ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಜಿಲ್ಲಾ ಧಾರ್ಮಿಕ ಪರಿಷತ್ ನ ಸದಸ್ಯರಾದ ಶಿವನಾಥ ರೈ ಮೇಗಿನ ಗುತ್ತುರವರು ಭೇಟಿ ನೀಡಿ ದೇವಳದ ಹೊರ ಸುತ್ತಿನ ಅಂಗಳದ ಈಶಾನ್ಯ ಭಾಗದಲ್ಲಿ ಪ್ರಾಕೃತಿಕ ವಿಕೋಪಕ್ಕೆ ಒಳಗಾದ ತೊಂದರೆಯನ್ನು ಎಲಿಯ ದೇವಳದ ಸಮಿತಿ ಸದಸ್ಯರೊಂದಿಗೆ ಇದ್ದು ಪರಿಶೀಲನೆ ನಡೆಸಿದರು. ಆಗಿರುವ ನಷ್ಟಕ್ಕೆ ಸೂಕ್ತ ರೀತಿಯಲ್ಲಿ ಪರಿಹಾರ ಕ್ರಮಗೊಳ್ಳುವ ಬರವಸೆಯನ್ನು ನೀಡಿದರು. ಎಲಿಯ ಶ್ರೀ ವಿಷ್ಣುಮೂರ್ತಿ ದೇವಳದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಎಲಿಯ ಕರುಣಾಕರ ಗೌಡರವರು ನಷ್ಟ ಪರಿಹಾರದ ಬಗ್ಗೆ ಧಾರ್ಮಿಕ ದತ್ತಿ ಪರಿಷತ್ ಗೆ ಮನವಿ ಪತ್ರ ನೀಡಿದರು. ದೇವಳದ ಪ್ರಧಾನ ಅರ್ಚಕ ನಾಗೇಶ ಕಣ್ಣಾರಾಯರವರು ಶಿವನಾಥ ರೈ ಮೇಗಿನ ಗುತ್ತುರವರಿಗೆ ಶಾಲು ಹಾಕಿ, ದೇವರ ಪ್ರಸಾದ ನೀಡಿ ಹರಸಿದರು.
ಈ ಸಂದರ್ಭದಲ್ಲಿ ಎಲಿಯ ಶ್ರೀ ವಿಷ್ಣುಮೂರ್ತಿ ದೇವಳದ ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ರೈ ಕೆದಂಬಾಡಿ ಗುತ್ತು, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಉದಯಕುಮಾರ್ ರೈ ಬಾಕುಡ, ಎಲಿಯ ಶ್ರೀ ವಿಷ್ಣುಮೂರ್ತಿ ದೇವಳದ ಜಾತ್ರಾ ಸಮಿತಿಯ ಖಜಾಂಚಿ ಮಜಿತ್ ಸುವರ್ಣ ಸೊರಕೆ ಹಾಗೂ ಶ್ರೀ ವಿಷ್ಣುಮೂರ್ತಿ ದೇವಳದ ದೈವಗಳ ನೇಮೋತ್ಸವ ಸಮಿತಿಯ ಸಹ ಸಂಚಾಲಕ ರಾಮಚಂದ್ರ ಸೊರಕೆಯವರು ಉಪಸ್ಥಿತರಿದ್ದರು.