಪರ್ಸಂಟೈಲ್ಗಿ0ತ ಅಧಿಕ ಹಾಗೂ ೨೨೦ ವಿದ್ಯಾರ್ಥಿಗಳು ೯೦ ಪರ್ಸಂಟೈಲ್ಗಿ0ತ ಅಧಿಕ ಫಲಿತಾಂಶ ತಮ್ಮದಾಗಿಸಿಕೊ0ಡಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ೩.೪೨ಲಕ್ಷ ರೂಪಾಯಿ ಟ್ರಸ್ಟಿನಿಂದ ಘೋಷಣೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿಯವರು ೯೭ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ೩.೪೨ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನವನ್ನು ಘೋಷಿಸಿದ್ದಾರೆ.

ಜೆ.ಇ.ಇ ಮೈನ್ ಪ್ರಥಮ ಹಂತದ ಫಲಿತಾಂಶದಲ್ಲಿ ೯೯.೯೦೫೫೧೯೯ ಪರ್ಸಂಟೈಲ್ ಪಡೆದ ಕನಿಷ್ಕ್ ಅಮೀನ್ರವರಿಗೆ ೧ ಲಕ್ಷ ರೂಪಾಯಿಯನ್ನು, ೯೯.೮೨೫೪೪೯೯ ಪರ್ಸಂಟೈಲ್ ಪಡೆದ ಸೋಹನ್ ಗಿರಿರಡ್ಡಿಯವರಿಗೆ ರೂ.೭೫ಸಾವಿರವನ್ನು, ೯೯.೬೫೪೩೯೯೬ ಪರ್ಸಂಟೈಲ್ ಪಡೆದ ಮೇಧಾನ್ಶ್ ಎನ್.ಬಿ ಹಾಗೂ ೯೯.೬೧೩೦೦೯೫ ಪರ್ಸಂಟೈಲ್ ಪಡೆದ ಅನಿರುದ್ಧ್ ಆರ್ ಉಡುಪರವರಿಗೆ ತಲಾ ರೂ.೩೫ಸಾವಿರವನ್ನು, ೯೯.೫೦೮೭೬೪೫ ಪರ್ಸಂಟೈಲ್ ಪಡೆದ ತುಷಾರ್ ಎ ಶೆಟ್ಟಿಯವರಿಗೆ ರೂ.೨೫ ಸಾವಿರವನ್ನು, ೯೯.೪೨೫೩೨೭೦ ಪರ್ಸಂಟೈಲ್ ಪಡೆದ ನಿಶಾನ್ ಎನ್ ಸಾಲ್ಯಾನ್, ೯೯.೨೩೧೩೦೯೯ ಪರ್ಸಂಟೈಲ್ ಪಡೆದ ತೇಜಸ್ ನಾಯಕ್ ಹಾಗೂ ೯೯.೦೦೯೦೯೨೮ ಪರ್ಸಂಟೈಲ್ ಪಡೆದ ಅನಿಕೇತ್ ಆರ್ ಉಡುಪರವರಿಗೆ ತಲಾ ರೂ.೧೫ಸಾವಿರವನ್ನು ಘೋಷಿಸಿರುತ್ತಾರೆ.
ಜೊತೆಗೆ ಮನೋಜ್ ಎಂ ೯೮.೯೨೩೯೬೭೮ ಪರ್ಸಂಟೈಲ್, ವೈಷ್ಣವಿ ಕುಲಕರ್ಣಿ ೯೮.೮೩೮೪೯೧೮ ಪರ್ಸಂಟೈಲ್, ಸಂಜನಾ ಬಿ.ಎ ೯೮.೭೭೨೨೮೮೬ ಪರ್ಸಂಟೈಲ್, ಸಾಯಿರಾಘವೇಂದ್ರ ಬಿ. ೯೮.೬೮೮೫೨೯೫ ಪರ್ಸಂಟೈಲ್, ಮಯೂರ್ ವಿ ಗೌಡ ೯೮.೫೯೪೩೩೩೬ ಪರ್ಸಂಟೈಲ್, ವರುಣ್ ಜೆ ೯೮.೫೭೦೭೦೫೧ ಪರ್ಸಂಟೈಲ್, ಅನಾಮಯ ಯೋಗೇಶ್ ದಿವಾಕರ್ ೯೮.೪೮೧೦೧೮೪ ಪರ್ಸಂಟೈಲ್, ವಿದ್ವತ್ ವಿ ಕಾಮತ್ ೯೮.೪೨೮೭೫೬೯ ಪರ್ಸಂಟೈಲ್, ಪ್ರಭಂಜನ್ ಭಟ್ ೯೮.೪೨೮೧೫೧೯ ಪರ್ಸಂಟೈಲ್, ಆಸ್ತಿಕಾ ಆರ್ ಭಾಗವತ್ ೯೮.೪೧೩೮೦೬ ಪರ್ಸಂಟೈಲ್, ಜೀವನ್ ಎನ್ ಬಿ ೯೮.೩೧೭೩೧೯೧ ಪರ್ಸಂಟೈಲ್, ದಿಗಂತ್ ಎಸ್ ೯೮.೨೨೯೨೨೫೩ ಪರ್ಸಂಟೈಲ್, ಎನ್.ಎಸ್.ವಿವೇಕ್ ೯೮.೧೬೮೫೯೭೮ ಪರ್ಸಂಟೈಲ್, ವಿಶಾಖ್ ಕೃಷ್ಣರಾಜ್ ೯೮.೧೩೨೭೪೮ ಪರ್ಸಂಟೈಲ್ ಪಡೆದಿದ್ದು, ಇವರಿಗೆ ತಲಾ ರೂ. ಒಂದು ಸಾವಿರ ಹಾಗೂ ೯೭ಕ್ಕಿಂತ ಅಧಿಕ ಪರ್ಸಂಟೈಲ್ ಪಡೆದ ವಿದ್ಯಾರ್ಥಿಗಳಿಗೆ ತಲಾ ರೂ.೫೦೦ ನಗದು ಪುರಸ್ಕಾರವನ್ನು ಘೋಷಿಸಿರುತ್ತಾರೆ. ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾದ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯಾ ಪರಿಶ್ರಮವನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.























































































































